ಕ್ರೈಂ

ಯುವಕ ನೇಣು ಬಿಗಿದು ಆತ್ಮಹತ್ಯೆ

ಯುವಕನೋರ್ವ ಜೀವನದಲ್ಲಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಮರ್ಧಾಳದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ನಿವಾಸಿ ದಿ. ಸಂಜೀವ ರೈ ಎಂಬವರ ಪುತ್ರ ರಘುನಾಥ ರೈ (38) ಎಂದು ಗುರುತಿಸಲಾಗಿದೆ.ಗುರುವಾರದಂದು ಸಂಜೆ ವೇಳೆಗೆ ತನ್ನ ಮನೆಯಲ್ಲಿದ್ದ ರಘುನಾಥ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಕಾಡೆಮ್ಮೆ ಮೃತದೇಹ ಪತ್ತೆ

ಕಡಬ: ಇಲ್ಲಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಸೇತುವೆಯ ಬಳಿ ಕಾಡೆಮ್ಮೆ ಮೃತದೇಹ ಪತ್ತೆಯಾಗಿದೆ.ನದಿಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಸ್ಥಳೀಯರು ಸತ್ತ ಕಾಡಮ್ಮೆಯನ್ನು ನೋಡಲು ಜನರು ದಾವಿಸಿ ಬರುತ್ತಿದ್ದಾರೆ.

ಕಾಡೆಮ್ಮೆ ಮೃತದೇಹ ಪತ್ತೆ Read More »

ರಕ್ತಚಂದನ ಮರ ಮಾರಾಟ: ಮೂವರ ಬಂಧನ

ಕೊಳ್ಳೆಗಾಲ : ಬೆಂಗಳೂರಿನಿಂದ ತಮಿಳು ನಾಡಿಗೆ ರಕ್ತ ಚಂದನ ಮರವನ್ನು ಮಾರಾಟ ಮಾಡಲು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮೂವರನ್ನು ಕೊಳ್ಳೆಗಾಲ ನಗರದ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ಬೆಂಗಳೂರಿನ ವಿಜಯನಗರದ ನಿವಾಸಿ ಅರುಣ್ ಕುಮಾರ್ (26), ಪಂಡಿತರ ಪಾಳ್ಯ ನಿವಾಸಿ ಆನಂದ್ (46) ಹಾಗೂ ತುಮಕೂರಿನ ಸೋಮೇಶ್ವರಪುರಂನ ಮುಸ್ತಫ (52) ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರು ಕಡೆಯಿಂದ ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದಂತೆ ಕಾರನ್ನು ತಡೆದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನಲ್ಲಿದ್ದ 17.04 ಲಕ್ಷ ರೂ. ಮೌಲ್ಯದ ರಕ್ತ

ರಕ್ತಚಂದನ ಮರ ಮಾರಾಟ: ಮೂವರ ಬಂಧನ Read More »

ಫ್ರೀ ಬಸ್ಸಲ್ಲಿ ಪ್ರವಾಸಕ್ಕೆ ತೆರಳಿದಹೆಂಡತಿ ನಾಪತ್ತೆ

ಬಸ್ಸಿನಡಿ ಮಲಗಿ ಫ್ರೀ ಬಸ್ಸು ರದ್ದುಗೊಳಿಸಲು ಒತ್ತಾಯಿಸಿ ಆತ್ಮ ಹತ್ಯೆಗೆ ಯತ್ನಿಸಿದ ಪತಿ ಫ್ರೀ ಬಸ್ ನಲ್ಲಿ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ನಾನು ಸಾಯ್ತಿನಿ ಅಂತಾ ಬಸ್ ನಡಿ ಬಿದ್ದು ಪತಿಯೊಬ್ಬ ಆತ್ಮ ಹತ್ಯೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ಧ ಗಂಟೆಗೂ ಹೆಚ್ಚು

