Uncategorized

ಗಾಂಜಾ ಮಾರಾಟ: ಓರ್ವನ ಬಂಧನ

ಉಡುಪಿ: ಜಿಲ್ಲೆಯ ಮಣಿಪಾಲದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಮೊಹಮ್ಮದ್‌ ನೂರ್‌(22) ಎಂದು ಗುರುತಿಸಲಾಗಿದೆ. ಈತ ಮಣಿಪಾಲದ ಸೋನಿಯಾ ಕ್ಲಿನಿಕ್‌ ಬಳಿ ಇರುವ ರೋಟರಿ ಕ್ಲಬ್‌ ಸಮೀಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಈತನ ವಶದಲ್ಲಿದ್ದ 390 ಗ್ರಾಂ ತೂಕದ ಅಂದಾಜು 20 ಸಾವಿರ ರೂ.ಮೌಲ್ಯದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್‌ ಸಹಿತ ಒಟ್ಟು 70,000ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ […]

ಗಾಂಜಾ ಮಾರಾಟ: ಓರ್ವನ ಬಂಧನ Read More »

ಕಾಂಪೌಂಡ್ ಕುಸಿತ: ಅಪಾರ ನಷ್ಟ

ಸಂಪಾಜೆ: ಕಾಂಪೌಂಡ್ ಕುಸಿತಗೊಂಡು ಕೊಟ್ಟಿಗೆಗೆ ಹಾನಿ ಸಂಭವಿಸಿದ ಘಟನೆ ಸಂಪಾಜೆಯಿಂದ ವರದಿಯಾಗಿದೆ ಸಂಪಾಜೆ ಗ್ರಾಮದ ಅಶ್ರಫ್ ಟರ್ಲಿಯವರ ಕಾಂಪೌಂಡ್ ಮಳೆಗೆ ಕುಸಿತ. 2 ವರ್ಷದ ಹಿಂದೆ ಭೂ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಈ ಕಾಂಪೌಂಡ್ ಕೂಡ ಜರಿದು ಬಿದ್ದಿದ್ದು ಇದಕ್ಕೆ ಸರಕಾರದಿಂದ 4000 ರೂ ಪರಿಹಾರವೂ ದೊರಕಿತ್ತು. ಇದನ್ನು ಕೆಲ ತಿಂಗಳ ಹಿಂದೆ ಕಾಂಪೌಂಡ್ ನಿರ್ಮಾಣ ಮಾಡಲಾಯಿತು. ಆದರೆ ಇಂದು ಸುರಿದ ಮಳೆಗೆ ಕಾಂಪೌಂಡ್ ವಾಪಾಸ್ ಸಂಪೂರ್ಣ ಕುಸಿದಿದೆ.ಪರಿಣಾಮವಾಗಿ ಪಕ್ಕದ ಮನೆ ಹಾಗೂ ಕೊಟ್ಟಿಗೆ ಜಖಂಗೊಂಡಿದ್ದು, ಅಪಾರ

ಕಾಂಪೌಂಡ್ ಕುಸಿತ: ಅಪಾರ ನಷ್ಟ Read More »

ಕುಮಾರಧಾರ ನದಿಗೆ ವ್ಯಕ್ತಿ ಹಾರಿರುವ ಶಂಕೆ: ಬಿರುಸಿನ ಹುಡುಕಾಟ ಆರಂಭ

ಕುಮಾರಧಾರ ನದಿಗೆ ವ್ಯಕ್ತಿಯೊಬ್ಬ ಹಾರಿರುವ ಶಂಕೆ ಮೂಡಿದೆಕಡಬ ತಾಲೂಕಿನ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಎಂಬವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ನದಿ ಬದಿಯಲ್ಲಿ ಧರ್ಮಯ್ಯ ಅವರ ಶೂ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೌರ್ಯ ತಂಡದ ಸದಸ್ಯರಿಂದ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ಧರ್ಮಯ್ಯ ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಬಂದಿದ್ದ ಎನ್ನಲಾಗಿದೆ. ಹೆಚ್ಚಿನ

ಕುಮಾರಧಾರ ನದಿಗೆ ವ್ಯಕ್ತಿ ಹಾರಿರುವ ಶಂಕೆ: ಬಿರುಸಿನ ಹುಡುಕಾಟ ಆರಂಭ Read More »

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ : ನಳಿನ್ ಕುಮಾರ್ ಕಟೀಲ್

ಮಂಗಳೂರು : ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ : ನಳಿನ್ ಕುಮಾರ್ ಕಟೀಲ್ Read More »

ರುಬಿನಗೆ ವೀಲ್ ಚೇರ್ ವಿತರಣೆ

ಅಜ್ಜಾವರ: ಶ್ರೀರಕ್ಷ ಸಂಘದ ರುಬಿನ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ಅನ್ನು ಗ್ರಾಮದ ಪ್ರಥಮ ಪ್ರಜೆಯಾದ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷಸತ್ಯವತಿ ಬಸವನ ಪಾದೆ ಮೂಲಕ ವಿತರಿಸಲಾಯಿತು.ಈ ಸಂದರ್ಭ ಅಡಪಂಗಾಯ ಒಕ್ಕೂಟದ ಅಧ್ಯಕ್ಷ ಬೇಬಿ, ವಲಯದ ಮೇಲ್ವಿಚಾರಕಿ ವಿಶಾಲ, ಸೋಲಾರ್ ಸಿಬ್ಬಂದಿ ರಂಜಿತ್, ಸೇವಾ ಪ್ರತಿನಿಧಿ ರಜನಿ ಉಪಸ್ಥಿತರಿದ್ದರು.

