ಪ್ರಚಲಿತ

ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ನ ಡಿಸೇಂಬರ್ ತಿಂಗಳ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಡಿ.20ರಂದು ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೈಲೆಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡಿರುವ ಆರಂತೋಡು ಗ್ರಾಮ ಪಂಚಾಯತ್ ನ.ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ 24/7 ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಯನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗಾಗಿ ಚಾಲನೆ ನೀಡುವುದೆಂದು ಸರ್ವ ಸಮ್ಮತದಿಂದ ತೀರ್ಮಾನಿಸಲಾಯಿತು. ಅಲ್ಲದೆ ಸರಕಾರದಿಂದ ಆಯ್ಕೆಯಾದ ತಾಲೂಕಿನ ಏಕೈಕ ಪಂಚಾಯತ್ ಕಲಿಕಾ ಕೇಂದ್ರ ( Panchayat learning centre […]

ಅರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ತೀವ್ರ ಶೀತ ಗಾಳಿ; ನಾಳೆ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದಲ್ಲಿ ತೀವ್ರ ಚಳಿ ಮುಂದುವರಿದಿದ್ದು, ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಇಳಿಕೆಯಾಗುತ್ತಿದೆ. ವಿಜಯಪುರದಲ್ಲಿ ಶುಕ್ರವಾರ 6.9 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆಯು ನಾಳೆ (ಡಿ.21) ತೀವ್ರ ಶೀತ ಗಾಳಿ ಮುಂದುವರಿಯುವ ಹಿನ್ನೆಲೆಯಲ್ಲಿ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ 7 ಜಿಲ್ಲೆಗಳಿಗೆ ಭಾನುವಾರ ಆರೆಂಜ್ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಡಿ.22ರಂದು

ತೀವ್ರ ಶೀತ ಗಾಳಿ; ನಾಳೆ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ Read More »

ಪಂಜ : ನಾಳೆ ( ಡಿ.21)ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ 2026ರ ಪೂರ್ವಭಾವಿ ಸಭೆ

ಪಂಜ : ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ-2026ರ ಪೂರ್ವಭಾವಿ ಸಭೆಯು ಡಿ.21 ರಂದು ಸಂಜೆ ಗಂಟೆ 4.30ಕ್ಕೆ ದೇಗುಲದಲ್ಲಿ ನಡೆಯಲಿದೆ ಎಂದು ದೇವಳದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ತಿಳಿಸಿದ್ದಾರೆ.ಈ ಸಭೆಗೆ ಸೀಮೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.ದೇವಳದಲ್ಲಿ ಡಿ.16ರಿಂದ ಮುಂಜಾನೆ ಧುನುಪೂಜೆ ಆರಂಭಗೊಂಡಿದ್ದು ದಿನ ನಿತ್ಯ 300ಕ್ಕೂ ಅಧಿಕ ಭಕ್ತರು ಭಾಗವಹಿಸುತ್ತಿದ್ದಾರೆ.

ಪಂಜ : ನಾಳೆ ( ಡಿ.21)ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ 2026ರ ಪೂರ್ವಭಾವಿ ಸಭೆ Read More »

ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 : ಅಜ್ಜನಗದ್ದೆ ಶಾಲಾ ಮಕ್ಕಳಿಂದ ಸ್ವಚ್ಛತಾ ಜಾಥ

ಯುವಜನ ಸಂಯುಕ್ತ ಮಂಡಳಿ (ರಿ.), ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.), ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಡಿ.15ರಂದು ಅಜ್ಜನಗದ್ದೆ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಮಹತ್ವ ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಜಾಥವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಜಾಥವು ಅಜ್ಜನಗದ್ದೆ ಶಾಲೆಯಿಂದ ಆರಂಭಗೊಂಡು ಅಮರಪಡ್ನೂರು ಘನ ತ್ಯಾಜ್ಯ ಘಟಕದವರೆಗೆ ನಡೆಯಿತು. ಕಾರ್ಯಕ್ರಮವನ್ನುಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಇವರು ಚಾಲನೆ ನೀಡಿ

ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 : ಅಜ್ಜನಗದ್ದೆ ಶಾಲಾ ಮಕ್ಕಳಿಂದ ಸ್ವಚ್ಛತಾ ಜಾಥ Read More »

ಅರಂತೋಡು : ವಾಹನ ಚಾಲಕ – ಮಾಲಕ ಸಂಘದವರಿಂದ ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿ, ಮನವಿ

: ಕರ್ನಾಟಕ ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಕಳೆದ 35 ವರ್ಷಗಳಿಂದ ಸಕ್ರೀಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವಾಹನ ಚಾಲಕರ ಮಾಲಕ ಸಂಘಕ್ಕೆ ಅರಂತೋಡು ಗ್ರಾಮದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ದೊರಕಿಸಿಕೊಡಲು ಸಂಘದ ಅಧ್ಯಕ್ಷರಾದ ಪ್ರಸನ್ನ ಅಜ್ಜನಗದ್ದೆ, ಕಾರ್ಯದರ್ಶಿ ಗೋವರ್ದನ ಇರ್ಣೆ, ಯತೀಶ್ ಕಟ್ಟಕೋಡಿ,ಅಂಬುಜಾಕ್ಷ ಮತ್ತು ಇತರ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು,ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಹಾಗೂ ಗ್ರಾಮ ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು ಟಿ.ಎಂ ಶಹೀದ್

