ಸುಳ್ಯ:ಸುಳ್ಯ ತಾಲೂಕಿನ ಕೊಡಿಯಾಲಬೈಲ್ ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಾ.12ರಂದು ನಡೆದಿದೆ.
ಮೃತರನ್ನು ಮಂಜು(42) ಎಂದು ತಿಳಿದು ಬಂದಿದೆ. ಕನ್ನಡ ಅವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಾಲೇಜಿನಲ್ಲಿ ನನಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿಕೊಂಡು ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಅಲ್ಲಿಂದ ಬಳಿಕ ಅವರು ಔಷಧಿಗಾಗಿ ಸುಳ್ಯದ ಶ್ರೀ ರಾಮಪೇಟೆಯಲ್ಲಿರುವ ಮೆಡಿಕಲ್ ಶಾಪ್ ಒಂದಕ್ಕೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಶ್ರೀರಾಂ ಪೇಟೆಯ ಬಳಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಅವರು ಮೃತಪಟ್ಟಿದ್ದರು.




















