ಪ್ರಚಲಿತ

ರಾಜ್ಯದಲ್ಲಿ ಅವಧಿಗೆ ಮುನ್ನವೇ ಬೇಸಿಗೆ ಆರಂಭ; ಹವಾಮಾನ ಇಲಾಖೆ ಮಾಹಿತಿ

ರಾಜ್ಯದಲ್ಲಿ ಚಳಿಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಯ ಅನುಭವ ಜನರಿಗೆ ಎದುರಾಗುತ್ತಿದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ ಎರಡು ದಿನಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇನ್ನಷ್ಟು ಹೆಚ್ಚಾಗಲಿದೆ. ಮುಂಜಾನೆ ಮತ್ತು ಸಂಜೆಯ ವೇಳೆ ಮಾತ್ರ ಚಳಿ ಇರಲಿದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿಯಷ್ಟು ಹೆಚ್ಚಳವಾಗುವ ಸಂಭವ ಇದೆ. ಶಾಖದ ಅಲೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಅವಧಿಗೆ ಮುನ್ನವೇ ಬೇಸಿಗೆ ಆರಂಭ; ಹವಾಮಾನ ಇಲಾಖೆ ಮಾಹಿತಿ Read More »

ಅಡ್ಕಾರು ಅಂಜನಾದ್ರಿಯಲ್ಲಿ ಅಖಂಡ ಭಜನಾ ಮಹಾ ಮಂಗಲೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾಯಿಲಕೋಟೆ ಶಿಖರದ ಪುಣ್ಯ ನೆಲದಲ್ಲಿ ರಾಮದಾಸ ಭಕ್ತಾಗ್ರೇಸರ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ಗುಳಿಗರಾಜನ ಪುಣ್ಯ ಕ್ಷೇತ್ರವಿದೆ. ಹಸಿರ ಹೊದಿಕೆಯ ಪ್ರಕೃತಿ ರಮಣೀಯ ಸಿರಿಯ ಸೊಬಗಿನಿಂದ ಕಂಗೊಳಿಸುವ ಈ ಬೆಟ್ಟವೂ ಇಂದು ಎಲ್ಲೆಡೆ ಅಂಜನಾದ್ರಿಯೆಂದೇ ಕರೆಯಲ್ಪಡುತ್ತಿದೆ. ಈ ಕ್ಷೇತ್ರದಲ್ಲಿ ವರುಷದ ಪ್ರತೀ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಅಪರೂಪವೆನಿಸುವಂತೆ ಪ್ರತೀ ಜಾತ್ರೆಗೆ ಶ್ರೀ ಹನುಮ ನೇಮ ಸೇವೆಯು ನಡೆಯುತ್ತಿರುವುದು

ಅಡ್ಕಾರು ಅಂಜನಾದ್ರಿಯಲ್ಲಿ ಅಖಂಡ ಭಜನಾ ಮಹಾ ಮಂಗಲೋತ್ಸವ Read More »

ಸಂಪಾಜೆ : ಫೆ.11ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಫೆ. 11ರಂದು ನಡೆಯಲಿದೆ ಎಂದು ಮಾಜಿ ಗ್ರಾ. ಪಂ. ಅಧ್ಯಕ್ಷ ಹಾಲಿ ಸದಸ್ಯ ಜಿ. ಕೆ.ಹಮೀದ್ ತಿಳಿಸಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ಸಜ್ಜನ ಸಮುದಾಯಭವನದಲ್ಲಿ ನಡೆಯಲಿದೆ. ವಿಧಾನ ಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ,

ಸಂಪಾಜೆ : ಫೆ.11ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ Read More »

ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ

ಅರಂತೋಡು, ಫೆ‌ 10 : ಆರಂತೋಡು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಅಮೃತ ಸಭಾಂಗಣದಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಪಂಚಾಯತ್ ಆಡಳಿತ ಸಮಿತಿ 5ವರ್ಷದಲ್ಲಿ ಮಾಡಿದ ಕೆಲಸ ಕಾರ್ಯಗಳ.ಸಾಧನೆಯ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯ.ಎಂ. ಸಿ. ಭಾಗವಹಿಸಿದ್ದರು.ಸಭೆ ಪ್ರಮುಖವಾಗಿ ಆರಂತೋಡು ಗ್ರಾಮದಲ್ಲಿ

ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ Read More »

ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತ ಠಾಣೆಯ ಪೋಲೀಸರು ಫೆ.10ರಂದು ದಾಳಿ ನಡೆಸಿದ ಘಟನೆ ವರದಿಯಾಗಿದೆ.ಕೆಡ್ಡಸದ ಹಿನ್ನಲೆಯಲ್ಲಿ ಚೆಂಬು ಗ್ರಾಮದಲ್ಲಿ ಕೆಲವರು ಸೇರಿಕೊಂಡು ಗದ್ದೆಯೊಂದರಲ್ಲಿ ಕೋಳಿ ಅಂಕ ಆಯೋಜಿಸಿದ್ದರು.ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಹಾಕಿದ್ದರು.ಆ ವೇಳೆಗೆ ಸ್ಥಳದಲ್ಲಿದ್ದ ಜನರು ಓಡಿ ತಪ್ಪಿಸಿಕೊಂಡರು. ಕೋಳಿ ಅಂಕ ನಡೆಸಲು ಗದ್ದೆಯಲ್ಲಿ ಇರಿಸಿದ್ದ ಕಬ್ಬಿಣದ ಬೇಲಿಯನ್ನು ಪೊಲೀಸರು ವಶಕ್ಕೆ ಪಡೆದರು. ಕೋಳಿಯಾಗಲೀ, ಜನರಾಗಲಿ ಅವರಿಗೆ ಸಿಗಲಿಲ್ಲವೆಂದು ತಿಳಿದುಬಂದಿದೆ.

ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಭೂಮಿಯ ಜೊತೆಗೆ ಸೈಟ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಭೂಮಿ ಖರೀದಿ ಮಾಡಿ ಸೈಟ್ ನೀಡಲು ವಿಶೇಷ ಅನುದಾನ ನೀಡಿದ್ದು, ಮುಖ್ಯಮಂತ್ರಿ ಅನುಮೋದನೆ ಬಳಿಕ 30 – 40 ಸೈಟ್‌ಗಳನ್ನು ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಲಾಗುವುದು ಎಂದು ಹೇಳಿದರು.

ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ! Read More »

ಅರಂತೋಡು : ಫೆ.12ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 12-02-2026 ರ ಕುಂಭ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದುಸಂಪರ್ಕಿಸಿ:7022077809

ಅರಂತೋಡು : ಫೆ.12ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸುಳ್ಯ : ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಪ್ರಾರಂಭವಾಗಿ 28 ವರ್ಷ ಆಗಿರುವ ಹಿನ್ನಲೆಯಲ್ಲಿ ಫೆ. 9 ರಂದು ಸೊಸೈಟಿ ಸಭಾಂಗಣದಲ್ಲಿ ಸ್ಥಾಪನಾ ದಿನಾಚರಣೆಯ ಸಮಾರಂಭ ನಡೆಯಿತು.ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಿಲಿಯಂ ಲಸ್ರಾದೋ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವೆಂಕಟ್ರಮಣ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ.ಜಯರಾಮ್, ಮಾಜಿ

ಸುಳ್ಯ : ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ Read More »

ಸುಳ್ಯ : ಕಾಂಗ್ರೆಸ್ ನಿಂದ ಸುಳ್ಯದಲ್ಲಿ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಗೆ ಚಾಲನೆ

ಕೇಂದ್ರ ಸರಕಾರವು ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮತ್ತು ನಿಯಮಗಳನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ ೪ ದಿನಗಳ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಆಯೋಜನೆಗೊಂಡಿರುವ ಹಿನ್ನಲೆಯಲ್ಲಿ ಫೆ.9ರಂದು ಸುಳ್ಯದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಸುಳ್ಯದ ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾ‌ರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ,

ಸುಳ್ಯ : ಕಾಂಗ್ರೆಸ್ ನಿಂದ ಸುಳ್ಯದಲ್ಲಿ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಗೆ ಚಾಲನೆ Read More »

ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವಾರ್ಷೀ ಜಾತ್ರೋತ್ಸವದ ಪ್ರಯುಕ್ತ ಫೆ.7.ರಂದು ರಾತ್ರಿ ಶ್ರೀ ದೇವರ ಶ್ರೀ ಕಾಚುಕುಜುಂಬ ದೈವದ ನೇಮ ಮತ್ತು ಶ್ರೀ ಉಳ್ಳಾಕುಲು ದೈವದ ನೇಮ ಮೂಲಸ್ಥಾನ ಪಂಬೆತ್ತಾಡಿ ಗ್ರಾಮದ ಗರಡಿ ಬೈಲಿನಲ್ಲಿ ನಡೆಯಿತು.ಫೆ. 7 ರಂದು ಪೂರ್ವಾಹ್ನ ಗರಡಿ ಬೈಲು ಮೂಲನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವನೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿದೇವಳದ

ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ Read More »

error: Content is protected !!
Scroll to Top