ಅರಂತೋಡು : ವಾಹನ ಚಾಲಕ – ಮಾಲಕ ಸಂಘದವರಿಂದ ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿ, ಮನವಿ Read More »

ಸಂಜೀವಿನಿ ಘಟಕದ ಎಲ್.ಸಿ.ಆರ್.ಪಿ. ಮೀನಾಕ್ಷಿ ಬೆಂಡೋಡಿ ನಿಧನ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾ.ಪಂ ನ ಸಂಜೀವಿನಿ ಘಟಕ ದ ಎಲ್.ಸಿ.ಆರ್.ಪಿ. ಮೀನಾಕ್ಷಿ ಬೆಂಡೋಡಿಯವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಡಿ.20ರಂದು ನಿಧನರಾದರು.ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಹೃದಯಾಘಾತದಿಂದ ನಿಧನರಾದರು.ಮ್ರತರು ಪತಿ ಕಮಲಾಕ್ಷ ಮೂವರ ಮಕ್ಕಳನ್ನು ಅಗಲಿದ್ದಾರೆ.

ಸಂಜೀವಿನಿ ಘಟಕದ ಎಲ್.ಸಿ.ಆರ್.ಪಿ. ಮೀನಾಕ್ಷಿ ಬೆಂಡೋಡಿ ನಿಧನ Read More »

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಬದಲಾವಣೆ ಮಾಡಿ ಮಹಾತ್ಮ ಗಾಂಧಿಯವರ ಮೇಲಿದ್ದ ದ್ವೇಷವನ್ನು ಬಿಜೆಪಿ ತೀರಿಸಿಕೊಳ್ಳುತ್ತಿದೆ : ಪಿ.ಸಿ ಜಯರಾಮ್

ಬಿಜೆಪಿ ಕುತಂತ್ರ ಮತ್ತು ಮತಕಳ್ಳತನದಿಂದ ಭಾರತದ ಅಸ್ಮಿತೆಗಳನ್ನು ಕೆಡವಲು ಅಧಿಕಾರಕ್ಕೇರಿದೆ. ಇದನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅರ್ಥ ಮಾಡಿಕೊಳ್ಳಬೇಕಿದೆ.ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯನ್ನು ಬದಲಾವಣೆ ಮಾಡಿ ಕಳೆದ ಆರೇಳು ದಶಕಗಳಿಂದ ಮಹಾತ್ಮ ಗಾಂದಿಯವರ ಮೇಲಿದ್ದ ದ್ವೇಷವನ್ನು ಬಿಜೆಪಿ ತೀರಿಸಿಕೊಳ್ಳುತ್ತಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಆರೋಪಿಸಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. (MGNREG ಮಹಾತ್ಮಗಾಂಧೀ ರೂರಲ್ ಎಂಪ್ಲಾಯ್ಕೆಂಟ್ ಗ್ಯಾರೆಂಟೀ ಸ್ಕೀಂ)ಎನ್ನುವ ಹೆಸರನ್ನು ಬದಲಿಸಿ (GRAMG ಜಿ.ಆ‌ರ್.ಎ.ಎಂ.ಜಿ) ಅಥವಾ

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಬದಲಾವಣೆ ಮಾಡಿ ಮಹಾತ್ಮ ಗಾಂಧಿಯವರ ಮೇಲಿದ್ದ ದ್ವೇಷವನ್ನು ಬಿಜೆಪಿ ತೀರಿಸಿಕೊಳ್ಳುತ್ತಿದೆ : ಪಿ.ಸಿ ಜಯರಾಮ್ Read More »

ಯಾವುದೇ BPL ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

ರಾಜ್ಯ ಸರ್ಕಾರ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು. ವಿಧಾನಸಭೆಯ ಪ್ರಶೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿ.ಎನ್. ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‌ದಾರರ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಗೆ ನಿಗದಿಪಡಿಸಿದೆ ಎಂದರು.

ಯಾವುದೇ BPL ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ Read More »

ಸಂಪಾಜೆ : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಸ್ವಾಗತಿಸಿ ಕಾರ್ಯದರ್ಶಿ ತಿರುಮಲೇಶ್ವರ ಲೆಕ್ಕ ಪತ್ರ ಮಂಡಿಸಿದರು.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಮತ್ತು ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಲು ತೀರ್ಮಾನಿಸಲಾಯಿತು.ಗ್ರಾಮ ಪಂಚಾಯತಿಯಲ್ಲಿ ಅಳವಡಿಸಿರುವ ಮಳೆ ಮಾಪನ ಯಂತ್ರದ ಬಗ್ಗೆ ಸದಸ್ಯರು ಪ್ರಸ್ತಾಪ ಮಾಡಿದರು ಹವಾಮಾನ ವರದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಬೆಳೆ ವಿಮೆ ಕಡಿಮೆ ಬಂದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲು

ಸಂಪಾಜೆ : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಮಟ್ಟದ ಯೋಜನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲಿಸಿ ನವೆಂಬರ್ ತಿಂಗಳ ಸಭೆಯ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಪಾಲನಾ ವರದಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು.ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಬಾಳುಗೋಡು ಗ್ರಾಮದ ಕೊತ್ನಡ್ಕ ನಿವಾಸಿ ಸುಂದರಿ ಅಜಿಲ ಎಂಬವರಿಗೆ ಸೂಕ್ತ ದಾಖಲಾತಿ ಇಲ್ಲದೆ ಆಧಾರ್

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ Read More »

error: Content is protected !!
Scroll to Top