ಪ್ರಚಲಿತ

ಹಿಂದು ಸಂಘಟನೆಯ ಮುಖಂಡನಿಗೆ ಚೂರಿ ಇರಿತ

ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕರ ತಂಡ ಚೂರಿಯಿಂದ ಇರಿದ ಘಟನೆ ಕಳೆದ ರಾತ್ರಿ ಮಲ್ಪೆಯಲ್ಲಿ ಸಂಭವಿಸಿದೆ.ಉಡುಪಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. .ಹಿಂದೂ ಯುವಸೇನೆಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜುಕೊಳ ಅವರು ಇಂದು ಬೀಚ್ ಬಳಿ ಜೋಡಿಯೊಂದರ ಪ್ರೇಮದ ವಿಚಾರವಾಗಿ ರಾಜಿಪಂಚಾಯಿತಿಗೆ ಕರೆದಿದ್ದರು. ಧನುಷ್ ಎಂಬ ಯುವಕನ ವಿಚಾರದಲ್ಲಿ ಈ ಜಗಳ ನಡೆದಿದೆ.ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಯುವಕ ಚೂರಿಯಿಂದ […]

ಹಿಂದು ಸಂಘಟನೆಯ ಮುಖಂಡನಿಗೆ ಚೂರಿ ಇರಿತ Read More »

ಏ.27ರಿಂದ ಬಳ್ಪ ಬುಡೆಂಗಿ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಬಳ್ಪ ಬುಡೆಂಗಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲವು ಏ.27ರ ಸೋಮವಾರ ಹಾಗೂ ಏ. 28ರ ಮಂಗಳವಾರದಂದು ನಡೆಯಲಿದೆ.ಕೊಳ್ಳಿ ಮುಹೂರ್ತವು ದಿನಾಂಕ 7-3-26 ಶನಿವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ. ಎಲ್ಲಾ ಭಕ್ತರೂ ಆಗಮಿಸಿ ಪ್ರಸಾದ ಸ್ವೀಕರಿಸಿ ದೈವದ ಕ್ರಪೆಗೆ ಪಾತ್ರರಾಗಬೇಕೆಂದುಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಏ.27ರಿಂದ ಬಳ್ಪ ಬುಡೆಂಗಿ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಅಡ್ತಲೆ : ಕಾಡಾನೆಗಳಿಂದ ಕೃಷಿ ನಾಶ

ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮದ ಅಡ್ತಲೆಯ ನೆಕ್ಕರೆ ಎಂಬಲ್ಲಿ ಫೆ.2ರ ರಾತ್ರಿ ಕಾಡಾನೆಗಳು ದಾಳಿ ಮಾಡಿ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ‌.ಇಲ್ಲಿಯ ದಾಸಪ್ಪ ಎಂಬರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ,ತೆಂಗಿನ ಮರಗಳನ್ನು ನಾಶ ಪಡಿಸಿದೆ ಎಂದು ತಿಳಿದು ಬಂದಿದೆ.ಅಡ್ತಲೆ ಭಾಗದಲ್ಲಿ ಕಳೆದ ಅನೇಕ ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ಕ್ರಷಿ ನಾಶ ಮಾಡಿ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ.

ಅಡ್ತಲೆ : ಕಾಡಾನೆಗಳಿಂದ ಕೃಷಿ ನಾಶ Read More »

ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ, ಬಿಜೆಪಿಯ ಮುಖಂಡರಾದ ಸತೀಶ್ ಪ್ರಭು ಅವರ ಅಕಾಲಿಕ ನಿಧನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸತೀಶ್ ಪ್ರಭು ಅವರು ಆರೆಸ್ಸೆಸ್ಸ್ ಸ್ವಯಂಸೇವಕರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಸಂಘನಿಕೇತನದ ಕೇಶವ ಸಂವರ್ಧನ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಅವರು ನೀಡಿದ ಸೇವೆ ಅವಿಸ್ಮರಣೀಯ. ಕಾರ್ ಸ್ಟ್ರೀಟ್‌ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿಯೂ

ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ Read More »

ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ಸತೀಶ್ ಪ್ರಭು ನಿಧನ

ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡರಾಗಿದ್ದ ಸತೀಶ್ ಪ್ರಭು ಅವರು ಮಾ.3ರಂದು ನಿಧನರಾದರು.ಮಂಜಾನೆ ಏಕಾಏಕಿ ಬ್ರೈನ್ ಹ್ಯಾಮರೇಜ್‌ಗೆ ಒಳಗಾದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ವೇಳೆಗೆ ಅವರು ಕೊನೆಯುಸಿರೆಳೆದರು.ಸತೀಶ್ ಪ್ರಭು ಅವರು ಪ್ರಸ್ತುತ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಆರ್‌ಎಸ್‌ಎಸ್ ಸಂಘಟನೆಯ ಹಿರಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು.ಮಂಗಳೂರಿನ ಪ್ರಸಿದ್ಧ ಕಾರ್ ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿ

ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ಸತೀಶ್ ಪ್ರಭು ನಿಧನ Read More »

ಹಾಡಿಕಲ್ಲು : ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಭಾಗದ ಜನರು ಸೇತುವೆ ನಿರ್ಮಾಣ ಬೇಡಿಕೆ ಇಡೇರಿಲ್ಲ ಎಂದು ದೂರಿ ಸೇತುವೆ ನಿರ್ಮಾಣ ಆಗುವ ತನಕ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಬ್ಯಾನರ್ ಅಳವಡಿಸಿದ್ದಾರೆ.ಸೇತುವೆ ನಿರ್ಮಾಣದ ಬೇಡಿಕೆ ಇಡೇರಿಲ್ಲ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿಗಳಾದ ನಾವು ಸುಮಾರು 20 ವರ್ಷಗಳಿಂದ ಸೇತುವೆ ಸಮಸ್ಯೆಯನ್ನು ಶಾಸಕರಿಗೆ ಹಾಗೂ ಸಚಿವರ ಬಳಿಗೆ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆಯದೆ ಇರುವ ಕಾರಣ ಸೇತುವೆ ಮಾಡಿಸುವುದೆಂದು ಗುದ್ದಲಿ ಪೂಜೆ ಮಾಡಿಸಿ ಲಾಡು ತಿಂದು ಚಪ್ಪಾಳೆ

ಹಾಡಿಕಲ್ಲು : ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಕೆ Read More »

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ

ಲಂಚಕ್ಕೆ ಬೇಡಿಕೆ ಇರಿಸಿ ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಮಾ.2ರಂದು ವರದಿಯಾಗಿದೆ.ಪಂಚಾಯತ್‌ಗಳಿಗೆ ಒಳಪಟ್ಟ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳ ನಿರ್ವಹಿಸಿದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಿಗೆ ಕೆಲಸದ ಬಿಲ್ ಪಾವತಿಗೆ ಶೇ.4ರಂತೆ 22,600 ರೂ. ಕೊಡಬೇಕು ಎಂಬುದಾಗಿ ಲಂಚದ ಬೇಡಿಕೆ ಇರಿಸಿ ಲಂಚ ಸ್ವೀಕರಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.ಎಸ್.ಡಿ.ಎ ಸಂಪತ್ ಬಂಧನಕೊಳಾದ ಆರೋಪಿದೂರುದಾರರು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿ ಕೆಲಸ

ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ Read More »

