ಪ್ರಚಲಿತ

ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಎ.24 ಮತ್ತು ಎ.25ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ ಕೇಶವ ಕೊಳಲು ಮೂಲೆ, ದೈವಸ್ಥಾನದ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ತೀರ್ಥರಾಮ ಪರ್ನೋಜಿ,ತಿಮ್ಮಯ್ಯ ಮೆತ್ತಡ್ಕ ದೇವಳದ ವ್ಯವಸ್ಥಾಪಕ ಆನಂದ […]

ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ Read More »

ಅರಂತೋಡು : ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಎನ್.ಯಂ.ಪಿ‌.ಯು.ಸಿ ಗೆ ಶೇ.100 ಫಲಿತಾಂಶ

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಅರಂತೋಡು ಎನ್‌ಎಂಪಿಯು ಗೆ ಶೇ.100 ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಬರೆದ 86 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 18 ಮಂದಿ ಡಿಸ್ಟಿಂಕ್ಷನ್ ಹಾಗೂ 67 ಮಂದಿ ಪ್ರಥಮ ದರ್ಜೆಯಲ್ಲಿ, ಓರ್ವ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಅರಂತೋಡು : ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಎನ್.ಯಂ.ಪಿ‌.ಯು.ಸಿ ಗೆ ಶೇ.100 ಫಲಿತಾಂಶ Read More »

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ಸ್ಥಾನ

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಅಶ್ವಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ರಾಜ್ಯದಲ್ಲಿ ಏಳನೇ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.ಅಶ್ವಿತಾ ಮಹಾಬಲಡ್ಕ ದಾಮೋದರ ಹಾಗೂ ಶೀಲಾವತಿ ದಂಪತಿ ಪುತ್ರಿ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ಸ್ಥಾನ Read More »

ಹಿಮಾದ್ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ‌ ವಿದ್ಯಾರ್ಥಿನಿ ಹಿಮಾದ್ರಿ ಸಿ.ಎಂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 602 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.ಹಿಮಾದ್ರಿ ಗಾಂಧಿನಗರ ಪ್ರೌಢಶಾಲೆಯ ಸಹಶಿಕ್ಷಕ ಮುಡೂರು ಪುತ್ತುಕುಂಜ ಚಿನ್ನಪ್ಪ ಗೌಡ ಅವರ ಪುತ್ರಿ.

ಹಿಮಾದ್ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ Read More »

ಈ ವರ್ಷ ರಾಜ್ಯದಲ್ಲಿ ಎಸ್.ಎಲ್.ಸಿಯಲ್ಲಿ ದಾಖಲೆಯ ಫಲಿತಾಂಶ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬುಧವಾರ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟವಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದರು. ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಾಖಲೆಯ ಫಲಿತಾಂಶ ಬಂದಿದೆ ಎಂದು ಸಚಿವರು ತಿಳಿಸಿದರು.ಮೂವರು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ),

ಈ ವರ್ಷ ರಾಜ್ಯದಲ್ಲಿ ಎಸ್.ಎಲ್.ಸಿಯಲ್ಲಿ ದಾಖಲೆಯ ಫಲಿತಾಂಶ : ಶಿಕ್ಷಣ ಸಚಿವ ಮಧು ಬಂಗಾರಪ್ಪ Read More »

ಚಿನ್ನದ ಬೆಲೆ ಇಳಿಕೆ ಇಂದಿನ ದರ ಎಷ್ಟಿದೆ?

ಕಳೆದ ಕೆಲವು ವಾರಗಳಿಂದ ರಾಕೆಟ್ ವೇಗದಲ್ಲಿ ಏರುತ್ತಿದ್ದ ಬಂಗಾರದ ಬೆಲೆಗೆ ಈಗ ಬ್ರೇಕ್ ಬಿದ್ದಿದೆ. ಇಂದು ಕೂಡ ಚಿನ್ನದ ದರ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಇದೊಂದು ಶುಭಸುದ್ದಿಯಾಗಿದೆ. ಇಂದು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 1,41,840 ರೂಪಾಯಿ ಆಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 1,54,740 ರೂಪಾಯಿ ಆದ್ರೆ, 1 ಕೆ.ಜಿ ಬೆಳ್ಳಿಯ ಬೆಲೆ 2,64,900 ರೂಪಾಯಿ ಇದೆ. ಚಿನ್ನದ ಬೆಲೆ ಮತ್ತೆ ಮೇಲಕ್ಕೇರುವ ಸಾಧ್ಯತೆಯೇ ಹೆಚ್ಚಿರುವುದರಿಂದ

ಚಿನ್ನದ ಬೆಲೆ ಇಳಿಕೆ ಇಂದಿನ ದರ ಎಷ್ಟಿದೆ? Read More »

