Uncategorized

ಕಾಡು ಹಂದಿ ತಿವಿದು ವ್ಯಕ್ತಿ ಗಂಭೀರ

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಪರಿಸರದಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಅರಸಿನಮಕ್ಕಿಯ ಹತ್ಯಡ್ಕ ಗ್ರಾಮದ ಒಡೈರೆ ಎಂಬಲ್ಲಿ ಕಾಡು ಹಂದಿ ತಿವಿದು ವ್ಯಕ್ತಿಗೆ ಗಂಭೀರ ಗಾಯವಾಗಿದೆ. ರೆಖ್ಯೆ ಗ್ರಾಮದ ಬೂಡು ನಿವಾಸಿ ಬಾಲಕೃಷ್ಣ ಗಾಯಗೊಂಡ ವ್ಯಕ್ತಿ. ಬಾಲಕೃಷ್ಣ ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಆಸ್ಪತ್ರೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.

ಕಾಡು ಹಂದಿ ತಿವಿದು ವ್ಯಕ್ತಿ ಗಂಭೀರ Read More »

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣ, ಎಸ್.ಐ.ಟಿಗೆ ಹಸ್ತಾಂತರ

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬ ದೂರು ನೀಡಿ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ಸಂಬಂಧ ಇದೀಗ ವಿಶೇಷ ತನಿಖಾ ತಂಡ(SIT) ಕ್ಕೆ ವರ್ಗಾಯಿಸಿ ಜುಲೈ 19 ರಂದು ಮಾನ್ಯ ಕರ್ನಾಟಕ ಸರ್ಕಾರವು ಅದೇಶಿಸಿರುತ್ತದೆ.ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.ವಿಶೇಷ ತನಿಖಾ ಸಂಸ್ಥೆ (SIT) ಯ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣ, ಎಸ್.ಐ.ಟಿಗೆ ಹಸ್ತಾಂತರ Read More »

ಕೇವಲ 4 ಗಂಟೆ 50 ನಿಮಿಷದಲ್ಲಿ ನವಜಾತ ಶಿಶುವವನ್ನು ಮಂಗಳೂರುನಿಂದ ಬೆಂಗಳೂರಿಗೆ ತಲುಪಿಸಿದ ಸುಳ್ಯದ ಆ್ಯಂಬುಲೆನ್ಸ್ ಚಾಲಕ ಹನೀಫ್

ಮಂಗಳೂರಿನಿಂದ ಬೆಂಗಳೂರಿಗೆ ನವಜಾತ ಶಿಶುವನ್ನು ಚಿಕಿತ್ಸೆಗೆಂದುವ ಆ್ಯಂಬುಲೆನ್ಸ್‌ನಲ್ಲಿ ಸುಳ್ಯದ ಚಾಲಕ ಕೇವಲ 4 ಗಂಟೆ 50 ನಿಮಿಷದಲ್ಲಿ ಕರೆದೊಯ್ದು‌ ಹೆತ್ತವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಸುಳ್ಯದ ಸುಳ್ಯದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಹನೀಫ್, ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ 15 ದಿನದ ಶಿಶುವನ್ನು ತುರ್ತು ಚಿಕಿತ್ಸೆಗೆ ಕರೆದೊಯ್ದರು. ಈ ನವಜಾತು ಶಿಶು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು.ವೈದ್ಯರು ಆದಷ್ಟು ತುರ್ತಾಗಿ ಮಗುವನ್ನು ಕರೆದೊಯ್ಯುವಂತೆ ಸೂಚಿಸಿದಾಗ, ಅದರ ಪೋಷಕರು ಆ್ಯಂಬುಲೆನ್ಸ್‌ಗೆ ಮನವಿ ಮಾಡಿದರು. ಕೂಡಲೇ

ಕೇವಲ 4 ಗಂಟೆ 50 ನಿಮಿಷದಲ್ಲಿ ನವಜಾತ ಶಿಶುವವನ್ನು ಮಂಗಳೂರುನಿಂದ ಬೆಂಗಳೂರಿಗೆ ತಲುಪಿಸಿದ ಸುಳ್ಯದ ಆ್ಯಂಬುಲೆನ್ಸ್ ಚಾಲಕ ಹನೀಫ್ Read More »

ಪೆರಾಜೆ : ಪೀಚೆ ಮನೆ ದೀಕ್ಷಿತ್ ನಿಧನ

ಪೆರಾಜೆ ಗ್ರಾಮದ ಪೀಚೆ ಮನೆ ಪುರುಶೋತ್ತಮ ಗೌಡರ ಮಗ ದೀಕ್ಷಿತ್ (30 ವರ್ಷ) ಜು.18 ರಂದು ನಿಧನರಾದರು. ಅಸೌಖ್ಯಕೊಳದ ದೀಕ್ಷಿತ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಸಾಗಿಸುತ್ತಿದ್ದಾಗ ಸಾವನ್ನಪ್ಪಿದರು‌.ಮ್ರತರು ತಾಯಿ ರಾಧಮ್ಮ,ಸಹೋದರ ಕಿಶೋರ,ಸಹೋದರಿ ಶ್ರತಿ ಮತ್ತು ಕುಟುಂಬಸ್ಥರನ್ನು ಬಂಧು ಬಳಗವನ್ನು ಅಗಲಿದ್ದಾರೆ.

