ಪ್ರಚಲಿತ

ಸುಳ್ಯ : ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಜಾಗೃತಿ ಮೂಡಿಸುವ ದ.ಕ.ಜಿಲ್ಲೆಯ ಪ್ರಚಾರ ಅಭಿಯಾನಕ್ಕೆ ಚಾಲನೆ

ಕರ್ನಾಟಕ ಸರಕಾರ ಅನುಷ್ಠಾನ ಮಾಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಜಾಗೃತಿ ಮೂಡಿಸುವ ದ.ಕ.ಜಿಲ್ಲೆಯ ಪ್ರಚಾರ ಅಭಿಯಾನ ಸುಳ್ಯದಲ್ಲಿ ನ.20ರಂದು ಆ ರಂಭವಾಯಿತು.ಸರಕಾರದ ವತಿಯಿಂದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೂಲಕ ಹಮ್ಮಿಕೊಂಡಿರುವ ಪ್ರಚಾರ ಅಭಿಯಾನ ಬೆಂಗಳೂರಿನಿಂದ ಹೊರಟು ಕೊಡಗು ಜಿಲ್ಲೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಆಗಮಿಸಿದೆ. ಮುಂದಿನ 5 ದಿನಗಳ ಕಾಲ ಯಾತ್ರೆಯುದಕ್ಷಿಣ ಕನ್ನಡ ಸಂಚಾರಿಸಲಿದೆ. ದ.ಕ.ಜಿಲ್ಲಾ ಮಟ್ಟದ ಅಭಿಯಾನಕ್ಕೆ ಸುಳ್ಯದಲ್ಲಿ ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್‌ […]

ಸುಳ್ಯ : ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಜಾಗೃತಿ ಮೂಡಿಸುವ ದ.ಕ.ಜಿಲ್ಲೆಯ ಪ್ರಚಾರ ಅಭಿಯಾನಕ್ಕೆ ಚಾಲನೆ Read More »

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಸಂಸದ ಕ್ಯಾ. ಚೌಟ

ಸುಳ್ಯ: ʼಸಂಸದರ ನಡೆ ಗ್ರಾಮದ ಕಡೆʼ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಇಂದು ಬೆಳಗ್ಗೆ ತಾಲೂಕಿನ ಬಾಳುಗೋಡು, ಮಧ್ಯಾಹ್ನ ಕಲ್ಮಕಾರು ಹಾಗೂ ಕೊಲ್ಲಮೊಗ್ರುವಿನಲ್ಲಿ ಕ್ಯಾ. ಚೌಟ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಆ ಬಳಿಕ ಸ್ಥಳೀಯರ ಕುಂದು-ಕೊರತೆ ಆಲಿಸಿದ್ದಾರೆ. ಈ ವೇಳೆ ಅನೇಕ ಸ್ಥಳೀಯ ನಾಗರಿಕರು ತಮ್ಮ ಊರಿನ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದಿದ್ದಾರೆ. ಸಂಸದರು ಕೂಡ ಎಲ್ಲರ ಕುಂದು-ಕೊರತೆಗಳನ್ನು

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಸಂಸದ ಕ್ಯಾ. ಚೌಟ Read More »

ಕೊಡಗು ಜಿಲ್ಲಾ ಸಮಸ್ತ ನಾಯಕರ ಮೊಹಲ್ಲಾ ಭೇಟಿ ಹಾಗೂ ಸಮಸ್ತ ಶತಮಾನೋತ್ಸವದ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ

