ಜನದನಿ

ಅರಂತೋಡು – ಎಲಿಮಲೆ ಲೋಕೋಪಯೋಗಿ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯವನ್ನು ಪ್ರಕಟಿಸಿ, ಅಧಿಕ ಭಾರದ ವಾಹನಗಳನ್ನು ನಿರ್ಭಂದಿಸಿ ಸೂಚನಾ ಫಲಕ ಅಳವಡಿಸುವ ಬಗ್ಗೆ ಮನವಿ

ಅರಂತೋಡು – ಎಲಿಮಲೆ ಲೋಕೋಪಯೋಗಿ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯವನ್ನು ಪ್ರಕಟಿಸಿ, ಅಧಿಕ ಭಾರದ ವಾಹನಗಳನ್ನು ನಿರ್ಭಂದಿಸಿ ಸೂಚನಾ ಫಲಕ ಅಳವಡಿಸುವ ಬಗ್ಗೆಕಾರ್ಯ ನಿರ್ವಾಹಕ ಅಭಿಯಂತರುಲೋಕೋಪಯೋಗಿ ಇಲಾಖೆಯವರಿಗೆ ಅಡ್ತಲೆ ನಾಗರೀಕ ಹಿತಾರಕ್ಷಣಾ ವೇದಿಕೆಯವರು ಮನವಿ ಸಲ್ಲಿಸಿದ್ದಾರೆ.ಅರಂತೋಡು- ಎಲಿಮಲೆ ಜಿಲ್ಲಾ ಮುಖ್ಯ ರಸ್ತೆಯ ಸುಮಾರು 3 ಕಿಲೋಮೀಟರ್ ರಸ್ತೆ ಅಗಲೀಕರಣ ಹಾಗೂ 2ಕಿಲೋಮೀಟರ್ ಮರುಡಾಮರಿಕರಣ ಕಾಮಗಾರಿಯನ್ನು ತಮ್ಮ ಇಲಾಖೆಯು ಅತ್ಯಂತ ಉತ್ತಮವಾಗಿ ಕಳೆದ ಎರಡು ವರ್ಷಗಳ ಹಿಂದೆ ನಡೆಸಿರುತ್ತದೆ. ಊರಿನ ಸಾರ್ವಜನಿಕರ ಹಾಗೂ ರಸ್ತೆ ಬಳಕೆದಾರರ ಪರವಾಗಿ ತಮಗೂ […]

ಅರಂತೋಡು – ಎಲಿಮಲೆ ಲೋಕೋಪಯೋಗಿ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯವನ್ನು ಪ್ರಕಟಿಸಿ, ಅಧಿಕ ಭಾರದ ವಾಹನಗಳನ್ನು ನಿರ್ಭಂದಿಸಿ ಸೂಚನಾ ಫಲಕ ಅಳವಡಿಸುವ ಬಗ್ಗೆ ಮನವಿ Read More »

ಅಪರಾಹ್ನ 2 ಗಂಟೆ ನಂತರ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಸಾಧ್ಯತೆ

ಮಾ.12 ರಂದು ಸಂಜೆ ಸುರಿದ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ 33/11 ಕೆ.ವಿ. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್‌ ವ್ಯತ್ಯಯ ಕಳೆದ ರಾತ್ರಿ 9 ಗಂಟೆಯಿಂದ ವಿದ್ಯುತ್ ಕಡಿತ ಉಂಟಾಗಿದ್ದು, ಜತೆಗೆ ಇಲ್ಲಿ ಕಾವು ಸಬ್ ಸ್ಟೇಷನ್ ನಿಂದ ಬರುವ ಕನಕಮಜಲು 11 ಕೆ.ವಿ.ಪೀಡರ್‌ ನ 2 ಕಂಬಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಅಪರಾಹ್ನ ಎರಡು ಗಂಟೆ ವೇಳೆಗೆ ದುರಸ್ತಿ ಕಾರ್ಯ ಮುಗಿದು

