ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ
ಮಹಾಶಿವರಾತ್ರಿ ಉತ್ಸವದ ಪ್ರಯಕ್ತ ಫೆ.16ರಂದು ಶ್ರೀ ದೇವರ ದರ್ಶನ ಬಲಿ ನಡೆಯಿತು.ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ,ತುಲಾಭಾರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ,ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ಮಾಲತಿ ಬೋಜಪ್ಪ ಗೌಡ,ವಸಂತ ಪೆಲ್ತಡ್ಕ, ತಿಮ್ಮಯ್ಯ ಮೆತ್ತಡ್ಕ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಎಂ ಕಿಶೋರ್ ಉಳುವಾರು,ಸದಸ್ಯರಾದ ಚಂದ್ರಕಲಾ ಕುತ್ತಮೊಟ್ಟೆ,ಎಸ್.ಪಿ ಲೋಕನಾಥ ,ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ರಮೊಟ್ಟೆ,ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ,ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ ದೇವಳದ ಮ್ಯಾನೇಜರ್ ಆನಂದ ಕಲ್ಲಗದ್ದೆ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ಫೆ. 15ರಂದು ಸಂಜೆ ಸೀಮೆಯ ಭಜನಾ ತಂಡಗಳಿಂದ ಭಜನೆ ಹಾಗೂ ಕುಣಿತ ಭಜನೆ, ರಾಶಿಪೂಜೆ (10 ರುದ್ರಾಭಿಷೇಕ) ರಂಗಪೂಜೆ, ಉತ್ಸವ ಬಲಿ ನಡೆಯಿತು.
ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ದರ್ಶನ ಬಲಿ














































