Uncategorized

ಅಕ್ರಮ ಜಾನುವಾರು ಸಾಗಾಟ ತಡೆಯುವಂತೆ ಮನವಿ

ಜಾನುವಾರುಗಳ ಅಕ್ರಮ ಸಾಗಾಟ,ಹಿಂಸತಾತ್ಮ ಸಾಗಾಟ, ಶೇಖರಣೆ ಮತ್ತು ಹತ್ಯೆಯನ್ನು ತಡೆಯುವಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಕಾರ್ಯಕರ್ತರು ಸುಳ್ಯ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಸೋಮಶೇಖ‌ರ್ ಪೈಕ, ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ, ಭಾನುಪ್ರಕಾಶ್ ಪೆರುಮುಂಡ, ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ಅಭಿಜಿತ್ ಸುಳ್ಯ, ಕಿರಣ್ ಸುಳ್ಯ, ನಿರ್ದೇಶ್ ಸುಳ್ಳಿ, ನಿಕೇಶ್, ಪ್ರಿತೇಶ್‌ ನಾರ್ಣಕಜೆ ಇತರರು ಉಪಸ್ಥಿತರಿದ್ದರು.

ಅಕ್ರಮ ಜಾನುವಾರು ಸಾಗಾಟ ತಡೆಯುವಂತೆ ಮನವಿ Read More »

ಸಂಪಾಜೆ : ಹೆರಿಗೆಯ ಬಳಿಕ ರಕ್ತ ಸ್ರಾವದಿಂದ ಮಹಿಳೆ ಸಾವು

ಹೆರಿಗೆಯ ಬಳಿಕ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಪಾಜೆ ಗ್ರಾಮದ ಬಾಬು ಎಂಬವರ ಪುತ್ರಿ, ನೂಜೋಡಿ ಮಾಪಾಲ ಮನೆ ನಿವಾಸಿ ಶೇಖರ ಮಲೆಕುಡಿಯರ ಪತ್ನಿ ಮಧುರಾ (29ವ) ಹೆರಿಗೆ ಬಳಿಕ ಅತೀಯಾದ ರಕ್ತ ಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆ.ಸಂಪಾಜೆ ಗ್ರಾಮದ ಕೊಯನಾಡು ಬಾಬು ಮಲೆಕುಡಿಯ ಮತ್ತು ಚಿನ್ನಮ್ಮ ದಂಪತಿ ಪುತ್ರಿಯಾದ ಮಧುರಾ ಆರು ವರ್ಷಗಳ ಹಿಂದೆ ಬೆಳ್ತಂಗಡಿಯ ನಾರಾವಿ ಗ್ರಾಮದ ನೂಜೋಡಿ ಮನೆ ನಿವಾಸಿ ಶೇಖರ ಮಲೆಕುಡಿಯ ಅವರೊಂದಿಗೆ ವಿವಾಹವಾಗಿದ್ದರು.ಮಧುರಾರಿಗೆ

ಸಂಪಾಜೆ : ಹೆರಿಗೆಯ ಬಳಿಕ ರಕ್ತ ಸ್ರಾವದಿಂದ ಮಹಿಳೆ ಸಾವು Read More »

ನಗರ ಪಂಚಾಯತ್ ಸದಸ್ಯ ನೆತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.ರಮೇಶ್ ರೈ ಅವರು ಇತ್ತೀಚಿಗೆ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.ಜೂ.5ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದ್ದು ಎಂದು ತಿಳಿದಿದ್ದು,

ನಗರ ಪಂಚಾಯತ್ ಸದಸ್ಯ ನೆತ್ರಾವತಿ ನದಿಗೆ ಹಾರಿ ಆತ್ಮಹತ್ಯೆ Read More »

ಪೇರಡ್ಕ : ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಮರ ತೆರವುಗೊಳಿಸಿದ ಊರವರು

ಸಂಪಾಜೆ ಗ್ರಾಮದ ಪೇರಡ್ಕ ಸೇತುವೆಯಲ್ಲಿ ಭಾರಿ ಮಳೆಗೆ ದೊಡ್ಡ ಗಾತ್ರದ ಮರ ಬುಡ ಸಮೇತ ಸೇತುವೆಯಲ್ಲಿ ಸಿಲುಕಿಕೊಂಡಿದ್ದು ಅದನ್ನು‌ ತೆರವುಗೊಳಿಸಲಾಯಿತು‌.ಮರ ತೆರವು ಕಾರ್ಯಚರಣೆಯಲ್ಲಿ ಸಿದ್ದಿಕ್ ಗೂನಡ್ಕ ಅಝೀಝ್ ಕೊಯ್ನ್ಯಾಡ್, ಉನೈಸ್ ಗೂನಡ್ಕ. ರಝಾಕ್ ಅಲೆಕ್ಕಾಡಿ ಉಸ್ಮಾನ್ ಪಾಂಡಿ,ಸಾಹಿಲ್ ದರ್ಕಸ್, ವಿಶ್ವನಾಥ್ ಪಂಚಮಿ, ಚಿದಾನಂದ ಮಾಸ್ತರ್, ಮೋಹನ್ ಆಚಾರಿ, ದನಪಾಲ ಪೇರಡ್ಕ, ಯೋಗೀಶ್ ದರ್ಕಸ್. ಭಾರದ್ವಾಜ್, ಸಾದುಮೊನ್ ಪೇರಡ್ಕ, ಅಶ್ರಫ್ ಪೇರಡ್ಕ ತೊಡಗಿಸಿಕೊಂಡರು.ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್,