ಪೆರಾಜೆ : ಪೀಚೆ ಮನೆ ದೀಕ್ಷಿತ್ ನಿಧನ Read More »

ಖ್ಯಾತ ನಿರೂಪಕಿ ಅನಶ್ರೀಯವರ ಮದುವೆಗೆ ದಿನ ನಿಗದಿ,ಅನುಶ್ರೀಯವರ ಕೈ ಹಿಡಿಯಲಿರುವ ಮಂಗಳೂರಿನ‌ ಆ ಹುಡುಗ ಯಾರು ಗೊತ್ತಾ?

ಖ್ಯಾತ ದೂರದರ್ಶನ ನಿರೂಪಕಿ ಅನುಶ್ರೀ ಯವರ ಮದುವೆ ಕೊನೆಗೂ ಪಿಕ್ಸ್ ಆಗಿದೆಯಾಂತೆ. ಮದುವೆ ಯಾವಾಗ ಯಾವಾಗ ಎನ್ನುತ್ತಿದ್ದವರಿಗೆ ಉತ್ತರ ಕೊಡೋದಕ್ಕೆ ಸಿದ್ಧರಾಗಿದ್ದಾರೆ.ಆಗಸ್ಟ್ 28 ರಂದು ಅನುಶ್ರೀ ಮದುವೆ ಎಂಬ ಮಾಹಿತಿ ಸದ್ಯ ಅವರ ಆಪ್ತರಿಂದ ಹೊರ ಬಿದ್ದಿದೆ.ಮಂಗಳೂರು ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ರೋಷನ್‌ ಅವರನ್ನು ಅನುಶ್ರೀ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ದಾಗೆ ಇದು ಪಕ್ಕಾ ಅರೆಂಜ್ ಮ್ಯಾರೇಜ್ ಅಂತೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ

ಖ್ಯಾತ ನಿರೂಪಕಿ ಅನಶ್ರೀಯವರ ಮದುವೆಗೆ ದಿನ ನಿಗದಿ,ಅನುಶ್ರೀಯವರ ಕೈ ಹಿಡಿಯಲಿರುವ ಮಂಗಳೂರಿನ‌ ಆ ಹುಡುಗ ಯಾರು ಗೊತ್ತಾ? Read More »

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಗೆ ಪರಿಹಾರ ನೀಡಲು ಮನವಿ

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಎಂಬಲ್ಲಿ ಕಾಡಾನೆಗಳು ತಿರುಗಾಡುತ್ತಿದ್ದು ಅದನ್ನು ಕಾಡಿಗೆ ಓಡಿಸುವ ಸಂದರ್ಭದಲ್ಲಿ, ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ(60) ಎಂಬವರು ಆನೆ ದಾಳಿಗೆ ಜುಲೈ 17 ರಂದು ಬಲಿಯಾಗಿದ್ದು. ಈ ಬಗ್ಗೆ ಜುಲೈ 17 ರಂದು ಸಂಜೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ ಅವರನ್ನು ಭೇಟಿ ಮಾಡಿ “ಆನೆ-ಮಾನವ ಸಂಘರ್ಷದಿಂದ, ತಾಲೂಕಿನಲ್ಲಿ ಹೆಚ್ಚಿನ ನಷ್ಟ ಹಾಗೂ ಸಾವು ಸಂಭವಿಸುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಸಕಲ ರೀತಿಯ, ಪ್ರಯತ್ನ

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಗೆ ಪರಿಹಾರ ನೀಡಲು ಮನವಿ Read More »

ಸಹೋದರನಿಂದ ಸಹೋದರನಿಗೆ ಕತ್ತಿಯಿಂದ ಹಲ್ಲೆ

ಸಹೋದರ ವ್ಯಕ್ತಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ನಡೆದಿದೆ. ಕಡಬ ಕೌಕ್ರಾಡಿ ಗ್ರಾಮದ ನಿವಾಸಿ ರಾಜಶೇಖರ (37) ಹಲ್ಲೆಗೆ ಒಳಗಾದವರು. ಅವರ ಸಹೋದರ ಜಯರಾಜ್ ಹಲ್ಲೆ ನಡೆಸಿದವರು.ರಾಜಶೇಖರ (37) ಅವರು ದಿನಾಂಕ: 16.07.2025 ರಂದು ರಾತ್ರಿ ಸಮಯ ತನ್ನ ಮನೆಯಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿದ್ದಾಗ, ಸ್ಥಳಕ್ಕೆ ಬಂದ ಆರೋಪಿ ರಾಜಶೇಖರ ಅವರ ಸಹೋದರ ಮನೋಜ್‌ಕುಮಾರ್ ಎಂಬವರು ರಾಜಶೇಖ‌ರ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.

