November 2025

ಅರಂತೋಡು ಜಮಾಅತ್ ವತಿಯಿಂದ ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿರುವ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ

ಅರಂತೋಡು ಜಮಾಅತ್ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ದಿಕ್ರ್ ಸ್ವಲಾತ್ ಸಮಿತಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅರಂತೊಡು ಶಾಖೆ ಇವುಗಳ ಜಂಟೀ ಆಶ್ರಯದಲ್ಲಿ ಪವಿತ್ರ ಉಮ್ರಾ ನಿರ್ವಹಿಸಲು ಪವಿತ್ರ ಮಕ್ಕಾಕ್ಕೆ ತೆರಳಲಿರುವ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ ಸಮಾರಂಭವು ನ.3 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ ಅಧ್ಯಕ್ಷತೆ ವಹಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ಮುಖ್ಯ ಅತಿಥಿಗಳಾದ […]

ಅರಂತೋಡು ಜಮಾಅತ್ ವತಿಯಿಂದ ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿರುವ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ Read More »

ಕೋಟೇಶ್ವರದಿಂದ ಹೊರಟ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥ

ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟರಮಣ ಗೌಡರ ದ್ವಿತೀಯ ಪುತ್ರ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಸೇವಾ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಲಿರುವ ಬೆಳ್ಳಿರಥ ಯಾತ್ರೆಗೆ ಸೆ.4ರಂದು ಬೆಳಿಗ್ಗೆ ಕೋಟೇಶ್ವರದಲ್ಲಿ ಚಾಲನೆ ನೀಡಲಾಗಿದೆ.ಧಾರ್ಮಿಕ ವಿಧಿ ವಿಧಾನಗಳ ಮೂಲಕ ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗೂ ಮನೆಯವರಿಗೆ ರಥ ಹಸ್ತಾಂತರ ಮಾಡುವ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನಡೆಯಿತು. ರಥಯಾತ್ರೆಗೆ ಉಡುಪಿ, ಚಿಕ್ಕಮಗಳೂರು

ಕೋಟೇಶ್ವರದಿಂದ ಹೊರಟ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥ Read More »

ಮಿಸೆಸ್ ಮಂಗಳೂರು ಸ್ಪರ್ಧೆಯಲ್ಲಿ ಕಿರೀಟ ತನ್ನದಾಗಿಸಿಕೊಂಡ ನೆಲ್ಯಾಡಿಯ ಯುವತಿ

ದುಬೈನಲ್ಲಿ ನಡೆದ ಮಿಸೆಸ್ ಮಂಗಳೂರು ದಿವಾ 2025 ಸ್ಪರ್ಧೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಮಿನು ಜೋಸ್ ಅವರು ಈ ಬಾರಿಯ ಕಿರೀಟ ತನ್ನದಾಗಿಸಿಕೊಂಡಿದ್ದಾರೆ‌.ಪ್ರಿಯಾ ಫ್ಯಾಶನ್ಸ್ ಸಂಸ್ಥೆ ಈ ಸ್ಪರ್ಧೆಯನ್ನು ಗೋಶನ್ ಈವೆಂಟ್ ಮೀಡಿಯಾ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು.ಆಕರ್ಷಕ ವೇಷಭೂಷಣ, ಆತ್ಮ ವಿಶ್ವಾಸಭರಿತ ಪ್ರದರ್ಶನ, ಸರಳ ವ್ಯಕ್ತಿತ್ವದಿಂದ ಮಿನು ಜೋಸ್ ಅವರು ದುಬೈ ತೀರ್ಪುಗಾರರ ಮೆಚ್ಚುಗೆ ಗಳಿಸಿದರು.ಈ ಸ್ಪರ್ಧೆಯಲ್ಲಿ ನಯನಾ ಶೆಟ್ಟಿ ಫಸ್ಟ್ ರನ್ನರ್ ಅಪ್ ಹಾಗೂ ಅಶ್ಮಿತಾ ಕೊಟ್ಯಾನ್ ಸೆಕೆಂಡ್ ರನ್ನರ್ ಅಪ್ ಆದರು. ಮಿಸ್ ವಿಭಾಗದಲ್ಲಿ

ಮಿಸೆಸ್ ಮಂಗಳೂರು ಸ್ಪರ್ಧೆಯಲ್ಲಿ ಕಿರೀಟ ತನ್ನದಾಗಿಸಿಕೊಂಡ ನೆಲ್ಯಾಡಿಯ ಯುವತಿ Read More »

ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ : ಶ್ರೇಯಾ ಸುಳ್ಯ

ಕನ್ನಡ ತುಂಬಾ ಸುಂದರವಾದ ಭಾಷೆ.ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ ಎಂದು ಸುಳ್ಯ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ‌ ವಿದ್ಯಾರ್ಥಿನಿ‌ ಶ್ರೇಯಾ ಸುಳ್ಯ ಹೇಳಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಆಶ್ರಯದಲ್ಲಿ ಅಮೃತ ಮಹೋತ್ಸವ ಸಮಿತಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಸಹಕಾರದೊಂದಿಗೆ ದಿ. ಯು. ಸು. ಗೌ ಸ್ಮರಣಾರ್ಥ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನ.2ರಂದು ನಡೆದ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ

ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೆ ಭಾಷೆ ಕನ್ನಡ : ಶ್ರೇಯಾ ಸುಳ್ಯ Read More »

ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಪ್ರೇರಣೆ – ಡಾ. ಅನಂತ ಪದ್ಮನಾಭ ಭಟ್ ಎರ್ಕಲ್ಪಾಡಿ

ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲಿನಲ್ಲಿ ನ.3ರಂದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಲಾಭಿವೃದ್ಧಿ ಸಮಿತಿ ಮಂಡೆಕೋಲು ಇಲ್ಲಿ ಕನ್ನಡ ಗಾನಯಾನ ಕಾವ್ಯ ಮಿಲನಕಾರ್ಯಕ್ರಮ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾದ . ಮುರಳೀಧರ ರೈ ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಮಕ್ಕಳು ಘೋಷ ವಾಕ್ಯಗಳ ಮೂಲಕ, ಬ್ಯಾಂಡ್ ಸೆಟ್ ನೊಂದಿಗೆ ರಸ್ತೆಯ ಉದ್ದಗಲಕ್ಕೂ ಘೋಷವಾಕ್ಯವನ್ನು ನುಡಿಯುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ರಾಷ್ಟ್ರ

ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಪ್ರೇರಣೆ – ಡಾ. ಅನಂತ ಪದ್ಮನಾಭ ಭಟ್ ಎರ್ಕಲ್ಪಾಡಿ Read More »

ಕೋಟೇಶ್ವರದಲ್ಲಿ ಬೆಳ್ಳಿ ರಥಕ್ಕೆ ನಡೆದ ಗುತ್ತಿಪೂಜೆ

ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದಿ.ಕುರುಂಜಿ ವೆಂಕಟರಮಣ ಗೌಡರ ಸುಪುತ್ರ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಮನೆಯವರು ಸೇವಾ ರೂಪದಲ್ಲಿ ನೀಡುತ್ತಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ನ.3ರಂದು ಗುತ್ತಿಪೂಜಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಡಾ.ರೇಣುಕಾ ಪ್ರಸಾದ್,ಡಾ.ಜ್ಯೋತಿ ಆರ್ ಪ್ರಸಾದ್ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಾಜದ ಪ್ರಮುಖರು, ಕುರುಂಜಿ ಕುಟುಂಬಸ್ಥರು, ಕೆ.ವಿ.ಜಿ‌ ಸಂಸ್ಥೆಗಳ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.ನಾಳೆ ಬೆಳಗ್ಗೆ ಪೂಜೆ ನಡೆದು ಬೆಳ್ಳಿರಥಯಾತ್ರೆ ಸುಳ್ಯಕ್ಕೆ ಆಗಮಿಸಲಿದೆ.

ಕೋಟೇಶ್ವರದಲ್ಲಿ ಬೆಳ್ಳಿ ರಥಕ್ಕೆ ನಡೆದ ಗುತ್ತಿಪೂಜೆ Read More »