ಸಮಸ್ತ ಶತಮಾನೋತ್ಸವ ಮಹಾ ಸಮ್ಮೇಳನದ ಪ್ರಚಾರದ ಅಂಗವಾಗಿ ನವಂಬರ್ 29 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿರುವ ಸಮಸ್ತ ಕೊಡಗು ಜಿಲ್ಲಾ ಸಮ್ಮೇಳನದ ಪ್ರಚಾರರ್ಥ ಹಮ್ಮಿಕೊಂಡ ಜಿಲ್ಲಾ ನಾಯಕರ ಮೊಹಲ್ಲಾ ಭೇಟಿ ನ.19 ರಂದು ಕೊಯಿನಾಡು ,ಸಂಪಾಜೆ,ಕಲ್ಲುಗುಂಡಿ, ಪೇರಡ್ಕ ,ಅರಂತೋಡು ,ಪೆರಾಜೆ, ಸುಳ್ಯ,ಮಂಡೆಕೋಲು,ಅಜ್ಜ ವಾರ,ಬೆಳ್ಳಾರೆ ಜುಮ್ಮಾ ಮಸೀದಿಗೆ ಭೇಟಿ ನೀಡಿದರು. ಸರ್ವ ಜಮಾ ಆತ್ ಸದಸ್ಯರು ಅತ್ಯಂತ ಸಂತೋಷದಿಂದ ಅವರನ್ನು ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಮಸ್ತ ನಾಯಕರಾದ ಕೊಡಗು ಸಂಯುಕ್ತ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ

ಕೊಡಗು ಜಿಲ್ಲಾ ಸಮಸ್ತ ನಾಯಕರ ಮೊಹಲ್ಲಾ ಭೇಟಿ ಹಾಗೂ ಸಮಸ್ತ ಶತಮಾನೋತ್ಸವದ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ Read More »

ಮನೆಯೊಳಗೆ ನುಗ್ಗಿ ಮಹಿಳೆಗೆ ಕಚ್ಚಿ ಗಾಯಗೊಳಿಸಿದ ಮಂಗ

ಚಿಕ್ಕಮಗಳೂರಿನಲ್ಲಿ ಮಂಗವೊಂದು ಮನೆಯೊಳಗೆ ನುಗ್ಗಿ ಮಹಿಳೆಗೆ ಕಚ್ಚಿ ಗಾಯಗೊಳಿಸಿದೆ.ಮಂಗನ ದಾಳಿಯಿಂದಾಗಿ ಮಹಿಳೆಯ ಕೈ–ಮುಖಕ್ಕೆ ಭಾಗಕ್ಕೆ ಗಾಯವಾಗಿದೆ. ಚಿಕ್ಕಮಗಳೂರು ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಪೂಜಾ ಎಂಬವರು ಗಾಯಗೊಂಡ ಮಹಿಳೆ ಎಂದು ಗುರುತಿಸಲಾಗಿದೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗ ದಾಳಿ ನಡೆಸಿದೆ.ಮಂಗನ ದಾಳಿಯಿಂದ ಗಾಯಗೊಂಡ ಪೂಜಾ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಂಗಗಳ ಹಾವಳಿಯಿಂದ ಶಾಂತವೇರಿ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.

ಮನೆಯೊಳಗೆ ನುಗ್ಗಿ ಮಹಿಳೆಗೆ ಕಚ್ಚಿ ಗಾಯಗೊಳಿಸಿದ ಮಂಗ Read More »

ಬಿಹಾರದಲ್ಲಿ ಹೊಸ ಸರ್ಕಾರ : ಇಂದು 10ನೇ ಬಾರಿಗೆ `CM’ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ನವೆಂಬರ್ 20ರಂದು ಬಿಹಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಿತೀಶ್ ಕುಮಾರ್ ಸತತ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ಬೆಳಗ್ಗೆ 11ರಿಂದ 12ರವರೆಗೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 201 ಸ್ಥಾನಗಳನ್ನು ಗಳಿಸಿ ಬಹುಮತ ಪಡೆದಿದೆ. ಬಿಜೆಪಿ 89, ಜೆಡಿಯು 85 ಸ್ಥಾನಗಳನ್ನು ಗೆದ್ದಿವೆ.

