March 8, 2025

ಬಾಜಿನಡ್ಕ : ಧಾರ್ಮಿಕ ಸಭಾ ಕಾರ್ಯಕ್ರಮ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬಾಜಿನಡ್ಕ ಆದಿನಾಗಬ್ರಹ್ಮ ಮೊಗೇರ್ಕಳ ದೈವಗಳ ನೇಮೋತ್ಸವ ಮತ್ತು ಸ್ವಾಮಿ ಕೊರಗಜ್ಕ ದೈವದ ಕೋಲದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವು ಮಾ.8 ರಂದು ಸಂಜೆ ದೈವಸ್ಥಾನ ವಠಾರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ ಉದ್ಘಾಟಿಸಿದರು. ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠದ ಶ್ರೀ ಶ್ರೀ ರಾಜೇಶ್ ನಾಥ್ ಜೀ ಆಶೀರ್ವಚನ ಮಾಡಿದರು.ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ ಸದಸ್ಯ ಹರೀಶ್ […]

ಬಾಜಿನಡ್ಕ : ಧಾರ್ಮಿಕ ಸಭಾ ಕಾರ್ಯಕ್ರಮ Read More »

ನಿವೃತ್ತ ಯೋಧ ಮೋಹನ ಕೆ. ಸಿ. ಹೃದಯಾಘಾತದಿಂದ ನಿಧನ

ಕೊಡಗು ಜಿಲ್ಲೆಯ ಪೆರಾಜೆ ಗ್ರಾಮದ ಅಮೆಚೂರ್ ಕೋಡಿಮನೆ ದಿ. ಚಂಗಪ್ಪರ ಪುತ್ರ ನಿವೃತ್ತ ಯೋಧ ಮೋಹನ ಕೆ. ಸಿ.ಯವರು ಹೃದಯಾಘಾತದಿಂದ ಮಾ. ೫ ರಂದು ನಿಧನರಾದರು.ಭಾರತೀಯ ಸೇನೆಯಲ್ಲಿ ೨೪ವರ್ಷ ಸೇವೆಗೈದು ಎರಡು ತಿಂಗಳ ಹಿಂದೆ ನಿವೃತ್ತಿಹೊಂದಿ ಮಡಿಕೇರಿಯ ಮನೆಯಲ್ಲಿ ವಾಸಿಸುತ್ತಿದ್ದರು. ಮಾ. ೫ರಂದು ಬೆಳಿಗ್ಗೆ ಸ್ನಾನ ಮಾಡಲೆಂದು ಹೋದಾಗ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದರು. ಅದೇ ದಿನ ಸಂಜೆ ಅಮೆಚೂರು ಕೋಡಿಮನೆಗೆ ಮೃತದೇಹ ತಂದು ಅಂತ್ಯಕ್ರಿಯೆ ನಡೆಸಲಾಯಿತು.ಮೃತರು ಪತ್ನಿ ಟೈನಿ, ಇಬ್ಬರು ಪುತ್ರಿಯರಾದ ವಂಶಿ ಮತ್ತು ಲಿಶಿ

ನಿವೃತ್ತ ಯೋಧ ಮೋಹನ ಕೆ. ಸಿ. ಹೃದಯಾಘಾತದಿಂದ ನಿಧನ Read More »

ತೊಡಿಕಾನ ಗೌಡ ಕಪ್ ಕಬಡ್ಡಿ ಪಂದ್ಯಾಟ,ಮೊದಲ ಪಂದ್ಯಾಟದಲ್ಲಿ ತೊಡಿಕಾನ ಎ ತಂಡಕ್ಕೆ ಜಯ

ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ನಡೆದ ಮೊದಲ ಹೊನಲು ಬೆಳಕಿನಪುರುಷರ ಕಬಡ್ಡಿ ಪಂದ್ಯಾಟದಲ್ಲಿತೊಡಿಕಾನ ಎ ತಂಡ ಐವರ್ನಾಡು ತಂಡವನ್ನು 11’18 ಅಂತರದಲ್ಲಿ ಸೋಲಿಸಿ ದ್ವಿತೀಯ ಹಂತದ ಪಂದ್ಯಾಕ್ಕೆ ಅರ್ಹತೆ ಪಡೆದಿದೆ.ತೊಡಿಕಾನ ಎ ತಂಡ ಆರಂಭದಲ್ಲಿ ಮುನ್ನೆಡೆ ಸಾಧಿಸಿಕೊಂಡು ಮುನ್ನುಗಿತು.

