July 2025

ಗೆಳತಿಯನ್ನು ಗರ್ಭಿಣಿಯಾಗಿಸಿ ಮಗುವಿನ ಜನನಕ್ಕೆ ಕಾರಣವಾದ ವ್ಯಕ್ತಿಯನ್ನು ತಕ್ಷಣ ಬಂಧಿಸಲು ಎಸ್ಪಿಗೆ ಸೂಚನೆ

ಸಹಪಾಠಿಯಿಂದ ಯುವತಿ ತಾಯಿಯಾದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ಕೃಷ್ಣ ಜೆ ರಾವ್ ತಲೆಮರೆಸಿಕೊಂಡಿದ್ದು ಎರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸಲು ಶಾಸಕ ಅಶೋಕ್ ರೈ ಜಿಲ್ಲಾ ಎಸ್ಪಿ ಯವರಿಗೆ ಸೂಚನೆ ನೀಡಿದ್ದಾರೆ.ಎಸ್ಪಿ ಅವರಿಗೆ ಕರೆ ಮಾಡಿದ ಶಾಸಕ ಅಶೋಕ್ ರೈ ಅವರು ಆರೋಪಿ ಎಲ್ಲೇ ಇದ್ದರೂ ಆತನನ್ನು ಬಂಧಿಸಬೇಕು. ಆರೋಪಿಯನ್ನು ಇಷ್ಟು ದಿನ ಬಂಧಿಸದೇ ಇರುವುದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ತಂಡವನ್ನು ರಚನೆಮಾಡಿ ಆರೋಪಿಯನ್ನು ಎರಡು ದಿನದೊಳಗೆ ಬಂಧಿಸಬೇಕು ಮತ್ತು ನೊಂದ ಯುವತಿಗೆ ನ್ಯಾಯವನ್ನೂ ಕೊಡಿಸುವ […]

ಗೆಳತಿಯನ್ನು ಗರ್ಭಿಣಿಯಾಗಿಸಿ ಮಗುವಿನ ಜನನಕ್ಕೆ ಕಾರಣವಾದ ವ್ಯಕ್ತಿಯನ್ನು ತಕ್ಷಣ ಬಂಧಿಸಲು ಎಸ್ಪಿಗೆ ಸೂಚನೆ Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ

ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಶುಕ್ರವಾರ ಶುಕ್ರವಾರ ಎನ್.ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಬ್ದುಲ್‌ ರೆಹಮಾನ್ ಎಂಬಾತನಾಗಿದ್ದು, ಕತಾರ್‌ನಿಂದ ಕೇರಳಕ್ಕೆ ಆಗಮಿಸಿದಾಗ ಎನ್‌ಐಎ ತಂಡ ಆತನನ್ನು ಬಂಧಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ರೆಹಮಾನ್ ಮತ್ತು ತಲೆಮರೆಸಿಕೊಂಡಿದ್ದ ಇತರ ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಒಟ್ಟು ಆರೋಪ ಪಟ್ಟಿ 28

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ Read More »

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು

ಕೆಲವು ದಿನಗಳ ಹಿಂದೆ ಸೋಣಂಗೇರಿ ಸಮೀಪ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯರೊಬ್ಬರು ಮ್ರತಪಟ್ಟ ಘಟನೆ ವರದಿಯಾಗಿದೆ.ಕಲ್ಲುಗುಂಡಿಯ ಡಾ. ಶಮಂತ್ ರವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಜೂ.4ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಕಾಲು ತೀವ್ರವಾಗಿ ಜಖಂಗೊಂಡಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತೆನ್ನಲಾಗಿದೆ. ಡಾ. ಶಮಂತ್ ಅವರು ದುಗ್ಗಲಡ್ಕ

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು Read More »

