Uncategorized

ಅಣ್ಣ-ತಮ್ಮನಿಗೆ ಒಂದೆ ದಿನ ಹೃದಯಾಘಾತ: ಇಬ್ಬರೂ ಸಾವು

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿಯಲ್ಲಿ ಶನಿವಾರ ಹೃದಯಾಘಾತದಿಂದಾಗಿ ಇಬ್ಬರು ಸಹೋದರರು ಮೃತಪಟ್ಟ ದುರ್ಘಟನೆ ನಡೆದಿದೆ. 16 ವರ್ಷದ ಸತೀಶ ಬಾಗನ್ನವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ದುಃಖದ ಸುದ್ದಿ ತಿಳಿದ ತಕ್ಷಣವೇ, ಅವನ ಅಣ್ಣ 24 ವರ್ಷದ ಬಸವರಾಜ ಬಾಗನ್ನವರ ಕೂಡ ಶಾಕ್‌ನಿಂದ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಪತಿ ಹಾಗೂ ಮೈದುನನ ಕಳೆದುಕೊಂಡ ಬಸವರಾಜನ ಗರ್ಭಿಣಿ ಪತ್ನಿ ಪವಿತ್ರಾ ಕುಸಿದು ಬಿದ್ದಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಣ್ಣ-ತಮ್ಮನಿಗೆ ಒಂದೆ ದಿನ ಹೃದಯಾಘಾತ: ಇಬ್ಬರೂ ಸಾವು Read More »

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಳ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ಶಕ್ತಿ’ ಚಂಡಮಾರುತದಿಂದ ರಾಜ್ಯದಲ್ಲಿ ವಾರಪೂರ್ತಿ ಗುಡುಗು ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 11ರವರೆಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಳ Read More »

ಸುಳ್ಯ : ದಸರಾದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಚಂಡಿಕಾ ಮಹಾಯಾಗ

ಸುಳ್ಯದ ದಸರಾ ಉತ್ಸವ ವೈಭವದೊಂದಿಗೆ ಸುಳ್ಯ ಚೆನ್ನಕೇಶವ ದೇವಳದ ವಠಾರದಲ್ಲಿ ನಡೆಯುತ್ತಿದ್ದು 6 ನೇ ದಿನವಾದ ಅ.4ರಂದು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗವು ನಡೆಯಿತು.ಪುರೋಹಿತ ನಾಗರಾಜ ಭಟ್ಟರ ನೇತೃತ್ವದಲ್ಲಿ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ದ ಸಹಕಾರದಲ್ಲಿ ಚಂಡಿಕಾ ಯಾಗ ನಡೆಯಿತು.ಸಾವಿರಾರು ಮಂದಿ ಈ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸುಳ್ಯ : ದಸರಾದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಚಂಡಿಕಾ ಮಹಾಯಾಗ Read More »

ತೊಡಿಕಾನ : ಡಿ.26,27,28ಕ್ಕೆ ಪಡ್ಪು ಶ್ರೀ ಮಹಾವಿಷ್ಣು ದೈವದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ದೈವದ ದೈವಸ್ಥಾನ ಜೀರ್ಣೊದ್ದಾರಗೊಳ್ಳುತ್ತಿದ್ದು ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಡಿ.26,27,28ರಂದು ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ವಿವಿಧ ಸಮಿತಿಗಳ ಪೂರ್ವಭಾವಿ ಸಭೆ ಹಾಗೂ ಜೀರ್ಣೊದ್ದಾರ ಪ್ರಯುಕ್ತ ಲಕ್ಕಿಕೂಪನ್ ಬಿಡುಗಡೆ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಅ.4ರಂದು ನಡೆಯಿತು.ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ ಅಧ್ಯಕ್ಷತೆ ವಹಿಸಿದ್ದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು. ವ್ಯವಸ್ಥಾಪನಾ ಸಮಿತಿ (ಟ್ರಸ್ಟ್ ) ಅಧ್ಯಕ್ಷ

ತೊಡಿಕಾನ : ಡಿ.26,27,28ಕ್ಕೆ ಪಡ್ಪು ಶ್ರೀ ಮಹಾವಿಷ್ಣು ದೈವದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ Read More »

ರಾಜ್ಯಾದ್ಯಂತ ಮತ್ತೆ ಮಳೆ ಸುರಿಯುವ ಸಾಧ್ಯತೆ

ಕರ್ನಾಟಕದಾದ್ಯಂತ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದ್ದು ಅ. 9ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ರಾಜ್ಯಾದ್ಯಂತ ಮತ್ತೆ ಮಳೆ ಸುರಿಯುವ ಸಾಧ್ಯತೆ Read More »

ಸುಳ್ಯ : ಮಕ್ಕಳ‌ ದಸರಾ ಉದ್ಘಾಟನೆ

ಸುಳ್ಯ ದಸರಾ ಕಾರ್ಯಕ್ರಮದಲ್ಲಿ ಐದನೇ ದಿನವಾದ ಅ.3ರಂದು ಮಕ್ಕಳ ದಸರಾ ನಡೆಯಿತು.ಮಕ್ಕಳಿಗೆ ಬೇರೆ ಬೇರೆ ವಿಭಾಗ ಮಾಡಿ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಅನೇಕ ಮಕ್ಖಳು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮಕ್ಕಳ ದಸರಾ ಸಭಾ ಕಾರ್ಯಕ್ರಮ ವನ್ನು ಪ್ರತಿಭಾನ್ವಿತ ಕಲಾವಿದರಾದ ಸ್ವರಾ ಎನ್.ಎಲ್., ಆದಿತ್ಯ ಪಿ ಪ್ರಮೋದ್, ದೈವಿಕ್ ಪಿ. ಪ್ರಮೋದ್ ರವರು ದೀಪ ಬೆಳಗಿ ಉದ್ಘಾಟಿಸಿದರು.ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ., ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಮಹಿಳಾ

ಸುಳ್ಯ : ಮಕ್ಕಳ‌ ದಸರಾ ಉದ್ಘಾಟನೆ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಮಾದಕ ವಸ್ತು ಹಾಗೂ ಸೈಬರ್ ಕ್ರೈಂ ಜಾಗೃತಿ ಕುರಿತು ಮಾಹಿತಿ ಕಾರ್ಯಾಗಾರ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಅ. 03 ರಂದು ಸುಳ್ಯ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಮಾದಕ ವಸ್ತು ಜಾಗೃತಿ ಹಾಗೂ ಸೈಬರ್ ಕ್ರೈಂ ಕುರಿತು ಮಾಹಿತಿ ಕಾರ್ಯಾಗಾರವು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಾಗಾರದಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀಯುತ ಸಂತೋಷ್ ಬಿ ಪಿ ರವರು ಮಾಹಿತಿಯನ್ನು ನೀಡುತ್ತಾ ಮಾದಕ ವ್ಯಸನ ಹಾಗೂ ಸೈಬರ್ ಕ್ರೈಂನಿಂದ ಉಂಟಾಗುವ ತೊಂದರೆ ಹಾಗೂ ಇದನ್ನು ತಡೆಯುವ ಕುರಿತು ಮಾಹಿತಿಯನ್ನು ನೀಡಿದರು.ಮಾಹಿತಿ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಮಾದಕ ವಸ್ತು ಹಾಗೂ ಸೈಬರ್ ಕ್ರೈಂ ಜಾಗೃತಿ ಕುರಿತು ಮಾಹಿತಿ ಕಾರ್ಯಾಗಾರ Read More »

ತೆಂಗಿನ ಮರದಿಂದ ಬಿದ್ದು ಯುವಕ ಸಾವು

ತೆಂಗಿನ ಮರದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸುಳ್ಯದ ಅಜ್ಜಾವರದ ಗ್ರಾಮದ ಕರಿಯಮೂಲೆ ಎಂಬಲ್ಲಿಂದ ಇದೀಗ (ಅ.4) ವರದಿಯಾಗಿದೆ.ಸಾವಿಗೀಡಾದ ಯುವಕನನ್ನು‌ಪ್ರಶಾಂತ್ ಎಂದು ಗುರುತಿಸಲಾಗಿದೆ. ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಯುವಕನನ್ನು ಕರೆ ತಂದು ಚಿಕಿತ್ಸೆ ನೀಡಲಾಯಿತು.ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದನು.

ತೆಂಗಿನ ಮರದಿಂದ ಬಿದ್ದು ಯುವಕ ಸಾವು Read More »

ಸಮಾಜದ ನಡುವೆ ಕೆಲಸ ಮಾಡುವ ಸಂಘಟನೆ ಆರ್.ಎಸ್.ಎಸ್: ರಾಜೇಶ್ ಪದ್ಮಾರು

ಜಾಲ್ಸೂರು : ಆರ್.ಎಸ್.ಎಸ್ ಶತಾಬ್ಲಿ ಹಿನ್ನಲೆಯಲ್ಲಿ ಜಾಲ್ಸೂರು ಮಂಡಲ ಅರ್.ಎಸ್.ಎಸ್ ಸಾಂಘಿಕ್ ಅಡ್ಕಾರು ಸುಬ್ರಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮ ಮುಖ್ಯ ವಕ್ತಾರರಾಗಿ ಪ್ರಾಂತ್ಯ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರು ಬೌದ್ದಿಕ್ ನೀಡಿ ಅರ್.ಎಸ್.ಎಸ್ ಕಳೆದ ನೂರು ವರ್ಷಗಳಿಂದ ಸಮಾಜದ ನಡುವೆ ಕೆಲಸ ಮಾಡುತ್ತ ಬರುತ್ತಿದೆ. ಸಂಘ ಸ್ಥಾಪನೆ ಕಾಲದಲ್ಲಿ ಅರ್.ಎಸ್‌.ಎಸ್ ಬಗ್ಗೆ ಅನೇಕ ಜನ ಅಪಹಾಸ್ಯ,ವ್ಯಂಗ್ಯ ಮಾಡಿದರು. ನಂತರ ಕಾಲದಲ್ಲಿ ಪ್ರತಿರೋಧ, ಆಕ್ರಮಣ ಗಳು ನಡೆದವು.ಆದರೆ ಕಾರ್ಯಕರ್ತರ ನಿಸ್ವಾರ್ಥ ಕಾರ್ಯ ದ ಪರಿಣಾಮ ಇಂದು ಅವೆಲ್ಲವನ್ನು ಮೆಟ್ಟಿ

ಸಮಾಜದ ನಡುವೆ ಕೆಲಸ ಮಾಡುವ ಸಂಘಟನೆ ಆರ್.ಎಸ್.ಎಸ್: ರಾಜೇಶ್ ಪದ್ಮಾರು Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಜಯಂತಿ ಆಚರಣೆ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತುಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ವಹಿಸಿದ್ದರುಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ. ಪಿ. ಜೋನಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಶಶಿಧರ್, ಪಕ್ಷದ ಮುಖಂಡರುಗಳಾದ ಆನಂದ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಜಯಂತಿ ಆಚರಣೆ Read More »

error: Content is protected !!
Scroll to Top