ತೊಡಿಕಾನ ಗೌಡ ಕಪ್ ಕಬಡ್ಡಿ ಪಂದ್ಯಾಟ,ಮೊದಲ ಪಂದ್ಯಾಟದಲ್ಲಿ ತೊಡಿಕಾನ ಎ ತಂಡಕ್ಕೆ ಜಯ Read More »

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿಹೆಚ್ಚಿನ ಕಡೆಗಳಲ್ಲಿ ರಾಜಕೀಯ ಹಾಗೂ ಇತರೆ ಸಂಘಟನೆಗಳಿಗೆ ಸಂಭಧಿಸಿದಂತೆ ಹಾಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕೆಲವೊಂದು ಕಡೆಗಳಲ್ಲಿ ಜನರು ಇನ್ನೂ ಬದಲಾಗಿಲ್ಲ…ಇದು ಸಮಾಜದಲ್ಲಿ ನಡೆಯತಕ್ಕಂತ ನಿಜ ವಿಷಯ.ಹೆಣ್ಣನ್ನು ಸಾಮಾಜಿಕವಾಗಿ ಪ್ರತೀ ಕೆಲಸದಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಿಕೊಳ್ಳೋದು, ಹಾಗೇನೆ ಸಮುದಾಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಂತ ಇಟ್ಟುಕೊಂಡು ಹೆಣ್ಣನಕಸ ಕ್ಲೀನಿಂಗ್, ಸಗಣಿಗುಡಿಸುದಕ್ಕೆ,ಇತರೇ ಕೆಲಸಗಳಿಗೆ ಹೆಣ್ಣನ್ನ ಬಳಸಿಕೊಳ್ತಾರೆ…ಇದೇ ಸಮಾಜದಲ್ಲಿಕೆಲವು ಪ್ರಮುಖರಂತ ಮಹಿಳಾ ದಿನಾಚರಣೆ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡಲು ಬಿಟ್ಟರೆ ದೊಡ್ಡದಾಗಿ ಹೆಣ್ಣನ್ನ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ Read More »

(ಕವನ) ಎಷ್ಟೆಂದರೂ ನೀನು ಹೆಣ್ಣು!

ಅಡಿಯಿಡಲು ಭುವಿಗೆಸೇರಿದ್ದ ಎಲ್ಲರ ಚಿತ್ತದೊಳೊಂದೇಪ್ರಶ್ನೆ ………….ಹೆಣ್ಣೇ……………. ಗಂಡೇ..,………..ಎಲ್ಲರ ಬಾಯಲ್ಲೂ ಒಂದೇ ಉತ್ತರಹೆಣ್ಣು……………….ಹೆಣ್ಣು……………ಹೆಣ್ಣುದೇವರು ಕೊಟ್ಟದ್ದು ಎನ್ನುತ್ತಲೇಅತ್ತ ಚದುರಿತು ಜನ ಸಮೂಹಇತ್ತ ಒಡೆಯಿತು ಅಪ್ಪ-ಅಮ್ಮನ ಮನಕೋಪಿಸಿದರು, ಶಪಿಸಿದರು, ಹಳಿದರುನಮ್ಮ ನಾಶ ಮಾಡಲೆಂದು ಬಂದೆಯಾ? ಎಂದರು.ಆಡಿದೊಂದೂ ಮಾತು ತಿಳಿಯದೇ ಬದುಕಿದಳುದಿಟ್ಟತನದಿ ಮೆರೆದಳುಗಟ್ಟಿತನದಿ ಬೆಳೆದಳುಎಲ್ಲವನ್ನೂ ಸಹಿಸಿಕೊಂಡು ಜೀವನ ಕಟ್ಟಿಕೊಂಡಳುಆದರೂ ಸಮಾಜ ಹೇಳಿತ್ತು…………….ಎಷ್ಟೆಂದರೂ ನೀನು ಹೆಣ್ಣು!………..ಆಕಾಶದಲ್ಲಿ ಹಾರಬಲ್ಲಳುಸಮುದ್ರದಲ್ಲಿ ಈಜಾಡಬಲ್ಲಳುರಸ್ತೆಯಲ್ಲಿ ಓಡಾಡಬಲ್ಲಳುಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಳುಆದರೂ ಸಮಾಜ ಹೇಳಿತ್ತು…………….ಎಷ್ಟೆಂದರೂ ನೀನು ಹೆಣ್ಣು!………..ತೊಟ್ಟಿಲ ತೂಗುವ ಕೈಯಲ್ಲಿ ದೇಶವನ್ನಾಳಿದಳುರಾಕೆಟ್ಟಿನಲ್ಲಿ ಕೂತು ಆಕಾಶದೆತ್ತರಕ್ಕೆ ಚಿಮ್ಮಿದಳುಹಿಮಗಡ್ಡೆಗಳ ಲೆಕ್ಕಿಸದೇ ಶಿಖರವನ್ನೇರಿದಳುದೇಶ ರಕ್ಷಣೆಗಾಗಿ ಬಂದೂಕ

