(ಲೇಖನ)ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ

ಗುರುಭ್ಯೋನಮಃ ಇಂದಿನ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯು ಹೆತ್ತವರ ಪಾಲಿಗೆ ಒಂದು ಮಹತ್ತರವಾದ ಸವಾಲೇ ಸರಿ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎನ್ನುವ ಹಾಗೆ ಇಂದಿನ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುವ ಜವಾಬ್ದಾರಿಯು  ಪೋಷಕರ ಪಾಲಿಗೆ ಇದೆ. ದಿನದ 24 ಗಂಟೆಗಳಲ್ಲಿ ಏಳರಿಂದ ಎಂಟು ಗಂಟೆ ಒಂದು ವಿದ್ಯಾರ್ಥಿಯು ಶಾಲೆಯಲ್ಲಿ ಕಳೆದರೆ ಇನ್ನುಳಿದ 16 ಗಂಟೆ ಆ ಮಗುವಿನ ಜವಾಬ್ದಾರಿಯು ಪೋಷಕರ ಪಾಲಿಗಿರುತ್ತದೆ. ಆದರೆ ವೃತ್ತಿಪರ ಪೋಷಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಯು ಶಾಲೆಯಲ್ಲಿ ಆಗುತ್ತದೆ ಎಂದು ಭಾವಿಸಿರುತ್ತಾರೆ. ಶಾಲೆಯಲ್ಲಿ ಯಾವ ರೀತಿ ಮಗುವಿನ ಸರ್ವಾಂಗೀಣ ಬೆಳವಣಿಗೆ ಆಗುತ್ತದೆಯೋ  ಅದೇ ರೀತಿ ಮನೆಯಲ್ಲೂ ಸಹ ಅದರ ಪಾಲು ಹೆತ್ತವರ ಇರುತ್ತದೆ. ಇಂದಿನ ಪೋಷಕರು ಒಂದು ಮಗು ಉತ್ತಮವಾಗಿ ಅಂಕ ಪಡೆದುಕೊಂಡರೆ ಅದು ಎಲ್ಲಾ ರೀತಿಯಲ್ಲೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ ಎಂದು ಭಾವಿಸುತ್ತಾರೆ. ಸಾಮಾನ್ಯವಾಗಿ ಇದು ಒಂದು ನಕರಾತ್ಮಕ ಯೋಚನೆ. ಒಂದು ಮಗು ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಮಾನಸಿಕವಾಗಿ ದೈಹಿಕವಾಗಿ ಎಲ್ಲಾ ರೀತಿಯಲ್ಲೂ ಉತ್ತಮ ರೀತಿಯ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡರೆ ಅದು ಆ ಮಗುವಿನ ಶೈಕ್ಷಣಿಕ ಅಭಿವೃದ್ಧಿ ಎಂದು ಹೇಳಬಹುದು. ಇಂದಿನ ಪೋಷಕರು ಒಂದು ವಿದ್ಯಾರ್ಥಿಯು ಉತ್ತಮ ಅಂಕ ಅಂದರೆ ಪೂರ್ಣಾಂಕ ಪಡೆದುಕೊಳ್ಳಬೇಕು ಎಂಬುದು ಪೋಷಕರ ಕನಸು. ಇದು ನಮ್ಮ ಸಮಾಜದಲ್ಲಿ ಅತ್ಯಂತ ಬಲವಾಗಿ ಬೇರೂರಿದೆ. ಯಾವುದೇ ರೀತಿಯಲ್ಲಾದರೂ ಮಗುವನ್ನು ಪೂರ್ತಿ ಅಂಕವನ್ನು ಪಡೆದುಕೊಳ್ಳಲು ಪೋಷಕರು ತಮ್ಮ ಕೈಲಾದ ಎಲ್ಲಾ ರೀತಿಯ ಪ್ರಯತ್ನವನ್ನು ಮಗುವಿನ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ಮಕ್ಕಳನ್ನು ಅಂಕ ಗಳಿಸುವ  ಯಂತ್ರಗಳನ್ನಾಗಿ  ಇವತ್ತಿನ ದಿನಗಳಲ್ಲಿ ಮಾಡುವುದನ್ನು ನಾವು ಕಾಣಬಹುದಾಗಿದೆ. ಆದರೆ ಒಂದು ಮಗು ಎಲ್ಲ ಪಠ್ಯ ಸಹಿತ ಇತರ  ಕ್ಷೇತ್ರದಲ್ಲೂ ಉತ್ತಮವಾಗಿ ಮಿಂಚುತ್ತಿದ್ದರೆ ಆ ಮಗು ಸಮಾಜದಲ್ಲಿ ಒಂದು ಪರಿಪೂರ್ಣ ವಿದ್ಯಾರ್ಥಿ ಎಂದು ನಾವು ಸ್ವೀಕರಿಸಬಹುದು. ಇಂದಿನ ಸಮಾಜದಲ್ಲಿ  ಎಲ್ಲರೂ ಹೀಗಾಗಲು ಇದು ಕಷ್ಟ ಸಾಧ್ಯ .ಒಂದು ಮಗು  ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಶಿಕ್ಷಕರ ಪಾಲು ಮತ್ತು ಹೆತ್ತವರ ಮಹತ್ತರವಾದುದು.ಒಬ್ಬ ಶಿಕ್ಷಕ ಎಲ್ಲಾ ರೀತಿಯ ತನಗೆ ತಿಳಿದ ಜ್ಞಾನವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಗುವಿಗೆ ಧಾರೆ ಎರೆಯುತ್ತಾರೆ. ಆದರೆ ಶಾಲೆಯಲ್ಲಿ  ಮಕ್ಕಳು ಸರಿಯಾದ ರೀತಿಯಲ್ಲಿ ಏಳಿಗೆ ಕಾಣದಿದ್ದಲ್ಲಿ ಶಿಕ್ಷಕರನ್ನು ನಿಂದಿಸುವ ಕೆಲಸವು ಆಗುತ್ತಿದೆ.ಹೀಗೆ ಆಗಬಾರದು .ಮಗು ಶಿಕ್ಷಕರು ಹೇಳಿದ ಮಾತುಗಳನ್ನು ಚಾಚು ತಪ್ಪದೇ ಪಾಲಿಸುತ್ತದೆ. ಆದರೆ ಮಕ್ಕಳ ಎದುರು ಪೋಷಕರು ಮಕ್ಕಳನ್ನು ದೂಷಿಸಿದಲ್ಲೇ ಮಗು ಮನಸ್ಸಿನಲ್ಲಿ ನೋವನ್ನು ಅನುಭವಿಸುತ್ತದೆ. ವಿದ್ಯಾರ್ಥಿಯು ಅಂಕಗಳನ್ನು ಪಡೆಯುವಲ್ಲಿ ಪೋಷಕರ ಒತ್ತಡ ಹೆಚ್ಚಿನ ಪಾಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈಗಿನ ಆಧುನಿಕ ಕಾಲಘಟ್ಟದಲ್ಲಿ ಮಗುವಿನ ಮೇಲೆ ಹೆಚ್ಚಿನ  ಒತ್ತಡ ಹೇರಿದರೆ ಅದು ಕೆಲವೊಮ್ಮೆ ಅನಾಹುತಕ್ಕೆ

