Uncategorized

ಮರದಿಂದ ಬಿದ್ದು ವ್ಯಕ್ತಿ ಸಾವು

ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೊಡಿ ಅವರ ತಂದೆ ಸುಳ್ಯ ಪೈಚಾರ್ ಆರ್ತಾಜೆ ನಿವಾಸಿ ಉಮೇಶ್ ಗೌಡರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವಾಗ ಮರದಿಂದ ಬಿದ್ದು ಜಖಂಗೊಂಡು ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು.ಮರದಿಂದ ಬಿದ್ದು ಗಂಭೀರ ಗಾಯಗೊಂಡ ಉಮೇಶ್ ರವರನ್ನು ಚಿಕಿತ್ಸೆಗೆಂದು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಮರದಿಂದ ಬಿದ್ದು ವ್ಯಕ್ತಿ ಸಾವು Read More »

ಕುಂಬಳಚೇರಿ : ಪಾಣತ್ತೂರು -ಪೆರಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವ್ರದ್ದಿ ಯೋಜನೆಗೆ ಭೂ ಮಾಲೀಕರ ಒಪ್ಪಿಗೆ ಪಡೆಯು ಸಭೆ

ಪೆರಾಜೆ ಗ್ರಾಮದ ಕುಂಬಳಚೇರಿ ಸಹಕಾರಿ ಸಭಾ ಭವನದಲ್ಲಿ ಪಾಣತ್ತೂರು-ಕಲ್ಲಪಳ್ಳಿ, ಬಡ್ಡಡ್ಕ, ಕೂರ್ನಡ್ಕ, ಕುಂದಲ್ಪಾ ಡಿ, ಮಾರ್ಗವಾಗಿ ಕುಂಬಳಚೇರಿ ಮುಖಾಂತರ ಕಾಸ್ಪಾಡಿ ಎನ್ನುವಲ್ಲಿ 275 ನೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನಿರೀಕ್ಷಿತ ಅಂತರ್ ರಾಜ್ಯ ದ್ವಿಪಥ ರಸ್ತೆ ನಿರ್ಮಾಣದ ಗುರಿ ಹೊಂದಿರುವ ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿ ಕರೆದ ಸಭೆ ಕರೆಯಲಾಗಿತ್ತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಅವರು ಈಗಿರುವ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಪರಿವರ್ತನೆ ಮಾಡಿದಲ್ಲಿ ಪೆರಾಜೆ ಗ್ರಾಮ ಅಭಿವೃದ್ಧಿ

ಕುಂಬಳಚೇರಿ : ಪಾಣತ್ತೂರು -ಪೆರಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವ್ರದ್ದಿ ಯೋಜನೆಗೆ ಭೂ ಮಾಲೀಕರ ಒಪ್ಪಿಗೆ ಪಡೆಯು ಸಭೆ Read More »

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆ

ಸುಳ್ಯ: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆಯಾಗಿದ್ದಾರೆ.ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪೂಜಾಶ್ರೀ ವಿತೇಶ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಜೊತೆ ಕಾರ್ಯದರ್ಶಿಯಾಗಿ ಜೆ.ಕೆ.ರೈ, ಕೋಶಾಧಿಕಾರಿಯಾಗಿ ಮಿಥುನ್ ಕರ್ಲಪ್ಪಾಡಿ ಆಯ್ಕೆಯಾದರು.ನಿರ್ದೇಶಕರಾಗಿ ಕೃಷ್ಣ ಬೆಟ್ಟ , ಶರೀಫ್ ಜಟ್ಟಿಪಳ್ಳ, ತೇಜೆಶ್ವರ ಕುಂದಲ್ಪಾಡಿ, ಗಿರೀಶ್ ಅಡ್ಪಂಗಾಯ, ಶಿವಪ್ರಸಾದ್ ಕೇರ್ಪಳ, ದಯಾನಂದ ಕಲ್ನಾರ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಲೋಕೇಶ್

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆ Read More »