(ಕವನ) ಎಷ್ಟೆಂದರೂ ನೀನು ಹೆಣ್ಣು! Read More »

ರಾಜ್ಯದಲ್ಲಿ ನಕ್ಸಲ್ ಪಡೆ ವಿಸರ್ಜನೆ

ಬೆಂಗಳೂರು: ರಾಜ್ಯ ನಕ್ಸಲ್ ಮುಕ್ತವಾಗಿರುವುದರಿಂದನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 16ನೇ ಬಜೆಟ್ ಮಂಡಿಸಿದ ಸಿಎಂ, ನಮ್ಮ ಸರ್ಕಾರದ ಅವಧಿಯಲ್ಲಿ 6 ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ.ಕಳೆದ ಫೆ.7ರಂದು ನ್ಯೂಸ್‌ ಕಾರ್ಕಳ ವೆಬ್‌ಸೈಟ್ ರಾಜ್ಯ ನಕ್ಸಲ್ ಮುಕ್ತ-ಎಎನ್‌ಎಫ್ ಮುಂದಿನ ಕಾರ್ಯವೇನು ಎಂಬ ಶೀರ್ಷಿಕೆಯಲ್ಲಿ ಈ ಕುರಿತು ವಿಶೇಷ ವರದಿ ಪ್ರಟಿಸಿತ್ತು.ಶರಣಾಗಿರುವ ನಕ್ಸಲರನ್ನು

ರಾಜ್ಯದಲ್ಲಿ ನಕ್ಸಲ್ ಪಡೆ ವಿಸರ್ಜನೆ Read More »

(ಮಹಿಳಾ ದಿನ ವಿಶೇಷ) ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸದ ಹೊರತು..

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತೀ ವರ್ಷವೂ ಈ ದಿನ ಬರುತ್ತದೆ, ಹೋಗುತ್ತದೆ. ಮಹಿಳಾ ದಿನದಂದು ಅಲ್ಲಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಹಿಳೆಯನ್ನು ಹಾಡಿ, ಹೊಗಳಿ, ಅಟ್ಟಕ್ಕೇರಿಸುವ ಭಾಷಣಗಳೇ ಮೇಳೈಸುತ್ತದೆ.ಮಹಿಳೆ ಕರುಣಾಮಯಿ, ಮಹಿಳೆ ತ್ಯಾಗಮಯಿ, ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ….ಬಹುಶಃ ಮಹಿಳಾ ದಿನದಂದು ಕೇಳಿ ಬರುವ ಸರ್ವೇ ಸಾಮಾನ್ಯ ಡೈಲಾಗ್‌ಗಳಿವು. ಜಗತ್ತು ಅಂದ ಮೇಲೆ ಸಕಲ ಜೀವರಾಶಿಗಳ ಪೈಕಿ ಮನುಷ್ಯನೂ ಒಂದು. ಎಲ್ಲಾ ಜೀವಿಗಳಲ್ಲಿರುವ ಹೆಣ್ಣು ಗಂಡು ಪ್ರಬೇಧದಂತೆ ಮನುಷ್ಯನಲ್ಲಿಯೂ. ಇಲ್ಲಿ ಗಂಡಿನ ಕರ್ತವ್ಯವನ್ನು ಗಂಡು ನಿಭಾಯಿಸಬೇಕು,

(ಮಹಿಳಾ ದಿನ ವಿಶೇಷ) ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸದ ಹೊರತು.. Read More »

ಮಾ.9ರಂದು ಅರಂತೋಡಿ ನಲ್ಲಿ ಎಸ್ ಕೆ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸುನ್ನೂರು ಮತ್ತು ಬೃಹತ್ ಇಫ್ತಾರ್ ಸಂಗಮ

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸ್ ನೂರ್ ಹಾಗೂ ಇಫ್ತಾರ್ ಕೂಟವು ಆದಿತ್ಯವಾರ ಸಂಜೆ 4 ಗಂಟೆಗೆ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ. ಅರಂತೋಡು ಮಸೀದಿ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಯವರು ಮಜ್ಲಿಸ್ ನ್ನೂರು ನೇತೃತ್ವ ವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಜುಬೇರ್ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್,

ಮಾ.9ರಂದು ಅರಂತೋಡಿ ನಲ್ಲಿ ಎಸ್ ಕೆ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸುನ್ನೂರು ಮತ್ತು ಬೃಹತ್ ಇಫ್ತಾರ್ ಸಂಗಮ Read More »

error: Content is protected !!
Scroll to Top