Uncategorized

ಅರೆಭಾಷೆ ಅಕಾಡೆಮಿಯ ವಿನೂತನ ಕಾರ್ಯಾಗಾರ ಕಥೆ ಬರೆಮೊ ಬನ್ನಿ…ಸುಳ್ಯದಲ್ಲಿ ಅರೆಭಾಷೆ ಕಥೆ ಬರೆಮೋ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಥೆ ಬರೆಯುವ ಹವ್ಯಾಸವನ್ನು ಬೆಳೆಸಿದರೆ ಮುಂದೆ ಉತ್ತಮ ಕಥೆಗಾರರಾಗಿ ಭಾಷೆಯ ದೊಡ್ಡ ಆಸ್ತಿ ಆಗಲಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಾಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಅರೆಭಾಷೆ ಕತೆ ಬರೆಮೊ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕತೆ ಎಂಬುದು ಎಲ್ಲರ ಜೀವನದಲ್ಲೂ ಇರುತ್ತದೆ ಅದನ್ನು ವ್ಯವಸ್ಥಿತವಾಗಿ ಅಕ್ಷರ ರೂಪಕ್ಕೆ ಇಳಿಸಲು ಪ್ರೇರೇಪಿಸುವುದಕ್ಕಾಗಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. […]

ಅರೆಭಾಷೆ ಅಕಾಡೆಮಿಯ ವಿನೂತನ ಕಾರ್ಯಾಗಾರ ಕಥೆ ಬರೆಮೊ ಬನ್ನಿ…ಸುಳ್ಯದಲ್ಲಿ ಅರೆಭಾಷೆ ಕಥೆ ಬರೆಮೋ ಕಾರ್ಯಕ್ರಮಕ್ಕೆ ಚಾಲನೆ Read More »

ಪರಿವಾರಕಾನ : ಮಣ್ಣು ಕೊಚ್ಚಿಕೊಂಡು‌ ಮನೆಯ ಸುತ್ತಮುತ್ತ ಶೇಖರಣೆ

ಪರಿವಾರಕಾನ ಬಳಿ ನೀರಿನೊಂದಿಗೆ ಮಣ್ಣು ಕೊಚ್ಚಿ ಬಂದು ಕೆಳಭಾಗದಲ್ಲಿರುವ ರಸ್ತೆಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಇಲ್ಲಿನ ಮನೆಗಳಿಗೆ ಹೋಗಲು ಸಮಸ್ಯೆ ಎದುರಾಗಿದೆ. ಸುರೇಶ್ ಅವರಿಗೆ ಸೇರಿದ ಮೇಲ್ಬಾಗದ ಜಮೀನಿನಲ್ಲಿ ಜೆಸಿಬಿ ಬಳಸಿ ಸಮತಟ್ಟು ಗೊಳಿಸಿ ಮಣ್ಣು ರಾಶಿ ಹಾಕಲಾಗಿತ್ತು. ಇದೀಗ ಸುರಿದ ಮಳೆಗೆ ಮಳೆಯ ನೀರಿನ ಜತೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಯಲ್ಲಿ ಹಾಗೂ ಮನೆಯ ಅಂಗಳದಲ್ಲಿ ತುಂಬಿರುವುದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.

ಪರಿವಾರಕಾನ : ಮಣ್ಣು ಕೊಚ್ಚಿಕೊಂಡು‌ ಮನೆಯ ಸುತ್ತಮುತ್ತ ಶೇಖರಣೆ Read More »

ನಾಪತ್ತೆಯಾಗಿದ್ದ ಪ್ರತೀಕ್ಷಾ ಪ್ರಿಯಕರ ಆಶಿಕ್ ಆಲಿಯೊಂದಿಗೆ ಪತ್ತೆ!

