ಪ್ರಚಲಿತ

ಕಲ್ಲುಗುಂಡಿ: ಆಟೋ ಚಾಲಕರ ಸಂಘದ ಮಾಸಿಕ ಸಭೆ, ಜಗದೀಶ ಗೂನಡ್ಕರಿಗೆ ಸನ್ಮಾನ

ಬಿ.ಎಂ.ಎಸ್ ಆಟೋ ಚಾಲಕರ ಸಂಘ ಕಲ್ಲುಗುಂಡಿ ಘಟಕದ ಮಾಸಿಕ ಸಭೆಯು ಮಂಗಳವಾರ ಕಲ್ಲುಗುಂಡಿ ವಿಷ್ಣು ಮೂರ್ತಿ ಗದ್ದೆಯ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಸತ್ಯನಾರಾಯಣ ಪೂಜೆಯ ಖರ್ಚು ವೆಚ್ಚಗಳ ಬಗ್ಗೆ ಮಂಡನೆ ಮಾಡಲಾಯಿತು.ಅಪಘಾತ ವಿಮೆ, ಸದಸ್ಯತ್ವ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಸಂಪಾಜೆ ಪ್ರಾಥಮಿಕ ‌ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ಉಪಾಧ್ಯಕ್ಷರಾದ ಜಗದೀಶ್ ಗೂನಡ್ಕ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.ಈ‌ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಗೌರವ ಅಧ್ಯಕ್ಷರು, ಕಾರ್ಯದರ್ಶಿ,ಖಜಾಂಜಿ,ನಿರ್ದೇಶಕರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು‌.ಜಗದೀಶ್ […]

ಕಲ್ಲುಗುಂಡಿ: ಆಟೋ ಚಾಲಕರ ಸಂಘದ ಮಾಸಿಕ ಸಭೆ, ಜಗದೀಶ ಗೂನಡ್ಕರಿಗೆ ಸನ್ಮಾನ Read More »

ಕೇರ್ಪಡ ಮಹಿಷ ಮರ್ದಿನಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಕಡಬ ತಾಲೂಕಿನ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ಮಹಾಗಣಪತಿ ಹೋಮ, ಚಂಡಿಕಾ ಹೋಮ ನಡೆಯಿತು.ಬೆಳಗ್ಗೆ 8.23ರಿಂದ 9.23ರವರೆಗಿನ ಮಕರ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನೀ ದೇವರಿಗೆ ಅಷ್ಟಬಂಧ ಕ್ರಿಯೆ ಬ್ರಹ್ಮಕಲಶಾಭಿಷೇಕ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬಳಿಕ ವಿವಿದ ವೈಧಿಕ ಕಾರ್ಯಗಳು ನಡೆಯಿತು. ಸಂಜೆ ದೇವರಿಗೆ ದೊಡ್ಡ ರಂಗ ಪೂಜೆ, ರಾತ್ರಿ ಶ್ರೀ ದೇವರ ಬಲಿ ಹೊರಟು, ಶ್ರೀ ಭೂತಬಲಿ ಉತ್ಸವ, ವಸಂತ ಕಟ್ಟೆ

ಕೇರ್ಪಡ ಮಹಿಷ ಮರ್ದಿನಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ Read More »

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ,ತಾಯಿ ಮಕ್ಕಳು ಈಗ ಹೇಗಿದ್ದಾರೆ ಇಲ್ಲಿದೆ ಮಾಹಿತಿ

ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನನ ನೀಡಿದ ಮಹಾತಾಯಿ. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನನ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ ಆರೋಗ್ಯವಾಗಿದ್ದಾರೆ‌. ಪ್ರಸವ ಪೂರ್ವ ಜನನ ಆಗಿದ್ದರಿಂದ ಸದ್ಯ

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ,ತಾಯಿ ಮಕ್ಕಳು ಈಗ ಹೇಗಿದ್ದಾರೆ ಇಲ್ಲಿದೆ ಮಾಹಿತಿ Read More »

