Uncategorized

ಐವರ್ನಾಡು : ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಕೇಶವ ಗೌಡ ನಿಧನ

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ, ಸುಳ್ಯ ಎ.ಪಿ.ಎಂ.ಸಿ ಮಾಜಿ ನಾಮನಿರ್ದೇಶಕ ಸದಸ್ಯ ಐವರ್ನಾಡು ಗ್ರಾಮದ ಹಸಿಯಡ್ಕ ಕೇಶವ ಗೌಡರವರು ಅನಾರೋಗ್ಯದಿಂದ ಅ.1 ರಂದು ರಾತ್ರಿ ನಿಧನರಾದರು. ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನಾಮನಿರ್ದೇಶಕರಾಗಿ, ನಿಡುಬೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಯುವಶಕ್ತಿ ಸಂಘದ ಹಿರಿಯ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಇವರಿಗೆ 67 ವರ್ಷ ಪ್ರಾಯವಾಗಿದ್ದು ಪತ್ನಿ ಸವಿತ,ಪುತ್ರ ಕವನ್ ಹಾಗೂ ಸೊಸೆ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

ಐವರ್ನಾಡು : ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಕೇಶವ ಗೌಡ ನಿಧನ Read More »

ರಾಷ್ಟ್ರ ಪಿತ ಮಹಾತ್ಮ ಗಾಂಧಿ ಭಾರತದ ಹೆಮ್ಮೆ

ಅಕ್ಟೊಬರ್ 2 ವಿಶ್ವಕ್ಕೆ ಅಹಿಂಸೆ ಮತ್ತು ಶಾಂತಿಯ ಸಂದೇಶ ಬಿತ್ತಿದ ಶ್ರೇಷ್ಠ ಅಹಿಂಸಾವಾದಿ , ಮಾನವತಾವಾದಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರ ಪಿತ ಮಹಾತ್ಮ ಗಾಂಧಿf ಅವರ ಜನ್ಮ ದಿನ.ಅ. 2 1869 ರಂದು ಜನಿಸಿದ ಮಹಾತ್ಮ ಗಾಂಧಿ ಅವರ ಹುಟ್ಟುಹಬ್ಬವನ್ನು ಆ ದಿನ ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ಮೂಲೆಯಲ್ಲಿ ವಿದೇಶಿಯರು ಕೂಡ ಆಚರಿಸುತ್ತಾರೆ.ಅಲ್ಲದೇ ಭಾರತದ ಸ್ವತಂತ್ರ ಸಂಗ್ರಾಮದ ಪಿತಾಮಹಾ ಮಹಾತ್ಮಗಾಂಧಿ ಅವರ ಹುಟ್ಟಿದ ದಿನವನ್ನು ವಿಶೇಷವಾಗಿ ವಿಶ್ವದಲ್ಲಿ ಶಾಂತಿಯ ದಿನವೆಂದು ಆಚರಿಸುತ್ತಿರುವುದು

ರಾಷ್ಟ್ರ ಪಿತ ಮಹಾತ್ಮ ಗಾಂಧಿ ಭಾರತದ ಹೆಮ್ಮೆ Read More »

ಬೆಳಕು ಸಾಹಿತ್ಯ ಶೈಕ್ಷಣಿಕ ಸಂಸ್ಕೃತಿಕಾ ಟ್ರಸ್ಟ್ (ರಿ) ಇದರ ದ.ಕ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಅಕ್ಷತಾ ನಾಗನಕಜೆ ಆಯ್ಕೆ

ಬೆಳಕು ಸಾಹಿತ್ಯ ಶೈಕ್ಷಣಿಕ ಸಂಸ್ಕೃತಿಕಾ ಟ್ರಸ್ಟ್ (ರಿ) ರಾಯಚೂರು ಇದರ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ಕಾರ್ಯಕ್ರಮ ಹಾಗೂ ಪ್ರಶಸ್ತಿಗೆ ಹಾಗೂ ಜಿಲ್ಲಾ. ರಾಜ್ಯ ಮಟ್ಟದ ಪ್ರತಿಭೆ ಗಳನ್ನು ಗುರುತಿಸುವ ಜವಾಬ್ದಾರಿಗೆ ದ. ಕ. ಜಿಲ್ಲಾ ನೂತನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದ್ದು ದ.ಕ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿಯಾಗಿಕವಯತ್ರಿ ಅಕ್ಷತಾ ನಾಗನಕಜೆಯವರು ಆಯ್ಕೆಗೊಂಡಿದ್ದಾರೆ.ಸಂಸ್ಥೆಯ ನಿಯಮಾನುಸಾರ ಸಂಸ್ಥೆಯ ಕಾರ್ಯಗಳನ್ನು ಮಾಡಲು ಸಂಪೂರ್ಣ ಅನುಮತಿ ನೀಡಿ ನೂತನವಾಗಿ ನೇಮಕ ಮಾಡಲಾಗಿದೆ ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.

