January 2026

ಲೇಖಕ, ಅಂಕಣಗಾರ ಡಾ.ಸುಂದರ ಕೇನಾಜೆಯವರ ಅಂಕಣ ಬರಹ ಕೃತಿ “ಮಾತಿಲ್ಲದ ಮಾತು” ಬಿಡುಗಡೆ

ಲೇಖಕ, ಅಂಕಣಗಾರ ಡಾ.ಸುಂದರ ಕೇನಾಜೆಯವರ ಅಂಕಣ ಬರಹ ಕೃತಿ “ಮಾತಿಲ್ಲದ ಮಾತು” ಬಿಡುಗಡೆ ಸಮಾರಂಭ ಜ.31ರಂದು ಸುಳ್ಯದ ಪ್ರೆಸ್ ಕ್ಲಬ್ ವಠಾರದಲ್ಲಿ ನಡೆಯಿತು.ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ವಾಡಿಯವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.ಖ್ಯಾತ ವ್ಯಂಗ್ಯಚಿತ್ರಗಾರ ದಿನೇಶ್ ಕುಕ್ಕುಜಡ್ಕ ಕೃತಿಯ ಕುರಿತು ಮಾತನಾಡಿದರು.ಕೃತಿಗಾರ ಡಾ. ಸುಂದರ ಕೇನಾಜೆಯವರು ತನ್ನ ಕ್ರತಿಯ ಬಗ್ಗೆ ಮಾಹಿತಿ ನೀಡಿದರು.ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ,ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮನೆ,ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಪ್ ಶುಭಹಾರೈಸಿದರು.

ಲೇಖಕ, ಅಂಕಣಗಾರ ಡಾ.ಸುಂದರ ಕೇನಾಜೆಯವರ ಅಂಕಣ ಬರಹ ಕೃತಿ “ಮಾತಿಲ್ಲದ ಮಾತು” ಬಿಡುಗಡೆ Read More »

ನಾಳೆಯಿಂದ(ಫೆ.1) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವ ಆರಂಭ

ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.24 ರಿಂದ ಫೆ.9 ರ ತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಫೆ. 1 ರಿಂದ ಫೆ. 5 ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂ‌ರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ತಿಳಿಸಿದ್ದಾರೆ.ಫೆ.1 ರಂದು ಪೂರ್ವಾಹ್ನ 8.30 ರಿಂದ ವೇದ

ನಾಳೆಯಿಂದ(ಫೆ.1) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವ ಆರಂಭ Read More »

ಬೀದರ್‌ನಲ್ಲಿ ಸ್ಫೋಟ; 6 ಮಕ್ಕಳಿಗೆ ಗಂಭೀರ ಗಾಯ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೊಳಕೆರ ಗ್ರಾಮದಲ್ಲಿ ಅನುಮಾನಾಸ್ಪದ ವಸ್ತು ಸ್ಪೋಟಗೊಂಡು ಶಾಲೆಗೆ ತೆರಳುತ್ತಿದ್ದ ಆರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.ಗಾಯಗೊಂಡವರಲ್ಲಿ ಅನ್ವರ್ ಎಂಬ ಬಾಲಕನನ್ನು ಹೈದರಾಬಾದ್‌ಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಮೊಳಗಿ ಮಾರಾಯ ದೇಗುಲಕ್ಕೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹುಮನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಎರಡನೇ ಸ್ಪೋಟವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಬೀದರ್‌ನಲ್ಲಿ ಸ್ಫೋಟ; 6 ಮಕ್ಕಳಿಗೆ ಗಂಭೀರ ಗಾಯ Read More »

ವೈಭವದಿಂದ ನಡೆದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ಕಾಲಾವಧಿ ಜಾತ್ರೋತ್ಸವ

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ಕಾಲಾವಧಿ ಜಾತ್ರೋತ್ಸವವು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.30 ರಂದು ವೈಭವದಿಂದ ನಡೆಯಿತು.ಬೆಳಿಗ್ಗೆ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ ಮತ್ತು ಶುದ್ಧಿ ಕಲಶ ನಡೆಯಿತು.ಬಳಿಕ ವಿಷ್ಣುಪ್ರಿಯಾ ಮಹಿಳಾ ಭಜನಾ ಮಂಡಳಿ ಬೆಳಂದೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.ಸಂಜೆ ರಂಗಪೂಜೆ,ಮಹೋತ್ಸವ ಶ್ರೀ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ,ಮಂತ್ರಾಕ್ಷತೆ ನಡೆಯಿತು.ನಂತರ ಗುಳಿಗ,ಪಂಜುರ್ಲಿ,ಶಿರಾಡಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.ಈ

ವೈಭವದಿಂದ ನಡೆದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ಕಾಲಾವಧಿ ಜಾತ್ರೋತ್ಸವ Read More »

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಇನ್ಸ್ ಪೆಕ್ಟರ್

ಠಾಣೆಗೆ ಬಂದ ದೂರುದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲೋಕಾಯುಕ್ತ ಪೊಲೀಸ್ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಇನ್ಸ್ ಪೆಕ್ಟರ್ Read More »