ಫ್ರೀ ಬಸ್ಸಲ್ಲಿ ಪ್ರವಾಸಕ್ಕೆ ತೆರಳಿದಹೆಂಡತಿ ನಾಪತ್ತೆ Read More »

ಟ್ಯಾಂಕರ್ ಅಪಘಾತ: ಓರ್ವ ಸಾವು

ಸುಳ್ಯ ಸಮೀಪದ ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ನಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಟ್ಯಾಂಕರ್ ಅಫಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಗಂಭೀರ ಗಾಯಗೊಂಡಿದ್ದು ಚಾಲಕ ಮೃತಪಟ್ಟ ಘಟನೆ ವರದಿಯಾಗಿದೆ.ಅವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡ ಲಾರಿ ಚಾಲಕ ಹಾಸನ ಮೂಲದ ಪ್ರವೀಣ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ಧಾರೆ ಎಂದು ತಿಳಿದು ಬಂದಿದೆ. ಟ್ಯಾಂಕರ್ ನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದು ಆ ವ್ಯಕ್ತಿಯ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಟ್ಯಾಂಕರ್ ಅಪಘಾತ: ಓರ್ವ ಸಾವು Read More »

ಗುಂಡು ಹೊಡೆದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಯುವಕನ ಸಂಪೂರ್ಣ ಪರಿಚಯ ಇಲ್ಲಿದೆ ನೋಡಿ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಬೆಳ್ಳಂಪಾಡಿ ಗುಡ್ಡದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕನೋರ್ವ ಆತ್ಮ ಹತ್ಯೆ ಮಾಡಿಕೊಂಡಿದ್ದು ಆತನನ್ನು ಅರಂತೋಡು ಗ್ರಾಮದ ಉರುಂಡೆ ದಿ.ಕೆಂಚಪ್ಪ ಗೌಡರ ಮಗ ರವಿನಾಥ( 34) ಎಂದು ಗುರುತಿಸಲಾಗಿದೆ.ಅವರು ಉಬರಡ್ಕದ ಮನೆಯೊಂದರಲ್ಲಿ ಕುಟುಂಬ ಸಮೇತರಾಗಿ ಕೆಲಸಕ್ಕಿದ್ದರು.ಆತ್ಮ ಹತ್ಯೆ ಮಾಡಿಕೊಳ್ಳುವ ಮೊದಲು ಪೋನ್ ಮಾಡಿ ಸ್ಥಳೀಯ ಮಹಿಳೆಯೊಬ್ಬವರಿಗೆ ತಾನು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ರವಿ ತಿಳಿಸಿದ್ದರು ಎನ್ನಲಾಗಿದೆ. ಮಹಿಳೆ ಸಂಬಂಧ ಪಟ್ಟ ಸ್ಥಳೀಯ ಇತರ ವ್ಯಕ್ತಿಗಳಿಗೂ ಮಾಹಿತಿ ರವಾನಿಸಿದ್ದರು.ಸ್ವಲ್ಪ ಹೊತ್ತಲ್ಲಿ ಗುಂಡಿನ ಶಬ್ದ ಕಾಡಿನ

ಗುಂಡು ಹೊಡೆದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಯುವಕನ ಸಂಪೂರ್ಣ ಪರಿಚಯ ಇಲ್ಲಿದೆ ನೋಡಿ Read More »

ಅರಂತೋಡಿನ ಯುವಕ ಗುಂಡು ಹೊಡೆದು ಆತ್ಮಹತ್ಯೆ

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಬೆಳ್ಳಂಪಾಡಿ ಗುಡ್ಡದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕನೋರ್ವ ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಘಟನೆ ನಿನ್ನೆ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.ಸಾವಿಗೀಡಾಗಿರುವ ಯುವಕ ಅರಂತೋಡು ಗ್ರಾಮದವನು ಎಂದು ತಿಳಿದುಬಂದಿದೆ.ಸ್ಥಳಕ್ಕೆ ರಾತ್ರಿಯೇ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮಹಜರು ನಡೆಸಿರುವುದಾಗಿ ತಿಳಿದುಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡಿನ ಯುವಕ ಗುಂಡು ಹೊಡೆದು ಆತ್ಮಹತ್ಯೆ Read More »

ಆಡನ್ನು ಹೆಬ್ಬಾವು ನುಂಗಿತಾ ?

ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರೀ ಗಾತ್ರದ ಹೆಬ್ಬಾವು, ಆಡೊಂದನ್ನು ನುಂಗಲು‌ ಸುಮಾರು ಒಂದು ಗಂಟೆ ಪ್ರಯತ್ನಿಸಿ ವಿಫಲವಾದ ಘಟನೆ ವರದಿಯಾಗಿದೆ.ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ.ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸೋತು ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು ಪೊದೆಯೊಳಗೆ ಸೇರಿಕೊಂಡಿದೆ.ಇದನ್ನು ನೋಡಲು ಅನೇಕ ಮಂದಿ ಕುತೂಹಲದಿಂದ ಆಗಮಿಸಿದರು.ಆಡು ಮಾಲಕರಿಗೆ

ಆಡನ್ನು ಹೆಬ್ಬಾವು ನುಂಗಿತಾ ? Read More »

ಆಟೋ ರಿಕ್ಷಾ ಪಲ್ಟಿ ಚಾಲಕ ಸಾವು

ವಿಟ್ಲ: ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪ ನಡೆದಿದೆ. ಮೃತ ಆಟೋ ಚಾಲಕನು ಪಂಜ ನಿವಾಸಿ ಸುದರ್ಶನ್ (35) ಎಂದು ತಿಳಿದು ಬಂದಿದೆ. ಸುದರ್ಶನ್ ಹಾಗೂ ಇನ್ನೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡು ರಿಕ್ಷಾ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಆಟೋ ರಿಕ್ಷಾದಲ್ಲಿದ್ದ ಇನ್ನೋರ್ವ ವ್ಯಕ್ತಿಗೆ ಪ್ರಾಣಾಪಯದಿಂದ ಪಾರಾಗಿದ್ದಾನೆ. ಎಂದು ತಿಳಿದುಬಂದಿದೆ.ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ

ಆಟೋ ರಿಕ್ಷಾ ಪಲ್ಟಿ ಚಾಲಕ ಸಾವು Read More »

ಹುಡುಗಿಯರು ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡುತ್ತಿದ್ದ ಯುವಕನ ಬಂಧನ

ಹುಡುಗಿಯರೇ ನೀವು ಸ್ನಾನಕ್ಕೆ ಹೋಗುವಾಗ ಕೋಣೆಯ ಕಿಟಕಿ ಮುಚ್ಚಿದೆಯಾ ಅಂತಾ ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವೀಡಿಯೋಗಳು, ಹಾಗೂ ಫೋಟೋಗಳು ರೆಕಾರ್ಡ್ ಆಗಿ, ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಇಂತಹದೊಂದು ಘಟನೆಬೆಂಗಳೂರು ಸಿಲಿಕಾನ್ ಸಿಟಿಯ ಪಿಜಿಯಲ್ಲಿ ನಡೆದಿದೆ.ಯುವತಿಯರು ಸ್ನಾನ‌ ಮಾಡುವ ವೀಡಿಯೋವನ್ನು ಕಾಮುಕನೊಬ್ಬ ಕದ್ದು ಮುಚ್ಚಿ ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಆರೋಪಿ.ಮಹದೇವಪುರ ಹೂಡಿಯಲ್ಲಿರುವ ಪಿಜಿಯೊಂದರಲ್ಲಿ ಕಾಮುಕ ಅಶೋಕ್ ಎಂಬಾತ ವಾಸವಾಗಿದ್ದ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ

ಹುಡುಗಿಯರು ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡುತ್ತಿದ್ದ ಯುವಕನ ಬಂಧನ Read More »

error: Content is protected !!
Scroll to Top