ಬೆಳಕು ಸಾಹಿತ್ಯ ಶೈಕ್ಷಣಿಕ ಸಂಸ್ಕೃತಿಕಾ ಟ್ರಸ್ಟ್ (ರಿ) ಇದರ ದ.ಕ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಅಕ್ಷತಾ ನಾಗನಕಜೆ ಆಯ್ಕೆ Read More »

ಸುಳ್ಯ : ಟೈಲರಿಂಗ್ ಶಾಪ್ ಗೆ ನುಗ್ಗಿದ ಕಾರು,ತಪ್ಪಿದ ಅನಾಹುತ

ಸುಳ್ಯದ ಅಂಬಟಡ್ಕ ಬಳಿಯ ಅಕ್ಷಯ ಆರ್ಕೆಡ್ ನಲ್ಲಿರುವ ಇನ್ ಸ್ಟೈಲ್ ಟೈಲರಿಂಗ್‌ ಶಾಪ್ ಗೆ ಕಾರೊಂದು ನುಗ್ಗಿದ ಘಟನೆ ಇದೀಗ ವರದಿಯಾಗಿದೆ.ಮಾಲಕರು ಕೆಲ ದಿನಗಳ ಹಿಂದೆ ಈ ಕಾರನ್ನು ಖರೀದಿಸುದ್ದರು. ಅದೃಷ್ಟವಶಾತ್ ಟೈಲರಿಂಗ್ ಶಾಪ್ ನ ಮಾಲಕರು ಹೊರಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. <

ಸುಳ್ಯ : ಟೈಲರಿಂಗ್ ಶಾಪ್ ಗೆ ನುಗ್ಗಿದ ಕಾರು,ತಪ್ಪಿದ ಅನಾಹುತ Read More »

ಶಕ್ತಿ ಯೋಜನೆ, ವಿಶ್ವ ದಾಖಲೆಗೆ ಸೇರ್ಪಡೆ: ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸನ್ ಅವಾರ್ಡ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು 500 ಕೋಟಿ ಮಹಿಳಾ ಟಿಕೆಟ್ ಉಚಿತ ಪ್ರಯಾಣದ ಮೂಲಕ ವಿಶ್ವದಾಖಲೆಗೆ ಸೇರ್ಪಡೆಯಾಗಿದೆ. ಈ ಸಾಧನೆಗಾಗಿ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಹಾಗೂ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ. ಈಗಾಗಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವ ಈ ಯೋಜನೆ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಔದ್ಯೋಗಿಕ ಸಬಲೀಕರಣಕ್ಕೆ ಕೊಡುಗೆ ನೀಡಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗ ರೆಡ್ಡಿ, ನಿಗಮಗಳ ಅಧಿಕಾರಿ,

ಶಕ್ತಿ ಯೋಜನೆ, ವಿಶ್ವ ದಾಖಲೆಗೆ ಸೇರ್ಪಡೆ: ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸನ್ ಅವಾರ್ಡ್ Read More »

ಅನ್ಯ ಪುರುಷನೊಂದಿಗೆ ಪತ್ನಿಯ ಅಕ್ರಮ ಸಂಬಂಧ: ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಕೊಲೆ! ಪ್ರಿಯಕರನ ಕಾಲು ಕತ್ತರಿಸಿದ ಪತಿ!

ಮೈಸೂರು ಜಿಲ್ಲೆಯ ಹುಣಸೂರು ಸಮೀಪದ ಮೂಕನಹಳ್ಳಿ ಗ್ರಾಮದಲ್ಲಿ ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿಯೊಬ್ಬ, ಆಕೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳವಾರ ನಡೆದಿದೆ. ಆರೋಪಿ ವಿಜಯ್ ತನ್ನ ಪತ್ನಿ ಗೀತಾ (29)ಳನ್ನು ಕೊಲೆ ಮಾಡಿದ್ದಾನೆ. ಅಲ್ಲದೆ, ಗೀತಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದಿಲೀಪ್‌ ಎಂಬಾತನ ಮೇಲೂ ಹಲ್ಲೆ ನಡೆಸಿದ್ದು, ದಿಲೀಪ್‌ ಕಾಲಿಗೆ ಗಂಭೀರ ಗಾಯವಾಗಿದೆ. ಪೊಲೀಸರು ಆರೋಪಿ ವಿಜಯ್ ಮತ್ತು ಆತನ ಸಹೋದರ ಸುರೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಗೀತಾಳ ತಂದೆ ವೆಂಕಟರಮಣ ನೀಡಿದ ದೂರಿನ

