ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಡಿ.16ರಿಂದ ಆರಂಭಗೊಂಡ ಧನು ಧನುಪೂಜೆ ನಾಳೆ ಮಕರ ಸಂಕ್ರಣದಂದು (ಜ.14)ರಂದು ಸಂಪನ್ನಗೊಳ್ಳಿದ್ದು ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಪ್ರತಿವರ್ಷ ಧನುಪೂಜೆಯ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.
ಧನುಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಭಜನಾ ಸತ್ಸಂಗ ನಡೆಯುತ್ತಿದೆ.
ಜ.13ರಂದು ಮುಂಜಾನೆ ನಡೆದ ಧನುಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಕರ ಸಂಕ್ರಮಣ ಪ್ರಯುಕ್ತ ನಾಳೆ
ಆಯಿರಕೊಡ ಅಭಿಷೇಕ ಮತ್ತು ಸಿಯಾಳಾಭಿಷೇಕ ಹಾಗೂ ಶತರುದ್ರಾಭಿಷೇಕ ರಾತ್ರಿ ರಂಗಪೂಜೆ ಜರುಗಲಿರುವುದು. ಭಕ್ತಾದಿಗಳು ವಾರ್ಷಿಕ ಮನೆವಂತಿಗೆ ಹಾಗೂ ಹಸಿರುವಾಣಿಯನ್ನು ಈ ಹಿಂದೆ ಮಕರ ಸಂಕ್ರಮಣದಂದು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ (ಈ ವರ್ಷದಿಂದ) ಜಾತ್ರಾ ಸಮಯದಲ್ಲಿ ತಂದೊಪ್ಪಿಸಬೇಕಾಗಿ ಕೋರಿಕೆ.
ಮಕರ ಸಂಕ್ರಮಣದಂದು ಜರುಗಲಿರುವ ಸಿಯಾಳಾಭಿಷೇಕಕ್ಕೆ ಸೀಮೆಯ ಪ್ರತಿ ಮನೆಯಿಂದ ಭಕ್ತಾದಿಗಳು ಸಿಯಾಳ ತಂದೊಪ್ಪಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ತೊಡಿಕಾನ : ನಾಳೆ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ ಸಂಪನ್ನ

























