ಪೇರಡ್ಕ : ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಮರ ತೆರವುಗೊಳಿಸಿದ ಊರವರು Read More »

ಆರ್.ಸಿ.ಬಿ‌ ಸಂಭ್ರಮಾಚರಣೆಯ ಕಾಲ್ತುಳಿತದಲ್ಲಿ ಉಪ್ಪಿನಂಗಡಿಯ ಯುವತಿ ಸಾವು

ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದು ಇವರಲ್ಲಿ ಉಪ್ಪಿನಂಗಡಿ ಇಳಂತಿಲ ಮೂಲದ ಓರ್ವ ಯುವತಿಯೂ ಸೇರಿದ್ದಾರೆ. 33 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.ಬೆಂಗಳೂರುನಲ್ಲಿ ಉದ್ಯಮಿಯಾಗಿರುವ ಉಪ್ಪಿನಂಗಡಿ ಇಳಂತಿಲ ಅಂಡೆತ್ತಡ್ಕ ಮೂಲದ ಕರುಣಾಕರ ಶೆಟ್ಟಿ ಮತ್ತು ಕಾರ್ಕಳ ಹೆಬ್ರಿಯ ಪೂಜಾ ಶೆಟ್ಟಿಯವರ ಪುತ್ರಿ ಚಿನ್ಮಯಿ ಶೆಟ್ಟಿ(20ವ.) ಕಾಲ್ತುಳಿತದಿಂದ ಸಾವಿಗೀಡಾಗಿದವರು ಎಂದು ತಿಳಿದು ಬಂದಿದೆ.18 ವರ್ಷದ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿ ಗೆದ್ದ

ಆರ್.ಸಿ.ಬಿ‌ ಸಂಭ್ರಮಾಚರಣೆಯ ಕಾಲ್ತುಳಿತದಲ್ಲಿ ಉಪ್ಪಿನಂಗಡಿಯ ಯುವತಿ ಸಾವು Read More »

ಸಂಪಾಜೆ ಗೂನಡ್ಕ ಪೇರಡ್ಕ ಜುಮ ಮಸೀದಿಗೆ ವಖ್ಫ್ ಇಲಾಖೆಯಿಂದ ಐದು ಲಕ್ಷ್ಮ ಬಿಡುಗಡೆ

ಸುಳ್ಯ ತಾಲ್ಲೂಕು ಸಂಪಾಜೆ ಗ್ರಾಮದ ಅತ್ಯಂತ ಪುರಾತನ ಇತಿಹಾಸ ಪ್ರಸಿದ್ಧ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿ ನವೀಕರಣಕ್ಕೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅದೀನದಲ್ಲಿ ಬರುವ ವಖ್ಫ್ ಇಲಾಖೆಯಿಂದ ವಸತಿ ಹಾಗು ವಖ್ಫ್ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಐದು ಲಕ್ಷ ರುಪಾಯಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮ ಮಸ್ಜಿದ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರ ಶಿಫಾರಸ್ಸಿನ ಮೇರೆಗೆ ಬಿಡುಗಡೆ ಗೊಳಿಸಿದ್ದಾರೆ ಎಂದು ಸಂಪಾಜೆ

ಸಂಪಾಜೆ ಗೂನಡ್ಕ ಪೇರಡ್ಕ ಜುಮ ಮಸೀದಿಗೆ ವಖ್ಫ್ ಇಲಾಖೆಯಿಂದ ಐದು ಲಕ್ಷ್ಮ ಬಿಡುಗಡೆ Read More »

ಮಂಡೆಕೋಲು : ಶಾಲಾ ಪ್ರಾರಂಭೋತ್ಸವ, ವಿಧ್ಯಾರ್ಥಿಗಳಿಗೆ ಆರತಿಗೈದು ಪುಷ್ಪಾರ್ಚನೆಗೈದು ಸ್ವಾಗತ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು ಇದರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.ಬೆಳಗ್ಗೆ ಎಲ್ಲಾ ವಿಧ್ಯಾರ್ಥಿಗಳನ್ನು ಆರತಿ ಬೆಳಗಿಸಿ ಪುಷ್ಪಾರ್ಚನೆಗೈದು, ತಿಲಕವಿಟ್ಟು ಶಾಲಾಭಿವೃದ್ದಿ ಸಮಿತಿ ಸದಸ್ಯರು ಮತ್ತು ಅಧ್ಯಾಪಕ ವೃಂದದವರು ಶಾಲಾ ಆವರಣಕ್ಕೆ ಬರಮಾಡಿಕೊಂಡರು. ನೂತನವಾಗಿ ಸೇರ್ಪಡೆಗೊಂಡ ವಿಧ್ಯಾರ್ಥಿಗಳಿಗೆ ಬಲೂನ್ ನೀಡಿ ಪ್ರೀತಿಯಿಂದ ಸ್ವಾಗತಿಸಲಾಯಿತು.ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹೊಸದಾಗಿ ಪ್ರವೇಶಾತಿ ಪಡಕೊಂಡ ವಿಧ್ಯಾರ್ಥಿಗಳಿಗೆ ಪುಸ್ತಕ ಪರಿಕರಗಳನ್ನು ನೀಡಿ ಗುರುತಿಸಲಾಯಿತು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ

ಮಂಡೆಕೋಲು : ಶಾಲಾ ಪ್ರಾರಂಭೋತ್ಸವ, ವಿಧ್ಯಾರ್ಥಿಗಳಿಗೆ ಆರತಿಗೈದು ಪುಷ್ಪಾರ್ಚನೆಗೈದು ಸ್ವಾಗತ Read More »

RCB ಸಂಭ್ರಮಾಚರಣೆಯಲ್ಲಿ 11 ಮಂದಿ ಸಾವು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಸಂಭ್ರಮಾಚರಣೆ ನೋಡಲು ಅಪಾರ ಸಂಖ್ಯೆಯಲ್ಲಿ ಜನಸಾಗರವೇ ಆಗಮಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಸದ್ಯದ ಮಾಹಿತಿಯ ಪ್ರಕಾರ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದ್ದು, ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ಸರಿಯಾಗಿ ಮಾಡಿಕೊಳ್ಳದೇ ಕಾರ್ಯಕ್ರಮ ನಡೆಸಿರುವುದು ಈ ದುರಂತಕ್ಕೆ ನೇರ ಕಾರಣ ಎನ್ನಲಾಗುತ್ತಿದೆ.ಕಾಲ್ತುಳಿತದಲ್ಲಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಆರಕ್ಕೂ ಹೆಚ್ಚು ಆರ್ ​ಸಿಬಿ ಅಭಿಮಾನಿಗಳ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರನ್ನು

RCB ಸಂಭ್ರಮಾಚರಣೆಯಲ್ಲಿ 11 ಮಂದಿ ಸಾವು Read More »

ಬಂಟ್ವಾಳ : ಅಬ್ದುಲ್ ರಹಿಮಾನ್ ಹತ್ಯೆಯ ಮತ್ತಿಬ್ಬರು ಆರೋಪಿಗಳ ಬಂಧನ

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿಕೊಳತ್ತಮಜಲು‌ ನಿವಾಸಿ ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಶಾಫಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಜೂ. 3ರ ಮಂಗಳವಾರ ವರದಿಯಾಗಿದೆ.ತೆಂಕಬೆಳ್ಳೂರು ನಿವಾಸಿ ಅಭಿನ್ ರೈ(32) ಹಾಗೂ ಬಡಗಬೆಳ್ಳೂರು ನಿವಾಸಿ ತೇಜಾಕ್ಷ(24) ಬಂಧಿತ ಆರೋಪಿಗಳು.ಪೊಲೀಸರು ಈ ಹಿಂದೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಟ್ವಾಳ : ಅಬ್ದುಲ್ ರಹಿಮಾನ್ ಹತ್ಯೆಯ ಮತ್ತಿಬ್ಬರು ಆರೋಪಿಗಳ ಬಂಧನ Read More »

ಅಕ್ಕಯ್ಯ ಬಾಳೆಕಜೆ ನಿಧನ

ಸುಳ್ಯ ತಾಲೂಕು ತೊಡಿಕಾನ‌ ಗ್ರಾಮದ ಬಾಳೆಕಜೆ ದಿ.ಕುಕ್ಕಪ್ಪ ಗೌಡರ ಧರ್ಮಪತ್ನಿ ಅಕ್ಕಯ್ಯ ಬಾಳೆಕಜೆ (86)ಅವರು ಮಂಗಳವಾರ ಸ್ವಗ್ರಹದಲ್ಲಿ ನಿಧನರಾದರು.ಮ್ರತರು ಮಕ್ಕಳಾದ ದೇವಪ್ಪ,ರಾಧಕ್ರಷ್ಣ,ಜಯಲಕ್ಷ್ಮಿ,ಲೋಲಜಾಕ್ಷಿ,ಸೊಸೆಯಂದಿರಾದ ಕಾವೇರಿ,ಆಶಾಲತಾ,ಪೂರ್ಣಿಮಾ ಮತ್ತು ಮೊಮ್ಮಕ್ಕಳನ್ನು ಮರಿ ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅಂತಿಮ ಸಂಸ್ಕಾರ ಜೂ.4ರಂದು ಮ್ರತರ ಮನೆಯಲ್ಲಿ ನಡೆಯಲಿದೆ.

ಅಕ್ಕಯ್ಯ ಬಾಳೆಕಜೆ ನಿಧನ Read More »

error: Content is protected !!
Scroll to Top