ಅನ್ಯ ಪುರುಷನೊಂದಿಗೆ ಪತ್ನಿಯ ಅಕ್ರಮ ಸಂಬಂಧ: ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಕೊಲೆ! ಪ್ರಿಯಕರನ ಕಾಲು ಕತ್ತರಿಸಿದ ಪತಿ! Read More »

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯದಲ್ಲಿ ಏರು ಪೇರು ಆಸ್ಪತ್ರೆಗೆ ದಾಖಲು

ಎಐಸಿಸಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭಾರೀ ಪ್ರವಾಹ ಮತ್ತು ಬೆಳೆ ಹಾನಿ ಬಗ್ಗೆ ಮಾತನಾಡಿದ್ದರು.ಅಲ್ಲದೆ, ಕಲ್ಯಾಣ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವರವಾದ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯದಲ್ಲಿ ಏರು ಪೇರು ಆಸ್ಪತ್ರೆಗೆ ದಾಖಲು Read More »

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅಧಿಕಾರ ಸ್ವೀಕಾರ

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅಧಿಕಾರ ಸ್ವೀಕಾರ: ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಬೆಂಗಳೂರಿನಲ್ಲಿ ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ ಐ ಎ ಎಸ್ ಅವರಿಂದ ಅಧಿಕಾರ ಸ್ವೀಕರಿಸಿದರು. ನಂತರ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ (ಮಾಹಿತಿ ತಂತ್ರಜ್ಞಾನ ಉತ್ಪಾದನ ವಲಯ) ಹೊರಗುತ್ತಿಗೆ ಆಧಾರದ

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅಧಿಕಾರ ಸ್ವೀಕಾರ Read More »

ಐಸಿಎಆರ್ – ಐ ಐ ಹೆಚ್ ಆರ್ ವತಿಯಿಂದ ಸುಳ್ಯ ತಾಲೂಕಿನ ಬುಡಕಟ್ಟು ರೈತರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ

ಅಡಿಕೆ ಬೆಳೆಗೆ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಐಸಿಎಆರ್ – ಐ ಐ ಹೆಚ್ ಆರ್ ಸಂಸ್ಥೆಯು ಐಸಿಎಆರ್ – ಕೆವಿಕೆ, ದಕ್ಷಿಣ ಕನ್ನಡ ಸಹಯೋಗದಲ್ಲಿ ಸುಳ್ಯ ತಾಲೂಕಿನ ಆದಿವಾಸಿ ರೈತರಿಗೆ ಹೈ-ಟೆಕ್ ತೋಟಗಾರಿಕೆ ಕುರಿತ ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು TSP (Tribal Sub Plan) ಯೋಜನೆಯ ಅನುದಾನದಡಿ ಆಯೋಜಿಸಿತು. ಡಾ. ಪ್ರಕಾಶ್ ಪಾಟೀಲ್ ನಿರ್ದೇಶಕರು (ಪ್ರಭಾರ), ಐಸಿಎಆರ್ – ಐ ಐ ಹೆಚ್ ಆರ್ ವತಿಯಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ,

ಐಸಿಎಆರ್ – ಐ ಐ ಹೆಚ್ ಆರ್ ವತಿಯಿಂದ ಸುಳ್ಯ ತಾಲೂಕಿನ ಬುಡಕಟ್ಟು ರೈತರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ Read More »

ಮರ್ಕಂಜ : ಕಾಡಿನಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ- ಬೆಳ್ತಂಗಡಿ ಶೌರ್ಯವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಸಂಪಾಜೆ ವಲಯ ಸುಳ್ಯ ತಾಲೂಕು. ಇದರ ಕಾಡಿನಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ನಂದಗೋಕುಲ ಅನಾಥಶ್ರಮ ಮಿತ್ತಡ್ಕ ದಲ್ಲಿ ಗಿಡ ನೆಡುವ ಮೂಲಕ ಯೋಜನಾಧಿಕಾರಿ ಮಾಧವ ಗೌಡ ರವರು ಉದ್ಘಾಟಿಸಿದರು ನಂತರಮಾತನಾಡಿ ‘ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ’ ಧರ್ಮಸ್ಥಳ ಗ್ರಾಮಾಭಿವೃದ್ಧಿ

ಮರ್ಕಂಜ : ಕಾಡಿನಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ Read More »

error: Content is protected !!
Scroll to Top