March 12, 2026

ಗ್ಯಾಸ್‌ ಸಿಲಿಂಡ‌ರ್ ಡೆಲಿವರಿ ವಿಳಂಬವಾಗ್ತಿದೆಯೇ? ತಕ್ಷಣ ಇಲ್ಲಿ ದೂರು ನೀಡಿ

ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ, ಎಲ್‌ಪಿಜಿ ಸಿಲಿಂಡ‌ರ್ ಬುಕ್ ಮಾಡಿದ 48 ರಿಂದ 60 ಗಂಟೆಗಳ ಒಳಗೆ (ಸುಮಾರು ಎರಡೂವರೆ ದಿನ) ಗ್ರಾಹಕರಿಗೆ ತಲುಪಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಡೆಲಿವರಿ ವಿಳಂಬವಾದರೆ ಗ್ರಾಹಕರು ಆಯಾ ಕಂಪನಿಗಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ತೈಲ ಕಂಪನಿಗಳು (Indane): 1800-2333-555 $ 7718955555. (Bharat Gas): 1800-22-4344 9 7715012345. 2(HP Gas): 1800-2333-555 5 9493602222.

ಗ್ಯಾಸ್‌ ಸಿಲಿಂಡ‌ರ್ ಡೆಲಿವರಿ ವಿಳಂಬವಾಗ್ತಿದೆಯೇ? ತಕ್ಷಣ ಇಲ್ಲಿ ದೂರು ನೀಡಿ Read More »

ಸುಳ್ಯ : ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷರಾದ ಸರಸ್ವತಿಯವರಿಗೆ ವರ್ಗಾವಣೆ

ಸುಳ್ಯ ಪೊಲೀಸ್‌ ಠಾಣೆಯ ತನಿಖಾ ವಿಭಾಗದ ಉಪ ನಿರೀಕ್ಷಕರಾದ ಸರಸ್ವತಿ ಬಿ.ಟಿ. ಅವರಿಗೆ ವರ್ಗಾವಣೆಯಾಗಿದೆ. ಬೆಂಗಳೂರಿನ ಅರಣ್ಯ ಸಂಚಾರಿ ಘಟಕಕ್ಕೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಪ್ರೊಬೇಷನರಿ ಅವಧಿ ಸೇರಿದಂತೆ ಸುಮಾರು ನಾಲ್ಕು ವರ್ಷಗಳ ಕಾಲ ಅವರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು.

ಸುಳ್ಯ : ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷರಾದ ಸರಸ್ವತಿಯವರಿಗೆ ವರ್ಗಾವಣೆ Read More »

ಸುಳ್ಯ : ಕುಸಿದು ಬಿದ್ದು ಉಪನ್ಯಾಸಕ ಸಾವು

ಸುಳ್ಯ:ಸುಳ್ಯ ತಾಲೂಕಿನ ಕೊಡಿಯಾಲಬೈಲ್ ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಾ.12ರಂದು ನಡೆದಿದೆ. ಮೃತರನ್ನು ಮಂಜು(42) ಎಂದು ಗುರುತಿಸಲಾಗಿದ್ದು, ಇವರು ಕನ್ನಡ ಉಪನ್ಯಾಸಕರಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆರಂಭದಲ್ಲಿ ಹೈಸ್ಕೂಲ್ ನಲ್ಲಿ ಪಾಠ ನಿರ್ವಹಿಸುತ್ತಿದ್ದ ಇವರು ಕಾಲೇಜಿಗೆ ಭಡ್ತಿ ಪಡೆದಿದ್ದರು. ಮೂಲತಃ ಇವರು ಕೆ.ಆರ್. ನಗರದವರು. ಇಂದು ಮಧ್ಯಾಹ್ನ ಕಾಲೇಜಿನ ಸಿಬ್ಬಂದಿ ಜೊತೆ ಚೆನ್ನಾಗಿಯೇ ಮಾತನಾಡಿದ್ದರು. ನನಗೆ ಸ್ವಲ್ಪ ಹುಷಾರಿಲ್ಲ ಎಂದು ಹೇಳಿಕೊಂಡು ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು.

ಸುಳ್ಯ : ಕುಸಿದು ಬಿದ್ದು ಉಪನ್ಯಾಸಕ ಸಾವು Read More »

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ಎಚ್ಚರ ಅಗತ್ಯ!

