Uncategorized

ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ರಾಜ್ಯ ಕಾನೂನು ಸಚಿವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ರಾಜ್ಯ ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ ಅವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ.ಸುಳ್ಯ ನ್ಯಾಯಲಯವು 50 ವರುಷಗಳ ಹಳೆಯದಾಗಿದ್ದು ಹಂಚಿನ ಮೇಲ್ಟಾವಣಿಯಲ್ಲಿ ಕಲಾಪಗಳು ನಡೆಯುತ್ತಿದೆ. ಮಳೆಗಾಲದಲ್ಲಿ ಹಲವಾರು ತೊಂದರೆಗಳನ್ನು ಮನಗಂಡು ನೂತನ ಸಂಕೀರ್ಣದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ಮನವಿ ಸ್ವೀಕರಿಸಿದ ಸಚಿವರು ಶೀಘ್ರವಾಗಿ ಸರಕಾರದಿಂದ ಅನುದಾನವನ್ನು ಬಿಡುಗಡೆ ಮಾಡುತ್ತೆನೆಂದು ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ರಾಜ್ಯ ಕಾನೂನು ಸಚಿವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ Read More »

ಅರಂತೋಡು : ಭಾರತೀಯ ಗಡಿಭದ್ರತಾ ಪಡೆಗೆ ಸುಶ್ಮಿತಾ ಮೇಲಡ್ತಲೆ ಆಯ್ಕೆ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಸುಶ್ಮಿತಾ ಎಂ.ಎ ಗಡಿ ಭಾರತೀಯ ಭದ್ರತಾ ಪಡೆಗೆ ಆಯ್ಕೆಗೊಂಡಿದ್ದಾರೆ.ಸ್ಟಾಫ್ ಸೆಲೆಕ್ಷನ್ ಕಮಿಷನ್‌ ನಡೆಸುವ ಎಸ್‌.ಎಸ್.ಸಿ ಜಿ.ಡಿ ಪರೀಕ್ಷೆಯಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.ಇವರು ಅರಂತೋಡು ಗ್ರಾಮದ ಅಡ್ತಲೆ ದಿ.ನಾಗಪ್ಪ ಗೌಡ ಎಂ.ಎಂ ಮತ್ತು ಜಾನಕಿ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ, ಪಿ.ಯು.ಸಿಯನ್ನು ಎನ್‌.ಎಂ.ಪಿ.ಯು ಅರಂತೋಡಿನಲ್ಲಿ ಪೂರೈಸಿ , ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ

ಅರಂತೋಡು : ಭಾರತೀಯ ಗಡಿಭದ್ರತಾ ಪಡೆಗೆ ಸುಶ್ಮಿತಾ ಮೇಲಡ್ತಲೆ ಆಯ್ಕೆ Read More »

ದ.ಕ ಜಿಲ್ಲೆಯಲ್ಲಿ ಮಾದರಿ ಕಾಫಿ ಕ್ರಷಿ ಮಾಡೋಣ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದ.ಕ ಜಿಲ್ಲೆಯಲ್ಲಿ ಅಡಿಕೆಯೊಂದಿಗೆ ಕಾಫಿ ಬೆಳೆದು ಮಾದರಿ‌ ಕಾಫಿ‌ ಕ್ರಷಿ‌ ಮಾಡೋಣ ಎಂದು‌ ಸಂಸದ ಕ್ಯಾಪ್ಟನ್ ಬ್ರಿಜೇಶ್ ಔಟ ಹೇಳಿದರು.ಅವರು‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನವಾಗಿ ಕಾಪಿಕೊ ಉದ್ಘಾಟನೆ ಹಾಗೂ ಕಾಫಿ ಬೆಳೆ ಉತ್ತೇಜನ ಕಾರ್ಯಗಾರಕ್ಕೆ ಆ.೨೫ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.ಸುಳ್ಯ ಭಾಗದಲ್ಲಿ ಈಗಾಗಲೇ ಅಡಿಕೆ ಹಳದಿ ರೋಗದಿಂದ ಕೃಷಿಕರು ಕಂಗೆಟ್ಟಿದ್ದು, ಕೃಷಿಕರು ಅಡಿಕೆ ಜೊತೆಗೆ ಉಪಬೆಳೆಯಾಗಿ ಕಾಫಿಯನ್ನು ಬೆಳೆ ಉತ್ತೇಜಿಸುವ ಸಲುವಾಗಿ ಕಾಪಿಕೋ ಉದ್ಘಾಟನೆಯಾಗಿದೆ.ಅಡಿಕೆ

ದ.ಕ ಜಿಲ್ಲೆಯಲ್ಲಿ ಮಾದರಿ ಕಾಫಿ ಕ್ರಷಿ ಮಾಡೋಣ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ Read More »

(ಪ್ರಕೃತಿ) ಸಸ್ಯ ಶ್ಯಾಮಲೆ ಬಿಟ್ಟರ್ ಜಿಂಜರ್ ಶ್ಯಾಂಪು..!

