ನಾಳೆ (ಜ.30)ಭೀಕರ ಅಪಘಾತಲ್ಲಿ ಸಾವನ್ನಪ್ಪಿದ ಬಿಸಿಲು ಮನೆಯ  ಸುಂದರ ಗೌಡರ ಅಂತ್ಯ ಸಂಸ್ಕಾರ

ಕೊಡಗು ಸಂಪಾಜೆಯ ಮುಖ್ಯರಸ್ತೆಯಲ್ಲಿ ಕಾರೊಂದು ರಾಂಗ್ ಸೈಡಲ್ಲಿ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟ  ಪರಿಣಾಮವಾಗಿ ಕೊಯನಾಡಿನ ಚಿಟ್ಟಿಕಾನ ಬಿಸಿಲುಮನೆಯ ರಿಕ್ಷಾ ಚಾಲಕ  ಹಾಗೂ ಕೊಡಗು ಸಂಪಾಜೆ ಗ್ರಾಮ ಪಂಚಾಯತ್  ಮಾಜಿ ಉಪಾಧ್ಯಕ್ಷ  ಸುಂದರ(62) ರವರು ಗಂಭೀರ ಗಾಯಗೊಂಡು  ಸ್ಥಳದಲ್ಲೆ ಕೊನೆಯುಸಿರೆಳೆದಿದ್ದು  ಅವರ ಅಂತ್ಯ ಸಂಸ್ಕಾರ ಮಗ ಭಾರತೀಯ ಭೂಸೇನೆಯ ಸೈನಿಕ ದೇವಿ ಪ್ರಸಾದ್ ಆಗಮಿಸಿದ ಬಳಿಕ ಮೃತರ ಮನೆಯಲ್ಲಿ ಗೌಡ ಸಂಪ್ರದಾಯದ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಗ ದೇವಿಪ್ರಸಾದ್ ಅಪ್ಪನ‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೈನ್ಯದ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಊರಿನತ್ತ ತಂದೆಯ ಸಾವಿನ ನೋವನ್ನು‌ ನುಂಗಿ ಹೆಜ್ಜೆ ಹಾಕಿದ್ದಾರೆ.
*ದೇಹ ಚಿದ್ರ ಚಿದ್ರ*
ಅಪಘಾತದ ತೀವ್ರತೆಗೆ ದೇಹ ಚಿದ್ರ ಚಿದ್ರವಾಗಿದೆ  ಎಂದು ಪ್ರತ್ಯಕ ದರ್ಶಿಗಳು  ತಿಳಿಸಿದ್ದಾರೆ.
ದಿ.ಬಿಸಿಲುಮನೆ ರಾಮಣ್ಣ ಗೌಡರ ಪುತ್ರರಾದ   ಸುಂದರರವರು ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ನ  ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ದುಡಿದಿದ್ದರು.ಅಲ್ಲದೆ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಗುರುವಾರ  ಪದ್ಮಾವತಿಯವರನ್ನು ಚಡಾವು ಬಳಿಯ ಅವರ ಮನೆಗೆ ಬಿಡಲು ಸಂಪಾಜೆಯಿಂದ ಚಡಾವು ಕಡೆಗೆ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದರು. ಸಂಪಾಜೆಯ ಪೆಟ್ರೋಲ್ ಪಂಪ್ ದಾಟಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಹಿಂದಿನಿಂದ ಅತಿವೇಗದಿಂದ ಬಂದ ಕಾರು ರಿಕ್ಷಾಕ್ಕೆ ಗುದ್ದಿಕೊಂಡು ನಿಲ್ಲಿಸದೆ ಮಡಿಕೇರಿ ಕಡೆಗೆ ಪರಾರಿಯಾಯಿತು.  ಎದುರಿನಿಂದ  ಬರುತ್ತಿದ್ದ ಟಿಪ್ಪರ್ ರಿಕ್ಷಾದ ಮೇಲೆ ಹರಿದಿದೆ ಎಂದು ಹೇಳಲಾಗುತ್ತಿದೆ.
ಮಗ ದೇವಿ ಪ್ರಸಾದ್ ಭಾರತೀಯ ಭೂಸೇನೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ವಿವಾಹಿತನಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಮ್ರತರು ಪತ್ನಿ ಚಂದ್ರಾವತಿ, ಪುತ್ರ ಭೂಸೇನೆಯಲ್ಲಿ ಯೋಧರಾಗಿರುವ ದೇವಿಪ್ರಸಾದ್, ಪುತ್ರಿಯರಾದ ಸವಿತಾ ಮತ್ತು  ಕವಿತಾರನ್ನು ಅಗಲಿದ್ದಾರೆ.
ರಿಕ್ಷಾದಲ್ಲಿದ್ದ  ಅಂಗಾರ ಅವರ ಪತ್ನಿ ಪದ್ಮಾವತಿ(68)ಅವರು ಗಂಭೀರವಾಗಿ ಗಾಯಗೊಂಡಿದ್ದು ಸುಳ್ಯದಿಂದ ಮಂಗಳೂರಿನ ಆಸ್ಪತ್ರೆಗೆ  ಸಾಗಿಸಲಾಗಿದೆ.ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ   ದಾಖಲಿಸಿಕೊಂಡಿದ್ದಾರೆ.





















































































Leave a Comment

Your email address will not be published. Required fields are marked *

error: Content is protected !!
Scroll to Top