January 2026

ತಂದೆಯಿಂದಲೇ ಮಗನ ಮೇಲೆ ಗುಂಡು ಹಾರಿಸಿ ಕೊಲೆ !

ಕಡಬ ತಾಲೂಕಿನ ರಾಮಕುಂಜದಲ್ಲಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು ತಂದೆಯೇ ಮಗನಿಗೆ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಕುಂಜದ ಪಾದೆ ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿತ್ತು.ಮೋಕ್ಷ (17) ಗುಂಡೇಟು ತಗುಲಿ ಸಾವನ್ನಪ್ಪಿದ ಬಾಲಕ. ರಾಮಕುಂಜ ಗ್ರಾಮದ ಪಾದೆ ನಿವಾಸಿ ತಂದೆ ವಸಂತ ಪೂಜಾರಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಘಟನೆಗೆ ಸಂಬಂಧಿಸಿದಂತೆ ವಸಂತ ಪೂಜಾರಿ ವಿರುದ್ಧ ಆತನ ಪತ್ನಿ ಜಯಶ್ರೀ […]

ತಂದೆಯಿಂದಲೇ ಮಗನ ಮೇಲೆ ಗುಂಡು ಹಾರಿಸಿ ಕೊಲೆ ! Read More »

ಭಾರತಕ್ಕೆ ಭರ್ಜರಿ ವಿಜಯ

ಗುವಾಹಟಿಯಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಟೀಂ ಇಂಡಿಯಾ 10 ಓವರ್‌ಗಳಲ್ಲಿ ಗೆಲುವಿನ ದಡ ಸೇರಿದೆ.

ಭಾರತಕ್ಕೆ ಭರ್ಜರಿ ವಿಜಯ Read More »

ತಂದೆಗೆ ಚಾಕುವಿನಿಂದ ಮಗ ಇರಿದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ತಾನು ಶರಣಾಗಲು ಕಾರಣವೇನು ?

ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ತಂದೆ-ಮಗನ ನಡುವೆ ನಡೆದ ಗಲಾಟೆಯಲ್ಲಿ ತಂದೆಗೆ ಚಾಕುವಿನಿಂದ ಇರಿದು, ಬಳಿಕ ಮಗನೂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಸಂತ ಅಮೀನ್ ಹಾಗೂ ಅವರ 15 ವರ್ಷದ ಮಗ ಮೋಕ್ಷ ಇಬ್ಬರೇ ವಾಸವಿದ್ದರು. ಗಲಾಟೆ ವೇಳೆ ಮೋಕ್ಷ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವಸಂತ ಅಮೀನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.,ಈ ಘಟನೆಗೆ ಕಾರಣವೇನು ಎಂದು

ತಂದೆಗೆ ಚಾಕುವಿನಿಂದ ಮಗ ಇರಿದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ತಾನು ಶರಣಾಗಲು ಕಾರಣವೇನು ? Read More »

