ಪ್ರಚಲಿತ

ಕೋವಿಶೀಲ್ಡ್ ಸೈಡೆಫೆಕ್ಟ್ ನಿಜ: ಕೋರಲ್ಲಿ ಆಸ್ಟ್ರಾಜೆನಿಕಾ ಒಪ್ಪಿಗೆ, ರಕ್ತ ಹೆಪ್ಪು ಗಟ್ಟುವಿಕೆ, ಇತರ ಸಮಸ್ಯೆಗಳಾಗುವ ಸಾಧ್ಯತೆ

ಲಂಡನ್: 2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ ಕೋವಿಡ್ ಮಹಾಮಾರಿ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್ ಮೂಲದ ಆಸ್ಟಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೋವಿಡ್ ಲಸಿಕೆಗಳ ಅಡ್ಡಪರಿ ಣಾಮದ ಕುರಿತು ನಾನಾ ವದಂತಿಗಳು ಇದ್ದ ವಾದರೂ, ಈ ಕುರಿತು ಕಂಪನಿ ಬಹಿರಂಗವಾಗಿ ಒಪ್ಪಿಕೊಂಡಿದೆ.ಇದೇ ಆಸ್ಟಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್ ಕೋವಿ ಶೀಲ್ಡ್ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ […]

ಕೋವಿಶೀಲ್ಡ್ ಸೈಡೆಫೆಕ್ಟ್ ನಿಜ: ಕೋರಲ್ಲಿ ಆಸ್ಟ್ರಾಜೆನಿಕಾ ಒಪ್ಪಿಗೆ, ರಕ್ತ ಹೆಪ್ಪು ಗಟ್ಟುವಿಕೆ, ಇತರ ಸಮಸ್ಯೆಗಳಾಗುವ ಸಾಧ್ಯತೆ Read More »

ಮೀನು ಪ್ರಿಯರಿಗೊಂದು ಗುಡ್ ನ್ಯೂಸ್,ನ.18ರಂದು ಪರಿವಾರಕಾನದಲ್ಲಿ ಸೀಫುಡ್ ಮೀನು ಮಾರುಕಟ್ಟೆ ಶುಭಾರಂಭ

ಮೀನು ಪ್ರಿಯರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ.ನವಂಬರ್ 18ರಂದು ಸುಳ್ಯದ ಪರಿವಾರಕಾನ ಉಡುಪಿ ಗಾರ್ಡನ್ ಹೊಟೇಲ್ ಬಳಿ ಹಮೀದ್ ಮತ್ತು ಶಾಕಿಫ್ ಅವರ ಮಾಲಕತ್ವದಲ್ಲಿ ಸೀಫುಡ್ ಸಮುದ್ರ ಮೀನು ಮಾರ್ಕೆಟ್ ಶುಭಾರಂಭಗೊಳ್ಳಲಿದೆ.ಸುಮಾರು 25 ವರ್ಷಗಳಿಂದ ಮೀನು ಮಾರಾಟದಲ್ಲಿ ಹೆಸರುವಾಸಿಯಾದ ಮಾಲಕರು ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದು ಸುಳ್ಯದ ಪರಿವಾರಕಾನದಲ್ಲಿ ಹೊಸ ಮಾರ್ಕೆಟ್ ಪ್ರಾರಂಭಿಸುತ್ತಿದ್ದಾರೆ. ಗ್ರಾಹಕರ ಸಹಕಾರ ಎಂದಿನಂತೆ ಇರಲಿ. ನಾಡಿನ ಸಮಸ್ತ ಜನತೆಯನ್ನು ಈ ಮಳಿಗೆಗೆ ಸ್ವಾಗತಿಸುತ್ತಿದ್ದೇವೆ.ನಮ್ಮಲ್ಲಿ ಉತ್ತಮವಾದ ಎಲ್ಲ ಬಗೆಯ ಮೀನುಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತದೆ

ಮೀನು ಪ್ರಿಯರಿಗೊಂದು ಗುಡ್ ನ್ಯೂಸ್,ನ.18ರಂದು ಪರಿವಾರಕಾನದಲ್ಲಿ ಸೀಫುಡ್ ಮೀನು ಮಾರುಕಟ್ಟೆ ಶುಭಾರಂಭ Read More »

ತುಳಸಿ ವಿವಾಹ ಯಾಕೆ ಅಷ್ಟೊಂದು ವಿಶೇಷ? ತುಳಸಿಗೂ ವಿಷ್ಣುವಿಗೂ ಸಂಬಂಧ ಹೇಗೆ?