ದ.ಕ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಡಾ.ಪ್ರಭಾಕರ ಶಿಶಿಲ ಆಯ್ಕೆ

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಫೆ.21 ಮತ್ತು 22ರಂದು ನಡೆಯುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದ.ಕ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಡಾ.ಪ್ರಭಾಕರ ಶಿಶಿಲ ಆಯ್ಕೆ Read More »

ಗೂನಡ್ಕ : ರಾಜ್ಯ ಮಟ್ಟದ ಮತ್ತು ತಾಲೂಕು ಮಟ್ಟದ ದಫ್ ಸ್ಪರ್ಧೆ

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲಿಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ಸಂಪಾಜೆ ದಫ್ ಸ್ಪರ್ಧೆ ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ಜ.5ರಂದು ನಡೆಯಿತು.ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್ ರ್ಯಾಲಿಗೆ ಚಾಲನೆ ನೀಡಿದರು. ಪೇರಡ್ಕ ಜುಮ್ಮಾ ಮಸೀದಿಯ ಖತೀಬರಾದ ನಈಂ ಫೈಝಿ ದುವಾಃ ನೆರವೇರಿಸಿದರು.ಆರಂಭದಲ್ಲಿ ತಾಲೂಕು

ಗೂನಡ್ಕ : ರಾಜ್ಯ ಮಟ್ಟದ ಮತ್ತು ತಾಲೂಕು ಮಟ್ಟದ ದಫ್ ಸ್ಪರ್ಧೆ Read More »

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಗಳಿಗೆ ಮಾತ್ರ ಏಕೆ ? : ಪ್ರಭಾಕರ ಭಟ್ ಕಲ್ಲಡ್ಕ ಪ್ರಶ್ನೆ

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಕ್ಕೆ ಮಾತ್ರ ಏಕೆ ? ಪ್ರಾಣತ್ಯಾಗ ಮಾಡಿದ ತಾಯಂದಿರ ಇತಿಹಾಸ ಜಗತ್ತಿನಲ್ಲಿದ್ದರೆ ಅದು ಭಾರತದಲ್ಲಿ ಮಾತ್ರ, ಅಂತಹ ತಾಯಿಯನ್ನು ಮಹಿಷಮರ್ದಿನಿ ರೂಪದಲ್ಲಿ ಇಂದು ನಾವು ಕಾಣುತ್ತಿದ್ದೇವೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.ಅವರು ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.ವಿಶಾಲ ಧರ್ಮ ಸಂಸ್ಕೃತಿ ನಮ್ಮದು, ಭಾರತದ ಮೇಲೆ ಇಲ್ಲಿಯ

ಇತರ ಧರ್ಮಗಳಿಗೆ ಇಲ್ಲದ ಕಾನೂನು ಹಿಂದು ಧರ್ಮಗಳಿಗೆ ಮಾತ್ರ ಏಕೆ ? : ಪ್ರಭಾಕರ ಭಟ್ ಕಲ್ಲಡ್ಕ ಪ್ರಶ್ನೆ Read More »

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ್ ನವರು ಪ್ರಥಮ ಬಾರಿಗೆ ಕೊಡಮಾಡಿದ ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಜನವರಿ 3 ಮತ್ತು 4 ರಂದು ನಡೆದ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ ನಡೆಯಿತು. ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಭಾಜನರಾದ ಸುಳ್ಯದ ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ನಟಿ ಉಮಾಶ್ರೀಯವರು

ಡಾ.  ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ Read More »

ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ : ಮೋಹನ್ ಆಳ್ವ

ಬೆಳ್ಳಾರೆ ಕೆಪಿಎಸ್ ನಲ್ಲಿ ಶಿಕ್ಷಣ ಸಂಸ್ಥೆಗಳ ವಸಂತ ಸಂಭ್ರಮ ಯಶಸ್ವಿಯಾಗಿ ನಡೆದಿದೆ.ಇದೊಂದು ಮಾದರಿ ಕಾರ್ಯಕ್ರಮ.ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಗಟ್ಟಿಯಾಗಬೇಕು.ಆಗ ಮುಂದಿನ ಶಿಕ್ಷಣ ಗಟ್ಟಿಯಾಗುತ್ತದೆ.ಆರೋಗ್ಯ ಮತ್ತು ವಿದ್ಯೆ ಇದ್ದರೆ ಜನರು ನಾಡಿನಲ್ಲಿ ಪ್ರಬುದ್ಧರಾಗಲು ಸಾಧ್ಯ.ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಬಗ್ಗೆ ಮೌನ ಕ್ರಾಂತಿ ನಡೆಯಬೇಕು.ಕನ್ನಡ ಮಾಧ್ಯಮವನ್ನು ಬಲಾಡ್ಯವಾಗಿ ಕಟ್ಟುವ ಅಗತ್ಯ ನಮ್ಮ ನಿಮ್ಮ ನಮ್ಮೇಲ್ಲರ ಹೊಣೆಯಾಗಿದೆ. ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವರವರು ಹೇಳಿದರುಅವರು ಬೆಳ್ಳಾರೆ ಕರ್ನಾಟಕ ಪಬ್ಲಿಕ್

ಬೆಳ್ಳಾರೆ ಕೆಪಿಎಸ್ ವಸಂತ ಸಂಭ್ರಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮ : ಮೋಹನ್ ಆಳ್ವ Read More »

ನಮ್ಮ ಸನಾತನ ಸಂಸ್ಕೃತಿ ನಾವು ಮರೆಯಬಾರದು : ಶ್ರೀ ಮಾತಾನಂದಮಯಿ

ತಾಯಿ ಭಾರತ ಮಾತೆಗೆ ತಾಯಿಯ ಸ್ಥಾನವಿದೆ.ತ್ಯಾಗ, ಸೇವೆ ಭಾರತದ ಆದರ್ಶಗಳಲ್ಲಿ ಒಂದು. ಸನಾತನ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು. ನಮ್ಮತನ ಮರೆತರೆ ನಮಗೆ ಭವಿಷ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿಯವರು ನುಡಿದರು.ಶ್ರೀ ಮಹಿಷಮರ್ದಿನೀ ದೇವಸ್ಥಾನ ಕೇರ್ಪಡ ಇಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಇದರ ಅಂಗವಾಗಿಪ್ರಯುಕ್ತ ಜ. ೩ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರುಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.ಧಾರ್ಮಿಕ ಉಪನ್ಯಾಸ ನೀಡಿದ

ನಮ್ಮ ಸನಾತನ ಸಂಸ್ಕೃತಿ ನಾವು ಮರೆಯಬಾರದು : ಶ್ರೀ ಮಾತಾನಂದಮಯಿ Read More »

ಪೆರಾಜೆ : ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ಸಮೀಪದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. ೩೦ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಜ.4ರಂದು ದೇವಳದ ವಠಾರದಲ್ಲಿ ನಡೆಯಿತು.ದೇವತಕ್ಕರಾದ ರಾಮಕಜೆ ರಾಜಗೋಪಾಲರವರು ಆಮಂತ್ರ ಪತ್ರ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಆಡಳಿತ ಮೊಕೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಮಾಜಿ ಮೊಕೇಸರುಗಳಾದ ನಾಗೇಶ್ ಕುಂದಲ್ಪಾಡಿ, ಲೋಕನಾಥ ಅಮೆಚೂರು, ಸುರೇಶ್ ಪೆರುಮುಂಡ, ನಂಜಪ್ಪ ನಿಡ್ಯಮಲೆ, ಪದ್ಮಯ್ಯಕೆ.ಎಸ್., ಜೋಯಪ್ಪ ನಿಡ್ಯಮಲೆ, ಆ‌ರ್.ಡಿ.ಆನಂದ,

ಪೆರಾಜೆ : ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top