February 2026

ಸುಳ್ಯ: ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿಯವರ ಅರೋಗ್ಯ ವೃದ್ಧಿಗೆ ಸುಳ್ಯ ಕಾಂಗ್ರೆಸ್ ಮುಖಂಡರಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ.

ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ಅವರಿಗೆ ಅರೋಗ್ಯ ಶೀಘ್ರ ಚೇತರಿಕೆಗಾಗಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸುಳ್ಯ ಕಾಂಗ್ರೆಸ್ ಮುಖಂಡರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಸಾರ್ವಜನಿಕ ಬದುಕಿನಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮನ ಗೆದ್ದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ, ವಿಧಾನ ಪರಿಷತ್ ಶಾಸಕರೂ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಶ್ರೀ. ಮಂಜುನಾಥ ಭಂಡಾರಿ ಅವರು ಶೀಘ್ರವೇ ಸಂಪೂರ್ಣ ಚೇತರಿಸಿಕೊಂಡು, ಹಿಂದಿನಂತೆ […]

ಸುಳ್ಯ: ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿಯವರ ಅರೋಗ್ಯ ವೃದ್ಧಿಗೆ ಸುಳ್ಯ ಕಾಂಗ್ರೆಸ್ ಮುಖಂಡರಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ. Read More »

ಮರ್ಕಂಜ : ತೋಟಕ್ಕೆ ಕಾಡಾನೆ ದಾಳಿ ಅಪಾರ ಪ್ರಮಾಣದ ಕೃಷಿ ನಾಶ

ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಮಂಜುನಾಥ ರೈ ಅವರ ತೋಟಕ್ಕೆ ಫೆ.16ರಂದು ರಾತ್ರಿ ಕಾಡಾನೆ ದಾಳಿ ಮಾಡಿ ಅಪಾರ ಕೃಷಿ ನಷ್ಟ ಮಾಡಿದೆ. ಇದರಿಂದ ಅವರಿಗೆ ಅಪಾರ ನಷ್ಟ ಉಂಟಾಗಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಅವರಿಗೆ ಮುಂದಿನ ಕ್ರಮದ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಲಾಗಿದೆ.

ಮರ್ಕಂಜ : ತೋಟಕ್ಕೆ ಕಾಡಾನೆ ದಾಳಿ ಅಪಾರ ಪ್ರಮಾಣದ ಕೃಷಿ ನಾಶ Read More »

ಪೆರ್ನಾಜೆ : ನಿರಂತರ ಕಾಡಾನೆ ದಾಳಿ!

ಫೆ.17ರ ಮುಂಜಾನೆ ಜಾಲ್ಸೂರು ಸಮೀಪದ ಪೆರ್ನಾಜೆಗೆ ಕಾಡಾನೆ ಇಲ್ಲಿಯ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನಗ್ಗಿ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಮಾಡಿವೆ.ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ ರೈತರ ತೋಟಕ್ಕೆ ಆನೆ ದಾಳಿ ಮಾಡುತ್ತ ಇರುತ್ತವೆ. ಅಲ್ಲದೆ

ಪೆರ್ನಾಜೆ : ನಿರಂತರ ಕಾಡಾನೆ ದಾಳಿ! Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ‌ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪದಗ್ರಹಣ ಸಮಾರಂಭ

ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಧಾಕೃಷ್ಣ ಬೊಳ್ಳೂರು ಪದಗ್ರಹಣ ಕಾರ್ಯಕ್ರಮ ಫೆ.16ರಂದು ಸುಳ್ಯದ ಲಯನ್ಸ್‌ ಸೇವಾಸದನದಲ್ಲಿ ನಡೆಯಿತು.ಬ್ಲಾಕ್ ಕಾಂಗ್ರೆಸ್ ನಿರ್ಗಮನಾಧ್ಯಕ್ಷ ಪಿ.ಸಿ.ಜಯರಾಮರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ಬ್ಲಾಕ್ ಉಸ್ತುವಾರಿ ಎಂ.ಎಸ್.ಮಹಮ್ಮದ್,ಗ್ರಾಮಾಂತರ

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ‌ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪದಗ್ರಹಣ ಸಮಾರಂಭ Read More »

ಮಂಗಳೂರು : ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿ,7 ವಿದ್ಯಾರ್ಥಿಗಳು ಗಂಭೀರ

ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿಯಾಗಿ 7 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಂಗಳೂರು ಹೊರವಲಯದ ಕಾಪಿಕಾಡು ಬಳಿ ಫೆ.16ರಂದು ನಡೆದಿದೆ. ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್‌ಗೆ ಗೋವಾದಿಂದ ಕೇರಳದ ಕಡೆಗೆ ಹೊರಟಿದ್ದ ಮೀನು ಸಾಗಾಟದ ಕ್ಯಾಂಟರ್ ಹಿಂದಿನಿಂದ ಡಿಕ್ಕಿ ಹೊಡೆದೆದಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಕ್ಯಾಂಟ‌ರ್ ಚಾಲಕ ಸಂಜೀವ್ ನಿದ್ರೆಯ ಮಂಪರಿನಲ್ಲಿದ್ದ ಎನ್ನಲಾಗಿದ್ದು, ಗಾಯಾಳು ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ.

