January 2026

ದೇವರಕೊಲ್ಲಿ : ಕಾರು ಪಲ್ಟಿ ಹೊಡೆದು ಮಗು ಸೇರಿ ನಾಲ್ಕು ಮಂದಿಗೆ ಗಾಯ

ದೇವರಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರು ಪಲ್ಟಿಯಾಗಿ ವಾಹನದಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಜ.14ರಂದು ಬೆಳಿಗ್ಗೆ ವರದಿಯಾಗಿದೆ.ವೀರಾಜಪೇಟೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಒಮ್ನಿ ಕಾರು ದೇವರಕೊಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಮಗು ಸೇರಿ ನಾಲ್ಕು ಮಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಆಂಬು ಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.

ದೇವರಕೊಲ್ಲಿ : ಕಾರು ಪಲ್ಟಿ ಹೊಡೆದು ಮಗು ಸೇರಿ ನಾಲ್ಕು ಮಂದಿಗೆ ಗಾಯ Read More »

ರಾಜ್ಯದಲ್ಲಿ ಮತ್ತೆ ಎರಡು ದಿನ ಭಾರೀ ಮಳೆ!

ತಮಿಳುನಾಡಿನ ಕರಾವಳಿ ಭಾಗದ ಮನ್ನಾರ್ ಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ 1 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪ್ರಸರಣ ಉಂಟಾಗಿದೆ. ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು, ಮುಂದಿನ ಎರಡು ದಿನ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ಮತ್ತೆ ಮಳೆ ಸಿಂಚನವಾಗಿದೆ. ಉತ್ತರ ಕನ್ನಡ, ಉಡುಪಿ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದ್ದು, ಉತ್ತರ

ರಾಜ್ಯದಲ್ಲಿ ಮತ್ತೆ ಎರಡು ದಿನ ಭಾರೀ ಮಳೆ! Read More »

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದಲ್ಲಿ ಬುಡಕಟ್ಟು ರೈತರು ಹಾಗೂ FPOಗಳಿಗಾಗಿ APEDA ಜಾಗೃತಿ ಕಾರ್ಯಕ್ರಮ

ಕೃಷಿ ಮತ್ತು ಸಂಸ್ಕೃತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA)ವು ICAR–ಕೃಷಿ ವಿಜ್ಞಾನ ಕೇಂದ್ರ (KVK), ಮಂಗಳೂರು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ. ಕೇಂದ್ರ ವಿಟ್ಲ, ಸಂಜೀವಿನಿ NRLM ಸುಳ್ಯ ತಾಲೂಕು ಪಂಚಾಯತ್, ಆಲೆಟ್ಟಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಆಲೆಟ್ಟಿ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬುಡಕಟ್ಡು ಪ್ರದೇಶಗಳ ರೈತರು, ರೈತ ಉತ್ಪಾದಕ ಸಂಘಗಳು (FPOಗಳು) ಮತ್ತು ಕೃಷಿ ಸ್ಟಾರ್ಟ್‌ಅಪ್‌ಗಳಿಗಾಗಿ ಕೃಷಿ ರಫ್ತು ಜಾಗೃತಿ ಕಾರ್ಯಕ್ರಮವನ್ನು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದಲ್ಲಿ ಬುಡಕಟ್ಟು ರೈತರು ಹಾಗೂ FPOಗಳಿಗಾಗಿ APEDA ಜಾಗೃತಿ ಕಾರ್ಯಕ್ರಮ Read More »

ಆರಂತೋಡು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಮಕ್ಕಳ ಗ್ರಾಮ ಸಭೆ

ಆರಂತೋಡು ಗ್ರಾಮ ಪಂಚಾಯತ್ ನ 2025-26ಸಾಲಿನ ಮಕ್ಕಳ ಗ್ರಾಮ ಸಭೆಯು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರಂತೋಡು ಶಾಲೆಯ ಸಭಾ ಭವನದಲ್ಲಿ ಅಡ್ತಲೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುl ಧ್ವನಿ ಯವರ ಅಧ್ಯಕ್ಷತೆಯಲ್ಲಿ ಜ.13ರಂದು ನಡೆಯಿತು. ಮಕ್ಕಳ ಗ್ರಾಮ ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಿ. ಆರ್. ಪಿ. ಮಮತ ಮಹಿಳಾ ಮತ್ತು ಮಕ್ಕಳ ಇಲಾಖೆ ದೀಪಿಕಾ ಮತ್ತು ಅರೋಗ್ಯ ಇಲಾಖೆ ಭಾಗೀರಥಿ. ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಮಕ್ಕಳ ಪ್ರಶ್ನೆಗಳು ಮತ್ತು

