ಸುಳ್ಯ : ಪ್ರವಾದಿ ಮುಸ್ತಾಫಾರ 1500ನೇ ಜನ್ಮ ದಿನಾಚರಣೆ ಮಾಸಾಚರಣೆ ಪ್ರಯುಕ್ತ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ, ಆಕರ್ಷಕ ಕಾಲ್ನಡಿಗೆ ಜಾಥಾ
ಪ್ರವಾದಿ ಮುಹಮ್ಮದ್ ಮುಸ್ತಫಾರ 1500ನೇ ಜನ್ಮದಿನ ಮಾಸಾಚರಣೆ ಅಂಗವಾಗಿ ತಾಲೂಕು ಮೀಲಾದ್ ಸಮಿತಿ ಸುಳ್ಯ ವತಿಯಿಂದ ವರ್ಷಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ ಮತ್ತು ಅರಿಯಿರಿ ಮನುಕುಲದ ಪ್ರವಾದಿಯನ್ನ ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮ ಸುಳ್ಯದಲ್ಲಿ ಸೆ.13ರಂದು ನಡೆಯಿತು.ಜಾಥಾದಲ್ಲಿ ಶಿಸ್ತುಬದ್ಧ ಸ್ಕೌಟ್ ತಂಡಗಳು, ಇಸ್ಲಾಮಿಕ್ ಸಂಪ್ರಾದಾಯಿಕ ಕಲೆಯನ್ನು ಬಿಂಬಿಸುವ ಧಪ್ ತಂಡಗಳು,30ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ರ್ಯಾಲಿಗೆ ಮೆರುಗು ನೀಡಿದವು. ಪ್ರವಾದಿ ಕೀರ್ತನೆ, ಸಂದೇಶ ಸಾರುವ ಘೋಷವಾಕ್ಯ ಮೊಳಗಿ ರ್ಯಾಲಿ ಮೊಗರ್ಪಣೆ […]