ಮಂಗಳೂರು : ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿ,7 ವಿದ್ಯಾರ್ಥಿಗಳು ಗಂಭೀರ Read More »

ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ದರ್ಶನ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿಮಹಾಶಿವರಾತ್ರಿ ಉತ್ಸವದ ಪ್ರಯಕ್ತ ಫೆ.16ರಂದು ಶ್ರೀ ದೇವರ ದರ್ಶನ ಬಲಿ ನಡೆಯಿತು.ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ,ತುಲಾಭಾರ ಸೇವೆ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ,ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ಮಾಲತಿ ಬೋಜಪ್ಪ ಗೌಡ,ವಸಂತ ಪೆಲ್ತಡ್ಕ, ತಿಮ್ಮಯ್ಯ ಮೆತ್ತಡ್ಕ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಎಂ ಕಿಶೋರ್ ಉಳುವಾರು,ಸದಸ್ಯರಾದ ಚಂದ್ರಕಲಾ ಕುತ್ತಮೊಟ್ಟೆ,ಎಸ್.ಪಿ ಲೋಕನಾಥ ,ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ

ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ದರ್ಶನ ಬಲಿ Read More »

ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಶಿವರಾತ್ರಿ ಪ್ರಯಕ್ತ ಶಿವಪೂಜೆ ಭಜನಾ ಸತ್ಸಂಗ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 234ನೇಕೃತಿಮಾಲೆ ಕಾಯಕದಿಂದಲೇ ಕೈಲಾಸ ಬಿಡುಗಡೆ ಸಮಾರಂಭ ನಡೆಯಿತು.ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿದ್ದರು.ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಕೃತಿ ಬಿಡುಗಡೆಗೊಳಿಸಿದರು.ಹಿರಿಯ ವೈದ್ಯರಾದ ಡಾ.ಸಾಯಿಗೀತಾ,ಮಂಗಳೂರು ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ಅನಿಲ್ ಬಿ.ವಿ. ಹಿರಿಯರಾದ ಮುದ್ದಪ್ಪ ಗೌಡ ಕರ್ಲಪ್ಪಾಡಿ,ಅಡೂರು ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ವೇಣುಗೊಪಾಲ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು‌.ಶಿಕ್ಷಕಿ ಆಶ್ರಮದ

ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ Read More »

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರ ಉತ್ಸವ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು (ಫೆ. 15) ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿಮಹಾಶಿವರಾತ್ರಿ ಉತ್ಸವ ನಡೆಯುತ್ತಿದೆ.ಸಂಜೆ ಸೀಮೆಯ ಭಜನಾ ತಂಡಗಳಿಂದ ಭಜನೆ ಹಾಗೂ ಕುಣಿತ ಭಜನೆ, ರಾಶಿಪೂಜೆ (10 ರುದ್ರಾಭಿಷೇಕ) ರಂಗಪೂಜೆ ನಡೆಯಿತು.ಇದೀಗ ಉತ್ಸವ ಬಲಿ ನಡೆಯುತ್ತಿದೆ.ಫೆ. 16 ರಂದು ಗಣಪತಿ ಹೋಮ, ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಲಿರುವುದು ಮತ್ತು ತುಲಾಭಾರ ಸೇವೆ ನಡೆಯುಲಿದೆ.

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರ ಉತ್ಸವ ಬಲಿ Read More »

ಭಾರತ-ಪಾಕ್ ಟಿ20 ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು,ಪಾಕಿಸ್ಥಾನ ಆಲ್ ಔಟ್

2026ರ ಟಿ20 ವಿಶ್ವಕಪ್‌ನ ಗುಂಪು ಹಂತದ ಮಹತ್ವದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 20 ರನ್‌ಗಳಿಂದ ಸೋಲಿಸಿದೆ. ಕೊಲಂಬೊದ ಆ‌ರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 176 ರನ್‌ಗಳ ಗುರಿ ನೀಡಿತ್ತು. ನಂತರ ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 18ನೇ ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 61 ರನ್ ಗಳ ಅಂತರದಿಂದ ಭರ್ಜರಿ ಜಯ ಗಳಿಸಿತು.

ಭಾರತ-ಪಾಕ್ ಟಿ20 ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು,ಪಾಕಿಸ್ಥಾನ ಆಲ್ ಔಟ್ Read More »

ಕುಕ್ಕುಂಬಳ ಸೇತುವೆ ಮೇಲಿನಿಂದ ಹೊಳೆಗೆ ಸ್ಕೂಟಿಯೊಂದಿಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

ಸ್ಕೂಟಿ ಸವಾರೊಬ್ಬರು ಫೆ.14ರರಂದು ರಾತ್ರಿ ಸ್ಕೂಟಿಯೊಂದಿಗೆ ನಿಯಂತ್ರಣ ತಪ್ಪಿ ಪೆರಾಜೆ ಸಮೀಪದ ಕುಕ್ಕುಂಬಳ ಸೇತುವೆಯ ಮೇಲಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾದ ಘಟನೆ ವರದಿಯಾಗಿದೆ.ಗಾಯಗೊಂಡ ವ್ಯಕ್ತಿ ಅಂಜಿಕ್ಕಾರ್ ಸುಂದರ ನಾಯ್ಕ ರವರ ಪುತ್ರ ರವಿಚಂದ್ರ ನಾಯ್ಕ ಎಂದು ತಿಳಿದು ಬಂದಿದೆ. ಅವರು ರಾತ್ರಿ ಸುಮಾರು 8 ಗಂಟೆಗೆ ಸುಳ್ಯದಿಂದ ಮನೆಕಡೆ ಹೋಗುತ್ತಿದ್ದ ವೇಳೆ ಈ ಅವಘದ ಸಂಭವಿಸಿದೆ. ಈ ಮೊದಲು ಇದೇ ಜಾಗದಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ

ಕುಕ್ಕುಂಬಳ ಸೇತುವೆ ಮೇಲಿನಿಂದ ಹೊಳೆಗೆ ಸ್ಕೂಟಿಯೊಂದಿಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು Read More »

error: Content is protected !!
Scroll to Top