ಅಡ್ತಲೆಯಲ್ಲಿ ಮುಂದುವರಿದ ಕಾಡಾನೆ ದಾಳಿ,ಆರ್ಥಿಕ ನಷ್ಟಕೊಳಗಾದ ರೈತರು

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ತೋಟಗಳಿಗೆ ಕಾಡಾನೆಗಳ ದಾಳಿ ಮುಂದು ವರಿದಿದ್ದು ಬೆಳೆ ನಾಶವಾದ ಘಟನೆ ಮತ್ತೆ ಶನಿವಾರ ವರದಿಯಾಗಿದೆ.ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಗಳನ್ನು‌ ನಾಶಪಡಿಸಿದ ಘಟನೆ ವರದಿಯಾಗಿದೆ.ಅಡ್ತಲೆ ಯಲ್ಲಿ ದಿನಕೊಂದು ಕಡೆ ಸತತವಾಗಿ ಮೂರು ನಾಲ್ಕು ತಿಂಗಳುಗಳುಗಳಿಂದ ಆನೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿವೆ.ಶನಿವಾರ ಅಡ್ತಲೆ ಯ ಕಿನಾಲ ಮೋಹನ್ ಅವರ ಆನೆ ಓಡಿಸುವ ಯಂತ್ರದ ಹತ್ತಿರ ಮಾತ್ರ ಬಾರದೆ , ತೋಟದ ಎಲ್ಲಾ ಕಡೆ ಒಡಾಡಿ ಒಂಟಿ ಸಲಗ

ಅಡ್ತಲೆಯಲ್ಲಿ ಮುಂದುವರಿದ ಕಾಡಾನೆ ದಾಳಿ,ಆರ್ಥಿಕ ನಷ್ಟಕೊಳಗಾದ ರೈತರು Read More »

ಸಮೀಕ್ಷೆ ವೇಳೆ ಅರೆಭಾಷೆ ಎಂದು ನಮೂದಿಸಲು ನಿರ್ಧಾರ

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಜಾತಿ ಕಾಲಂನಲ್ಲಿ GOWDA, ಉಪ ಜಾತಿ ಕಾಲಂನಲ್ಲಿ ಅರೆಭಾಷೆ ಗೌಡ, ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದು ಮಾಡುವಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಬೆಂಗಳೂರಿನ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿರವರು ಈ ವಿಷಯಗಳಿಗೆ

ಸಮೀಕ್ಷೆ ವೇಳೆ ಅರೆಭಾಷೆ ಎಂದು ನಮೂದಿಸಲು ನಿರ್ಧಾರ Read More »

ಬಿಎಸ್‍ಎಫ್‌ಗೆ ಆಯ್ಕೆಯಾದ ಸುಶ್ಮಿತಾಗೆ ಅರೆಭಾಷೆ ಅಕಾಡೆಮಿಯಿಂದ ಗೌರವ

ಭಾರತೀಯ ಗಡಿರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರ್‌ಪಣೆಯ ಅರೆಭಾಷಿಕ ಯುವತಿ ಕುಮಾರಿ ಸುಶ್ಮಿತಾ ಎಂ. ಎ. ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ ಶುಭ ಹಾರೈಸಿದರು. ಇವರಿಗೆ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ ಸಹಕರಿಸಿದರು. ಸದಸ್ಯರಾದ ಚಂದ್ರಶೇಖರ ಪೇರಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಶ್ಮಿತಾರ ಸಾಧನೆಯನ್ನು

ಬಿಎಸ್‍ಎಫ್‌ಗೆ ಆಯ್ಕೆಯಾದ ಸುಶ್ಮಿತಾಗೆ ಅರೆಭಾಷೆ ಅಕಾಡೆಮಿಯಿಂದ ಗೌರವ Read More »

ಗಣಪತಿ ಶೋಭಾಯಾತ್ರೆ ವೇಳೆ ಟ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು

ಗಣಪತಿ ಶೋಭಾಯಾತ್ರೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್‌ನಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹುಣುಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆಯಲ್ಲಿ ರವಿವಾರ ರಾತ್ರಿ ನಡೆದಿದೆ.ಆಟೋ ರಾಜು(34) ಸಾವನ್ನಪ್ಪಿದ ವಕ್ತಿ ಎಂದು ಗುರುತಿಸಲಾಗಿದೆ, ಪತ್ನಿ, ಎರಡು ಹೆಣ್ಣು, ಗಂಡು ಮಗು ಸೇರಿದಂತೆ ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಎರಡು ಕಡೆ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಗ್ರಾಮಸ್ಥರು ವಿಸರ್ಜನೆಗಾಗಿ ಮೆರವಣಿಗೆ ಮೂಲಕ ಟ್ರ್ಯಾಕ್ಟರ್ ಗಳಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಮನೆ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ನಲ್ಲಿದ್ದ ಆಟೋರಾಜು

ಗಣಪತಿ ಶೋಭಾಯಾತ್ರೆ ವೇಳೆ ಟ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು Read More »

ಪೇರಡ್ಕ ಗೂನಡ್ಕ ಮದ್ರಸಾದಲ್ಲಿ ಮೀಲಾದ್ ಫೆಸ್ಟ್ ಪ್ರಯುಕ್ತ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ

ಸಂಪಾಜೆ :ಗೂನಡ್ಕ ಪೆರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾ ಗೂನಡ್ಕ ಇದರ ಮೀಲಾದ್ ಫೆಸ್ಟ್ ‘ ಮಹಬ್ಬಃ’25’ ಭಾಗವಾಗಿ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ ‘ ವಿಂಟೇಜ್ ಫುಡ್ ಫೆಸ್ಟ್ 2025’ ಯಶಸ್ವಿಯಾಗಿ ನಡೆಯಿತು. ಅಹ್ಮದ್ ನ‌ಈಂ ಫೈಝಿ ಅಲ್ ಮ‌ಅಬರಿ ಪೇರಡ್ಕ ಆಹಾರ ಮೇಳಕ್ಕೆ ಚಾಲನೆ ನೀಡಿದರು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್, ಎಂ.ಆರ್.ಡಿ.ಎ ಪೇರಡ್ಕ ಅಧ್ಯಕ್ಷ ಜನಾಬ್ ಜಿ.ಕೆ ಹಮೀದ್

ಪೇರಡ್ಕ ಗೂನಡ್ಕ ಮದ್ರಸಾದಲ್ಲಿ ಮೀಲಾದ್ ಫೆಸ್ಟ್ ಪ್ರಯುಕ್ತ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ Read More »

ಸುಳ್ಯ : ರೈತರಿಗೆ ಮಲ್ಲಿಗೆ ಕೃಷಿ ತರಬೇತಿ

ಸುಳ್ಯ: ಆಗಸ್ಟ್ 29 ರಂದು ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ನೇ ದಿನದ ಆತ್ಮ ಯೋಜನೆಯಡಿ ಆಸಕ್ತ ರೈತರಿಗೆ ಮಲ್ಲಿಗೆ ಕೃಷಿಯ ಬಗ್ಗೆ ತರಬೇತಿಯು ನಡೆಯಿತು. ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ ಆರ್ ಎಲ್ ಎಂ ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾರವರು ಮಲ್ಲಿಗೆ ಕೃಷಿಯು ಮಹಿಳೆಯರಿಗೆ ಉತ್ತಮ ಆದಾಯ ತರಬಲ್ಲ ಉದ್ಯೋಗವಾಗಿದೆ. ಮನೆಯಲ್ಲೇ ಇರುವ ಮಹಿಳೆಯರು ಮಲ್ಲಿಗೆ ಕೃಷಿಯನ್ನು ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬಹುದು. ಉತ್ತಮವಾಗಿ ಮಲ್ಲಿಗೆ

ಸುಳ್ಯ : ರೈತರಿಗೆ ಮಲ್ಲಿಗೆ ಕೃಷಿ ತರಬೇತಿ Read More »

ಭಾರತೀಯ ಗಡಿ ರಕ್ಷಣಾ ಪಡೆ ಗೆ ಆಯ್ಕೆಯಾದ ಅರಂತೋಡಿನ ಹೆಮ್ಮೆಯ ಪುತ್ರಿ ಸುಶ್ಮಿತಾ ಅಡ್ತಲೆಯವರಿಗೆ ಸನ್ಮಾನ

ಭಾರತೀಯ ಗಡಿ ರಕ್ಷಣಾ ಪಡೆ ಗೆ ಆಯ್ಕೆಯಾದ ಅರಂತೋಡಿನ ಹೆಮ್ಮೆಯ ಪುತ್ರಿ ಸುಶ್ಮಿತಾ ಅಡ್ತಲೆ ರವರನ್ನು ಅನ್ವರ್ ಹುಧಾ ಯಂಗ್ ಮೆನ್ಸ್ ಅಸೋಷಿಯೇಷನ್ ಮತ್ತು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅರಂತೋಡು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್, ಜಯಪ್ರಕಾಶ್ ರವರು ಸುಶ್ಮಿತಾ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಜಮಾ ಅತ್ ಅಧ್ಯಕ್ಷರ ಅಶ್ರಫ್ ಗುಂಡಿ, ಎ ಹೆಚ್ ವೈ ಎ ಕಾರ್ಯದರ್ಶಿ ಪಸಿಲು, ಎಸ್ ಕೆ

ಭಾರತೀಯ ಗಡಿ ರಕ್ಷಣಾ ಪಡೆ ಗೆ ಆಯ್ಕೆಯಾದ ಅರಂತೋಡಿನ ಹೆಮ್ಮೆಯ ಪುತ್ರಿ ಸುಶ್ಮಿತಾ ಅಡ್ತಲೆಯವರಿಗೆ ಸನ್ಮಾನ Read More »

error: Content is protected !!
Scroll to Top