ಕೋಟೇಶ್ವರದಲ್ಲಿ ಬೆಳ್ಳಿ ರಥಕ್ಕೆ ನಡೆದ ಗುತ್ತಿಪೂಜೆ

ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ದಿ.ಕುರುಂಜಿ ವೆಂಕಟರಮಣ ಗೌಡರ ಸುಪುತ್ರ ಡಾ.ಕೆ.ವಿ.ರೇಣುಕಾಪ್ರಸಾದ್ ಮತ್ತು ಮನೆಯವರು ಸೇವಾ ರೂಪದಲ್ಲಿ ನೀಡುತ್ತಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ ನ.3ರಂದು ಗುತ್ತಿಪೂಜಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಡಾ.ರೇಣುಕಾ ಪ್ರಸಾದ್,ಡಾ.ಜ್ಯೋತಿ ಆರ್ ಪ್ರಸಾದ್ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಾಜದ ಪ್ರಮುಖರು, ಕುರುಂಜಿ ಕುಟುಂಬಸ್ಥರು, ಕೆ.ವಿ.ಜಿ‌ ಸಂಸ್ಥೆಗಳ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ನಾಳೆ ಬೆಳಗ್ಗೆ ಪೂಜೆ ನಡೆದು ಬೆಳ್ಳಿರಥಯಾತ್ರೆ ಸುಳ್ಯಕ್ಕೆ ಆಗಮಿಸಲಿದೆ.





















































































Leave a Comment

Your email address will not be published. Required fields are marked *

error: Content is protected !!
Scroll to Top