ಅಪರಾಹ್ನ 2 ಗಂಟೆ ನಂತರ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಸಾಧ್ಯತೆ Read More »

ಮರ ಬಿದ್ದು ವಿದ್ಯುತ್ ಲೈನ್ ಗೆ ಹಾನಿ,ಕತ್ತಲೆಯಲ್ಲಿ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳು

ಸುಳ್ಯದಲ್ಲಿ ಮೊದಲ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು ಸುಳ್ಯ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತೆಲೆಯಲ್ಲಿ ಕಾಲ ಕಳೆಯುವಂತಾಗಿದೆ.ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಕೈ ಕೊಟ್ಟ ವಿದ್ಯುತ್ ಇನ್ನು ಬಂದಿಲ್ಲ.ಇಂದು ಸುರಿದ ಪ್ರಥಮ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ 33/11 ಕೆ.ವಿ. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದಿರುತ್ತದೆ. ಈ ಲೈನ್ ನಿಂದ ಸುಳ್ಮ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸರಬರಾಜಾಗುವ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ‌.ಈ ಹಿನ್ನೆಲೆಯಲ್ಲಿ ಸುಳ್ಯಕ್ಕೆ

ಮರ ಬಿದ್ದು ವಿದ್ಯುತ್ ಲೈನ್ ಗೆ ಹಾನಿ,ಕತ್ತಲೆಯಲ್ಲಿ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳು Read More »

ತೋಟಕ್ಕೆ ಕಾಡಾನೆ ದಾಳಿಯಿಂದ ಅಪಾರ ನಷ್ಟ

ಸುಳ್ಯ ತಾಲೂಕಿನ ಐನೆಕಿದು ಗ್ರಾಮದ ಬಾಣೂರು ಕಟ್ಟೆಮನೆ ಜಯಂತ ಗೌಡರ ತೋಟಕ್ಕೆ ಕಳೆದ ತಡ ರಾತ್ರಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ಕ್ರಷಿಗೆ ಹಾನಿ ಮಾಡಿವೆ.ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಈ ಪ್ರದೇಶದಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ.ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.

ತೋಟಕ್ಕೆ ಕಾಡಾನೆ ದಾಳಿಯಿಂದ ಅಪಾರ ನಷ್ಟ Read More »

ದ.ಕ ದಲ್ಲಿ ಹೆಚ್ಚಿದ ಉರಿ ಬಿಸಿಲು,ಸುಳ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಉಷ್ಣಾಂಶ ದಾಖಲು!

ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಲಾಗಿದೆ.ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನ ಮುಂದುವರಿ ಯುವ ಮುನ್ಸೂಚನೆ ಇದೆ. ಇದರಿಂದ ಹೀಟ್ ವೇವ್ ಸ್ಟೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್

ದ.ಕ ದಲ್ಲಿ ಹೆಚ್ಚಿದ ಉರಿ ಬಿಸಿಲು,ಸುಳ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಉಷ್ಣಾಂಶ ದಾಖಲು! Read More »

ಸುಳ್ಯದಲ್ಲಿ ಬೆಳಿಗ್ಗೆ ಹೋದ ಕರೆಂಟ್ ರಾತ್ರಿ 8 ಎಂಟು ಗಂಟೆ ಕಳೆದರೂ ಬಂದಿಲ್ಲ, ಸುಳ್ಯದ ಅವಸ್ಥೆ ಮಾರಯರೇ

