ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ತಂದೆ-ಮಗನ ನಡುವೆ ನಡೆದ ಗಲಾಟೆಯಲ್ಲಿ ತಂದೆಗೆ ಚಾಕುವಿನಿಂದ ಇರಿದು, ಬಳಿಕ ಮಗನೂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಸಂತ ಅಮೀನ್ ಹಾಗೂ ಅವರ 15 ವರ್ಷದ ಮಗ ಮೋಕ್ಷ ಇಬ್ಬರೇ ವಾಸವಿದ್ದರು. ಗಲಾಟೆ ವೇಳೆ ಮೋಕ್ಷ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವಸಂತ ಅಮೀನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.,ಈ ಘಟನೆಗೆ ಕಾರಣವೇನು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ತಂದೆಗೆ ಚಾಕುವಿನಿಂದ ಮಗ ಇರಿದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ತಾನು ಶರಣಾಗಲು ಕಾರಣವೇನು ?














