ಆರಂತೋಡು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಮಕ್ಕಳ ಗ್ರಾಮ ಸಭೆ Read More »

ಚರಿತ್ರೆಗಳನ್ನು ತಿರುಚುವ ಪ್ರಯತ್ನ ಸಲ್ಲದು: ಜನಾಬ್ ಟಿ ಎಂ ಶಹೀದ್ ತೆಕ್ಕಿಲ್

ಸುಳ್ಯ: “ನಮ್ಮ ನಾಡು ಸಾಮರಸ್ಯ ಮತ್ತು ಸೌಹಾರ್ದತೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಇಂದು ಚರಿತ್ರೆಗಳನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ನಾವೆಲ್ಲರೂ ಒಗ್ಗೂಡಿ ಎದುರಿಸಬೇಕು,” ಎಂದು ಪೇರಡ್ಕ ಜಮಾಅತ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಜನಾಬ್ ಟಿ.ಎಂ. ಶಹೀದ್ ತೆಕ್ಕಿಲ್ ತಿಳಿಸಿದರು.ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸ್ ಪ್ರಯುಕ್ತ ‘ತೆಕ್ಕಿಲ್ ಮುಹಮ್ಮದ್ ಹಾಜಿ ವೇದಿಕೆ’ಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದ ಅಧ್ಯಕ್ಷತೆ

ಚರಿತ್ರೆಗಳನ್ನು ತಿರುಚುವ ಪ್ರಯತ್ನ ಸಲ್ಲದು: ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ Read More »

ಲಾರಿ‌ ಸ್ಕೂಟಿ ಅಪಘಾತದಲ್ಲಿ‌ ಪೆರಂಗೋಡಿ ಮನೆಯ ನಿಶಾಂತ್ ಮೃತ್ಯು

ಕೊಯನಾಡು ಗಣಪತಿ ಗುಡಿ ಸಮೀಪ ಸ್ಕೂಟಿ ಮತ್ತು ಟ್ಯಾಂಕರ್ ನಡುವೆ ಅಪಘಾತವಾಗಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಜ.13ರಂದು ವರದಿಯಾಗಿದೆ.ಮೃತಪಟ್ಟ ಸ್ಕೂಟಿ ಸವಾರ ಕೊಯನಾಡು ಪೆರಂಗೋಡಿ ಮನೆಯ ದಿ.ದೇವರಾಜ ಅವರ ಮಗ ನಿಶಾಂತ್ (30) ಎಂದು ಗುರುತಿಸಲಾಗಿದೆ‌.ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಂಕ‌ರ್ ನ ಹಿಂಬಾಗಕ್ಕೆ ಸ್ಕೂಟಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ಕೂಟಿ ಸವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಯುವಕನ

ಲಾರಿ‌ ಸ್ಕೂಟಿ ಅಪಘಾತದಲ್ಲಿ‌ ಪೆರಂಗೋಡಿ ಮನೆಯ ನಿಶಾಂತ್ ಮೃತ್ಯು Read More »

ಸುಳ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ಸುಳ್ಯದಲ್ಲಿ ಜ.13ರಂದು ರಾತ್ರಿ ಭಾರೀ ಮಳೆ ಸುರಿಯುತ್ತಿರುವ ಘಟನೆ ವರದಿಯಾಗಿದೆ.ಸಂಜೆ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮಳೆ ರಾತ್ರಿ ತನ್ನ ಅಬ್ಬವರನ್ನು ಹೆಚ್ಚಿಸಿಕೊಂಡಿತು.ಗುಡುಗು ಮಿಂಚಿನೊಂದಿಗೆ ಮಳೆ ಸುರಿಯುತ್ತಿದೆ.ಸಂತೆಗೆ ವಸ್ತುಗಳನ್ನು ಖರೀದಿಸಲು ಬಂದಿದ್ದ ಸಾವಿರಾರು ಜನರು ಮಳೆಯಲ್ಲಿ ಒದ್ದೆಯಾದರು.