ಸುಳ್ಯದಲ್ಲಿ ಇಂದು ( ಮಂಗಳವಾರ) ಬೆಳಿಗ್ಗೆ 10 ಗಂಟೆಯಿಂದ ಸಂಜೆ ,5 ಗಂಟೆ ತನಕ ಪವರ್ ಕಟ್ ಎಂದು ಮೆಸ್ಕಾಂ ಪ್ರಕಣೆಯಲ್ಲಿ ತಿಳಿಸಿತ್ತು.ಆದರೆ ರಾತ್ರಿ ಎಂಟು ಗಂಟೆಯಾದರೂ ಕರೆಂಟ್ ಬಾರದಿರುವುದರಿಂದ ಜನರು ಮೆಸ್ಕಾಂಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ದಿನ ನಿತ್ಯ ಸಮರ್ಕವಾಗಿ ವಿದ್ಯುತ್ ಸರಬರಾಜಿಲ್ಲದೆ ಮತ್ತು ಲೋ ಒಲ್ಟೋಜ್ ಸಮಸ್ಯೆಯಿಂದ ಜನರು ಕುಡಿಯುವ ನೀರಿಗೆ ಅನೇಕ ಗ್ರಾಮಗಳಲ್ಲಿ ಪರದಾಡುತ್ತಿದ್ದಾರೆ.ಮೆಸ್ಕಾಂನ ಸ್ಥಳೀಯ ಅಧಿಕಾರಿಗಳು ಪೋನ್ ಮಾಡಿದ್ರು ಪೋನ್ ರಿಸಿವ್ ಮಾಡುತ್ತಿಲ್ಲ.

ಸುಳ್ಯದಲ್ಲಿ ಬೆಳಿಗ್ಗೆ ಹೋದ ಕರೆಂಟ್ ರಾತ್ರಿ 8 ಎಂಟು ಗಂಟೆ ಕಳೆದರೂ ಬಂದಿಲ್ಲ, ಸುಳ್ಯದ ಅವಸ್ಥೆ ಮಾರಯರೇ Read More »

ಶಾಲಾ ಬಾಲಕ ನಾಪತ್ತೆ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನ ಅನ್ವಿತ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಈತನು ಅಡ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಲಾಗಿದೆ.ಈ ಬಾಲಕ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕೆಂದು ಮನವಿ ಮಾಡಲಾಗಿದೆ.

ಶಾಲಾ ಬಾಲಕ ನಾಪತ್ತೆ Read More »

ಕಸ್ತೂರಿ ರಂಗನ್ ವರದಿಗೆ ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡಿರುವುದು ಸೂಕ್ತ ಕ್ರಮವಲ್ಲ : ಶೋಭಾ ಕರಂದ್ಲಾಜೆ

ಕೇರಳ ರಾಜ್ಯ ಹೊರತುಪಡಿಸಿ ಯಾವುದೇ ರಾಜ್ಯ ಕಸ್ತೂರಿ ರಂಗನ್ ವರದಿ ಬಗ್ಗೆ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ ,ಫಿಸಿಕಲ್ ಸರ್ವೆ ನಡೆಸಿದ್ದಾಗ ಮಾತ್ರ ಅದರ ಯಥಾ ಸ್ಥಿತಿ ತಿಳಿಯಲಿದೆ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಾಧ್ಯಮ ಕೈಗಾರಿಕಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಕಡಬ ತಾಲೂಕಿನ ಕೇರ್ಪಡದಲ್ಲಿ ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದರುಇದು ಹಿಂದಿನವರು ಮಾಡಿರುವ ತಪ್ಪು. ಏರಿಯಲ್ ಸರ್ವೆ ಮಾಡಿ ಈ ವರದಿ ಮಾಡಲಾಗಿದೆ. ಫಿಸಿಕಲ್

ಕಸ್ತೂರಿ ರಂಗನ್ ವರದಿಗೆ ಹೆಲಿಕಾಪ್ಟರ್ ಮೂಲಕ ಸರ್ವೆ ಮಾಡಿರುವುದು ಸೂಕ್ತ ಕ್ರಮವಲ್ಲ : ಶೋಭಾ ಕರಂದ್ಲಾಜೆ Read More »

ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಶಾರೀಕ್ ಮನವಿ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಸಮಯದಲ್ಲಿ ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆರ್.ಟಿ.ಐ ಕಾರ್ಯಕರ್ತ ಡಿ.ಎಂ.ಶಾರೀಕ್ ಅವರು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಅವರಿಗೆ ಮನವಿ ಮಾಡಿದ್ದಾರೆ.ಸುಳ್ಯ ನಗರದಲ್ಲಿ ಈಗಾಗಲೇ ಅನೇಕ ಹೊಸ ಕಟ್ಟಗಳನ್ನು ಕಟ್ಟಲಾಗಿದೆ.ರಾಷ್ಟ್ರೀಯ ಹೆದ್ದಾರಿ ಸುಳ್ಯ ನಗರದಲ್ಲಿ ಹಾದು ಹೋದರೆ ಈ ಕಟ್ಟಗಳನ್ನು ಕೆಡವಿ ಹಾಕುವ ಅನಿವಾರ್ಯ ತೆ ಬರಬಹುದು.ಇದರಿಂದ ಕಟ್ಟಡ ಮಾಲಕರಿಗೆ ನಷ್ಟ ಉಂಟಾಗುತ್ತದೆ ಎಂದು ಎಂದು ಶಾರೀಕ್ ಎ.ಸಿಯವರಿಗೆ ತಿಳಿಸಿದರು.ಇದಕ್ಕೆ ಪೂರಕವಾಗಿ ಸ್ಪಂಧಿಸಿದ ಎ.ಸಿಯವರು

ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಶಾರೀಕ್ ಮನವಿ Read More »

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್‌ ಮಾಡಿದ್ದ ವೈದ್ಯರು !ಆಂಬ್ಯುಲೆನ್ಸ್ ನಲ್ಲಿ ಕರೆ ತಂದ ರೋಗಿಯನ್ನು ಆಸ್ಪತ್ರೆಯ ಎದುರು ಇಳಿಸಲು ಜಾಗವಿಲ್ಲದೇ ಸಮಸ್ಯೆಗೊಳಗಾದ ಚಾಲಕ

ಇಂದು ಸಂಜೆ ಕಲ್ಲುಗುಂಡಿ ಸಮೀಪ ವಾಹನ ಅಪಘಾತವಾಗಿದ್ದು ಅದರಲ್ಲಿ ಓರ್ವ ಗಾಯಾಳುವನ್ನು ಆಂಬುಲೆನ್ಸ್ ನಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಇರುವ ಜಾಗದಲ್ಲಿ ವೈದ್ಯರೊಬ್ಬರ ಕಾರು ನಿಲ್ಲಿಸಿದ್ದು ಗಾಯಳುವನ್ನು ಇಳಿಸಲು ಜಾಗವಿಲ್ಲದ ಪರಿಸ್ಥಿತಿ ಉಂಟಾಯಿತು.ಈ ವೇಳೆ ಕಾರನ್ನು ತೆಗೆಯಲು ಆಂಬುಲೆನ್ಸ್ ಚಾಲಕ ಹೇಳಿದರೂ ಕಾರು ತೆಗೆಯದೆ ವೈದ್ಯರು ಸಿಟ್ಟುಗೊಂಡರು.ಬಳಿಕ ಆಂಬುಲೆನ್ಸ್‌ ಚಾಲಕ ಮತ್ತು ವೈದ್ಯರ ನಡುವೆ ಅಲ್ಪ ಸ್ವಲ್ಪ ಮಾತಿಗೆ ಮಾತು ಬೆಳೆಯಿತು. ಬಳಿಕ ಕಾರಿನಳಿನಲ್ಲಿದ್ದ ಗಾಯಳುವನ್ನು ಹೊರಗೆ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್‌ ಮಾಡಿದ್ದ ವೈದ್ಯರು !ಆಂಬ್ಯುಲೆನ್ಸ್ ನಲ್ಲಿ ಕರೆ ತಂದ ರೋಗಿಯನ್ನು ಆಸ್ಪತ್ರೆಯ ಎದುರು ಇಳಿಸಲು ಜಾಗವಿಲ್ಲದೇ ಸಮಸ್ಯೆಗೊಳಗಾದ ಚಾಲಕ Read More »

error: Content is protected !!
Scroll to Top