ಎ.30 ರಂದು ಅರಂತೋಡು ಮಸೀದಿಯಲ್ಲಿ ವಾರ್ಷಿಕ ದಿಕ್ರ್ ಸ್ವಲಾತ್ ಹಾಗೂ ಮರ್ ಹೂಮ್ ಡಾ| ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ

ಬದ್ರಿಯಾ ಜುಮಾ ಮಸೀದಿ, ದಿಕ್ರ್ ಸ್ವಲಾತ್ ಸಮಿತಿ ಅರಂತೋಡು ಇದರ ಆಶ್ರಯದಲ್ಲಿ 22 ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಿಲಿಸ್ ಹಾಗೂ ಅರಂತೋಡು ಮಸೀದಿಯಲ್ಲಿ 35 ವರ್ಷಗಳ ಖತೀಬರಾಗಿ ಸೇವೆ ಸಲ್ಲಿಸಿ ಅಗಲಿದ ಮರ್ ಹೂಮ್ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರ 7 ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವು ಎ.30 ರಂದು ಅರಂತೋಡು ಜುಮಾ ಮಸೀದಿಯಲ್ಲಿ ನಡೆಯಲಿದೆ.ದಿಕ್ರ್ ಸ್ವಲಾತ್ ನೇತೃತ್ವವನ್ನು ಸ್ವಲಾತ್ ಸಮಿತಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಅಲ್ ಹಾಜ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕರವರು

ಎ.30 ರಂದು ಅರಂತೋಡು ಮಸೀದಿಯಲ್ಲಿ ವಾರ್ಷಿಕ ದಿಕ್ರ್ ಸ್ವಲಾತ್ ಹಾಗೂ ಮರ್ ಹೂಮ್ ಡಾ| ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ Read More »

ಚೊಕ್ಕಾಡಿ : ಯಶಸ್ವಿಯಾಗಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ

ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ, ಗರುಡ ಯುವಕ ಮಂಡಲ (ರಿ.) ಚೊಕ್ಕಾಡಿ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಚೊಕ್ಕಾಡಿ ಇವರ ಆಶ್ರಯದಲ್ಲಿ ಐದು ದಿನಗಳ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜನಗದ್ದೆ ಇಲ್ಲಿ ಯಶಸ್ವಿಯಾಗಿ ನಡೆಯಿತು.ಶಿಬಿರವು ಏಪ್ರಿಲ್ ೧೧ರಂದು ಶ್ರೀ ಬಾಲಕೃಷ್ಣ ಬೊಳ್ಳೂರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪವಾಣಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು. ಶಿಬಿರದ ಅವಧಿಯಲ್ಲಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ವ್ಯಕ್ತಿತ್ವ ವಿಕಸನ, ಸಂವಹನ

ಚೊಕ್ಕಾಡಿ : ಯಶಸ್ವಿಯಾಗಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕಲಾವಿದ ಶಶಿ ಅಡ್ಕಾರುರವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಕಾರ್ಯಕ್ರಮ ಎ. 21 ರಂದು ಜಾಲ್ಸೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಶ್ವ ಕಲಾ ದಿನದ ಪ್ರಯುಕ್ತ ತನ್ನ ಸೃಜನಾತ್ಮಕ ಕಲಾ ಪ್ರತಿಭೆಯಿಂದ ಜಗತ್ತನ್ನು ಸುಂದರಗೊಳಿಸುತ್ತಿರುವ ಅಡ್ಕಾರಿನ ಕ್ರಿಯೇಟಿವ್ ಕಲಾವಿದ  ಶಶಿ ಅಡ್ಕಾರ್‌ರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪುರಸ್ಕಾರ ನೀಡಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ  ಅಧ್ಯಕ್ಷತೆ ವಹಿಸಿದ್ದರು. ಜೇಸಿಐ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕಲಾವಿದ ಶಶಿ ಅಡ್ಕಾರುರವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ Read More »

ನಾಳೆ ಎಸ್.ಎಸ್‌.ಎಲ್ ಸಿ ಫಲಿತಾಂಶ ಪ್ರಕಟ

ಬೆಂಗಳೂರು: 2026ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಎ.23ರ ಗುರುವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.ಗುರುವಾರ ಮಧ್ಯಾಹ್ನ 12 ಗಂಟೆಗೆ 2026 ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಸಚಿವರು ಪತ್ರಿಕಾ ಗೋಷ್ಠಿಯನ್ನು ಆಯೋಜಿಸಿದ್ದಾರೆ

ನಾಳೆ ಎಸ್.ಎಸ್‌.ಎಲ್ ಸಿ ಫಲಿತಾಂಶ ಪ್ರಕಟ Read More »

error: Content is protected !!
Scroll to Top