ಕಾರ್ತಿಕ ಮಾಸದ ಹಬ್ಬಗಳಲ್ಲಿ ತುಳಸೀ ವಿವಾಹ ಅಥವಾ ತುಳಸೀ ಪೂಜೆ ವಿಶೇಷ. ಪ್ರತಿ ಭಾರತೀಯರೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಇದು ರಾತ್ರಿ ಆಚರಿಸುವ ಹಬ್ಬ. ಏಕಾದಶೀ ತಿಥಿಯಂದು ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಇದನ್ನು ಉತ್ಥಾನ ದ್ವಾದಶೀ ಎಂದೂ ಕರೆಯುವುದುಂಟು. ಶಯನೈಕಾದಶಿಯಂದು ಮಲಗಿದ ವಿಷ್ಣು ಇಂದು ಏಳುತ್ತಾನೆ.‌ ಹಾಗಾಗಿ ಇದನ್ನು ಪ್ರಬೋಧಿನೀ ಏಕಾದಾಶೀ ಎಂದೂ ಕರೆಯುತ್ತಾರೆ. ಜಲಂಧರ ಎನ್ನುವ ರಾಕ್ಷಸನನ್ನು ವಿವಾಹವಾದವಳು ವೃಂದಾ. ಆಕೆಯೇ ತುಳಸೀ.‌ ಜಲಂಧರನಿಂದ ಲೋಕಕ್ಕೆ ಕಂಟಕವೊದಗಿ ಬಂದಿತು. ಆ ಕಾರಣಕ್ಕೆ

ತುಳಸಿ ವಿವಾಹ ಯಾಕೆ ಅಷ್ಟೊಂದು ವಿಶೇಷ? ತುಳಸಿಗೂ ವಿಷ್ಣುವಿಗೂ ಸಂಬಂಧ ಹೇಗೆ? Read More »

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಭಾಗೀರಥಿ ಮುರುಳ್ಯ

ಸುಳ್ಯ: ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆ.ವಿದ್ಯಾರ್ಥಿಗಳು ಪ್ರತಿಭೆಯನ್ನು ತೋರ್ಪಡಿಸುವ ಮೂಲಕ ವೇದಿಯನ್ನು ಸದುಪಯೋಗಪಡಿಸಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ದ.ಕ.ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳು ವಿನೂಬನಗರ ಇದರ ಸಹಭಾಗಿತ್ವದಲ್ಲಿ ವಿನೂಬನಗರ ವಿದ್ಯಾಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆಯುವ ತಾಲೂಕು ಮಟ್ಟದಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನ.13ರಂದು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಭಾಗೀರಥಿ ಮುರುಳ್ಯ Read More »

ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 12-11-2024ರಂದು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳದ ವಿನಾಯಕ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರವರು ವಹಿಸಿ ಶಿಬಿರಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ, ಸಮಯ ಪ್ರಜ್ಞೆ ಹಾಗೂ ಸೇವಾ

ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ Read More »

ಕಸಾಪ ಸಾಹಿತ್ಯ ಸಂಭ್ರಮ ಸಮಾರೋಪ ಮತ್ತು ಸನ್ಮಾನ ಸಮಾರಂಭ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ರಾಜ್ಯೊತ್ಸವ- ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಸನ್ಮಾನ ಸಮಾರಂಭ ನ.12 ರಂದು ಸುಳ್ಯದ ಹಳೆಗೇಟಿನ ಶಿವಕೃಪಾ ನಿಲಯದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಮಾತನಾಡಿದರು.ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಸಾಧಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ

ಕಸಾಪ ಸಾಹಿತ್ಯ ಸಂಭ್ರಮ ಸಮಾರೋಪ ಮತ್ತು ಸನ್ಮಾನ ಸಮಾರಂಭ Read More »

ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ್ ರವರಿಗೆ ಸಾರ್ವಜನಿಕ ಸನ್ಮಾಕ್ಕೆ ನಿರ್ಧಾರ

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಳ್ಯ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸಂಘಟಕ ಗೋಕುಲದಾಸ್ ರವರಿಗೆ ಸಾರ್ವಜನಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಗೋಕುಲದಾಸ್ ಅಭಿಮಾನಿಗಳ ಸಭೆ ನ.12 ರಂದು ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ನಡೆಯಿತು.ಎನ್.ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ.ಜಯರಾಮ್, ದಿನೇಶ್ ಮಡಪ್ಪಾಡಿ, ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ್, ಕೆ.ಎಂ.ಮುಸ್ತಫಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವಾನಿಶಂಕರ ಕಲ್ಮಡ್ಕ ಪ್ರಸ್ತಾವಿಕವಾಗಿ ಮಾತನಾಡಿದರುಸಭೆಯಲ್ಲಿ ಮಾತನಾಡಿದ ಪ್ರಮುಖರು ಗೋಕುಲದಾಸ್‌ ಅವರಿಗೆ ಅರ್ಹವಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ಅವರಿಗೆ ಸಾರ್ವಜನಿಕ ಸನ್ಮಾನ ಮಾಡಬೇಕಾಗಿರುವುದು ನಮ್ಮಲ್ಲರ

ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ್ ರವರಿಗೆ ಸಾರ್ವಜನಿಕ ಸನ್ಮಾಕ್ಕೆ ನಿರ್ಧಾರ Read More »

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ನಾಮಪತ್ರ ಸಲ್ಲಿಕೆ

ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್ ಬೆಂಬಲದ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ಯವರು ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಂಡೆಕೋಲು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು/ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಶ್ರೀ ಸದಾನಂದ ಮಾವಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಧನುಶ್ ಕುಕ್ಕೆಟ್ಟಿ ಮತ್ತು ಶೇಖರ್ ಮಣಿಯಾಣಿ ಕಣೆಮರಡ್ಕ, ಮಂಡೆಕೋಲು ಗ್ರಾಮ ಪಂಚಾಯತ್ ಹಾಲಿ ಸದಸ್ಯೆ ಗೀತಾ ಮೈಲೆಟ್ಟಿಪಾರೆ, ಪೂರ್ಣಚಂದ್ರ ಕಣೆಮರಡ್ಕ, ಅಬೂಬಕ್ಕರ್

ಮಂಡೆಕೋಲು ಗ್ರಾಮ ಪಂಚಾಯತ್ ಉಪಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ಕೃಷ್ಣ ಮಣಿಯಾಣಿ ನಾಮಪತ್ರ ಸಲ್ಲಿಕೆ Read More »

ಕಾಂಗ್ರೆಸ್‌ ಹಿರಿಯ ನಾಯಕ ಆದಿತ್ಯ ವಿಕ್ರಮ್ ಜೈಸ್ವಾಲ್‌ ಬಿಜೆಪಿ ಸೆರ್ಪಡೆ

ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನಕ್ಕೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್‌ ಹಿರಿಯ ನಾಯಕ ಆದಿತ್ಯ ವಿಕ್ರಮ್ ಜೈಸ್ವಾಲ್ ಸೋಮವಾರ ಬಿಜೆಪಿ ಸೇರಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಅಭಿವೃದ್ಧಿ ಕೆಲಸಗಳಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದ ಅವರು ಹೇಳಿದ್ದಾರೆ. ನಮ್ಮ ಕುಟುಂಬ ಕಳೆದ ಐದು ತಲೆಮಾರುಗಳಿಂದ ಕಾಂಗ್ರೆಸ್‌ನಲ್ಲಿದೆ. ಆದರೆ ಈ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಲಾಯಿತು. ಜಾರ್ಖಂಡ್‌ನ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನಿವಾರ್ಯ ಎಂದರು.

ಕಾಂಗ್ರೆಸ್‌ ಹಿರಿಯ ನಾಯಕ ಆದಿತ್ಯ ವಿಕ್ರಮ್ ಜೈಸ್ವಾಲ್‌ ಬಿಜೆಪಿ ಸೆರ್ಪಡೆ Read More »

ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಆರಂಭ

ಸುಳ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿದ್ದ ಆಧಾ‌ರ್ ತಿದ್ದುಪಡಿ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಪುನರಾಂಭಗೊಂಡಿದೆ. ಸುಳ್ಯದ ಬ್ಯಾಂಕ್ ಬರೋಡಾ ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿತ್ತು. ಮೂರು ತಿಂಗಳ ಹಿಂದೆ ಸುಳ್ಯದ ಅಂಚೆ ಕಚೇರಿಯ ಆಧಾರ್ ತಿದ್ದುಪಡಿ ಕೇಂದ್ರ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿತ್ತು. ಬ್ಯಾಂಕ್ ಆಫ್ ಬರೋಡಾದಲ್ಲಿದ್ದ ಆಧಾರ್ ಕೇಂದ್ರವನ್ನು ಜನರು ಅವಲಂಬನೆ ಮಾಡಬೇಕಿತ್ತು. ಬ್ಯಾಂಕ್ ಆಫ್ ಬರೋಡದ ಆಧಾ‌ರ್ ಕೇಂದ್ರವು ವಾರದ ಹಿಂದೆ ಸ್ಥಗಿತಗೊಂಡಿದ್ದು ಸುಳ್ಯದಲ್ಲಿ ಆಧಾರ್ ಕಾರ್ಡ್

ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಆರಂಭ Read More »

error: Content is protected !!
Scroll to Top