ಸಹೋದರನಿಂದ ಸಹೋದರನಿಗೆ ಕತ್ತಿಯಿಂದ ಹಲ್ಲೆ Read More »

ಅಗ್ನಿ ದುರಂತಕ್ಕೆ ತುತ್ತಾದ ಆರಂತೋಡು ಘನ ತಾಜ್ಯ ಘಟಕ ಕ್ಕೆ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರಿಂದ ರೂ 5ಲಕ್ಷ ಅನುದಾನ ಘೋಷಣೆ

ರಾಜ್ಯಕ್ಕೆ ಮಾದರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕ ( ಸ್ವಚ್ಛ ಸಂಕೀರ್ಣ )ಜುಲೈ 9ರಂದು ಆಕಸ್ಮಿಕ ಅಗ್ನಿ ದುರಂತಕ್ಕೆ ತುತ್ತಾಗಿ ಸಂಪೂರ್ಣ ನಾಶಗೊಂಡಿದ್ದು. ಅದರ ಪುನರ್ ನಿರ್ಮಾಣಕ್ಕೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರುರವರು ತಕ್ಷಣಕ್ಕೆ ರೂ 5ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ್ದು. ಉಳಿದ ಅನುದಾನಕ್ಕೆ ಸ್ವಚ್ಛ ಭಾರತ್ ಮಿಷನ್ ಅನುದಾನ ಮುಖಾಂತರ ಬಿಡುಗಡೆಗೆ ಪ್ರಯತ್ನಸುವುದಾಗಿ ತಿಳಿಸಿದ್ದಾರೆ.

ಅಗ್ನಿ ದುರಂತಕ್ಕೆ ತುತ್ತಾದ ಆರಂತೋಡು ಘನ ತಾಜ್ಯ ಘಟಕ ಕ್ಕೆ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರಿಂದ ರೂ 5ಲಕ್ಷ ಅನುದಾನ ಘೋಷಣೆ Read More »

ಕಾಡಾನೆ ತಿವಿದು ವ್ಯಕ್ತಿ ಸಾವು

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅದನ್ನು ಓಡಿಸುವ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಆನೆಯು ಸೋಂಡಿಲಿನಿಂದ ತಿವಿದು ಗಂಭೀರ ಗಾಯಗೊಳಿಸಿ ಆತ ಮೃತಪಟ್ಟ ಘಟನೆ ಜು. 17 ರಂದು ನಡೆದಿದೆ.ಬೆಳ್ಳಂಬೆಳ್ಳಗೆ ಎರಡು ಆನೆಗಳು ಗೇರು ಪ್ಲಾಂಟೇಶನ್ ನಲ್ಲಿ ತಿರುಗಾಡುತ್ತಿದ್ದು ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಆನೆ ಓಡಿಸುವ ಸಂದರ್ಭದಲ್ಲಿ ಆನೆಯು ತಿರುಗಿ ಬಂದು ಬಾಲಕೃಷ್ಣ ಶೆಟ್ಟಿ ಎಂಬವರಿಗೆ ಸೊಂಡಿಲಿನಿಂದ ತಿವಿದು, ಗಂಭೀರ

ಕಾಡಾನೆ ತಿವಿದು ವ್ಯಕ್ತಿ ಸಾವು Read More »

ಹೃದಯಾಘಾತದಿಂದ ಯುವಕ ಸಾವು

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗೂಡಿಂಜ ನಿವಾಸಿ ರಾಮಣ್ಣ ನಾಯ್ಕ ರ ಪುತ್ರ ದಿನೇಶ್ ನಾಯ್ಡ್ ರವರು ಹೃದಯಾಘಾತದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಮೃತರು ತಂದೆ ರಾಮಣ್ಣ ನಾಯ್ಕ, ತಾಯಿ ಶ್ರೀಮತಿ ಕಾವೇರಿ ಸಹೋದರ ರಾಜೇಶ್ ನಾಯ್ಕ ಮತ್ತು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಯುವಕ ಸಾವು Read More »

error: Content is protected !!
Scroll to Top