ಮಕ್ಕಾ ಮದೀನಾ ಯಾತ್ರೆ ಮುಗಿಸಿ ಊರಿಗೆ ಬರುತ್ತಿದ್ದ ಮಹಿಳೆ ವಿಮಾಣ ನಿಲ್ದಾಣದಲ್ಲಿ ಸಾವು

ಮಕ್ಕಾ ಮದೀನಾ ಯಾತ್ರೆ ಮುಗಿಸಿ ಊರಿಗೆ ಬರುತ್ತಿದ್ದ ಸುಳ್ಯ ತತ್ವತಾಲೂಕಿನ ಅರಂತೋಡಿನ ಮಹಿಳೆ ಹೃದಯಘಾತಕ್ಕೊಳಗಾಗಿ ಜ 24 ರಂದು ರಾತ್ರಿ ಸೌದಿ ಅರೇಬಿಯಾದ ಜಿದ್ದಾ ವಿಮಾನ ನಿಲ್ದಾಣದಲ್ಲಿ ನಿಧನರಾಗಿದ್ದಾರೆ15 ದಿನಗಳ ಹಿಂದೆ ಐದು ಮಂದಿ ಸದಸ್ಯರೊಂದಿಗೆ ಪವಿತ್ರ ಉಮ್ರಾ ಯಾತ್ರೆ ಮಾಡಲು ಸೌದಿ ಅರೇಬಿಯಾ ಕ್ಕೆ ಹೋಗಿದ್ದರು. ಯಾತ್ರೆ ಮುಗಿಸಿ ಬರುವ ಸಂದರ್ಭಜಿದ್ದಾ ಏರ್ಪೋಟಿ್ರನಲ್ಲಿ ಇವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಮೃತರು ಪುತ್ರ ಇರ್ಶಾನ್ ಹಾಗೂ

ಮಕ್ಕಾ ಮದೀನಾ ಯಾತ್ರೆ ಮುಗಿಸಿ ಊರಿಗೆ ಬರುತ್ತಿದ್ದ ಮಹಿಳೆ ವಿಮಾಣ ನಿಲ್ದಾಣದಲ್ಲಿ ಸಾವು Read More »

ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ ಕಡೆಪಾಲ, ಸಂಪಾಜೆ, ಇದರ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಅತಿಥಿಗಳಾಗಿ ಪ್ರಶಾಂತ್ ಚಟ್ಟೆಕಲ್ಲು, ಎಸ್ ಪಿ ಕರುಣಾಕರ ಗೂನಡ್ಕ, ಶ್ರೀ ನಾಗೇಶ್ ಕಲ್ಲುಗುಂಡಿ, ವರದರಾಜ್ ಸಂಕೇಶ, ದೇವಯ್ಯ ಕಲ್ಲುಗುಂಡಿ, ಯಶೋಧರ ಕಡೆಪಾಲ, ಉದಯ ನಾಯ್ಕ್ ದೊಡ್ಡಡ್ಕ, ಮತ್ತು ದೈವಸ್ಥಾನದ ಟ್ರಸ್ಟ್ ನ ಸದಸ್ಯರು ಹಾಜರಿದ್ದರು. ನೇಮೋತ್ಸವವು ಮಾರ್ಚ್ 07 ನೇ ಶನಿವಾರ ಮತ್ತು 08 ನೇ ಆದಿತ್ಯವಾರ ನಡೆಯಲಿದೆ.

ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ತಂದೆಗೆ ಗಂಭೀರವಾಗಿ ಚೂರಿಯಿಂದ ಇರಿದು ತಾನು ಶೂಟೌಟ್ ಮಾಡಿಕೊಂಡ ಬಾಲಕ

ಬಾಲಕನೋರ್ವ ತಂದೆಗೆ ಚೂರಿಯಿಂದ ಇರಿದು ಬಳಿಕ ತಾನು ಶೂಟೌಟ್ ಮಾಡಿಕೊಂಡ ಘಟನೆ ರಾಮಕುಂಜ ಇಲ್ಲಿನ ಪಾದೆ ಎಂಬಲ್ಲಿ ಇಂದು ನಡೆದಿದೆ.ಘಟನೆಯಿಂದ ಗಂಭೀರ ಗಾಯಗೊಂಡಿರುವ ವಸಂತ ಅಮೀನ್ ಅವರನ್ನು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಜ.24ರಂದು ಸಂಜೆ ಘಟನೆ ನಡೆದಿದೆ.ಕೇರಳ ಮೂಲದವರಾಗಿರುವ ವಸಂತ ಅಮೀನ್ ಅವರು ರಾಮಕುಂಜ ಪಾದೆ ಎಂಬಲ್ಲಿ ಜಾಗ ಖರೀದಿಸಿ ಮನೆ ಮಾಡಿ ತಂದೆ,ಮಗ ಜೊತೆಯಾಗಿ ವಾಸವಿದ್ದರು.ಮಂಗಳೂರು ಖಾಸಗಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಯಾಗಿದ್ದ ಮೋಕ್ಷ ಅವರು ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದಷ್ಟೆ

