ಪ್ರಚಲಿತ

ಕುಕ್ಕುಜಡ್ಕ : ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರ ಸಮ್ಮೇಳ ಅಧ್ಯಕ್ಷತೆಯಲ್ಲಿಕುಕ್ಕುಜಡ್ಕದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ. 11 ರಂದು ಕುಕ್ಕುಜಡ್ಕ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೆರಾಲು, ಕೋಶಾಧಿಕಾರಿ ದಯಾನಂದ ಆಳ್ವ, ಸಮ್ಮೇಳನದ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು, […]

ಕುಕ್ಕುಜಡ್ಕ : ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅರಂತೋಡು : ಡಿ.15ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 15-12-2025 ರ ಧನು ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.70220 77809

ಅರಂತೋಡು : ಡಿ.15ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕ

ಜಿಲ್ಲಾ ಕಾಂಗ್ರೆಸ್ ಭವನ ಮಲ್ಲಿಕಟ್ಟೆಯಲ್ಲಿ ಜಿಲ್ಲಾ ಅಸಂಘಟಿತ ಘಟಕದ ಅಧ್ಯಕ್ಷರಾದ ಶ್ರೀ ಅಬ್ಬಾಸ್ ಅಲಿ ಅವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ಘಟಕದ ಮಾಸಿಕ ಸಭೆ ನಡೆಯಿತು. ಸುಳ್ಯ ತಾಲೂಕು ಅಸಂಘಟಿತ ಅಧ್ಯಕ್ಷರಾದ ದಿವಂಗತ ಎ ಎಸ್ ಚಂದ್ರಲಿಂಗಂ ರವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿ ಸಿ ಜಯರಾಮ್ ರವರ ಶಿಪಾರಸ್ಸಿನ ಮೇರೆಗೆ ಶ್ರೀ ಮಂಜುನಾಥ ಕಂದಡ್ಕ ರವರನ್ನು ನೇಮಕಗೊಳಿಸಿ ಆದೇಶ ಮಾಡಿರುತ್ತಾರೆ. ಈ ಸಭೆಗೆ ಜಿಲ್ಲಾ ಅಸಂಘಟಿತ ಪ್ರಧಾನ ಕಾರ್ಯದರ್ಶಿಯಾದ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕ Read More »

ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಕಲಾವಿದೆ ಪೂಜಾ ಬೋರ್ಕರ್ ಆಯ್ಕೆ

ಬೆಂಗಳೂರಿನ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ತನ್ನ 25ನೇ ವರ್ಷದ ರಜತ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡುವ ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಪೆರ್ಲಂಪಾಡಿಯ ಕಲಾವಿದೆ ಪೂಜಾ ಬೋರ್ಕರ್ ಆಯ್ಕೆಯಾಗಿದ್ದಾರೆ‌.ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಜ್ಞಾನವಿಕಾಸ ಶಾಲಾ ಸಭಾಭವನದಲ್ಲಿ ಡಿ.21ರಂದು ನಡೆಯಲಿದೆ. ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರಕ್ಕೆ ರಾಜ್ಯದ 9 ಮಂದಿ ವಿವಿಧ ಸಾಧಕರು ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಕಲಾವಿದೆ ಪೂಜಾ ಬೋರ್ಕರ್ ಆಯ್ಕೆ Read More »

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ‌ದೇವಳದಲ್ಲಿ ಆಶ್ಲೇಷ ಬಲಿ ಪೂಜೆ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ದೇವಳದಲ್ಲಿ ಡಿ.9 ಮಂಗಳವಾರದಂದು ರಾತ್ರಿ ಆಶ್ಲೇಷ ಬಲಿ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು ಮಾಜಿ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸುಳ್ಯ ಸೀಮೆಯ ಭಕ್ತರು ,ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ‌ದೇವಳದಲ್ಲಿ ಆಶ್ಲೇಷ ಬಲಿ ಪೂಜೆ Read More »

ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು ಡಿಸೆಂಬರ್ 14ರಂದು ಜೆ ಎಲ್ ಆಡಿಟೋರಿಯಂ ವಿಟ್ಲದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಬಣೆಯಿಂದ ನಡೆಯಲಿದೆ.ಬೆಳಿಗ್ಗೆ ವಿದ್ವಾನ್ ಕೊಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡುವರು.ರವಿಶಂಕರ್ ಸಿ ಮೂಡಂಬೈಲುಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದಶಮಾನೋತ್ಸವ ಸಮಿತಿ ಅಧ್ಯಕ್ಷರು ಸ್ವರ ಸಿಂಚನ ಸಂಗೀತ ಶಾಲೆ ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನದ ವಿಟ್ಲ ಕೇಶವ್ ಆರ್ ವಿ,

ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ Read More »

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಆನ್ ಲೈನ್ ಸ್ಪರ್ಧೆಯ ಫಲಿತಾಂಶಪ್ರಕಟಗೊಂಡಿದೆ. ವಿವಿಧ ಶಾಲೆಗಳ ಹಾಗೂ ಸಾರ್ವಜನಿಕವಾಗಿ ಪಿಯುಸಿವರೆಗಿನ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದು, ಸ್ಪರ್ಧಿಗಳ ಹಾಡಿನ ಪ್ರಸ್ತುತಿ, ಸ್ವರ-ತಾಳ, ಲಯ, ಹೊಂದಾಣಿಕೆಯನ್ನು ಆಧಾರವಾಗಿಟ್ಟುಕೊಂಡು ತೀರ್ಪುಗಾರರ ಮೌಲ್ಯಮಾಪನದ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಧಾನಕರ ಬಹುಮಾನದೊಂದಿಗೆ ವಿಜೇತ ತಂಡಗಳನ್ನು ಆಯ್ಕೆಮಾಡಲಾಯಿತು. ಈ ಸಂದರ್ಭದಲ್ಲಿ

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ Read More »

ಉಬರಡ್ಕ : ಮಾಸ್ ಲಿಮಿಟೆಡ್ ಇವರ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ಡಿ. 9ರಂದು ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಾಸ್ ಲಿಮಿಟೆಡ್ ಇವರ ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ. ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆಗೊಂಡಿತು.ಮಾಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಅಡಿಕೆ ಖರೀದಿ ಕೇಂದ್ರವನ್ನು‌ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಉಬರಡ್ಕ ಮಿತ್ತೂರು ಭಾಗದ ಅಡಿಕೆ ಬೆಳೆಗಾರರಿಗೆ

ಉಬರಡ್ಕ : ಮಾಸ್ ಲಿಮಿಟೆಡ್ ಇವರ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ Read More »

ಅಡ್ತಲೆ ಚುಕ್ರಡ್ಕರಸ್ತೆ ಬದಿಯಲ್ಲಿ ರಾತ್ರಿ ಕಾಣಿಸಿಕೊಂಡ ಕಾಡಾನೆಗಳು

ಸುಳ್ಯ ತಾಲೂಕು ಅರಂತೋಡು ಗ್ರಾಮದ ಚುಕ್ರಡ್ಕ ಅಡ್ತಲೆ ರಸ್ತೆ ಬದಿಯಲ್ಲಿ ಕಾಡಾನೆಗಳು ಇದ್ದು ಪಾದಾಚಾರಿಗಳು,ಪ್ರಯಾಣಿಕರು ಆತಂಕಗೊಂಡಿದ್ದಾರೆ.ಕಾಡಾನೆಗಳು ಇದೀಗ ರಾತ್ರಿ ಕಾಣಿಸಿಕೊಂಡಿವೆ.ಈ ರಸ್ತೆಯಲ್ಲಿ ಸುಬ್ರಹ್ಮಣ್ಯಕ್ಕೆ ಸಂಚಾರಿಸುವ ಯಾತ್ರಾರ್ಥಿಗಳು ಹಾಗೂ ಸ್ಥಳೀಯರು ಗಮನ ಹರಿಸಲು ಸೂಚಿಸಲಾಗಿದೆ.

ಅಡ್ತಲೆ ಚುಕ್ರಡ್ಕರಸ್ತೆ ಬದಿಯಲ್ಲಿ ರಾತ್ರಿ ಕಾಣಿಸಿಕೊಂಡ ಕಾಡಾನೆಗಳು Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಕೆ. ಆರ್ ಗಂಗಾಧರರಿಗೆ ಗೌರವಾರ್ಪಣೆ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಸೂoತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೀಡಿದ 2024 ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ ಅವರನ್ನು ಸಂಸ್ಥೆಯ ವತಿಯಿಂದ ಡಿ .9 ರಂದು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ.ಗೌಡ, ಸಂಜೀವ ಕೆ , ಲೋಕೇಶ್ , ಭವಿತ್, ಸಿಬ್ಬಂದಿಗಳಾದ ನಿತೀಶ್ ಕುಮಾರ್ ,

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಕೆ. ಆರ್ ಗಂಗಾಧರರಿಗೆ ಗೌರವಾರ್ಪಣೆ Read More »

error: Content is protected !!
Scroll to Top