Ad Widget . Ad Widget . Ad Widget . . Ad Widget . . Ad Widget .

ಕಾರಣವಾಗುತ್ತದೆ‌.ಪ್ರೀತಿಯಿಂದ ಹೇಳಿದರೆ ಮಗು ತನಗೆ ಇಷ್ಟವಾದ ವಿಷಯವನ್ನು ತುಂಬಾ ಶ್ರದ್ಧೆಯಿಂದ ಕಲಿಯುತ್ತದೆ .ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ ಆದರೆ ತನಗೆ ಆ ವಿಷಯದ ಬಗ್ಗೆ ಸರಿಯಾದ ಜ್ಞಾನವಿಲ್ಲದಲ್ಲಿ ಆ ವಿಷಯವನ್ನು ಬದಿಗಿರಿಸುವ ಪರಿಪಾಠವಿದೆ. ಒಂದು ಮಗು ಸರಿಯಾದ ದಾರಿಯಲ್ಲಿ ಸಾಗಬೇಕಾದರೆ ಪೋಷಕರು,ಶಿಕ್ಷಕರ ಪಾಲು ಸಮಾನವಾಗಿದೆ. ತಂದೆ ಎಲ್ಲಾ ರೀತಿಯ ಅನುಕೂಲಗಳನ್ನು ನೀಡಿದರೆ ತಾಯಿ ಅದನ್ನು ಯಾವ ರೀತಿ ವಿನಿಯೋಗಿಸಬೇಕೆಂದು ಸರಿಯಾದ ಮಾರ್ಗದಲ್ಲಿ ಹೇಳುವ ಮಹತ್ತರವಾದ ಜವಾಬ್ದಾರಿ ಅವಳಿಗಿದೆ. ಮಗುವಿನ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಹೆತ್ತವರದು ಮತ್ತು ಶಿಕ್ಷಕರ ಪಾತ್ರದಲ್ಲಿ  ಅವಿನಾಭಾವ ಸಂಬಂಧವಿದೆ. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ  ಪ್ರಸ್ತುತ ಸಮಯದಲ್ಲಿ ಆರ್ಥಿಕ ವ್ಯವಸ್ಥೆಯು ಕೂಡ ಪರಿಣಾಮ ಬೀರುತ್ತದೆ.

. Ad Widget . Ad Widget . Ad Widget

*ಅಕ್ಷತಾ ರಮೇಶ್*
ಸಹ ಶಿಕ್ಷಕಿ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ,ಪುತ್ತೂರು

Leave a Comment

Your email address will not be published. Required fields are marked *

error: Content is protected !!
Scroll to Top