ತಂದೆಗೆ ಗಂಭೀರವಾಗಿ ಚೂರಿಯಿಂದ ಇರಿದು ತಾನು ಶೂಟೌಟ್ ಮಾಡಿಕೊಂಡ ಬಾಲಕ Read More »

ಪಂಜ : ಜಾತ್ರೆಗೆ ಗೊನೆ ಮೂಹೂರ್ತ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಜ.24ರಂದು ಗೊನೆ ಮುಹೂರ್ತ ನಡೆಯಿತು.ಕುದ್ವ ತೋಟದಲ್ಲಿ ಗೊನೆ ಕಡಿದು ಬ್ಯಾಂಡ್‌ ವಾಲಗದ ಮೆರವಣಿಗೆಯಲ್ಲಿ ದೇವಳಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ, ಮಾಯಿಲಪ್ಪ ಗೌಡ ಪಟ್ಟೆ ಎಣ್ಣೂರು, ಸಂತೋಷ್ ಕುಮಾ‌ರ್ ರೈ ಬಳ್ಳ, ಧರ್ಮಪಾಲ ಗೌಡ ಮರಕ್ಕಡ, ಧರ್ಮಣ್ಣ ನಾಯ್ಕ ಗರಡಿ, ಮಾಲಿನಿ ಕುದ್ದ, ಪವಿತ್ರ ಮಲ್ಲೆಟಿ, ಸತ್ಯನಾರಾಯಣ ಭಟ್

ಪಂಜ : ಜಾತ್ರೆಗೆ ಗೊನೆ ಮೂಹೂರ್ತ Read More »

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ್ ರಾಜಿನಾಮೆ

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ್ ಕೊಯಿಂಗಾಜೆ ರಾಜಿನಾಮೆ ನೀಡಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆಯ ಬಗ್ಗೆ ಮಾಹಿತಿ ನೀಡಿದ ಅವರು ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಿ ಸಿ ಜಯರಾಮರಿಗೆ ಸಂಪಾಜೆ ವಲಯ ಕಾಂಗ್ರೇಸ್ ಘಟಕದ ಅಧ್ಯಕ್ಷನಾದ ನಾನು ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಾನು ಸುಮಾರು ಇಪ್ಪತ್ತೆಂಟು ವರ್ಷಗಳಿಂದ ಸಂಪಾಜೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಮತ್ತು ಉಳಿವಿಗಾಗಿ ಪಕ್ಷದ ಕಾರ್ಯಕರ್ತರ ಸಂಪೂರ್ಣ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಸಿದ ಹೆಮ್ಮೆ

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ್ ರಾಜಿನಾಮೆ Read More »

ಅರಂಬೂರು : ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ

ಅರಂಬೂರಿನಲ್ಲಿ ಯುವಕನೊಬ್ಬ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆದಿದ್ದಾನೆ ಎನ್ನಲಾಗಿದ್ದು, ಆರೋಪಿಯ ವಿರುದ್ಧ ಸುಳ್ಯ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿದೆ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಪೊಲೀಸರು ಆರೋಪಿ ಅಬ್ದುಲ್‌ ಬಾಷಿತ್ (19) ಎಂಬಾತನ್ನು ಬಂಧಿಸಿ ಪೋಕ್ಸ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಅರಂಬೂರು : ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ Read More »

ಇಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದೆ. ಜ.24ರಂದು ಮುಂಜಾನೆ ಗಂಟೆ 9 ರಿಂದ ಗೊನೆ ಮುಹೂರ್ತ ನಡೆಯಲಿದೆ.ಫೆ.1 ರಂದು ರಾತ್ರಿ ಧ್ವಜಾರೋಹಣ, ಫೆ.5 ರಂದು ಹಗಲು ದರ್ಶನ ಬಲಿ, ಫೆ.6 ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

error: Content is protected !!
Scroll to Top