ಕಳೆದ ಹಲವು ತಿಂಗಳುಗಳಿಂದ ಅಡ್ತಲೆ ಪರಿಸರದಲ್ಲಿ ರೈತರ ತೋಟಗಳಿಗೆ ನಿರಂತರ ಕಾಡಾನೆಗಳು ದಾಳಿ ಮಾಡುತ್ತಿದ್ದು ಸೆ.27ರ ರಾತ್ರಿ ಮತ್ತೆ ಕಾಡಾನೆಗಳು ತೋಟಗಳಿಗೆ ಮಾಡಿ ಬೆಳೆ ನಾಶ ಮಾಡಿದ ಘಟನೆ ವರದಿಯಾಗಿದೆ. ಪ್ರದೀಪ್ ಅಡ್ತಲೆ, ಪ್ರಭಾಕರ ಅಡ್ತ ಲೆ ಅವರ ತೋಟಗಳಿಗೆ ದಾಳಿ ಮಾಡಿದ ಕಾಡಾನೆಗಳು ಅಪಾರ ಪ್ರಮಾಣದ ತೆಂಗಿನಮರ,, ಬಾಳೆ, ಅಡಿಕೆ ಮರಗಳನ್ನು ಎಳೆದು ಹಾಕಿ ನಾಶ ಮಾಡಿವೆ. ಅಡ್ತಲೆ ಉಳ್ಳಾಕುಲು ಚಾವಡಿ ಹತ್ತಿರ ಕಾಡಾನೆಗಳು ಬಂದಿದ್ದು ಇನ್ನು ಒಂದು ಹೆಜ್ಜೆ ಇಟ್ಟರೆ ಜನವಸತಿ ಇರುವ ಅನೇಕ ಮನೆಗಳ ಹತ್ರಿರ ಬರುತ್ತಿದ್ದವು.
ತಕ್ಷಣ ಸಂಬಂಧ ಪಟ್ಟ ಇಲಾಖೆ ಯವರು, ತಕ್ಷಣ ಗಮನ ಹರಿಸಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
ಅಡ್ತಲೆ ಪರಿಸರದಲ್ಲಿ ಕಾಡಾನೆಗಳಿಂದ ಮತ್ತೆ ಅಪಾರ ಕೃಷಿ ನಾಶ





































































