Uncategorized

ಮಗನ ಮದುವೆಯ ಮುನ್ನಾ ದಿನ ನಾಪತ್ತೆಯಾಗಿದ್ದ ತಂದೆ ಪತ್ತೆ

ಮಗನ ಮದುವೆಯ ಮುನ್ನಾ ದಿನವಾದ ಜು.1ರಿಂದ ನಾಪತ್ತೆಯಾಗಿದ್ದ ಕುಂಬ್ರ ನಿವಾಸಿ ಉಮರ್ ಎಂಬವರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಗನ ಜೊತೆ ಪುತ್ತೂರಿಗೆ ಬಂದಿದ್ದ ಅವರು ದಿಢೀರನೆ ನಾಪತ್ತೆಯಾಗಿದ್ದರು. ಜು.3ರಂದು ಅವರ ಪುತ್ರ ಆಸಿಫ್ ವಿವಾಹ ಕಾರ್ಯ ನಡೆಯುವುದಿತ್ತು. ಮದುವೆಯ ಮದರಂಗಿ ಶಾಸ್ತ್ರದ ಮುನ್ನಾ ದಿನ ನಾಪತ್ತೆಯಾಗಿದ್ದ ಕಾರಣ ಮದರಂಗಿ ಮದುವೆ ರದ್ದಾಗಿತ್ತು. ಮದುವೆಯ ಬ್ಯುಸಿಯಲ್ಲಿದ್ದ ಮಗ ಅಪ್ಪನ ಹುಡುಕಾಟದಲ್ಲಿದ್ದರು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರ ಜೊತೆ ಕುಟುಂಬಸ್ಥರು ಅವರನ್ನು ಹುಡುಕಾಡಿದಾಗ ಮಂಗಳೂರಿನಲ್ಲಿ ಪತ್ತೆಯಾಗಿದ್ದು, […]

ಮಗನ ಮದುವೆಯ ಮುನ್ನಾ ದಿನ ನಾಪತ್ತೆಯಾಗಿದ್ದ ತಂದೆ ಪತ್ತೆ Read More »

ನೇಣಿಗೆ ಕೊರಳೊಡ್ಡಿದ ದಂಪತಿ: ಪತಿ ಸಾವು,ಪತ್ನಿ ಗಂಭೀರ

ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಪತಿ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ ಸಮೀಪದ ಕೊಡಾಜೆಯಲ್ಲಿ ನಡೆದಿದೆ.ಮೃತರನ್ನು ಕೊಡಾಜೆ ನಿವಾಸಿ ಪ್ರತಾಪ್ (33) ಎಂದು ಗುರುತಿಸಲಾಗಿದೆ.ಪ್ರತಾಪ್ ರವರು ಖಾಸಗಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪತಿ, ಪತ್ನಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಪ್ರತಾಪ್ ರವರು ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.ಅರುಣ್ ಪುತ್ತಿಲ ರವರು ಪುತ್ತೂರು ಆಸ್ಪತ್ರೆಯಿಂದ ಪ್ರತಾಪ್ ರವರ ಪತ್ನಿಯನ್ನು

ನೇಣಿಗೆ ಕೊರಳೊಡ್ಡಿದ ದಂಪತಿ: ಪತಿ ಸಾವು,ಪತ್ನಿ ಗಂಭೀರ Read More »

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ : ಸೂಕ್ತ ಕ್ರಮಕ್ಕೆ ಒತ್ತಾಯ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೋಮು ಗಲಭೆ ಪ್ರಚೋದಿಸುವ ಪೋಸ್ಟ್ ಗಳನ್ನು ಹರಿಬಿಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತರಿಗೆ ದೂರು ನೀಡಿದ ಶಾಸಕರು, ‘ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಳಲ್ಲಿ ಮತೀಯ ಮನಸ್ಕ ಸಂಘಟನಾ ಗುಂಪುಗಳು ಹಿಂದೂಗಳ ನಂಬಿಕೆ ಮತ್ತು ಆಚರಣಾ ಪದ್ಧತಿಗಳ ವಿರುದ್ಧ, ಹಿಂದೂಗಳು ಆರಾಧಿಸುವ ದೈವ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ : ಸೂಕ್ತ ಕ್ರಮಕ್ಕೆ ಒತ್ತಾಯ Read More »

ಖಾಸಗಿ ಬಸ್‌ನಲ್ಲಿ ಬೆಂಕಿ: 26 ಮಂದಿ ಸಾವು

ಖಾಸಗಿ ಬಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿರುವ ಘಟನೆ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ವರದಿಯಾಗಿದೆಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.33 ಜನರು ಪ್ರಯಾಣಿಸುತ್ತಿದ್ದ ಬಸ್‌ ಯವತ್ಮಾಲ್ ನಿಂದ ಪುಣೆಗೆ ತೆರಳುತ್ತಿದ್ದ ವೇಳೆ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ಸಿನ ಟೈರ್ ಒಡೆದಿದೆ. ಆ ಬಳಿಕ ಬಸ್‌ ಪಲ್ಟಿಯಾಗಿ ಅದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ಸಿನಲ್ಲಿದ್ದ 26 ಮಂದಿ ಸಜೀವ ದಹನವಾಗಿದ್ದಾರೆ

ಖಾಸಗಿ ಬಸ್‌ನಲ್ಲಿ ಬೆಂಕಿ: 26 ಮಂದಿ ಸಾವು Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ಯುವಕನೋರ್ವ ಜೀವನದಲ್ಲಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಮರ್ಧಾಳದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ನಿವಾಸಿ ದಿ. ಸಂಜೀವ ರೈ ಎಂಬವರ ಪುತ್ರ ರಘುನಾಥ ರೈ (38) ಎಂದು ಗುರುತಿಸಲಾಗಿದೆ.ಗುರುವಾರದಂದು ಸಂಜೆ ವೇಳೆಗೆ ತನ್ನ ಮನೆಯಲ್ಲಿದ್ದ ರಘುನಾಥ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಕಾಡೆಮ್ಮೆ ಮೃತದೇಹ ಪತ್ತೆ

ಕಡಬ: ಇಲ್ಲಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಸೇತುವೆಯ ಬಳಿ ಕಾಡೆಮ್ಮೆ ಮೃತದೇಹ ಪತ್ತೆಯಾಗಿದೆ.ನದಿಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಸ್ಥಳೀಯರು ಸತ್ತ ಕಾಡಮ್ಮೆಯನ್ನು ನೋಡಲು ಜನರು ದಾವಿಸಿ ಬರುತ್ತಿದ್ದಾರೆ.