ಸುಳ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ Read More »

ಕತ್ತಮಯವಾದ ಸುಳ್ಯ ಕೆ.ಎಸ್.ಆರ್.ಟಿ ಸಿ ಬಸ್ಸು ನಿಲ್ದಾಣಕ್ಕೆ ಮತ್ತೆ ಬಂತು ವಿದ್ಯುತ್

ಕೆ.ಎಸ್.ಆರ್.ಟಿ.ಸಿಯವರು ಮೆಸ್ಕಾಂ ಗೆ ಮುಂಗಡ ಹಣ ಪಾವತಿಸದ ಕಾರಣ ಜ.13ರಂದು ರಾತ್ರಿ 8 ಗಂಟೆಯ ತನಕ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ,ಡಿಪೋ ಮ್ಯಾನೇಜರ್ ಅವರ ವಿನಂತಿ ಮೇರೆಗೆ ಮತ್ತೆ ವಿದ್ಯುತ್ ಸಂಪರ್ಕ ನೀಡಿದೆ.ಕೆ.ಆರ್.ಟಿ.ಸಿಯವರು ಮೆಸ್ಕಾಂಗೆ ವಿದ್ಯುತ್ ಬಿಲ್ ಮಂಗಡ ಪಾವತಿಸದ ಕಾರಣದಿಂದಾಗಿ ಮೆಸ್ಕಾಂ ಸಿಬ್ಬಂದಿಗಳು ಇಂದು ಪೀಸ್ ಕಳಚಿಕೊಂಡು ಹೋಗಿದ್ದರು. ಇದರಿಂದ ಪ್ರಯಾಣಿಕರು ಕತ್ತಲಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. .ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಅವರು‌ ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ‌ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ವಿದ್ಯುತ್ ಸಂಪರ್ಕ ನೀಡುವಂತೆ ವಿನಂತಿಸಿಕೊಂಡಿದ್ದರು.ಬಳಿಕ

ಕತ್ತಮಯವಾದ ಸುಳ್ಯ ಕೆ.ಎಸ್.ಆರ್.ಟಿ ಸಿ ಬಸ್ಸು ನಿಲ್ದಾಣಕ್ಕೆ ಮತ್ತೆ ಬಂತು ವಿದ್ಯುತ್ Read More »

ಅರಂತೋಡು : ಘನತ್ಯಾಜ್ಯ ಘಟಕ ಪುನರ್ ನಿರ್ಮಾಣಕ್ಕೆ ಧನ ಸಹಾಯ

ಗ್ರಾಮ ಪಂಚಾಯತ್ ಅರoತೋಡು ಘನ ತ್ಯಾಜ್ಯ ಘಟಕ ಪುನರ್ ನಿರ್ಮಾಣಕ್ಕಾಗಿ ಅನ್ವಾರುಲ್ ಉದಾ ಯಂಗ್ ಮ್ಯಾನ್ಸ್ ಎಸ್ಸೋಸಿಯೇಷನ್ ವತಿಯಿಂದ ರೂಪಾಯಿ 5000 ಚೆಕ್ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮಾಜಿ ಉಪಾಧ್ಯಕ್ಷರಾದ ಹರಿಣಿ ದೇವರಾಜೆ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಅನ್ವರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಷನ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಪ್ರಧಾನ ಕಾರ್ಯದರ್ಶಿ ಪಸಿಲು ಎ ಉಪಸ್ಥಿತರಿದ್ದರು.

ಅರಂತೋಡು : ಘನತ್ಯಾಜ್ಯ ಘಟಕ ಪುನರ್ ನಿರ್ಮಾಣಕ್ಕೆ ಧನ ಸಹಾಯ Read More »

ತೊಡಿಕಾನ : ನಾಳೆ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ ಸಂಪನ್ನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಡಿ.16ರಿಂದ ಆರಂಭಗೊಂಡ ಧನು ಧನುಪೂಜೆ ನಾಳೆ ಮಕರ ಸಂಕ್ರಣದಂದು (ಜ.14)ರಂದು ಸಂಪನ್ನಗೊಳ್ಳಿದ್ದು ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.ಪ್ರತಿವರ್ಷ ಧನುಪೂಜೆಯ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ‌.ಧನುಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಭಜನಾ ಸತ್ಸಂಗ ನಡೆಯುತ್ತಿದೆ.ಜ.13ರಂದು ಮುಂಜಾನೆ ನಡೆದ ಧನುಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸಿಬ್ಬಂದಿಗಳು ಉಪಸ್ಥಿತರಿದ್ದರು.ಮಕರ ಸಂಕ್ರಮಣ ಪ್ರಯುಕ್ತ ನಾಳೆಆಯಿರಕೊಡ ಅಭಿಷೇಕ

ತೊಡಿಕಾನ : ನಾಳೆ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ ಸಂಪನ್ನ Read More »

error: Content is protected !!
Scroll to Top