ಸುಳ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿದ್ದ ಆಧಾರ್ ತಿದ್ದುಪಡಿ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಸುಳ್ಯ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಪುನರಾಂಭಗೊಂಡಿದೆ.
ಸುಳ್ಯದ ಬ್ಯಾಂಕ್ ಬರೋಡಾ ಕಚೇರಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಲಾಗಿತ್ತು. ಮೂರು ತಿಂಗಳ ಹಿಂದೆ ಸುಳ್ಯದ ಅಂಚೆ ಕಚೇರಿಯ ಆಧಾರ್ ತಿದ್ದುಪಡಿ ಕೇಂದ್ರ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿತ್ತು. ಬ್ಯಾಂಕ್ ಆಫ್ ಬರೋಡಾದಲ್ಲಿದ್ದ ಆಧಾರ್ ಕೇಂದ್ರವನ್ನು ಜನರು ಅವಲಂಬನೆ ಮಾಡಬೇಕಿತ್ತು. ಬ್ಯಾಂಕ್ ಆಫ್ ಬರೋಡದ ಆಧಾರ್ ಕೇಂದ್ರವು ವಾರದ ಹಿಂದೆ ಸ್ಥಗಿತಗೊಂಡಿದ್ದು ಸುಳ್ಯದಲ್ಲಿ ಆಧಾರ್ ಕಾರ್ಡ್ ಮಾಡಬಹುದಾದ ಕೇಂದ್ರವೇ ಇಲ್ಲದಂತಾಗಿತ್ತು. ಶಾಸಕರ ಸಹಿತ
ಅಧಿಕಾರಿಗಳಿಗೂ ಈ ಕುರಿತು ದೂರುಗಳು ಹೋಗಿದ್ದವು. ಇದೀಗ ಸುಳ್ಯ ಅಂಚೆ ಕಚೇರಿಯಲ್ಲಿ ಹೊಸ ಆಧಾರ್ ಕಾಡ್ ೯ ತಿದ್ದುಪಡಿ ಕೇಂದ್ರ ನ.4ರಿಂದ ಕಾರ್ಯಾರಂಭ ಮಾಡಿದೆ. ದಿನವೊಂದಕ್ಕೆ 15 ರಿಂದ 20 ಮಂದಿಗೆ ಇಲ್ಲಿ ಈಗ ಸೇವೆ ನೀಡಲಾಗುತ್ತಿದೆ.
ಆಧಾರ್ ಮಾಡಿಸುವವರು ಬೆಳಗ್ಗೆ ಅಂಚೆ ಕಚೇರಿಗೆ ಬಂದು ಟೋಕನ್ ಪಡೆದುಕೊಳ್ಳಬೇಕು. ಅವರು ನೀಡಿದ ಕ್ರಮ ಸಂಖ್ಯೆ ಪ್ರಕಾರ ಮಧ್ಯಾಹ್ನ ಬಳಿಕ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಡುವ ಪ್ರಕ್ರಿಯೆ ನಡೆಯುತ್ತದೆ.
ಸುಳ್ಯದಲ್ಲಿ ಇದೀಗ 18 ವರ್ಷ ಕೆಳಗಿನವರಿಗೆ ಹೊಸ ಆಧಾರ್ ಕಾಡ್ ಮಾಡಿಕೊಡಲಾಗುತ್ತಿದೆ. ಆದರೆ 18 ವರ್ಷ ಮೇಲಿನವರಾಗಿದ್ದು ಇದುವರೆಗೆ ಒಮ್ಮೆಯೂ ಆಧಾರ್ ಕಾರ್ಡ್ ಮಾಡಿಲ್ಲವೆಂದಾದರೆ ಅಂತವರಿಗೆ ಇಲ್ಲಿ ಕಾರ್ಡ್ ಮಾಡಲು ಆಗುವುದಿಲ್ಲ. ಅಂತವರು ಆಧಾರ್ ಕಾರ್ಡ್ ಪಡೆಯಲು ಪುತ್ತೂರು ಕೇಂದ್ರ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಉಳಿದಂತೆ ತಿದ್ದು ಪಡಿ ಸಹಿತ ಇನ್ನಿತರ ಎಲ್ಲ ಕೆಲಸಗಳುಸುಳ್ಯದಲ್ಲಿಯೇ ಮಾಡಲಾಗುತ್ತಿದೆ.





















































