December 2024

ಶಿವಕುಮಾರ್ ಹೊಸಗದ್ದೆ ನಿಧನ

ಸುಳ್ಯ ಬೀರಮಂಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿವಕುಮಾರ್ ಹೊಸಗಗದ್ದೆ ಶನಿವಾರ ಮುಂಜಾನೆ ಆನಾರೋಗ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಸರು.ಮ್ರತರು ಪತ್ನಿ ತಾಯಿ ಮತ್ರು ಕುಟುಂಸ್ಥರನ್ನು,ಬಂಧುಗಳನ್ನು ಆಗಲಿದ್ದಾರೆ.

ಶಿವಕುಮಾರ್ ಹೊಸಗದ್ದೆ ನಿಧನ Read More »

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು: ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಕಂಡೆಕ್ಟರ್

ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಇದನ್ನು ಅರಿತ ನಿರ್ವಾಹಕ ವಿಷ್ಣು ಎಂಬವರು ಬಸ್ ಅನ್ನು ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.6ರಂದು ವರದಿಯಾಗಿದೆ.ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್‌ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಸಂದರ್ಭ ಬಸ್‌ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿ ಅವರು ಚಾಲನೆಯ ವೇಗ ಕಡಿಮೆಮಾಡ ತೊಡಗಿದರು. ಇದನ್ನು ಕಂಡು ಸಂಶಯಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸು ವಾಗ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು: ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಕಂಡೆಕ್ಟರ್ Read More »

ಸುಳ್ಯ – ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ, ಐಕ್ಯೂಎಸಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಮಟ್ಟದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ -2024 ದಿನಾಂಕ 05.12.2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಇವರು ಅಧ್ಯಕ್ಷತೆ ವಹಿಸಿದ್ದಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್

ಸುಳ್ಯ – ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ Read More »

ನಾಳೆ ಸುಳ್ಯದಲ್ಲಿ ದೀನದಯಾಳ್‌ ಸಹಕಾರ ಸಂಘ ನಿಯಮಿತ ಉದ್ಘಾಟನೆ

ಸುಳ್ಯ: ದೀನದಯಾಳ್‌ ಸಹಕಾರ ಸಂಘ ನಿಯಮಿತ ಡಿ.7ರಂದು (ನಾಳೆ) ಸುಳ್ಯದಲ್ಲಿ ಉದ್ಘಾಟನೆಯಾಗಲಿದೆ. ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್‌ನ 2 ನೇ ಮಹಡಿಯಲ್ಲಿ ನೂತನ ಸಹಕಾರ ಸಂಘ ಆರಂಭವಾಗಲಿದೆ. ದೀನದಯಾಳ್ ರೂರಲ್ & ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್‌ನ ನೇತೃತ್ವದಲ್ಲಿ ನೂತನ ಸಹಕಾರ ಸಂಘ ಕಾರ್ಯನಿರ್ವಹಿಸಲಿದೆ. ಡಿ.7ರಂದು ಪೂ.11.22ರ ಶುಭ ಮುಹೂರ್ತದಲ್ಲಿನೂತನ ಸಹಕಾರ ಸಂಘವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ವಿಧಾನ ಪರಿಷತ್ ಸದಸ್ಯರಾದ ಕಿಶೋ‌ರ್

ನಾಳೆ ಸುಳ್ಯದಲ್ಲಿ ದೀನದಯಾಳ್‌ ಸಹಕಾರ ಸಂಘ ನಿಯಮಿತ ಉದ್ಘಾಟನೆ Read More »