ರುಬಿನಗೆ ವೀಲ್ ಚೇರ್ ವಿತರಣೆ Read More »

ತಾಯಿ ಮಗು ಸಾವು: ಕುಟುಂಬಸ್ಥರ ಆಕ್ರಂದನ

ಪುತ್ತೂರು: ಯುವತಿಯೋರ್ವಳು ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಜೂ. 20ರ ರಾತ್ರಿ ನಡೆದಿದೆ.ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಮೃತಳು. ಇದೀಗ ಅವರ ಹಸುಗೂಸು ಮೂರು ದಿನದ ಬಳಿಕ ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು,

ತಾಯಿ ಮಗು ಸಾವು: ಕುಟುಂಬಸ್ಥರ ಆಕ್ರಂದನ Read More »

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಹೇಮಾನ್ಯ ಉತ್ತಿರ್ಣ

ತೊಡಿಕಾನ: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಹೇಮಾನ್ಯ ಕಾಡುಪಂಜ ಏ. 29 ರಂದು ನಡೆದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಿದ್ಯಾಸಂಸ್ಥೆಗೆ ಆಯ್ಕೆಯಾಗಿದ್ದಾರೆ.ಹೇಮಾನ್ಯ ಕಾಡುಪಂಜ ಚಿದಾನಂದ ಮತ್ತು ರೂಪಶ್ರೀ ದಂಪತಿಗಳ ಪುತ್ರಿ. ಸ್ಟಡಿ ಲಿಂಕ್ ಟ್ಯೂ ಟೋರಿಯಲ್ ಕಲ್ಲುಗುಂಡಿ ಇಲ್ಲಿನ ವಿದ್ಯಾರ್ಥಿಯಾಗಿರುವ ಹೇಮಾನ್ಯ, ಸ್ಟಡಿ ಲಿಂಕ್ ಟ್ಯೂ ಟೋರಿಯಲ್ ನ ಹರೀಶ್ ಊರುಬೈಲ್ ಮತ್ತು ಧನ್ಯ ಊರುಬೈಲು ಇವರಿಂದ ತರಬೇತಿ ಪಡೆದಿರುತ್ತಾರೆ .ಹಾಗೂ ಈ ಸಂಸ್ಥೆಯ ಒಟ್ಟು 6 ಮಂದಿ ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.ಪ್ರತಿ

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಹೇಮಾನ್ಯ ಉತ್ತಿರ್ಣ Read More »

ಪಿಕಪ್-ಕಾರು ಡಿಕ್ಕಿ: ಅಪಾಯದಿಂದ ಪಾರಾದ ಸವಾರರು

ಬೊಳುಬೈಲು : ಸುಳ್ಯ ತಾಲೂಕಿನ‌ ಜಾಲ್ಸೂರು ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೊಳುಬೈಲು ಸಮೀಪ ಪಿಕಪ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂ ಗೊಂಡ ಘಟನೆ ಜೂ. 22 ರಂದು ರಾತ್ರಿ ವರದಿಯಾಗಿದೆ.ಸುಳ್ಯದಿಂದ ಪುತ್ತೂರಿನತ್ತ ಹೋಗುತ್ತಿದ್ದ ಪಿಕಪ್ ಹಾಗೂ ಪುತ್ತೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪಿಕಪ್-ಕಾರು ಡಿಕ್ಕಿ: ಅಪಾಯದಿಂದ ಪಾರಾದ ಸವಾರರು Read More »

ಗಿಡ ನೆಡುವ ಮೂಲಕ ಪರಿಸರ ಜಾಗೃತಿ

ಮಂಡೆಕೋಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಅಧ್ಯಕ್ಷ ಸುರೇಶ್ ಕಣೆಮರಡ್ಕ ವಹಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಕಾರ್ಯಕ್ರಮ ಉದ್ಘಾಟಿಸಿದರು. ಹಾಸನ ವಲಯ ಮೀಸಲು ಪೊಲೀಸ್ ಪಡೆಯ ಅಧಿಕಾರಿ ದಿನೇಶ್ ಪರಿಸರ ಜಾಗೃತಿ ಬಗ್ಗೆ ಉಪನ್ಯಾಸ ನೀಡುದರು. ವೇಧಿಕೆಯಲ್ಲಿ ಅಜ್ಜಾವರ ವಲಯ ಮೇಲ್ವಿಚಾರಕಿವಿಶಾಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ಉಪಸ್ಥಿತರಿದ್ದರು. ಈ

ಗಿಡ ನೆಡುವ ಮೂಲಕ ಪರಿಸರ ಜಾಗೃತಿ Read More »

Big Breaking:ಹೊಟ್ಟೆಯಲ್ಲೇ

ಗರ್ಭಿಣಿ ಮಹಿಳೆಯ ಹೊಟ್ಟೆ ಯಲ್ಲಿ ಮೃತಪಟ್ಟ ಮಗುಅರಂತೋಡು ತಾಜುದ್ದೀನ್ ರವರ ಪತ್ನಿ ಅಸ್ಮ ಎಂಬವರು ಆರು ತಿಂಗಳ ಗರ್ಭವತಿಯಾಗಿದ್ದರು.ರಾತ್ರಿ ಹೊಟ್ಟೆ ನೋವುಜೋರಾಗಿ ಇದ್ದರಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು ಅಲ್ಲಿ ವೈದ್ಯರು ಪರೀಕ್ಷಿಸಿ ಹೊಟ್ಟೆ ಯಲ್ಲಿ ಮಗು ಮೃತಪಟ್ಟದೆ ಎಂದು ಧೃಡ ಪಡಿದಿದರು.ಗಂಡು ಮಗು ಎಂದು ತಿಳಿದು ಬಂದಿದೆ.

Big Breaking:ಹೊಟ್ಟೆಯಲ್ಲೇ Read More »

error: Content is protected !!
Scroll to Top