ಬಿಹಾರದಲ್ಲಿ ಹೊಸ ಸರ್ಕಾರ : ಇಂದು 10ನೇ ಬಾರಿಗೆ `CM’ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ Read More »

ಧರ್ಮಸ್ಥಳ ಲಕ್ಷದೀಪೋತ್ಸವ: ಭಕ್ತರಿಂದ ವೈವಿಧ್ಯಮಯ ಸೇವೆ

ಬೆಳ್ತಂಗಡಿ : ಧರ್ಮಸ್ಥಳ ಸ್ವಾಮಿಯ ಲಕ್ಷದೀಪೋತ್ಸವ ಅಂಗವಾಗಿ ಬೆಂಗಳೂರಿನ ರಾಮು ಮತ್ತು ರಮೇಶ ಅವರ ತಂಡದ ಹೂವಿನ ವ್ಯಾಪಾರಿಗಳು ವಿವಿಧ ಜಾತಿಯ ಹೂವುಗಳನ್ನು ತಂದು ದೇವಸ್ಥಾನವನ್ನು ಆಕರ್ಷಕವಾಗಿ ಅಲಂಕರಿಸಿದ್ದಾರೆ.*ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಭಕ್ತಾದಿಗಳು ಸುಮಾರು ೨೫ ತಂಡದವರು ಸೇರಿ ಬುಧವಾರ ರಾತ್ರಿ ಎಲ್ಲಾ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದರು.ಮುದ್ದೆ-ಕಾಳುಸಾರು, ಪಲಾವ್, ಬಿಸಿಬೇಳೆಬಾತ್, ರೈಸ್‌ಬಾತ್, ಹೋಳಿಗೆ, ಮೈಸೂರುಪಾಕ್ ಹಾಗೂ  ಮೊದಲಾದವುಗಳೊಂದಿಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಿದರು.

ಧರ್ಮಸ್ಥಳ ಲಕ್ಷದೀಪೋತ್ಸವ: ಭಕ್ತರಿಂದ ವೈವಿಧ್ಯಮಯ ಸೇವೆ Read More »

ಬಹುತೇಕ ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂಬ ಹೇಳಿಕೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕ್ಷಮೆಯಾಚನೆ!

ಬೆಂಗಳೂರು‌ : ಬಹುತೇಕ ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.ಎಲ್ಲರೂ ಅಲ್ಲ ಕೆಲವು ಕಲಾವಿದರು ಸಲಿಂಗಿಗಳು ಹೌದು. ಆ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಹಿಂದೆ ನವೆಂಬರ್ ನಲ್ಲಿ ಆರಂಭವಾದ ತಿರುಗಾಟ ಮೇ ಕೊನೆಯಲ್ಲಿ ಮುಕ್ತಾಯವಾಗುತ್ತಿತ್ತು. ಕಲಾವಿದರಿಗೆ ಮನೆಯ ಸಂಪರ್ಕ ಕಷ್ಟವಾಗುತ್ತಿತ್ತು. ಯಕ್ಷಗಾನ ಕಲೆ ಈಗ ಹಿಂದಿನಂತಿಲ್ಲ, ಕಲಾವಿದರಿಗೆ ಅನೇಕ ಸೌಲಭ್ಯಗಳಿವೆ. ಅನೇಕರು ಮಧ್ಯ ರಾತ್ರಿ ಪ್ರದರ್ಶನ ಮುಗಿಸಿ ಕಾರುಗಳಲ್ಲಿ ಮನೆಗೆ

ಬಹುತೇಕ ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂಬ ಹೇಳಿಕೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕ್ಷಮೆಯಾಚನೆ! Read More »