ತೊಡಿಕಾನ : ಫೆ.7ಕ್ಕೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಸುಳ್ಯ ತಾಲೂಕು ಸಂಪಾಜೆ ವಲಯ, ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೊಡಿಕಾನ, ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ, ಸಂಪಾಜೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶೌರ್ಯ ವಿಪತ್ತು ನಿರ್ವಹಣಾ ಘಟಕ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಸಂಪಾಜೆ ವಲಯ ಮತ್ತು ಊರವರ ಸಹಕಾರದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ

ತೊಡಿಕಾನ : ಫೆ.7ಕ್ಕೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ Read More »

ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಶಾಸಕಿ ಕುಮಾರಿ ಭಾಗೀರಥಿ ಮುರಳ್ಯ ಅವರು. ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ‌ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದರು.ಈ ಮನವಿಗೆ ಹಿಂದಿನಂತೆಯೇ ಸ್ಪಂದಿಸಿದ ಸಚಿವರು, ಶೀಘ್ರವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.ಸಂದರ್ಭದಲ್ಲಿ ಸಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.

ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಪೆರುವಾಜೆ : ಜ.30ಕ್ಕೆ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವ

ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವವುಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.30ರಂದು ನಡೆಯಲಿದೆ.ಆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಜರಗಲಿರುವ ಈ ದೇವತಾ ಕಾರ್ಯದಲ್ಲಿ ಭಕ್ತಾಭಿಮಾನಿಗಳಾದ ತಾವೆಲ್ಲರೂ ಭಾಗಿಗಳಾಗಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ. ಶ್ರೀ ವಿಷ್ಣುಮೂರ್ತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.ಮಕರ ಮಾಸ ೧೬ನೇ ದಿನಾಂಕ 30-01-2026ನೇ ಶುಕ್ರವಾರಪೂರ್ವಾಹ್ನ ಘಂಟೆ 8.00 ರಿಂದದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ ಮತ್ತು ಶುದ್ದಿ ಕಲಶ

ಪೆರುವಾಜೆ : ಜ.30ಕ್ಕೆ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವ Read More »

ತೊಡಿಕಾನ : ಅಡಿಗಾರ ನೀಲಮ್ಮ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡಿಗಾರ ದಿ‌.ರಾಮಣ್ಣ ಗೌಡರ ಧರ್ಮಪತ್ನಿ ನೀಲಮ್ಮ ಜ.29ರಂದು ತಮ್ಮ ಮನೆಯಲ್ಲಿ ನಿಧನರಾದರು.ಅವರಿಗೆ 87 ವರ್ಷ ಪ್ರಾಯವಾಗಿತ್ತು.ಮೃತರು ಮಗ ಜನಾರ್ದನ,ಮೂವರ ಹೆಣ್ಣು ಮಕ್ಕಳನ್ನು,ಸೊಸೆಯನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರ ಜ.30ರಂದು ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತೊಡಿಕಾನ : ಅಡಿಗಾರ ನೀಲಮ್ಮ ನಿಧನ Read More »

ನಾಳೆ (ಜ.30)ಭೀಕರ ಅಪಘಾತಲ್ಲಿ ಸಾವನ್ನಪ್ಪಿದ ಬಿಸಿಲು ಮನೆಯ  ಸುಂದರ ಗೌಡರ ಅಂತ್ಯ ಸಂಸ್ಕಾರ

ಕೊಡಗು ಸಂಪಾಜೆಯ ಮುಖ್ಯರಸ್ತೆಯಲ್ಲಿ ಕಾರೊಂದು ರಾಂಗ್ ಸೈಡಲ್ಲಿ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟ  ಪರಿಣಾಮವಾಗಿ ಕೊಯನಾಡಿನ ಚಿಟ್ಟಿಕಾನ ಬಿಸಿಲುಮನೆಯ ರಿಕ್ಷಾ ಚಾಲಕ  ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತ್  ಮಾಜಿ ಉಪಾಧ್ಯಕ್ಷ  ಸುಂದರ(62) ರವರು ಗಂಭೀರ ಗಾಯಗೊಂಡು  ಸ್ಥಳದಲ್ಲೆ ಕೊನೆಯುಸಿರೆಳೆದಿದ್ದು  ಅವರ ಅಂತ್ಯ ಸಂಸ್ಕಾರ ಮಗ ಭಾರತೀಯ ಭೂಸೇನೆಯ ಸೈನಿಕ ದೇವಿ ಪ್ರಸಾದ್ ಆಗಮಿಸಿದ ಬಳಿಕ ಮೃತರ ಮನೆಯಲ್ಲಿ ಗೌಡ ಸಂಪ್ರದಾಯದ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.ಮಗ ದೇವಿಪ್ರಸಾದ್ ಅಪ್ಪನ‌ ಸಾವಿನ ಸುದ್ದಿ

ನಾಳೆ (ಜ.30)ಭೀಕರ ಅಪಘಾತಲ್ಲಿ ಸಾವನ್ನಪ್ಪಿದ ಬಿಸಿಲು ಮನೆಯ  ಸುಂದರ ಗೌಡರ ಅಂತ್ಯ ಸಂಸ್ಕಾರ Read More »

error: Content is protected !!
Scroll to Top