Uncategorized

ಅಕಾಲಿಕ ಮಳೆಗೆ ಸೋಮವಾರಪೇಟೆಯಲ್ಲಿ ನೆಲಕಚ್ಚಿದ ಭತ್ತ

 ಹವಾಮಾನ ವೈಪರೀತ್ಯದಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿ ಸುರಿದ ಅಕಾಲಿಕ ಮಳೆಗೆ ಸುಮಾರು 205 ಹೆಕ್ಟೇರ್‌ನಲ್ಲಿಬೆಳೆದಿದ್ದ ಭತ್ತದ ಫಸಲು ನಷ್ಟವಾಗಿದೆ. ಪ್ರಸಕ್ತ ವರ್ಷ ಕಾಫಿಯೂ ಅತಿವೃಷ್ಟಿಗೆ ನೆಲಕಚ್ಚಿದ್ದು, ಬೆಳೆಗಾರರು ಮತ್ತೆ ಪರಿಹಾರಕ್ಕಾಗಿ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಭತ್ತದ ಕಣಜವೆಂದೇ ಕರೆಸಿಕೊಳ್ಳುವ ಸೋಮವಾರಪೇಟೆ ತಾಲೂಕಿನಲ್ಲಿಭತ್ತ ಬೆಳೆಯುವ ರೈತರೇ ಕಾಫಿ ತೋಟವನ್ನು ಹೊಂದಿದ್ದಾರೆ. ಈ ಬಾರಿ ಕಾಫಿ ಮತ್ತು ಭತ್ತ ಫಸಲು ಎರಡೂ ಹಾನಿಗೀಡಾಗಿರುವುದರಿಂದ ನಷ್ಟದ ಪ್ರಮಾಣ ಹೆಚ್ಚಿದೆ.

ಅಕಾಲಿಕ ಮಳೆಗೆ ಸೋಮವಾರಪೇಟೆಯಲ್ಲಿ ನೆಲಕಚ್ಚಿದ ಭತ್ತ Read More »

ಪಂಚಮಸಾಲಿ ಬಳಿಕ ಬೊಮ್ಮಾಯಿಗೆ ಮತ್ತೊಂದು ತಲೆಬಿಸಿ; ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ

ಪಂಚಮಸಾಲಿ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಬೇಡಿಕೆ ತೀವ್ರಗೊಳ್ಳುತ್ತಿದೆ. ಮೀಸಲಾತಿ ಹೆಚ್ಚಳ ಆಗ್ರಹಿಸಿ ಬಿಜೆಪಿಯ ಒಕ್ಕಲಿಗ ಶಾಸಕರು ಹಾಗೂ ಸಚಿವರು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಡಲಿದ್ದಾರೆ. ಒಕ್ಕಲಿಗರ ಮೀಸಲಾತಿ ಹೆಚ್ಚಳ, ಕುಂಚಿಟಗರು ಹಾಗೂ ಬಂಟ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದು ಬೇಡಿಕೆಯಾಗಿದೆ.

ಪಂಚಮಸಾಲಿ ಬಳಿಕ ಬೊಮ್ಮಾಯಿಗೆ ಮತ್ತೊಂದು ತಲೆಬಿಸಿ; ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ Read More »

6.50 ಲಕ್ಷ ರೂ. ವೆಚ್ಚದ ಪುನೀತ್ ರಾಜ್ ಕುಮಾರ್ ಆಶ್ರಯ ಮನೆ ಉದ್ಘಾಟನೆ

ಭಟ್ಕಳ: ಸೂರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿನ ಕೋಣಾರ ಬೀಳೂರಮನೆ ವ್ಯಾಪ್ತಿಯ ಕುಟುಂಬವೊಂದಕ್ಕೆ ಭಟ್ಕಳ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ಭಟ್ಕಳ ಇದರ ವತಿಯಿಂದ ಸುಮಾರು 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಪುನೀತ್‌ ರಾಜ್ ಕುಮಾರ್’ ಆಶ್ರಯ ಮನೆಯನ್ನು ಮಾಜಿ ಶಾಸಕ ಜೆ.ಡಿ.ನಾಯ್ಕ ಉದ್ಘಾಟಿಸಿದರು. ಅವರು ಮಾತನಾಡಿ, “ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಟ್ಟಿರುವುದು ಸಂತಸದ ಸಂಗತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯು ಅರಣ್ಯದಿಂದ ಆವೃತವಾಗಿದ್ದು, ಹೆಚ್ಚಿನ ಜನರು ಅರಣ್ಯ ಪ್ರದೇಶದಲ್ಲಿಯೇ ವಾಸ ಮುಂದುವರೆಸಿದ್ದಾರೆ. ದನ ಕರುಗಳ

6.50 ಲಕ್ಷ ರೂ. ವೆಚ್ಚದ ಪುನೀತ್ ರಾಜ್ ಕುಮಾರ್ ಆಶ್ರಯ ಮನೆ ಉದ್ಘಾಟನೆ Read More »

error: Content is protected !!
Scroll to Top