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ ೯೩ನೆ ಅಧಿವೇಶನ

ಧರ್ಮಸ್ಥಳ: ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದ ಸರ್ವಧರ್ಮಗಳೂ ಸತ್ಯ, ಅಹಿಂಸೆ, ಪರೋಪಕಾರ, ಸೇವೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವಿಶ್ವವೇ ಒಂದು ಕುಟುಂಬ ಎಂದು ಭಾವಿಸುವ ವಿಶಾಲ ಮನೋಭಾವ ನಮ್ಮದಾಗಿದೆ. ನಮ್ಮ ಧರ್ಮವನ್ನು ಪ್ರೀತಿಸಿ ಅನುಷ್ಠಾನಗೊಳಿಸುವದರೊಂದಿಗೆ ಇತರರ ಧರ್ಮವನ್ನೂ ಗೌರವಿಸುವುದು ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಜೀವಾಳವಾಗಿದೆ. ಮಾನವ ಸೇವೆಯೇ ಶ್ರೇಷ್ಠ ಧರ್ಮ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಸಚಿವ ಡಾ. ಎಂ.ಬಿ. ಪಾಟೀಲ್ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ ೯೩ನೆ ಅಧಿವೇಶನ Read More »

ಸಾಹಿತ್ಯ ಎಂಬುದು ವ್ಯಕ್ತಿಗೆ, ಜನತೆಗೆ, ಸಮಾಜಕ್ಕೆ ಹಿತವಾಗಿರಬೇಕು : ಎ.ಕೆ ಹಿಮಕರ

ಸಾಹಿತ್ಯ ಎಂಬುದು ವ್ಯಕ್ತಿಗೆ, ಜನತೆಗೆ, ಸಮಾಜಕ್ಕೆ ಹಿತವಾಗಿರಬೇಕು. ತನ್ನ ಹಿತಕ್ಕಿಂತಲೂ ಸಮಾಜದ ಹಿತವೇ ಮುಖ್ಯ ಎನಿಸುವಂತಿರಬೇಕು. ಅದು ಭವಿಷ್ಯದ ಏಳಿಗೆಗೆ, ಅಭಿವೃದ್ಧಿಗೆ ಪೂರಕವಾಗಿರಬೇಕು ಎಂಬ ಅಭಿಪ್ರಾಯವಿದೆ ಎಂದು ಸಾಹಿತಿ ಎ.ಕೆ ಹಿಮಕರ ಹೇಳಿದರು ಅವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ

ಸಾಹಿತ್ಯ ಎಂಬುದು ವ್ಯಕ್ತಿಗೆ, ಜನತೆಗೆ, ಸಮಾಜಕ್ಕೆ ಹಿತವಾಗಿರಬೇಕು : ಎ.ಕೆ ಹಿಮಕರ Read More »

ಪಾದಯಾತ್ರೆಯಿಂದ ಅನನ್ಯ ಅನುಭವ: ತನ್ವೀರ್ ಅಹ್ಮದ್

ಉಜಿರೆ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬವರ್ಗದವರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ಪಾದಯಾತ್ರೆ ಸುಗಮವಾಗಿ ಅನನ್ಯ ಅನುಭವ ನೀಡಿದೆ ಎಂದು ಅಂಕಣಕಾರ ಅಹಮ್ಮದ್ ಉಲ್ಲಾ ಹೇಳಿದರು.ಅವರು ಮಂಗಳವಾರ ಪಾದಯಾತ್ರೆಯಲ್ಲಿ ಧರ್ಮಸ್ಥಳ ತಲುಪಿದಾಗ  ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ಕರೆತರಲಾಯಿತು. ಬಳಿಕ ಅವರು ಹೆಗ್ಗಡೆಯವರೊಂದಿಗೆ ಪಾದಯಾತ್ರೆ ಬಗ್ಯೆ ತನ್ನ ಅನುಭವ ಹಂಚಿಕೊAಡರು.ದಾರಿಯುದ್ಧಕ್ಕೂ ಹೆಗ್ಗಡೆಯವರು ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಜನರ

ಪಾದಯಾತ್ರೆಯಿಂದ ಅನನ್ಯ ಅನುಭವ: ತನ್ವೀರ್ ಅಹ್ಮದ್ Read More »

error: Content is protected !!
Scroll to Top