April 3, 2025

ಯುವಕ ನೇಣು ಬಿಗಿದು ಆತ್ಮಹತ್ಯೆ

ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೌಕ್ರಾಡಿ ಗ್ರಾಮದಲ್ಲಿ ಏ.2ರಂದು ಸಂಜೆ ನಡೆದಿದೆ. ಆಲಂಪಾಡಿ ನಿವಾಸಿ ಅಶ್ರಫ್(30) ಮೃತ ಯುವಕ. ಅಶ್ರಫ್ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರೊಂದಿಗೆ ಪದೇ ಪದೇ ಜಗಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನೆ ಮಂದಿ ಪ್ರತ್ಯೇಕವಾಗಿ ವಾಸವಾಗಿದ್ದರು. ಕಳೆದ ಕೆಲ ಸಮಯಗಳಿಂದ ಈ ಯುವಕ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಇದರಿಂದ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ.ಏ.2ರಂದು ಸಂಜೆ ಮನೆಯ ಸಿಟೌಟ್‌ನಲ್ಲಿದ್ದ ಕಬ್ಬಿಣದ ಪೈಪುಗೆ ಅಂಗಿಯ ಒಂದು ಬದಿಯನ್ನು ಕಟ್ಟಿ ಅದರ […]

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಜೀಪು ಪಲ್ಟಿ ಹೊಡೆದು ಪ್ರಯಾಣಿಕರಿಗೆ ಗಾಯ

ಥಾರ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ತೋಟಕ್ಕೆ ಬಿದ್ದ ಘಟನೆ ಇಂದು ಅಡ್ಕಾರ್ ಬಳಿ ಸಂಭವಿಸಿದೆ.ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯದಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಥಾರ್ ಜೀಪು ಅಡ್ಕಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ತೋಟಕ್ಕೆ ಉರುಳಿ ಬಿದ್ದಿದ್ದು, ಜೀಪ್‌ನೊಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಜೀಪ್ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಜೀಪು ಪಲ್ಟಿ ಹೊಡೆದು ಪ್ರಯಾಣಿಕರಿಗೆ ಗಾಯ Read More »

ಬೆಳ್ತಂಗಡಿ : ಕಾಡಿನಲ್ಲಿ ಬಿಟ್ಟು ಹೋಗಿದ್ದ ಮಗುವಿನ ತಂದೆ ತಾಯಿ ಪತ್ತೆ!

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡೋಟ್ಟು ರಸ್ತೆಯಲ್ಲಿ ಮಾ.22 ರಂದು ಬೆಳಗ್ಗೆ ಒಂದುವರೇ ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಬ್ಬರು ಕೂಡ ಸ್ವ ಇಚ್ಛೆಯಿಂದ ಮದುವೆಯಾಗುವುದಾಗಿ ಪೋಲಿಸರ ಮುಂದೆ ರಂಜಿತ್ ಗೌಡ ಒಪ್ಪಿದ್ದಾರೆ ಎನ್ನಲಾಗಿದೆ. ಆ ಮೂಲಕ ಪ್ರಕರಣ ಸುಖಾಂತ್ಯವಾಗಿದೆ.ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಬೆಳ್ತಂಗಡಿ : ಕಾಡಿನಲ್ಲಿ ಬಿಟ್ಟು ಹೋಗಿದ್ದ ಮಗುವಿನ ತಂದೆ ತಾಯಿ ಪತ್ತೆ! Read More »

error: Content is protected !!
Scroll to Top