ಸುಳ್ಯ : ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ,ವಿದ್ಯಾರ್ಥಿ ಕವಿಗೋಷ್ಠಿ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಆಶ್ರಯದಲ್ಲಿ ಅಮೃತ ಮಹೋತ್ಸವ ಸಮಿತಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಸಹಕಾರದೊಂದಿಗೆ ದಿ. ಯು. ಸು. ಗೌ ಸ್ಮರಣಾರ್ಥ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ 2025 ನವೆಂಬರ್ 2ರಂದುಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ನಡೆಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು.ದೀಪಾಶ್ರೀ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ನವ್ಯಶ್ರೀ ದೀಪಾವಳಿ,ತನ್ವಿ ಹೊಸ್ತಿಲು ದಾಟದವರು,ದೀಕ್ಷಿತಾ ಕೆ.ಆರ್ ಕರಗುತ್ತಿದೆ ಕಾನನ,ಅಂಜನಾ ಬಿ.ವಿ ನೆನಪಿನ‌ ಹನಿಗಳು,ದೇಶಿತಾ ಹೆಚ್.ಆರ್

ಸುಳ್ಯ : ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ,ವಿದ್ಯಾರ್ಥಿ ಕವಿಗೋಷ್ಠಿ Read More »

ಸಂಪಾಜೆ : ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ

ಪಶು ವೈದ್ಯಕೀಯ ಆಸ್ಪತ್ರೆ ಸುಳ್ಯ, ಗ್ರಾಮ ಪಂಚಾಯಿತಿ ಸಂಪಾಜೆ ಇವುಗಳ ವತಿಯಿಂದ ಎಂಟನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕ ಕಾರ್ಯಕ್ರಮ ಸಂಪಾಜೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು.ಸಂಪಾಜೆ ಗ್ರಾಮದ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಇವರು ಲಸಿಕ ಕಿಟ್ಟನ್ನು ನೀಡುವುದರ ಮೂಲಕ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಎಸ್ ಕೆ ಹನೀಫ್  ಪಂಚಾಯಿತಿಯ ಕಾರ್ಯದರ್ಶಿಗಳು ಹಾಗೂ ಪಂಚಾಯತಿಯ ಸಿಬ್ಬಂದಿಗಳು ಹಾಜರಿದ್ದರು.

ಸಂಪಾಜೆ : ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ Read More »

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ವಾರ್ಷಿಕ ಮಹಾಸಭೆ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಹಾಜಿ ಅಬ್ದುಲ್‌ ಖಾದರ್ ಬಾಯಾಂಬಾಡಿಯವರ ಅಧ್ಯಕ್ಷತೆಯಲ್ಲಿ ನ.01ರಂದು ಸುಳ್ಯದ ಸುಪ್ರೀಮ್ ಹಾಲ್ ನಲ್ಲಿ ನಡೆಯಿತು. ಗೌರಧ್ಯಕ್ಷರಾದ ಬಹು| ಸಯ್ಯದ್ ಎನ್ ಪಿ ಎಂ , ಝೈನುಲ್ ಅಬಿದೀನ್ ತಂಙಳ್ ದುವಾಃ ನೇರವೇರಿಸಿದರು. ಉಪಾಧ್ಯಕ್ಷರಾದ ಹಾಜಿ ಹೆಚ್ ಎ ಅಬ್ಬಾಸ್ ಸಂಟ್ಯಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆಶ್ರಫ್ ಗುಂಡಿವರದಿ ವಾಚಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಸಂಸ್ಥೆಗೆ ಸುಳ್ಯದಲ್ಲಿ ಸ್ಥಳ ಖರೀದಿ, ಅಲ್

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ವಾರ್ಷಿಕ ಮಹಾಸಭೆ Read More »

ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತದ ವನಿತಾ ಕ್ರಿಕೆಟ್ ತಂಡ

ನ.2ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್ ಅಂತಿಮ‌ ಕ್ರಿಕೆಟ್ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 7 ವಿಕೆಟ್‌ಗೆ 298 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾಗೆ 299 ರನ್‌ಗಳ ಸವಾಲಿನ ಗುರಿ ನೀಡಿತ್ತು. ಆ ಗುರಿ ಬೆನ್ನಟ್ಟಿದ ಆಫ್ರಿಕಾ ತನ್ನೆಲ್ಲ ವಿಕೆಟ್ ಕಳೆದುಕೊಂಡು 246(45.3) ಸೋಲೊಪ್ಪಿಕೊಂಡಿದೆ. ಈ ಮೂಲಕ ಮಹಿಳಾ ತಂಡ 52 ರನ್ ಗಳಿಂದ ವಿಜಯ ಸಾಧಿಸಿದೆ.

ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತದ ವನಿತಾ ಕ್ರಿಕೆಟ್ ತಂಡ Read More »

error: Content is protected !!
Scroll to Top