ನಾಳೆ ಕುಕ್ಕೆ ದೇವಳದಲ್ಲಿ ಬ್ರಹ್ಮ ರಥೋತ್ಸವ

ದ.ಕ ಜಿಲ್ಲೆಯ ಪ್ರಸಿದ್ದ ತೀರ್ಥ ಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯದ ಷಷ್ಠಿ ಮಹೋತ್ಸವ ಪ್ರಯುಕ್ತ ಬ್ರಹ್ಮರಥೋತ್ಸವ ನಾಳೆ (ಡಿ.7) ದಿನ ಪ್ರಾತಃಕಾಲ 6:57 ರ ವೃಶ್ಚಿಕಲಗ್ನದ ಸುಮುಹೂರ್ತದಲ್ಲಿ ನಡೆಯಲಿದೆ.ಪ್ರಾತಃಕಾಲ 6.57 ಕ್ಕೆ ದೇವರು ರಥಾರೂಡರಾಗಿ ವೈಭವದ ಬ್ರಹ್ಮರಥೋತ್ಸವ ಜರಗಲಿದೆ, ಬ್ರಹ್ಮರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಮತ್ತು ಪಂಚಮಿ ರಥದಲ್ಲಿ ಶ್ರೀ ಉಮಾಮಹೇಶ್ವರ ದೇವರು ಆರೂಡರಾಗಿ ರಥೋತ್ಸವ ನಡೆಯಲಿದೆ.

ನಾಳೆ ಕುಕ್ಕೆ ದೇವಳದಲ್ಲಿ ಬ್ರಹ್ಮ ರಥೋತ್ಸವ Read More »

ಯುವತಿಯ ಕೆಟ್ಟು ಹೋದ ಕಾರು ರಿಪೇರಿ ಮಾಡಿ ಕೊಟ್ಟು ಶಫಿನ್‌’ನಿಂದ ಜ್ಯೂಸ್‌’ಗೆ ಅಮಲು ಪದಾರ್ಥ ಬೆರೆಸಿ ದೈಹಿಕ ಸಂಪರ್ಕ

ಮಹಿಳಾ ಡ್ರೈವರ್ ಗೆ ನೆರವಾಗಲು ಬಂದು ಕಾರು ರಿಪೇರಿ ಮಾಡಿ ಕೊಟ್ಟು ಯುವಕನೊಬ್ಬ ಕೆಲವು ದಿನಗಳ ಬಳಿಕ ಆಕೆಗೆ ಜ್ಯೂಸಿನಲ್ಲಿ ಅಮಲು ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ ಹಾಗೂ ಆಕೆಯ ಬ್ಯಾಗಿನಲ್ಲಿದ್ದ ಹಣ ಕಳವು ಮಾಡಿರುವ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಫಿನ್ ಪ್ರಕರಣದ ಎ.1 ಆರೋಪಿ. ಆತನ ಅಣ್ಣ ಹಾಗೂ ಅತ್ತಿಗೆಯ ಮೇಲೂ ಸಂತ್ರಸ್ತೆ ದೂರು ನೀಡಿದ್ದಾರೆ. ಸಂತ್ರಸ್ತೆ ಯುವತಿ ಕೊಡಿಯಾಲಬೈಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು.ಆರೋಪಿ ಸಂತ್ರಸ್ಥೆ

ಯುವತಿಯ ಕೆಟ್ಟು ಹೋದ ಕಾರು ರಿಪೇರಿ ಮಾಡಿ ಕೊಟ್ಟು ಶಫಿನ್‌’ನಿಂದ ಜ್ಯೂಸ್‌’ಗೆ ಅಮಲು ಪದಾರ್ಥ ಬೆರೆಸಿ ದೈಹಿಕ ಸಂಪರ್ಕ Read More »

ಡಿ. 6 ಮತ್ತು 7 ರಂದು ಮದ್ಯ ಮಾರಾಟ ನಿಷೇಧ..!

ಕುಕ್ಕೆ ಚಂಪಾ ಷಷ್ಠಿ ಹಿನ್ನೆಲೆಯಲ್ಲಿ ಡಿ. 6 ಮತ್ತು 7 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ದ. ಕ. ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವವು ನಡೆಯುತ್ತಿದ್ದು, ಡಿಸೆಂಬರ್ 6ರಂದು ಪಂಚಮಿ ರಥೋತ್ಸವ ಹಾಗೂ ಡಿಸೆಂಬರ್ 7ರಂದು ಚಂಪಾಷಷ್ಠಿ ಮಹಾರತೋತ್ಸವವು ನಡೆಯಲಿದೆ.ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಸೆಂಬರ್ 6 ರ ಬೆಳಿಗ್ಗೆ 6

ಡಿ. 6 ಮತ್ತು 7 ರಂದು ಮದ್ಯ ಮಾರಾಟ ನಿಷೇಧ..! Read More »

