ಒಂದು‌ ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು!

ಕಡಬ ತಾಲೂಕಿನ ರಾಮಕುಂಜ ಗ್ರಾಮದ ದೇರೆಜಾಲು ಮನೆಯ ಪ್ರವೀಣ ಎಂಬವರ ತೋಟದಲ್ಲಿ ಒಂದು ದೊಡ್ಡ ಗಾತ್ರದ ತೆಂಗಿನ ಕಾಯಿ ದೊರೆತ್ತಿದೆ. ಇದರ 1.620 ಗ್ರಾಮ್ ಇದೆ. ಒಂದು ಕೆ.ಜೆ ತೆಂಗಿನ ಕಾಯಿಗೆ ಅಂದಾಜು 70 ರೂಪಾಯಿ ಇದ್ದು, 1620 ಗ್ರಾಂ ತೆಂಗಿನ ಕಾಯಿಗೆ ಅಂದಾಜು 113 ರೂ. ಆಗುತ್ತದೆ.
ಕೇವಲ ಒಂದು ತೆಂಗಿನ ಕಾಯಿ ಅಲ್ಲ… ಅವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಬೆಳೆಯುವ ಪ್ರತಿ ತೆಂಗಿನ ಕಾಯಿಗಳ ತೂಕವು ಸರಾಸರಿ ಅಂದಾಜು 1.5 ಕೆ.ಜಿ ಗಿಂತ ಅಧಿಕವಿರುತ್ತದೆ.
ಕಳೆದ ವರ್ಷ ಇದಕ್ಕಿಂತಲೂ ಅಧಿಕ ತೂಕದ ತೆಂಗಿನಕಾಯಿ 1.950ಕೆ.ಜಿ ಇತ್ತು ಎಂದು ತಿಳಿಸಿದ್ದಾರೆ.
ಇವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಒಂದು ಗೊನೆಯಲ್ಲಿ 7 ಅಥವಾ 8 ತೆಂಗಿನ ಕಾಯಿ ಬೆಳೆಯುತ್ತದೆ.
ವರ್ಷಂಪ್ರತಿ ಈ ಮರದಲ್ಲಿ 60ರಿಂದ 70 ತೆಂಗಿನ ಕಾಯಿ ದೊರೆಯುತ್ತದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top