Uncategorized

ಶುಭವಿವಾಹ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಬಾಳೆಕಜೆ ಜನಾರ್ಧನ ಮತ್ತು ಚಂದ್ರಕಲಾ ದಂಪತಿ ಪುತ್ರ ಶ್ರೀನಿಧಿಯವರ ವಿವಾಹವುಸುಳ್ಯ ತಾಲೂಕು ತೊಡಿಕಾನ ಗ್ರಾಮದ ಊರುಪಂಜ ಹಿರಣ್ಯ ಮತ್ತು ಹೊನ್ನಮ್ಮ ದಂಪತಿ ಪುತ್ರಿ ಯೋಗಿತಾರೊಂದಿಗೆ ಅ.30ರಂದು ತೊಡಿಕಾನ ಬಿ.ಎಸ್.ಗೌಡ ಸಭಾಭವನದಲ್ಲಿ ನಡೆಯಿತು.

ಶುಭವಿವಾಹ Read More »

ಸುಳ್ಯ : ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ ರಾಜಕೀಯ ನಿವೃತ್ತಿ ಘೋಷಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ರಾಜಕೀಯ ನಿವೃತ್ತಿ ಪ್ರಕಟಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಗೆ ಪತ್ರ ಬರೆದಿರುವ ಅವರು ಜಿಲ್ಲಾ ಉಪಾಧ್ಯಕ್ಷತೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿಯೂ, ಪ್ರಸ್ತುತ ರಾಜಕೀಯ ನಿವೃತ್ತಿ ಬಯಸಿರುವುದಾಗಿಯೂ ತಿಳಿಸಿದ್ದಾರೆ.

ಸುಳ್ಯ : ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ ರಾಜಕೀಯ ನಿವೃತ್ತಿ ಘೋಷಣೆ Read More »

ಮದುವೆ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು

ಸಕಲೇಶಪುರ ತಾಲೂಕಿನ ವನಗೂರಿನಿಂದ ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ವ್ಯಾನ್ ಚಾಲಕ‌ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಅ.30ರ ಗುರುವಾರ ಬೆಳಿಗ್ಗೆ ನಡೆದಿದ್ದು, ಈ ಪರಿಣಾಮ ಓರ್ವ ಮೃತಪಟ್ಟು, 6 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಶಿವರಾಜ್ ( 50) ಮೃತಪಟ್ಟವರು.ಈ ವಾಹನದಲ್ಲಿ ಒಟ್ಟು ಸುಮಾರು 30 ಮಂದಿಯಿದ್ದು, 20 ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿತ್ತು. ಅವರಲ್ಲಿ ಶಿವರಾಜ್ ಎಂಬವರಿಗೆ ಚಿಕಿತ್ಸೆ

ಮದುವೆ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು Read More »

ಮದುವೆ ವಾಹನ ಪಲ್ಟಿಯಾಗಿ ಹಲವು ಮಂದಿಗೆ ಗಾಯ

ಕುಕ್ಕೆಸುಬ್ರಹ್ಮಣ್ಯಕ್ಕೆ ಮದುವೆಗೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸಿಲೆ ತಿರುವಿನಲ್ಲಿ ಅಪಘಾತವಾಗಿ ವ್ಯಾನ್‌ನಲ್ಲಿದ್ದವರಿಗೆ ಗಂಭೀರ ಗಾಯವಾದ ಘಟನೆ ಅ. 30ರಂದು ವರದಿಯಾಗಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಕೂಡುರಸ್ತೆ ವನಗೂರುನ ಯುವಕ ಹಾಗೂ ಏನೆಕಲ್ಲಿನ ವಧುವಿನೊಂದಿಗೆ ಇಂದು ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಈ ಮದುವೆಗೆ ಹುಡುಗನ ಕಡೆಯವರು ವಾಹನದಲ್ಲಿ ಬರುತ್ತಿದ್ದರು ಎನ್ನಲಾಗಿದೆ. ವಧು – ವರ ಇಬ್ಬರೂ ನಿನ್ನೆಯೇ ಹಾಲ್‌ಗೆ ಬಂದಿದ್ದರೆಂದು ತಿಳಿದು ಬಂದಿದೆ. ವ್ಯಾನ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ

