ಪ್ರಚಲಿತ

ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಶಾಸಕಿ ಕುಮಾರಿ ಭಾಗೀರಥಿ ಮುರಳ್ಯ ಅವರು. ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ‌ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದರು.ಈ ಮನವಿಗೆ ಹಿಂದಿನಂತೆಯೇ ಸ್ಪಂದಿಸಿದ ಸಚಿವರು, ಶೀಘ್ರವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.ಸಂದರ್ಭದಲ್ಲಿ ಸಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.

ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ Read More »

ತೊಡಿಕಾನ : ಪಾಷಾಣಮೂರ್ತಿ ದೈವದ ಕೋಲ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಒಳಪಟ್ಟ ಶ್ರೀ ಪಾಷಾನಮೂರ್ತಿ ಅಮ್ಮನವರ ಕಾಲಾವಧಿ ಕೋಲ ಜ.27ರಂದು ದೈವಸ್ಥಾನದಲ್ಲಿ ನಡೆಯಿತು.ಮೊದಲಿಗೆ ಕಲ್ಕುಡ ದೈವದ ಕೋಲ ನಡೆದು ಪಾಷಾಣಮೂರ್ತಿ ದೈವದ ಕೋಲ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು,ಸದಸ್ಯರು ಮಾಜಿ ಅಧ್ಯಕ್ಷರು ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.ಪೆ.3ರಂದು ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ ನಡೆಯಲಿದೆ.

ತೊಡಿಕಾನ : ಪಾಷಾಣಮೂರ್ತಿ ದೈವದ ಕೋಲ Read More »

ಸುಳ್ಯ : ವೈಭವದಿಂದ ನಡೆದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ದರ್ಶನ ಬಲಿ

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜ. 28 ರಂದು ಶ್ರೀ ದೇವರ ದರ್ಶನ ಬಲಿ ಹಾಗೂ ಬಟ್ಟಲು ಕಾಣಿಕೆ ಪ್ರಸಾದ ಶ್ರದ್ಧಾ ಭಕ್ತಿಯಿಂದ ಜರುಗಿತು.ಬಳಿಕ ಶ್ರೀ ದೇವರಿಗೆ ಮಹಾಪೂಜೆ ನೆರವೇರಿತು.ಈ ಸಂದರ್ಭದಲ್ಲಿ ಊರ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಬಳಿಕ ಆಗಮಿಸಿದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಸಮಿತಿ ಪದಾಧಿಕಾರಿಗಳು ಮಾಜಿ ಅಧ್ಯಕ್ಷರು ಸದಸ್ಯರು, ಭಗವದ್ದ ಕ್ತರು

ಸುಳ್ಯ : ವೈಭವದಿಂದ ನಡೆದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ದರ್ಶನ ಬಲಿ Read More »

ಭಾರೀ ಗಾಳಿ: ಮೀನುಗಾರರು ಮುನ್ನೆಚ್ಚರಿಕೆ ವಹಿಸಲು ಸೂಚನೆ

ಜನವರಿ 27 ರಿಂದ 31 ರವರೆಗೆ ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿ ಬೀಸುವ ನಿರೀಕ್ಷೆಯಿದ್ದು, ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಾಡದೋಣಿ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರಿಗೆ ಮೀನುಗಾರಿಕೆ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.

ಭಾರೀ ಗಾಳಿ: ಮೀನುಗಾರರು ಮುನ್ನೆಚ್ಚರಿಕೆ ವಹಿಸಲು ಸೂಚನೆ Read More »

ಸುಳ್ಯ : ವೈಭವದಿಂದ ನಡೆದ ಮಹಾವಿಷ್ಣು ದೇವರ ಭೂತ ಬಲಿ ಉತ್ಸವ ಮತ್ತು ಕಟ್ಟೆ ಪೂಜೆ

ಸುಳ್ಯ ಕಾಯರರ್ತೋಡಿ ಮಹಾವಿಷ್ಣು ದೇವರ ಕಾಲಾವಧಿ ಜಾತ್ರೋತ್ಸವ ಜ.26ರಿಂದ ಆರಂಭಗೊಂಡಿದೆ‌.ಜ 27ರಂದು ದೇವಳದಲ್ಲಿ ರಾತ್ರಿ ಭೂತಬಲಿ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮತ್ತು ಸದಸ್ಯರು,ಮಾಜಿ ಅಧ್ಯಕ್ಷ ಪಿ.ಕೆ ಉಮೇಶ ಮತ್ತು ಸದಸ್ಯರು,ಭಕ್ತಾಧಿಗಳು ಉಪಸ್ಥಿತರಿದ್ದರು.ಬೆಳಿಗ್ಗೆ ಗಣಪತಿ ಹವಣ ಹವನ ನಡೆದು ಉಗ್ರಾಣ ತುಂಬಿಸಲಾಯಿತು.ಬೆಳಿಗ್ಗೆ ಹಸಿರುವಾಣಿ ಮೆರವಣಿಗೆ ನಡೆಯಿತು.ತಂತ್ರಿಗಳ ಆಗಮನ,ಶುದ್ಧಿ ಕಲಶ,ತಲಾಭಾರ ಸೇವೆ,ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.

