ಪ್ರಚಲಿತ

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ದಿ. 26 ಜನವರಿ 2026ರಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರು ಶ್ರೀ .ಶುಭಕರ ಬಿ.ಸಿ ಹಾಗೂ ಸಂಚಾಲಕಿ ಶ್ರೀಮತಿ. ಗೀತಾಂಜಲಿ ಟಿ.ಜಿ ,ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧರಾದ ಹರಿಶ್ಚಂದ್ರ ಬೊಳುಗಲ್ಲು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪುಟಾಣಿಗಳಿಗೆ ಉಡುಗೊರೆಯನ್ನು ನೀಡಿ ಸಂತೈಸಿದರು. ಇದೇ ಶುಭ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮುಖ್ಯ ಅತಿಥಿಗಳನ್ನು ಶಾಲಾ ಪರವಾಗಿ […]

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ Read More »

ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಪ್ರಯುಕ್ತ ನಡೆಯುವ ಬ್ರಹ್ಮ ರಥೋತ್ಸವದ ರಥ ಮುಹೂರ್ತ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ಪ್ರಾರಂಭ ಮಾಡಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಬ್ರಹ್ಮ ರಥೋತ್ಸವ ವ್ಯವಸ್ಥೆಯ ಸಂಚಾಲಕರಾದ ಕುಮಾರ ಕಕ್ಯಾನ, ಪುತ್ಯ, ಸಂಪ ಚಿದ್ಗಲ್ ಹಾಗೂ ಕಕ್ಯಾನ ಬೈಲ್ ನವರು ಉಪಸ್ಥಿತರಿದ್ದರು.

ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ Read More »

ಭಾರತಕ್ಕೆ ಭರ್ಜರಿ ವಿಜಯ

ಗುವಾಹಟಿಯಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಟೀಂ ಇಂಡಿಯಾ 10 ಓವರ್‌ಗಳಲ್ಲಿ ಗೆಲುವಿನ ದಡ ಸೇರಿದೆ.

ಭಾರತಕ್ಕೆ ಭರ್ಜರಿ ವಿಜಯ Read More »

ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ ಕಡೆಪಾಲ, ಸಂಪಾಜೆ, ಇದರ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಅತಿಥಿಗಳಾಗಿ ಪ್ರಶಾಂತ್ ಚಟ್ಟೆಕಲ್ಲು, ಎಸ್ ಪಿ ಕರುಣಾಕರ ಗೂನಡ್ಕ, ಶ್ರೀ ನಾಗೇಶ್ ಕಲ್ಲುಗುಂಡಿ, ವರದರಾಜ್ ಸಂಕೇಶ, ದೇವಯ್ಯ ಕಲ್ಲುಗುಂಡಿ, ಯಶೋಧರ ಕಡೆಪಾಲ, ಉದಯ ನಾಯ್ಕ್ ದೊಡ್ಡಡ್ಕ, ಮತ್ತು ದೈವಸ್ಥಾನದ ಟ್ರಸ್ಟ್ ನ ಸದಸ್ಯರು ಹಾಜರಿದ್ದರು. ನೇಮೋತ್ಸವವು ಮಾರ್ಚ್ 07 ನೇ ಶನಿವಾರ ಮತ್ತು 08 ನೇ ಆದಿತ್ಯವಾರ ನಡೆಯಲಿದೆ.

ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ್ ರಾಜಿನಾಮೆ

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ್ ಕೊಯಿಂಗಾಜೆ ರಾಜಿನಾಮೆ ನೀಡಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆಯ ಬಗ್ಗೆ ಮಾಹಿತಿ ನೀಡಿದ ಅವರು ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಿ ಸಿ ಜಯರಾಮರಿಗೆ ಸಂಪಾಜೆ ವಲಯ ಕಾಂಗ್ರೇಸ್ ಘಟಕದ ಅಧ್ಯಕ್ಷನಾದ ನಾನು ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಾನು ಸುಮಾರು ಇಪ್ಪತ್ತೆಂಟು ವರ್ಷಗಳಿಂದ ಸಂಪಾಜೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಮತ್ತು ಉಳಿವಿಗಾಗಿ ಪಕ್ಷದ ಕಾರ್ಯಕರ್ತರ ಸಂಪೂರ್ಣ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಸಿದ ಹೆಮ್ಮೆ

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ್ ರಾಜಿನಾಮೆ Read More »

ಇಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದೆ. ಜ.24ರಂದು ಮುಂಜಾನೆ ಗಂಟೆ 9 ರಿಂದ ಗೊನೆ ಮುಹೂರ್ತ ನಡೆಯಲಿದೆ.ಫೆ.1 ರಂದು ರಾತ್ರಿ ಧ್ವಜಾರೋಹಣ, ಫೆ.5 ರಂದು ಹಗಲು ದರ್ಶನ ಬಲಿ, ಫೆ.6 ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಜ.24 ಶನಿವಾರ ದಂದು ಮುಂಜಾನೆ 10 ರಿಂದ ಅಂಗಡಿ ಸ್ಥಳ ಬಹಿರಂಗ ಏಲಂ ನಡೆಯಲಿದೆ.ಮಧ್ಯಾಹ್ನ ಗಂಟೆ 3 ಕ್ಕೆ ಲೈಟಿಂಗ್ಸ್- ಸೌಂಡ್ಸ್, ಶಾಮಿಯಾನ, ದಿನಸಿ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಟೆಂಡ‌ರ್ ಕರೆಯಲಾಗಿದೆ. ಟೆಂಡ‌ರ್ ಪಾಲ್ಗೊಳ್ಳುವವರು ಮುಚ್ಚಿದ ಲಕೋಟೆಯಲ್ಲಿ ಟೆಂಡ‌ರ್ ಅರ್ಜಿ ಅಧ್ಯಕ್ಷರಿಗೆ ನೀಡುವುದು. ಬಳಿಕ ಟೆಂಡರ್ ದಾರರ ಸಮಕ್ಷಮದಲ್ಲಿ 3.30ಕ್ಕೆ ಟೆಂಡರ್ ಅರ್ಜಿ ತೆರೆಯಲಾಗುತ್ತದೆ ಎಂದು ದೇವಳದ ಪ್ರಕಟಣೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್

ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ Read More »

ನಮ್ಮ ಹಿರಿಯರು ನಮಗೆ ಆದರ್ಶವಾಗಬೇಕು : ಶಾಸಕಿ ಭಾಗೀರಥಿ ಮುರುಳ್ಯ

ನಮ್ಮ ಹಿರಿಯರನ್ನು ನಾವು ಆದರ್ಶ ವ್ಯಕ್ತಿಗಳನ್ನಾಗಿ ಆಯ್ಕೆಮಾಡಿಕೊಳ್ಳಬೇಕೆ ಹೊರತು ಇನ್ಯಾವುದೇ ಅನ್ಯ ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಜೀವನದಲ್ಲಿ ಆಯ್ಕೆ ಮಾಡಿ ಕೊಳ್ಳಬಾರದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ತೊಡಿಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಮೃತ ಮಹೋತ್ಸವ ಆಚರಣಾ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಶಾಲಾ ಅಮೃತ ಮಹೋತ್ಸವ ಅಂಗವಾಗಿ ಶಾಲೆಯ ವಠಾರದಲ್ಲಿ ಜ. 22ರಂದು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ

ನಮ್ಮ ಹಿರಿಯರು ನಮಗೆ ಆದರ್ಶವಾಗಬೇಕು : ಶಾಸಕಿ ಭಾಗೀರಥಿ ಮುರುಳ್ಯ Read More »

ಸನ್ಮಾನವೆಂಬುದು ಸಮಾಜದ ನಾಗರಿಕ ಕಾರ್ಯಗಳಲ್ಲಿ ಅದು ಒಂದು : ಕೆ.ಆರ್.ಜಿ

ಸನ್ಮಾನ ಎಂದು ಸಮಾಜದ ನಾಗರೀಕ ಕಾರ್ಯಗಳಲ್ಲಿ ಒಂದು ಎಂದು ರಾಷ್ಟ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅರಂತೋಡು ನೆಹರು‌ ಸ್ಮಾರಕ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಹೇಳಿದರು.ತೊಡಿಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಪ್ರಯುಕ್ತ ಗುರು ವಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.ಶಿಕ್ಷಕ ವ್ರತ್ತಿಗೆ ಹಲವು ವರ್ಷಗಳ ಅಷ್ಟಾಗಿ ಜನರು ಇಷ್ಟ ಪಡುತ್ತಿರಲಿಲ್ಲ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಗೌರಯುತ ಹುದ್ದೆಯಾಗಿದೆ.ಶಾಲಾ ಆರಂಭ ಕಾಲದ ಶಿಕ್ಷಕರ ಸೇವೆ ಅತ್ಯಂತ ಶ್ರೇಷ್ಠವಾದು ಎಂದು

ಸನ್ಮಾನವೆಂಬುದು ಸಮಾಜದ ನಾಗರಿಕ ಕಾರ್ಯಗಳಲ್ಲಿ ಅದು ಒಂದು : ಕೆ.ಆರ್.ಜಿ Read More »

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಿಕೊಟ್ಟಿದೆ : ಸಂತೋಷ್ ಕುತ್ತಮೊಟ್ಟೆ

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಪಾಠ ಕಲಿಸಿ ಕೊಟ್ಟಿದೆ ಎಂದು ತೊಡಿಕಾನ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಸಂತೋಷ್ ಕುತ್ತಮೊಟ್ಟೆ ಹೇಳಿದರು.ಶಾಲೆಯ ಅಮೃತಮಹೋತ್ಸವ ಸಮಾರಂಭದ ಅಂಗವಾಗಿ ಜ.22ರಂದು ಶಾಲಾ ವಠಾರದಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತನ್ನ ಪ್ರಾಥಮಿಕ ಶಾಲಾ ಜೀವನದ ಸವಿನೆನಪುಗಳನ್ನು ಅವರು ಹಂಚಿಕೊಂಡರು.ಈ ಶಾಲೆಯ ಶಿಕ್ಷಕರು ಕಲಿಸಿಕೊಟ್ಟ ಪ್ರಾಥಮಿಕ ಶಿಕ್ಷಣದಿಂದ ಸಂಸ್ಕಾರದಿಂದ ನಾವು ಸಮಾಜದಲ್ಲಿ ಈ ಹಂತಕ್ಕೆ ಬರಲು‌ ಸಾಧ್ಯವಾಯಿತು.ಹಿರಿಯ ವಿದ್ಯಾರ್ಥಿ

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಿಕೊಟ್ಟಿದೆ : ಸಂತೋಷ್ ಕುತ್ತಮೊಟ್ಟೆ Read More »

error: Content is protected !!
Scroll to Top