ಜಗತ್ತಿನಲ್ಲಿಯೇ ಪ್ಯೂರ್ ಶಾಂಪೂ ಅಂದರೆ ಇದೆ ಹೂವಿನಿಂದ ಬರೋ ಜಲ್ ನಮ್ಮ ಪ್ರಕೃತಿಯಲ್ಲಿ ಎಲ್ಲವೂ ಇದೆ ತಾರುಣ್ಯದ ಜೊತೆ ಅವುಗಳಿಗೂ ಭಾವನೆಗಳಿವೆ ಅದ್ಭುತವಾದ ಹೂ ದೃಶ್ಯ ಕಹಿ ಶುಂಠಿ ನರಿ ಕಬ್ಬು ಸಸ್ಯಗಳು ನೈಸರ್ಗಿಕ ಶಾಂಪೊವನ್ನು ಉತ್ಪಾದಿಸುತ್ತವೆ. ಇದು ಸಾಮಾನ್ಯ ಗಿಡವಲ್ಲ ಈ ಗಿಡದ ಹೆಸರು ಬಿಟ್ಟರ್ ಜಿಂಜರ್ ಇದನ್ನು ಹಿಚುಕುದರಿಂದ ಈ ರೀತಿಯ ದ್ರವ ಬರುತ್ತದೆ.ಆ ದ್ರವವು ಒಂದು ರೀತಿಯ ಶಾಂಪೂ ರೀತಿಯಕೆಲಸ ಮಾಡುತ್ತದೆ ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಕೆಮಿಕಗಳು ಮಿಶ್ರಣ ವಾಗಿರುವುದಿಲ್ಲ ಮತ್ತು

(ಪ್ರಕೃತಿ) ಸಸ್ಯ ಶ್ಯಾಮಲೆ ಬಿಟ್ಟರ್ ಜಿಂಜರ್ ಶ್ಯಾಂಪು..! Read More »

ಭೀಮರಾವ್ ಸಾಹಿತ್ಯಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿ : ಡಾ.ಪ್ರಭಾಕರ ಶಿಶಿಲ

ಸಾಹಿತ್ಯದಲ್ಲಿ ಮುಂದುವರೆದರೇ ಭೀಮರಾವ್‌ ವಾಷ್ಠರ್‌ ಉತ್ತಮ ಸಾಹಿತಿಯಾಗುತ್ತಿದ್ದರು. ಇನ್ನೂ ಇತರ ಕ್ಷೇತ್ರಗಳ ಬಿಟ್ಟು ಸಾಹಿತಿಯಾಗಿ ಕವಿಯಾಗಿ ಹೆಚ್ಚು ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಲಿ ಅವರು ಸಾಹಿತ್ಯದ ಬೆಳವಣಿಗೆಗಾಗಿ ತ್ಯಾಗ ಮಾಡಿದ ವ್ಯಕ್ತಿ ಎಂದು ಹಿರಿಯ ಲೇಖಕ ಡಾ.ಪ್ರಭಾಕರ ಪ್ರಭಾಕರ ಶಿಶಿಲ ಹೇಳಿದರು.ಅವರು ಸುಳ್ಯದಲ್ಲಿ ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ನಡೆದ ಭೀಮರಾವ್ ವಾಷ್ಠರ್ ಉತ್ಸವದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದ ಸಂಘಟಕ, ಗಾಯಕ ಲಕ್ಷ್ಮಣ್ ಪೆರುಮಾಳ್

ಭೀಮರಾವ್ ಸಾಹಿತ್ಯಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿ : ಡಾ.ಪ್ರಭಾಕರ ಶಿಶಿಲ Read More »

ಆ.೨೫: ಸುಳ್ಯದಲ್ಲಿ ಕಾಪಿಕೊ ಉದ್ಘಾಟನೆ ಮತ್ತು ಕಾಫಿ ಬೆಳೆ ಉತ್ತೇಜನ ಕಾರ್ಯಗಾರ : ವೆಂಕಟ್ ವಳಂಬೆ

ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನವಾಗಿ ಕಾಪಿಕೊ ಉದ್ಘಾಟನೆ ಹಾಗೂ ಕಾಫಿ ಬೆಳೆ ಉತ್ತೇಜನ ಕಾರ್ಯಗಾರಕ್ಕೆ ಚಾಲನೆ ಆ.೨೫ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಸಂಸದ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ, ಕಾಫಿ ಬೆಳೆ ಉತ್ತೇಜನ ಕಾರ್ಯಗಾರ ಸಮಿತಿ ಸುಳ್ಯ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಬ್ರಿಜೇಶ್

ಆ.೨೫: ಸುಳ್ಯದಲ್ಲಿ ಕಾಪಿಕೊ ಉದ್ಘಾಟನೆ ಮತ್ತು ಕಾಫಿ ಬೆಳೆ ಉತ್ತೇಜನ ಕಾರ್ಯಗಾರ : ವೆಂಕಟ್ ವಳಂಬೆ Read More »

