ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಶುಕ್ರವಾರ ಶುಕ್ರವಾರ ಎನ್.ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಎಂಬಾತನಾಗಿದ್ದು, ಕತಾರ್‌ನಿಂದ ಕೇರಳಕ್ಕೆ ಆಗಮಿಸಿದಾಗ ಎನ್‌ಐಎ ತಂಡ ಆತನನ್ನು ಬಂಧಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ರೆಹಮಾನ್ ಮತ್ತು ತಲೆಮರೆಸಿಕೊಂಡಿದ್ದ ಇತರ ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಒಟ್ಟು ಆರೋಪ ಪಟ್ಟಿ 28 ಕ್ಕೆ ತಲುಪಿದೆ. ತಲೆಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳ ಮಾಹಿತಿ ನೀಡಿದವರಿಗೆ ಎನ್‌ಐಎ ಇನಾಮು ಘೋಷಿಸಿತ್ತು. ರೆಹಮಾನ್ ಮಾಹಿತಿ ನೀಡಿದವರಿಗೆ ನಾಲ್ಕು ಲಕ್ಷ ರೂ. ಇನಾಮು ನೀಡುವುದಾಗಿ ಘೋಷಿಸಿತ್ತು. ಪ್ರವೀಣ್ ನೆಟ್ಟಾರು ಅವರನ್ನು ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ 2022ರ ಜುಲೈ 26, ರಂದು ಪಿಎಫ್‌ಐ ಕಾರ್ಯಕರ್ತರು ಮಾರಕ ಆಯುಧಗಳಿಂದ ಹೊಡೆದುತ್ಯೆಗೈದಿದ್ದರು.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ

























































