ಶ್ರದ್ದಾ ಕೇಂದ್ರಗಳಲ್ಲಿ ವಿಭಿನ್ನ ಶ್ರದ್ದಾ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.ಅಲ್ಲಿಯ ಪರ್ವ ದಿನಗಳು ಉತ್ಸಾವಾದಿ ದಿನಗಳ ಆಚರಣೆಗಳ ದಿನಗಳಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಆದರೆ ಸುಳ್ಯ ತಾಲೂಕಿನಲ್ಲಿ ಬಹಳ ಅಪರೂಪವಾದ ದೇವಾಲಯವೊಂದಿದೆ. ಪ್ರತೀ ವರ್ಷ ಜ.31ರಂದು ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುವ ಜಿಲ್ಲೆಯ ಕ್ಷೇತ್ರ ಅದು ಸುಳ್ಯದ ಕಾಂತಮಂಗಲದಲ್ಲಿರುವ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅದ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಈ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ತಯಾರಿ ನಡೆಯುತ್ತಿದ್ದು ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.ಇಲ್ಲಿ ಗುತ್ಯಮ್ಮ ದೇವಿ ದೇವಸ್ಥಾನವಲ್ಲದೆ ಸಹ ಪರಿವಾರ ದೈವಗಳ ಗುಡಿಗಳು ಹಾಗು ಸಾನ್ನಿಧ್ಯ ಶಕ್ತಿಗಳು ಇಲ್ಲಿ ನೆಲೆಯಾಗಿವೆ. ದೇವಾಲಯವನ್ನು ಸಂಪೂರ್ಣ ಶಿಲೆಯಿಂದಲೇ ನಿರ್ಮಿಸಿರುವ ಭಕ್ತರ ಪಾಲಿನ ಅಪರೂಪದ ಬಲು ವೈಭವಯುತವಾಗಿ ಕಂಗೊಳಿಸುವ ದೇವಸ್ಥಾನ.ದೈವಜ್ಞರಾದ ಕಾರ್ಕಳದ ಕೊಂಡಜಾಲು ಸೀತಾರಾಮ ಉಪಾಧ್ಯಾಯರ ಮಾರ್ಗದರ್ಶದಲ್ಲಿ ಡಾ.ಕೆ.ವಿ.ರೇಣುಕಾಪ್ರಸಾದ್ ನೇತೃತ್ವದಲ್ಲಿ ಐದು ವರುಷಗಳ ಹಿಂದೆ ಈ ದೇವಳವನ್ನು ಪುನರ್ ನಿರ್ಮಾಣ ಮಾಡಲಾಗಿದೆ.ಇದು ದೇವಿ ದೇವಸ್ಥಾನವಾಗಿದ್ದು
500 ವರ್ಷಗಳ ಹಿಂದೆ ಇದ್ದ ದೇವಸ್ಥಾನವನ್ನು ಜೀರ್ಣೋದ್ದಾರ ಗೊಳಿಸಿದವರು ಡಾ . ಕೆ ವಿ ರೇಣುಕಾ ಪ್ರಸಾದ್.
ಈ ಪ್ರದೇಶ ಕುರುಂಜಿ ಮನೆತನದವರಿಗೆ ಸೇರಿದ ಜಾಗವಾಗಿದ್ದು ಕೃಷಿ ಕಾಯ ಮಾಡುವ ಸಂದರ್ಭ ಇಲ್ಲಿ ದೇವಸ್ಥಾನವಿದ್ದ ಕುರುಹು ಲಭ್ಯವಾದ ಹಿನ್ನಲೆಯಲ್ಲಿ ಪ್ರಶ್ನೆ ಚಿಂತನೆ ಮಾಡಿದಾಗ ಸುಮಾರು ಐನೂರು ವರ್ಷಗಳ ಹಿಂದೆ ಜೈನರ ಆಳ್ವಿಕೆಯ ಕಾಲದಲ್ಲಿ ಸ್ಥಳದಲ್ಲಿ ಗುತ್ಯಮ್ಮ ದೇವಿ ದೇವಸ್ಥಾನ ಇತ್ತು ಎನ್ನುವ ವಿಷಯ ತಿಳಿದ ಹಿನ್ನಲೆಯಲ್ಲಿ ಇಲ್ಲಿ ಭೂಮಿ ಅಗೆದು ಶೋಧನೆ ನಡೆಸಲಾಗಿ ಗುತ್ಯಮ್ಮ ದೇವಿಯ ಮೂಲ ವಿಗ್ರಹ, ದೈವ ದೇವರುಗಳ ಆಯುಧಗಳು ಕಂಡು ಬಂದವು.ಮತ್ತೆ ಪ್ರಶ್ನಾ ಚಿಂತನೆ ನಡೆಸಲಾಗಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಪುನರ್ ಪ್ರತಿಷ್ಠೆ ಮಾಡಿ ಬ್ರಹ್ಮಕಲಶ ನೆರವೇರಿಸಿದಲ್ಲಿ ಶಕ್ತಿಯು ಪ್ರದೇಶವಾಗಲಿದೆ. ಹಾಗೂ ಸುತ್ತಮುತ್ತಲಿನ ಜನರಿಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾಳೆ ಎಂದು ಕಂಡು ಬಂದಿತ್ತು.ಈ ಹಿನ್ನಲೆಯಿಂದ ಕುರುಂಜಿ ಮನೆತನದ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಜೀರ್ಣೋದ್ಧಾರ ಮಾಡಿ ಶ್ರೀ ಗುತ್ಯಮ್ಮ ದೇವಿಯ ಮೂಲ ವಿಗ್ರಹ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮಾಡಿಸಿ 2019 ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಸಿದ್ದಾರೆ. ಅಂದಿನಿಂದ ಪ್ರತೀ ವರ್ಷ ದೇವಸ್ಥಾನದಲ್ಲಿ ದೇವಿಯ ಪೂಜೆ ದೈವಸ್ತಾನಲ್ಲಿ ದೈವಗಳ ಪೂಜಾ ವಿಧಿಗಳು ನಡೆದು, ವಾರ್ಷಿಕ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ.ದೈವಜ್ಞರು ಹಾಗು ಹಿರಿಯರ ಸೂಚನೆಯಂತೆ ಡಾ.ರೇಣುಕಾಪ್ರಸಾದ್ ಕೆ.ವಿ.