ಕಾಡೆಮ್ಮೆ ಮೃತದೇಹ ಪತ್ತೆ Read More »

ರಕ್ತಚಂದನ ಮರ ಮಾರಾಟ: ಮೂವರ ಬಂಧನ

ಕೊಳ್ಳೆಗಾಲ : ಬೆಂಗಳೂರಿನಿಂದ ತಮಿಳು ನಾಡಿಗೆ ರಕ್ತ ಚಂದನ ಮರವನ್ನು ಮಾರಾಟ ಮಾಡಲು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮೂವರನ್ನು ಕೊಳ್ಳೆಗಾಲ ನಗರದ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ಬೆಂಗಳೂರಿನ ವಿಜಯನಗರದ ನಿವಾಸಿ ಅರುಣ್ ಕುಮಾರ್ (26), ಪಂಡಿತರ ಪಾಳ್ಯ ನಿವಾಸಿ ಆನಂದ್ (46) ಹಾಗೂ ತುಮಕೂರಿನ ಸೋಮೇಶ್ವರಪುರಂನ ಮುಸ್ತಫ (52) ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರು ಕಡೆಯಿಂದ ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದಂತೆ ಕಾರನ್ನು ತಡೆದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನಲ್ಲಿದ್ದ 17.04 ಲಕ್ಷ ರೂ. ಮೌಲ್ಯದ ರಕ್ತ

ರಕ್ತಚಂದನ ಮರ ಮಾರಾಟ: ಮೂವರ ಬಂಧನ Read More »

ಸುಳ್ಯದ ಇಂದಿರಾ ಕ್ಯಾಂಟೀನ್‌ಗೆ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರ ಭೇಟಿ

ಜನಪ್ರತಿನಿಧಿಗಳು, ಮುಖಂಡರು ಭೇಟಿ: ಸುಳ್ಯ ನಗರ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಜೂ.29ರಂದು ಸುಳ್ಯದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತಾ ಪ್ರಮುಖರಾದ ಕೆ.ಗೋಕುಲ್‌ದಾಸ್, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ಚೇತನ್ ಕಜೆಗದ್ದೆ, ಶಹೀದ್ ಪಾರೆ, ರಾಜು ಪಂಡಿತ್, ನಂದರಾಜ ಸಂಕೇಶ್, ಹರಿಶ್ಚಂದ್ರ ಪಂಡಿತ್, ಭೋಜಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಇಂದಿರಾ ಕ್ಯಾಂಟೀನ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ಮುಖಂಡರು ಇಂದಿರಾ

ಸುಳ್ಯದ ಇಂದಿರಾ ಕ್ಯಾಂಟೀನ್‌ಗೆ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರ ಭೇಟಿ Read More »

ಫ್ರೀ ಬಸ್ಸಲ್ಲಿ ಪ್ರವಾಸಕ್ಕೆ ತೆರಳಿದಹೆಂಡತಿ ನಾಪತ್ತೆ

ಬಸ್ಸಿನಡಿ ಮಲಗಿ ಫ್ರೀ ಬಸ್ಸು ರದ್ದುಗೊಳಿಸಲು ಒತ್ತಾಯಿಸಿ ಆತ್ಮ ಹತ್ಯೆಗೆ ಯತ್ನಿಸಿದ ಪತಿ ಫ್ರೀ ಬಸ್ ನಲ್ಲಿ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ನಾನು ಸಾಯ್ತಿನಿ ಅಂತಾ ಬಸ್ ನಡಿ ಬಿದ್ದು ಪತಿಯೊಬ್ಬ ಆತ್ಮ ಹತ್ಯೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ಧ ಗಂಟೆಗೂ ಹೆಚ್ಚು

ಫ್ರೀ ಬಸ್ಸಲ್ಲಿ ಪ್ರವಾಸಕ್ಕೆ ತೆರಳಿದಹೆಂಡತಿ ನಾಪತ್ತೆ Read More »

ಟ್ಯಾಂಕರ್ ಅಪಘಾತ: ಓರ್ವ ಸಾವು

ಸುಳ್ಯ ಸಮೀಪದ ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ನಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಟ್ಯಾಂಕರ್ ಅಫಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಗಂಭೀರ ಗಾಯಗೊಂಡಿದ್ದು ಚಾಲಕ ಮೃತಪಟ್ಟ ಘಟನೆ ವರದಿಯಾಗಿದೆ.ಅವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡ ಲಾರಿ ಚಾಲಕ ಹಾಸನ ಮೂಲದ ಪ್ರವೀಣ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ಧಾರೆ ಎಂದು ತಿಳಿದು ಬಂದಿದೆ. ಟ್ಯಾಂಕರ್ ನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದು ಆ ವ್ಯಕ್ತಿಯ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಟ್ಯಾಂಕರ್ ಅಪಘಾತ: ಓರ್ವ ಸಾವು Read More »

error: Content is protected !!
Scroll to Top