ಮದುವೆ ವಾಹನ ಪಲ್ಟಿಯಾಗಿ ಹಲವು ಮಂದಿಗೆ ಗಾಯ Read More »

ಭವಿಷ್ಯದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ನಶಿಸಿ ಹೋಗದಂತೆ ಕಾಪಾಡುವ ಜವಾಬ್ದಾರಿ ಸಮಸ್ತ ಕನ್ನಡಿಗರಲ್ಲಿರಲಿ!

ನಾವು ಕನ್ನಡ ರಾಜೋತ್ಸವ ಸಂಭ್ರಮದಲ್ಲಿದ್ದೆವೆ.ನ.1ರಂದು ಕರ್ನಾಟಕದಲ್ಲಿ ಕನ್ನಡ ರಾಜೋತ್ಸೋವ ಆಚರಿಸಲಾಗುತ್ತಿದೆ. ಕನ್ನಡ ಭಾಷಾವಾರು 5 ಪ್ರಾಂತ್ಯಗಳಾಗಿ ವಿಂಗಡಿಸಿದ ಮುಂಬೈ, ಹೈದರಾಬಾದ್, ಮದ್ರಾಸ್, ಕೊಡಗು, ನಿಜಾಮರ ಪ್ರಾಂತ್ಯವೆಂದು ಹಂಚಿಕೆಯಲ್ಲಿದ್ದ ಕನ್ನಡ ಭಾಷಿಗರ ಈ ಎಲ್ಲಾ ಪ್ರದೇಶಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಿ ನವಂಬರ್ 1 -1956 ರಂದು ಮೈಸೂರು ರಾಜ್ಯವೆಂದು ಹೆಸರಿಟ್ಟು ಸಂಭ್ರಮಿಸಿದ ಅವಿಸ್ಮರಣೀಯ ದಿನವನ್ನು ಕನ್ನಡ ರಾಜ್ಯೋತ್ಸವದ ಕನ್ನಡ ಹಬ್ಬವಾಗಿ ಅದ್ದೂರಿಯಾಗಿ ನಾಡಿನೆಲ್ಲೆಡೆ ಆಚರಿಸಲಾಗುತ್ತದೆ.ಕಪ್ಪು ಮಣ್ಣಿನ ನಾಡು ಕರುನಾಡು ಮೈಸೂರು ರಾಜ್ಯವಾಗಿ ಸ್ಥಾಪನೆಗೊಳ್ಳಲು ನಮ್ಮ ನಾಡಿನ ಹಿರಿಯರು ಸ್ವಾತಂತ್ರ್ಯ

ಭವಿಷ್ಯದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ನಶಿಸಿ ಹೋಗದಂತೆ ಕಾಪಾಡುವ ಜವಾಬ್ದಾರಿ ಸಮಸ್ತ ಕನ್ನಡಿಗರಲ್ಲಿರಲಿ! Read More »

ಬಸ್ಸಲ್ಲಿ ಮಹಿಳೆ ಅಸ್ವಸ್ಥಗೊಂಡು‌ ಆಸ್ಪತ್ರೆಯಲ್ಲಿ ಸಾವು

ಬಸ್ಸಲ್ಲಿ ಮಹಿಳೆಯೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ನಂತರ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಮೃತಪಟ್ಟ ಘಟನೆ ಅ.29 ರಂದು ನಡೆದಿದೆ.ಸಂಪಾಜೆಯಿಂದ ಸುಳ್ಯ ಕಡೆಗೆ ಬರುತ್ತಿರುವ ಬಸ್ಸು ದೊಡ್ಡಡ್ಕ ಬಳಿ ಬರುತ್ತಿರುವಾಗ ಕೊಯನಾಡಿನ ಕಮಲ ಎಂಬವರು ಕುಸಿದು ಬಿದ್ದರು.ಬಳಿಕ ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು.ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.ಮಕ್ಕಳಾದ ಜಯಶ್ರೀ, ಶೋಭಾ ಮತ್ತು ಹೇಮಂತ್ ಅಗಲಿದ್ದಾರೆ.