ಬೆಳ್ಳಿ ಚುಕ್ಕೆಯಂತೆ ಹೊಳೆದು ಭಕುತರ ಪೊರೆವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಗಲು ಧೂಮಾವತಿ ದೈವಗಳು

ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಗಡಿನಾಡು ಪ್ರದೇಶ ಬೆಳ್ಳಿಪ್ಪಾಡಿಯು, ಸುಳ್ಯ ತಾಲೂಕಿನ ಜಾಲ್ಸೂರು, ಮಂಡೆಕೋಲು ಹಾಗೂ ಕನಕ ಮಜಲು ಈ ಮೂರು ಗ್ರಾಮಗಳಿಂದ ಸುತ್ತುವರಿದ ಗ್ರಾಮೀಣ ಪ್ರದೇಶ.ಇಲ್ಲಿ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದಿನ ಇತಿಹಾಸದಿಂದಲೂ ನೆಲೆಸಿರುವಂತಹ ತಾಯಿ ಶ್ರೀ ಉಳ್ಳಾಕುಲು ಧೂಮಾವತಿ ದೈವದ ಕಾಲಾವಧಿ ನೇಮೋತ್ಸವವೂ ವರ್ಷಂಪ್ರತಿ ಡಿಸೆಂಬರ್ ತಿಂಗಳ 6 ಮತ್ತು 7 ರಂದು ಶ್ರದ್ಧೆ ಭಕ್ತಿ ಸಡಗರದಿಂದ ನಡೆಯುತ್ತದೆ.ವಿಶೇಷತೆ:ವಿಶೇಷವೆಂದರೆ ತುಳು ನಾಡಿನ ತುಳು ತಿಂಗಳ ಬೇಸ ಪತ್ತನಾಜೆ ಕಳೆದ ಮೇಲೆ ಸಾಮಾನ್ಯವಾಗಿ ಎಲ್ಲಿಯೂ

ಬೆಳ್ಳಿ ಚುಕ್ಕೆಯಂತೆ ಹೊಳೆದು ಭಕುತರ ಪೊರೆವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಗಲು ಧೂಮಾವತಿ ದೈವಗಳು Read More »

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು

ಡಿ 5 ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರಿದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರು ಸಂಕಷ್ಟಕ್ಕೆ ಬಿದ್ದಿದ್ದಾರೆ.ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಂಗಡಿಯವರು ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದಿದ್ದಾರೆ. ಇಂದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಕೆಲ ಅಂಗಡಿಗಳಲ್ಲಿ ನೀರು ನಿಂತಿದೆ. ಸೆಟ್ ಮಾಡಿದ ಆಟಿಕೆಗಳನ್ನು ಮತ್ತೆ ಮುಚ್ಚಿ ಇಡಬೇಕಾದ ಪರಿಸ್ಥಿತಿ ಬಂದಿದೆ. ಕೆಲ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು Read More »

ಚೆಂಬು : ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ

ಸುಳ್ಯ ತಾಲೂಕಿನ ಸಮೀಪದ ಕೊಡಗಿನ ಚೆಂಬು ಗ್ರಾಮದ ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವವು ಗುರುವಾರ ನಡೆಯಿತು.ಡಿ.2ರಂದು ಬೆಳಿಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಂಡಾರಕ್ಕೆ ಹೋಗಿ ಡಿ.3ರಂದು ಭಾಗಮಂಡಲದಿಂದ ಭಂಡಾರ ತಂದು ರಾತ್ರಿ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡಲಾಯಿತು.ಬಳಿಕ ಪ್ರಾತ:ಕಾಲ ನೇಮೋತ್ಸವ ಜರುಗಿತು.ಡಿ.4ರಂದು ಎಡೆಕಡಪು, ಡಿ.5ರಂದು ಪ್ರಾತ:ಕಾಲ ಕಿರಿಯರನೇಮೋತ್ಸವಕ್ಕೆ ಎಣ್ಣೆ ಕೊಟ್ಟು, ಬೆಳಿಗ್ಗೆ ಉಳ್ಳಾಕುಲು ಕುದುರೆಬಂಡಿ ಎಳೆಯಲಾಯಿತು. ಪೂರ್ವಾಹ್ನ ಉಳ್ಳಾಕುಲು ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಚೆಂಬು : ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ Read More »

error: Content is protected !!
Scroll to Top