ಭಾರತೀಯ ಸಂಪ್ರದಾಯದಂತೆ ಮಕ್ಕಳ ಅಂದ ಹೆಚ್ಚಿಸಲು ಮತ್ತು ದೃಷ್ಟಿ ತಗಲಬಾರದೆಂದು ಕಣ್ಣಿಗೆ ಕಾಡಿಗೆ ಹಚ್ಚುವುದು ಸಾಮಾನ್ಯ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಕಾಡಿಗೆಗಳಲ್ಲಿ ಸೀಸ, ಕಾರ್ಬನ್ ಮತ್ತು ವಿಷಕಾರಿ ರಾಸಾಯನಿಕಗಳಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ವೈದ್ಯಕೀಯ ವಿಜ್ಞಾನ ತಿಳಿಸಿದೆ. ಈ ಕಾಡಿಗೆಯ ಕಣಗಳು ಕಣ್ಣೀರಿನ ನಾಳಗಳನ್ನು ಮುಚ್ಚಿ, ಕಣ್ಣು ಸೋಂಕು, ಊತ, ರೆಪ್ಪೆಗಳ ಮೇಲೆ ಗುಳ್ಳೆಗಳು ಮತ್ತು ದೀರ್ಘಕಾಲದಲ್ಲಿ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ಆದ್ದರಿಂದ, ಕಾಡಿಗೆ ಬಳಸುವ ಮುನ್ನ ಎಚ್‌ಚರಿಕೆ ವಹಿಸುವುದು ಅತ್ಯಗತ್ಯ.

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ಎಚ್ಚರ ಅಗತ್ಯ! Read More »

ಮಾ.13 ಅರಂತೋಡಿನಲ್ಲಿ ತೆಕ್ಕಿಲ್ ಸೌಹಾರ್ಧ ಇಪ್ತಾರ್ ಕೂಟ

ಅರಂತೋಡು: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 21 ನೇ ವರ್ಷದ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ಟಿ.ಎಂ ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ಮಾರ್ಚ್ 13 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಗಮದಲ್ಲಿ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಖತೀಬರಾದ ನಯೀಮ್ ಫೈಝಿ ಅಲ್ ಮಹಬರಿ, ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಚೈತನ್ಯ ಸೇವಾಶ್ರಮ ಅಜ್ಜಾವರ, ಗುತ್ತಿಗಾರು ಚರ್ಚ್ ನ ಧರ್ಮ ಗುರುಗಳಾದ ರೆ| ಪ| ಆದರ್ಶ್ ಜೋಸೆಫ್ ಇವರು

ಮಾ.13 ಅರಂತೋಡಿನಲ್ಲಿ ತೆಕ್ಕಿಲ್ ಸೌಹಾರ್ಧ ಇಪ್ತಾರ್ ಕೂಟ Read More »

ಇಂದು ದ.ಕ ಉಡುಪಿ ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಅತೀ ಹೆಚ್ಚಳ !

ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಹೆಚ್ಚಳವಾಗಲಿದೆ IMD ಎಚ್ಚರಿಕೆ ನೀಡಿದೆ.ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಮನವಿಮಾಡಿದ್ದು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಸರಳ ಕ್ರಮ ಪಾಲಿಸಿ:ಬಿಸಿಲಿನ ವೇಳೆ ಮನೆಯಲ್ಲೇ ಇರಬೇಕು.ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲು ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ.ಧಾರಾಳವಾಗಿ ನೀರು ಕುಡಿಯಿರಿ. ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು ಕುಡಿಯಿರಿ. ಹೊರಗೆ ಹೋಗುವಾಗ ನೀರಿನ ಬಾಟಲಿ ಜೊತೆಗಿರಲಿ.ಸಾಧ್ಯವಾದಷ್ಟು ಕಾಟನ್ ಬಟ್ಟೆ ಧರಿಸಿ: ಹಗುರವಾದ, ಸಡಿಲವಾದ

ಇಂದು ದ.ಕ ಉಡುಪಿ ಜಿಲ್ಲೆಗಳಲ್ಲಿ ಬಿಸಿಲ ತಾಪಮಾನ ಅತೀ ಹೆಚ್ಚಳ ! Read More »

error: Content is protected !!
Scroll to Top