ಬಸ್ಸಲ್ಲಿ ಮಹಿಳೆ ಅಸ್ವಸ್ಥಗೊಂಡು‌ ಆಸ್ಪತ್ರೆಯಲ್ಲಿ ಸಾವು Read More »

ಸಂಸದ ಕ್ಯಾ. ಚೌಟ ಅ. 30 ರಂದು ಸಾರ್ವಜನಿಕರ ಭೇಟಿಗೆ ಲಭ್ಯ

ಮಂಗಳೂರು: ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಅಕ್ಟೋಬರ್ 30ರಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ಜನರು ತಮ್ಮ ಅಹವಾಲುಗಳೊಂದಿಗೆ ಗುರುವಾರ ಮಂಗಳೂರಿನ ಪಡೀಲ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಕ್ಯಾ. ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದು ಎಂದು ಸಂಸದ ಕ್ಯಾ. ಚೌಟ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸದ ಕ್ಯಾ. ಚೌಟ ಅ. 30 ರಂದು ಸಾರ್ವಜನಿಕರ ಭೇಟಿಗೆ ಲಭ್ಯ Read More »

ಮಂಡೆಕೋಲು : 21 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ , ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಅಕ್ಟೋಬರ್ 26 ರಂದು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಯೋಜನೆಯ ಅಜ್ಜಾವರ ವಲಯಕ್ಕೆ ಸಂಬಂಧಿಸಿದ ಮಂಡೆಕೋಲು ಗ್ರಾಮದ ನಾಲ್ಕು ಒಕ್ಕೂಟಗಳಾದ ಮಂಡೆಕೋಲು, ಕಲ್ಲಡ್ಕ-ಪೆರಾಜೆ, ಪೇರಾಲು ಹಾಗೂ ಪೇರಾಲು-ಅಂಬ್ರೋಟಿ-ಎ ಒಕ್ಕೂಟಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.ಆ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು.

ಮಂಡೆಕೋಲು : 21 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ , ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ Read More »

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮ ಹತ್ಯೆ

ಸುಳ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಜಟ್ಟಿಪಳ್ಳದ ಕಾನತ್ತಿಲ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ದುಗಲಡ್ಕದ ಕೇಶವ ಪೂಜಾರಿ ಎಂಬವರ ಮಗ ವೀಕ್ಷಿತ್(19) ಆತ್ಮಹತ್ಯೆಗೆ ಶರಣಾದವರು. ಇಂದು ಕಾಲೇಜಿನಲ್ಲಿ ಪರೀಕ್ಷೆ ಬರೆದು ರೂಂಗೆ ಬಂದ ವೀಕ್ಷಿತ್ ರೂಂನಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿದಿನ ವೀಕ್ಷಿತ್ ತನ್ನ ತಾಯಿ ಪದ್ಮನಿ ಅವರನ್ನು ಅವರು ಕೆಲಸ ಮಾಡುವ ಜಾಗದಿಂದ ಮನೆಗೆ ಕರೆದುಕೊಂಡು ಬರುತ್ತಿದ್ದರು.ಆದರೆ ಇಂದು ಬಂದಿರಲಿಲ್ಲ. ಕರೆ ಮಾಡಿದ್ರೆ ಕಾಲ್ ಕೂಡ ರಿಸೀವ್ ಮಾಡಿರಲಿಲ್ಲ..

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮ ಹತ್ಯೆ Read More »

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ಪಾಷಾಣಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ ಶ್ರೀ ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ (ಅಗೇಲು ಸೇವೆ) ಕಾರ್ಯಕ್ರಮ ಅ. ೨೮ರಂದು ಹಗಲು ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯವರು, ಜೀರ್ಣೋದ್ದಾರ ಸಮಿತಿ ಯವರು, ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ Read More »

error: Content is protected !!
Scroll to Top