ಪಂಜ : ಬೈದೆರುಗಳ ನೇಮೋತ್ಸವ

ಪಂಜ ಸೀಮೆಯ ದೇಗುಲ ಶ್ರೀ ಸದಾಶಿವ ಪರಿವಾರ ಪಂಚರಂಗೇಶ್ವರ ದೇಗುಲದ ಆದಿ ಬೈದೆರುಗಳ ಗರಡಿಯಲ್ಲಿ ಮಾ.2 ರಂದು ರಾತ್ರಿ ಆದಿಬೈದೇರುಗಳ ನೇಮೋತ್ಸವ ನಡೆಯಿತು .ಸಂಜೆ ಮುಹೂರ್ತ ತೋರಣ, ರಾತ್ರಿ ಅನ್ನಸಂತರ್ಪಣೆ, ಬೈದೇರುಗಳ ಗರಡಿ ಇಳಿದು ದೇವಳಕ್ಕೆ ಹೋಗಿ ಕಾಣಿಕೆ ಅರ್ಪಿಸಿ ರಂಗ ಪ್ರವೇಶ ನಡೆಯಿತು.ರಾತ್ರಿ ಕಿನ್ನಿದಾರು ಗರಡಿ ಇಳಿದು ರಂಗ ಪ್ರವೇಶ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಮತ್ತು ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.

ಪಂಜ : ಬೈದೆರುಗಳ ನೇಮೋತ್ಸವ Read More »

ಮಾ.7: ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಮಾಣಿಲ ಕ್ಷೇತ್ರದ ಮೋಹನ್ ದಾಸ ಪರಮಹಂಸ ಸ್ವಾಮೀಜಿ ಭೇಟಿ

ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮಂದಿರ ವೀಕ್ಷಣೆಗೆ ಮತ್ತು ಆಶೀರ್ವಚನ ನೀಡಲು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಮಾ.7ರಂದು ಅಪರಾಹ್ನ 3.00ಗಂಟೆಗೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿಖ್ಯಾತ ಗಾಯಕ ಶಶಿಧರ ಕೋಟೆ ಅವರು ರಚಿಸಿ ಹಾಡಿದ ಧ್ವನಿ ಮುದ್ರಿತ ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.ಮಾಜಿ ಸಚಿವರಾದ ಎಸ್. ಅಂಗಾರ, ಪ್ರಮುಖರಾದ ವೆಂಕಟ್ ವಳಲಂಬೆ, ಚಂದ್ರ ಕೋಲ್ಚಾರ್, ಅಡ್ಡಂತಡ್ಕ ದೇರಣ್ಣ ಗೌಡ, ಶ್ರೀಕಾಂತ್‌ ಗೋಲ್ವಳ್ಕರ್, ಲಕ್ಷ್ಮೀ ನಾರಾಯಣ ಉದ್ಯಮಿಗಳು

ಮಾ.7: ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಮಾಣಿಲ ಕ್ಷೇತ್ರದ ಮೋಹನ್ ದಾಸ ಪರಮಹಂಸ ಸ್ವಾಮೀಜಿ ಭೇಟಿ Read More »

ಸುಳ್ಯದ  ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ  ಠೇವಣಿಗೆ ವಿಶೇಷ ಬಡ್ಡಿದರ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರಿಗೆ ಬಿಗ್ ಆಫರ್ ನೀಡುತ್ತಿದೆ.ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘವು ಮಾರ್ಚ್ ತಿಂಗಳಿನಲ್ಲಿ ಇರಿಸಲಾಗುವ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ಪ್ರಕಟಿಸಿದೆ. ಈ ಆಫರ್ ಮಾರ್ಚ 2 ರಿಂದ ಮಾ.14 ರವರೆಗೆ ಲಭ್ಯವಿದ್ದು ಈ ಅವಧಿಯಲ್ಲಿ ಸ್ವರ್ಣನಿಧಿ ಠೇವಣಿ(Fixed Deposit) ಗೆ ಒಂದು ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ 12%, ಜನಸಾಮಾನ್ಯರಿಗೆ 11.50% ಮತ್ತು ಸ್ವರ್ಣಧಾರ

ಸುಳ್ಯದ  ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ  ಠೇವಣಿಗೆ ವಿಶೇಷ ಬಡ್ಡಿದರ Read More »

error: Content is protected !!
Scroll to Top