ಧರ್ಮದರ್ಶಿಗಳಾಗಿ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ.ಇಲ್ಲಿ ಶ್ರೀ ಗುತ್ಯಮ್ಮದೇವಿ ಅಲ್ಲದೆ ಶ್ರೀ ಬ್ರಹ್ಮರು,ನಾಗ ನಾಗಬ್ರಹ್ಮ ಪಿಲಿಚಾಮುಂಡಿ, ಧೂಮಾವತಿ,ಅಣ್ಣಪ್ಪ ಪಂಜುರ್ಲಿ, ಸಿರಿ ಕುಮಾರರು,ಕಲ್ಲುರ್ಟಿ ಪಂಜುರ್ಲಿ,ಬಳ್ಳಾಳ ಬಳ್ಳಾಲ್ತಿ,ನಂದಿ ಕೋಣ, ಕ್ಷೇತ್ರಪಾಲ,ನೀಚ ಬೊಬ್ಬರ್ಯ ಹೀಗೆ ಪರಿವಾರಗಳ ದೈವಗಳ ಸಾನಿದ್ಯವೂ ಇವೆ.
ಸುಳ್ಯದಿಂದ ಅಜ್ಜಾವರ ರಸ್ತೆಯಲ್ಲಿ ಒಂದುವರೆ ಕಿಲೋಮೀಟರ್ ಸಾಗಿ ಬಂದರೆ ಎಡಭಾಗದಲ್ಲಿ ಡಾ ಕೆ ವಿ ರೇಣುಕಾಪ್ರಸಾದ್ ರವರ ನಿವಾಸ ಇದೆ.ಅಲ್ಲಿಯೇ ಅವರ ಮನೆಯಂಗಳದ ರಸ್ತೆಯಲ್ಲಿ ಅನತಿ ದೂರ ಕ್ರಮಿಸಿದರೆ ವಿಶಾಲವಾದ ಜಾಗದಲ್ಲಿ ಕಂಡು ಬರುವ ದೇವಾಲಯವೇ ಗುತ್ಯಮ್ಮ ದೇವಿ ಕ್ಷೇತ್ರ, ವಿಶೇಷ ಪಾರ್ಕಿಂಗ್ ಸೌಲಭ್ಯ,ಸಸ್ಯ ರಾಶಿಗಳ ಸುಂದರ ಪರಿಸರದಲ್ಲಿ ಶಿಲೆಯಿಂದ ನಿರ್ಮಿಸಲಾದ ದೇವಾಲಯ, ಸಾವಿರಾರು ಜನ ಏಕ ಕಾಲದಲ್ಲಿ ಬಂದರೂ ಸುದಾರಿಸಬಲ್ಲ ವ್ಯವಸ್ಥಿತ ಪ್ರಾಂಗಣ, ಕ್ಷೇತ್ರಕ್ಕೆ ಬರುವ ಭಕ್ತರನ್ನು ಆಧರಣಿಯಾವಾಗಿ ಕಾಣುವ ತಂಡಗಳು ಇಲ್ಲಿಯ ವಿಶೇಷವಾಗಿದೆ.ನೀವು ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಗುತ್ಯಮ್ಮ ದೇವಿಯ ಶಕ್ತಿ ಅರಿವಾಗುತ್ತದೆ.
ಸುಳ್ಯದ ಕಾಂತಮಂಗಲ ಪಯಸ್ವಿನಿ ನದಿ ತಟದಲೊಂದು ವರ್ಷಕ್ಕೆ ಒಂದು ಬಾರಿ ಮಾತ್ರ ಗರ್ಭಗುಡಿಯ ಭಾಗಿಲು ತೆಗೆಯುವ ಗುತ್ಯಮ್ಮ ದೇವಾಲಯ!