ಮಹೇಶ್ ಶೆಟ್ಟಿ ತಿಮ್ಮರೊಡಿಗೆ ಜಾಮೀನು ಮಂಜೂರು

ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಹಿರಿಯಡ್ಕ ಜೈಲಿನಲ್ಲಿರುವ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಶನಿವಾರ (ಆ.23) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಮಹೇಶ್ ಶೆಟ್ಟಿ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆಯನ್ನು ಆ. 23ರಂದು ಬೆಳಗ್ಗೆ 11ರಿಂದ ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ನಡೆದಿದ್ದು ಅರ್ಜಿ ವಿಚಾರಣೆ ವೇಳೆ ಸಹಾಯಕ ಸರಕಾರಿ ಅಭಿಯೋಕರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ

ಮಹೇಶ್ ಶೆಟ್ಟಿ ತಿಮ್ಮರೊಡಿಗೆ ಜಾಮೀನು ಮಂಜೂರು Read More »

ಹಿರಿಯ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತ ಕಾಟೂರು ಕೂಸಪ್ಪ ಗೌಡ ನಿಧನ

ತೊಡಿಕಾನ ಗ್ರಾಮದ ಹಿರಿಯ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತ ಕಾಟೂರು ಕೂಸಪ್ಪ ಗೌಡ ರವರು ಆ.23ರಂದು ತನ್ನ ಮನೆಯಲ್ಲಿ ನಿಧನರಾರು‌.ಅವರು ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು‌.ಮನೆಯವರನ್ನು ಬಂಧು ಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ. ಕಮ್ಯುನಿಸ್ಟ್ ಪಕ್ಷದಲ್ಲಿ ಅನೇಕ ವರ್ಷಗಳಿಂದ ಕಾರ್ಯಕರ್ತರಾಗಿ ಅವರು ದುಡಿದಿದ್ದರು.

ಹಿರಿಯ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತ ಕಾಟೂರು ಕೂಸಪ್ಪ ಗೌಡ ನಿಧನ Read More »

ಸುಳ್ಯ : ಪ್ರಥಮ ಬಾರಿಗೆ ಸುಳ್ಯದ ಕೃಷಿ ಸಖಿಯರಿಗೆ ಗೋಡಂಬಿ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸಾಮರ್ಥ್ಯವೃದ್ಧಿ ಸಬಲೀಕರಣಕ್ಕಾಗಿ ತರಬೇತಿ

ಗ್ರಾಮೀಣ ಭಾರತವನ್ನು ಸಬಲೀಕರಿಸುವ ಉದ್ದೇಶದಿಂದ ಭಾರತ ಸರ್ಕಾರವು 2024ರಲ್ಲಿ ಕೃಷಿ ಸಖಿ ಒಗ್ಗೂಡುವಿಕೆ ಕಾರ್ಯಕ್ರಮವನ್ನು (KSCP) ಪ್ರಾರಂಭಿಸಿದೆ. ಇದರ ಮುಖ್ಯ ಗುರಿ ಗ್ರಾಮೀಣ ಮಹಿಳೆಯರನ್ನು ಗುರುತಿಸಿ ಕೃಷಿ ಸಖಿಯರನ್ನಾಗಿ ರೂಪಿಸುವುದು ಮತ್ತು ಅವರಿಗೆ ಅರೆ-ವಿಸ್ತರಣಾ ಕಾರ್ಯಕರ್ತರಾಗಿ ತರಬೇತಿ ಹಾಗೂ ಪ್ರಮಾಣಪತ್ರ ನೀಡುವುದು. ಇವರು ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿ ಮತ್ತು ಸರ್ಕಾರದ ಇಲಾಖಾ ಅಧಿಕಾರಿಗಳು ಹಾಗೂ ರೈತರ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಮಹತ್ವದ ಪಾತ್ರವನ್ನು ಪರಿಗಣಿಸಿ, ಪುತ್ತೂರಿನ ಭಾ. ಕೃ. ಅನು. ಪ. – ಗೇರು

ಸುಳ್ಯ : ಪ್ರಥಮ ಬಾರಿಗೆ ಸುಳ್ಯದ ಕೃಷಿ ಸಖಿಯರಿಗೆ ಗೋಡಂಬಿ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸಾಮರ್ಥ್ಯವೃದ್ಧಿ ಸಬಲೀಕರಣಕ್ಕಾಗಿ ತರಬೇತಿ Read More »

ದಿನೇಶ ಊರುಬೈಲು ನಿಧನ

ಮಡಿಕೇರಿ ತಾಲೂಕು ಚೆಂಬು ಗ್ರಾಮದ ಊರುಬೈಲ ಶೇಷಪ್ಪ ನಾಯ್ಕ ರ ಪುತ್ರ ದಿನೇಶ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧಾನರಾದರು. ಮೃತರು ತಾಯಿ ಶಾರದ, ಸಹೋದರರಾದ ವಸಂತ, ವೆಂಕಟೇಶ, ಸಹೋದರಿ ಗೀತಾ ವಳಲಂಬೆಯವರನ್ನು ಅಗಲಿದ್ದಾರೆ.

ದಿನೇಶ ಊರುಬೈಲು ನಿಧನ Read More »

error: Content is protected !!
Scroll to Top