ಬದಿಯಡ್ಕ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಪ್ರತೀಕ್ಷಾ (19 ವರ್ಷ)ಇದೀಗ ತನ್ನ ಪ್ರಿಯಕರನೆಂದು ಹೇಳಲಾದ ಕಾಸರಗೋಡಿನ ಆಶಿಕ್ ಅಲಿ ಎಂಬಾತನೊಂದಿಗೆ ಪತ್ತೆಯಾಗಿದ್ದಾಳೆ. ಪೊಲೀಸರು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯದ ಅನುಮತಿಯ ಮೇರೆಗೆ ಆಕೆ ತನ್ನ ಪ್ರಿಯಕರನೊಂದಿಗೆ ತೆರಳಿದ್ದಾಳೆ.ಮೇ 27 ರಂದು, ಮಂಗಳವಾರ, ಬೆಳಗ್ಗೆ ಸುಮಾರು 10 ಗಂಟೆಗೆ ಪ್ರತೀಕ್ಷಾ ತನ್ನ ಸ್ನೇಹಿತೆಯ ಮನೆಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿ ಹೋಗಿದ್ದಳು. ಆಕೆ ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ಆಕೆಯ ಸಂಬಂಧಿಕರು‌ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ನಾಪತ್ತೆಯಾಗಿದ್ದ ಪ್ರತೀಕ್ಷಾ ಪ್ರಿಯಕರ ಆಶಿಕ್ ಆಲಿಯೊಂದಿಗೆ ಪತ್ತೆ! Read More »

ಅರಂತೋಡು : ಕೋಳಿ‌ ಸಾಗಾಟ ಮಾಡುತ್ತಿದ್ದ ಪಿಕಪ್ ಅಪಘಾತ,ಕೋಳಿಗಳ ಸಾವು

ಸುಳ್ಯ ತಾಲೂಕಿನ ಅರಂತೋಡು ಮಾಣಿ‌ ಮೈಸೂರು ರಾಷ್ಟ್ರೀಯ ‌ಹೆದ್ದಾರಿಯ 272ರಲ್ಲಿ‌ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿಯಾದ ಘಟನೆ ಶನಿವಾರ ವರದಿಯಾಗಿದೆ.ಚಾಲಕ ಮತ್ತು ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಪಿಕಪ್ ಜಖಂಗೊಂಡಿದೆ.ಎರಡು ಬಾಕ್ಸ್ ಕೋಳಿಗಳು ಸತ್ತಿವೆ ಎಂದು ತಿಳಿದು ಬಂದಿದೆ.

ಅರಂತೋಡು : ಕೋಳಿ‌ ಸಾಗಾಟ ಮಾಡುತ್ತಿದ್ದ ಪಿಕಪ್ ಅಪಘಾತ,ಕೋಳಿಗಳ ಸಾವು Read More »

ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಪೂಜಾ ಬೋರ್ಕರ್ ಸೇರ್ಪಡೆ

ವಿಶೇಷ ದಾಖಲೆಯ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಪೂಜಾ ಬೋರ್ಕರ್ ಸೇರ್ಪಡೆಯಾಗಿದ್ದಾರೆ. 3 ನಿಮಿಷ 30 ಸೆಕೆಂಡ್ಸ್ ನಲ್ಲಿ 1.4 ಸೆಂಟಿ ಮೀಟರ್ ಕಡಲೆಕಾಳಿನಲ್ಲಿ ಕಥಕಳಿಚಿತ್ರವನ್ನು ಬಿಡಿಸಿ ದಾಖಲೆ ನಿರ್ಮಿಸಿದಕ್ಕಾಗಿ “IBR achiever”ಪಟ್ಟಿಯನ್ನು ಏಪ್ರಿಲ್ 19, 2025 ರಂದು ಸೇರಿದ್ದಾಳೆ.ಚಿತ್ರಕಲೆಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಇವರು ಬೆಟ್ಟಂಪಾಡಿ ನಿವಾಸಿ ದಿ|ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಗಳ ಪುತ್ರಿ, ಆನಡ್ಕ ಮನೋಜ್ ಇವರ ಪತ್ನಿ.

ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಪೂಜಾ ಬೋರ್ಕರ್ ಸೇರ್ಪಡೆ Read More »

ಅರಂತೋಡು : ಮನೆಯ ಹಿಂಬದಿಯ ಬರೆ ಕುಸಿತ

ಕಳೆದ ಕೆಲವು ದಿನಗಳಿಂದು ಸುರಿಯುತ್ತಿರುವ ಭಾರೀ ಮಳೆಗೆಚಅರಂತೋಡು ಗ್ರಾಮದ ಕಟ್ಟಕೋಡಿ ಚೌಕಾರು ಎಂಬವರ ಮನೆ ಹಿಂಬಂದಿ ಬರೆ ಕುಸಿತಗೊಂಡಿದೆ.ಇದರಿಂದ ಅಪಾಯ ಎದುರಾಗಿದೆ.ಮಣ್ಣು ತೆಗೆಯುವ ಕಾರ್ಯ ಇನ್ನಷ್ಟೆ ನಡೆಯಬೇಕಾಗಿದೆ.