ಸುಳ್ಯ : ವೈಭವದಿಂದ ನಡೆದ ಮಹಾವಿಷ್ಣು ದೇವರ ಭೂತ ಬಲಿ ಉತ್ಸವ ಮತ್ತು ಕಟ್ಟೆ ಪೂಜೆ Read More »

ತೊಡಿಕಾನ ::ಶ್ರದ್ಧಾ ಭಕ್ತಿಯಿಂದ ನಡೆದ ಚಾಕಡೆಡಿ ನೇಮೋತ್ಸವ

ತೊಡಿಕಾನ ಮಲ್ಲಿಕಾರ್ಜುನ ದೇವರ ಪಟ್ಟದ ದೈವ -ಸೀಮೆ ದೈವ ರಾಜನ್ ದೈವ ( ಶಿರಾಡಿ ಭೂತ) ಪರಿವಾರ ದೈವಗಳ ಕೋಲಚಾಕಟೆಡಿ ನೇಮ ಜ.26ರಂದು ನಡೆಯಿತು.ಬೆಳಿಗ್ಗೆ : 5:00 ಗಂಟೆಗೆಮಲೆ ಉಳ್ಳಾಕುಲು ನೇಮ ನಡೆಯಿತು.ಬೆಳಿಗ್ಗೆ 10:00 ಗಂಟೆಯಿಂದ ರಾಜನ್ ದೈವ ( ಶಿರಾಡಿ ಭೂತ) ದ ಕೋಲ ನಡೆದುಬಳಿಕ ಬಟ್ಟಿಭೂತ, ಪುರುಷ ಭೂತ, ಕರಿ ಭೂತ, ಮಲೆ ಮುದ್ದ, ಶೆಟ್ಟಿ ಭೂತ ಮತ್ತು ಅಂಗಾರ ದೈವಗಳ ಕೋಲ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು,ಮಾಜಿ‌ ಅಧ್ಯಕ್ಷರು‌

ತೊಡಿಕಾನ ::ಶ್ರದ್ಧಾ ಭಕ್ತಿಯಿಂದ ನಡೆದ ಚಾಕಡೆಡಿ ನೇಮೋತ್ಸವ Read More »

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ದಿ. 26 ಜನವರಿ 2026ರಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರು ಶ್ರೀ .ಶುಭಕರ ಬಿ.ಸಿ ಹಾಗೂ ಸಂಚಾಲಕಿ ಶ್ರೀಮತಿ. ಗೀತಾಂಜಲಿ ಟಿ.ಜಿ ,ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧರಾದ ಹರಿಶ್ಚಂದ್ರ ಬೊಳುಗಲ್ಲು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪುಟಾಣಿಗಳಿಗೆ ಉಡುಗೊರೆಯನ್ನು ನೀಡಿ ಸಂತೈಸಿದರು. ಇದೇ ಶುಭ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮುಖ್ಯ ಅತಿಥಿಗಳನ್ನು ಶಾಲಾ ಪರವಾಗಿ

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ Read More »

ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಪ್ರಯುಕ್ತ ನಡೆಯುವ ಬ್ರಹ್ಮ ರಥೋತ್ಸವದ ರಥ ಮುಹೂರ್ತ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ಪ್ರಾರಂಭ ಮಾಡಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಬ್ರಹ್ಮ ರಥೋತ್ಸವ ವ್ಯವಸ್ಥೆಯ ಸಂಚಾಲಕರಾದ ಕುಮಾರ ಕಕ್ಯಾನ, ಪುತ್ಯ, ಸಂಪ ಚಿದ್ಗಲ್ ಹಾಗೂ ಕಕ್ಯಾನ ಬೈಲ್ ನವರು ಉಪಸ್ಥಿತರಿದ್ದರು.

ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ Read More »

ಭಾರತಕ್ಕೆ ಭರ್ಜರಿ ವಿಜಯ

ಗುವಾಹಟಿಯಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಟೀಂ ಇಂಡಿಯಾ 10 ಓವರ್‌ಗಳಲ್ಲಿ ಗೆಲುವಿನ ದಡ ಸೇರಿದೆ.

ಭಾರತಕ್ಕೆ ಭರ್ಜರಿ ವಿಜಯ Read More »

ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ ಕಡೆಪಾಲ, ಸಂಪಾಜೆ, ಇದರ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಅತಿಥಿಗಳಾಗಿ ಪ್ರಶಾಂತ್ ಚಟ್ಟೆಕಲ್ಲು, ಎಸ್ ಪಿ ಕರುಣಾಕರ ಗೂನಡ್ಕ, ಶ್ರೀ ನಾಗೇಶ್ ಕಲ್ಲುಗುಂಡಿ, ವರದರಾಜ್ ಸಂಕೇಶ, ದೇವಯ್ಯ ಕಲ್ಲುಗುಂಡಿ, ಯಶೋಧರ ಕಡೆಪಾಲ, ಉದಯ ನಾಯ್ಕ್ ದೊಡ್ಡಡ್ಕ, ಮತ್ತು ದೈವಸ್ಥಾನದ ಟ್ರಸ್ಟ್ ನ ಸದಸ್ಯರು ಹಾಜರಿದ್ದರು. ನೇಮೋತ್ಸವವು ಮಾರ್ಚ್ 07 ನೇ ಶನಿವಾರ ಮತ್ತು 08 ನೇ ಆದಿತ್ಯವಾರ ನಡೆಯಲಿದೆ.

ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top