ಪೆರಾಜೆ ಸಮೀಪ ಭೀಕರ ಬೈಕ್ ಅಪಘಾತ,ಬೈಕ್ ಸವಾರ ಗಂಭೀರ

ಪೆರಾಜೆ ಸಮೀಪ ಬೈಕ್ ಸ್ಕಿಡ್ ಆಗಿ ನಿಡುಬೆಯ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆ‌. ಐವರ್ನಾಡು ಗ್ರಾಮದ. ಸುಬ್ರಹ್ಮಣ್ಯ ಅವರ ಮಗ ಗೋಪಿನಾಥ(40) ಎಂಬ ವ್ಯಕ್ತಿಯೇ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.ತಲೆಗೆ ಗಂಭೀರ ಗಾಯವಾದ ವ್ಯಕ್ತಿಯನ್ನು ಸುಳ್ಯ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.

ಪೆರಾಜೆ ಸಮೀಪ ಭೀಕರ ಬೈಕ್ ಅಪಘಾತ,ಬೈಕ್ ಸವಾರ ಗಂಭೀರ Read More »

ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸುಳ್ಯ ತಾಲೂಕಿನಲ್ಲಿ ಭಾರೀ ಸುರಿಯುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು,ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದಿನಾಂಕ 03.07.2025 ರಂದು ರಜೆ ಘೋಷಿಸಲಾಗಿರುತ್ತದೆ.ಎಂದು ತಹಶೀಲ್ದಾರರು ಸುಳ್ಯ ತಿಳಿಸಿದ್ದಾರೆ

ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಪ್ರಧಾನಿಮೋದಿ,ಗ್ರಹ ಸಚಿವರಿಗೆ ಅವಹೇಳನ ಪ್ರಕರಣ ದಾಖಲು

ಜುಲೈ 1 ರಂದು ಅಜಿ.ಎಂ.ಜೋಸ್ ಎಂಬವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಭಾರತದ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರದ ಗೃಹ ಮಂತ್ರಿಯ ಚಿತ್ರದೊಂದಿಗೆ ಮಧ್ಯದಲ್ಲಿ ಮಹಿಳೆಯೋರ್ವರ ನಗ್ನ ಫೋಟೋವನ್ನು ಅಳವಡಿಸಿ ಹಿಂದೂ ಧರ್ಮದ ದೇವರುಗಳ ಪೋಟೋಗಳನ್ನು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರ ಇರುವ ಫೋಟೋಗಳ ಕೆಳಗೆ ಶೀರ್ಷಿಕೆಯನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ, ದ್ವೇಷ ಭಾವನೆ ಮೂಡಿಸುವ ಪೋಸ್ಟ್ ನ್ನು ಉದ್ದೇಶ ಪೂರ್ವಕವಾಗಿ ಹಾಕಿದ್ದಾರೆನ್ನಲಾಗಿದೆ.ಈ ಬಗ್ಗೆ ವೇಣೂರು

ಪ್ರಧಾನಿಮೋದಿ,ಗ್ರಹ ಸಚಿವರಿಗೆ ಅವಹೇಳನ ಪ್ರಕರಣ ದಾಖಲು Read More »

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ವರ್ಗಾವಣೆ

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಅವರಿಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ.ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆಯ ಕಚೇರಿ ವ್ಯವಸ್ಥಾಪಕರಾಗಿ ಅವರಿಗೆ ವರ್ಗಾವಣೆಯಾಗಿದೆ. ಇವರ ವರ್ಗಾವಣೆಯಿಂದ ತೆರವಾಗಿರುವ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಹುದ್ದೆಗೆ ಯಾರು ವರ್ಗಾಣೆಗೊಂಡು ಬರುತ್ತಾರೆ ಎಂದು ತಿಳಿದು ಬಂದಿಲ್ಲ.ಸುಧಾಕರ ಎಂ.ಎಚ್.ಅವರು ಕಳೆದ ಮೂರು ವರ್ಷದಿಂದ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ವರ್ಗಾವಣೆ Read More »

error: Content is protected !!
Scroll to Top