ಅರಂತೋಡು : ಮನೆಯ ಹಿಂಬದಿಯ ಬರೆ ಕುಸಿತ Read More »

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಮತ್ತಿಬ್ಬರು ಶಂಕಿತ ಆರೋಪಿಗಳು ಪೊಲೀಸ್ ವಶ

ಬಂಟ್ವಾಳ ತಾಲೂಕಿನ ಅಬ್ದುಲ್ ರಹಿಮಾನ್ ಕೊಲೆ ಹಾಗೂ ಕಲಂದರ್ ಶಾಫಿ ಅವರ ಮೇಲೆ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದೀಗ ಮತ್ತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೇ 30 ರಂದು ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27) ಹಾಗೂ ಬಡಗಬೆಳ್ಳೂರು ಗ್ರಾಮದ ರವಿರಾಜ್ (23) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಮತ್ತಿಬ್ಬರು ಶಂಕಿತ ಆರೋಪಿಗಳು ಪೊಲೀಸ್ ವಶ Read More »

ಭಾರೀ ಮಳೆಯಿಂದ ಅರಂತೋಡು ತೊಡಿಕಾನ ರಸ್ತೆ ಬದಿ ಕುಸಿತ

ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಅರಂತೋಡು ತೊಡಿಕಾನ‌ ಸಂಪರ್ಕ‌ ರಸ್ತೆಯ ಅಡ್ಯಡ್ಕ ಸಮೀಪ‌ ರಸ್ತೆ ಕುಸಿತಗೊಂಡಿದೆ.ಇದರಿಂದ ಈ ರಸ್ತೆಯ ಮೂಲಕ ಸಂಚಾರರಿಸುವ ಜನರು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ತೆರಳುವ ಭಕ್ತರು ಗಮನ ಹರಿಸಬೇಕೆಂದು ತಿಳಿಸಲಾಗಿದೆ.

ಭಾರೀ ಮಳೆಯಿಂದ ಅರಂತೋಡು ತೊಡಿಕಾನ ರಸ್ತೆ ಬದಿ ಕುಸಿತ Read More »

ಡೆಂಗ್ಯೂ ಜ್ವರದಿಂದ ಕಾಲೇಜು ವಿದ್ಯಾರ್ಥಿ ಸಾವು

ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜ್ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೇ.30 ರಂದು ಮೃತಪಟ್ಟಿದ್ದಾನೆ.ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು, ಅಮ್ಮಾಡಿ ಗ್ರಾಮದ ಕೆಂಪುಗುಡ್ಡೆ ನಿವಾಸಿ ಗೋಪಾಲ ಗೌಡ ಮತ್ತು ಸುಪ್ರಭಾ ದಂಪತಿಯ ಮಗ ಹಿತೇಶ್ (17) ಡೆಂಗ್ಯೂ ಜ್ವರದಿಂದ ಪ್ಲೇಟೈಟ್ ಸಂಖ್ಯೆ ಕಡಿಮೆಯಾಗಿ ಚಿಕಿತ್ಸೆ ಫಲಿಸದೆ ಮೇ.30 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕನಾಗಿದ್ದಾನೆ.

ಡೆಂಗ್ಯೂ ಜ್ವರದಿಂದ ಕಾಲೇಜು ವಿದ್ಯಾರ್ಥಿ ಸಾವು Read More »

ಭಾರೀ ಸುರಿಯುತ್ತಿರುವ ಹಿನ್ನಲೆಯಲ್ಲಿ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಸುರಿಯುತ್ತಿರುವ ಹಿನ್ನಲೆಯಲ್ಲಿ ನಾಳೆ (ಮೇ 31 ಶನಿವಾರ) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದ್ದು ಸಾರ್ವಜನಿಕರು ಎಚ್ಚರ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಭಾರೀ ಸುರಿಯುತ್ತಿರುವ ಹಿನ್ನಲೆಯಲ್ಲಿ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ Read More »

error: Content is protected !!
Scroll to Top