March 2026

ಅಡುಗೆ ವಿಚಾರವಾಗಿ ಅತ್ತೆ ಸೊಸೆ ಜಗಳ,ಸೊಸೆ ನೇಣು ಬಿಗಿದು ಆತ್ಮಹತ್ಯೆ

ಅಡುಗೆ ವಿಷಯದಲ್ಲಿ ಅತ್ತೆ ಜೊತೆ ಜಗಳವಾಗಿ ಸೊಸೆಯೊಬ್ಬರು ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಕ್ಕಿ ಸುಷ್ಮಾ(35) ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ.ಸುಷ್ಮಾ ಅವರು ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು ಮತ್ತು ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಸಣ್ಣಪುಟ್ಟ ವಿಷಯಗಳಿಗೆ ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ನಡುವೆ ಅಡುಗೆ ಮಾಡುವ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ.ಕಲ್ಪನಾ ಅವರು ಸುಷ್ಮಾ ಅವರಿಗೆ ಅಡುಗೆ […]

ಅಡುಗೆ ವಿಚಾರವಾಗಿ ಅತ್ತೆ ಸೊಸೆ ಜಗಳ,ಸೊಸೆ ನೇಣು ಬಿಗಿದು ಆತ್ಮಹತ್ಯೆ Read More »

ಅರಂತೋಡು ಮದರಸಕ್ಕೆ ಶೇ100 ಫಲಿತಾಂಶ

ಸಮಸ್ತ ಮತ ವಿದ್ಯಾಬ್ಯಾಸ ಬೋರ್ಡ್ ನಡೆಸಿದ 2025-26 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅರಂತೋಡು ನುಸ್ರತುಲ್ ಇಸ್ಲಾಂ ಮದರಸಕ್ಕೆ ಶೇ.100 ಪಲಿತಾಂಶ ಬಂದಿರುತ್ತದೆ. ಕಳೆದ ಹಲವಾರು ವರ್ಷದಿಂದ ಮದರಸವು ಶೇ.100 ಪಲಿತಾಂಶ ದಾಖಲಿಸುತ್ತಾ ಬಂದಿದ್ದು, ಈ ಬಾರಿ 10 ನೇತರಗತಿಯ ವಿದ್ಯಾರ್ಥಿಗಳಾದ ಫಾತಿಮತ್ ರಿಯಾನ, ತಿಶ ಖದೀಜ ಮತ್ತು ಅನ ಫಾತಿಮ, 7 ನೇತರಗತಿಯ ಶಾಕಿರ್, ಫಾತಿಮತ್ ಲುಬಾಬ, ಫಾತಿಮತ್ ಝಾಹಿರ, ಆಯಿಷ ನಿಮ್ರ ಹಾಗೂ 5 ನೇ ತರಗತಿಯ ಎಸ್.ಎಂ.ರಿಫಾ ಮತ್ತು ನದಾ ಫಾತಿಮ ಡಿಸ್ಟಿಂಕ್ಷನ್

ಅರಂತೋಡು ಮದರಸಕ್ಕೆ ಶೇ100 ಫಲಿತಾಂಶ Read More »

ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ

ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಯಲು ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ ಮಾಡಿದೆ. ತತ್ ಕ್ಷಣದಿಂದ ಈ ಕಾರ್ಯಪಡೆಗೆ ಸಿಬ್ಬಂದಿ ನೇಮಕಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದಾಗ

ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ Read More »

ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ‌್ಯಾಂಕ್

ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಪ್ರಥಮ ರ‌್ಯಾಂಕ್ ಪಡೆದಿದ್ದಾರೆ.ಅವರು ಸುಳ್ಯದ ನೆಹರು ಮೆಮೋರಿಯಲ್ಲಿಬಿ ಎಸ್ ಡಬ್ಲ್ಯೂ ಅಧ್ಯಯನ ಮಾಡಿ ಪೆರುವಾಜೆ ಡಾ.ಶಿವರಾಮ ಕಾರಂತ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಅಧ್ಯಾಯನ ಮಾಡುತ್ತಿದ್ದಾರೆ.ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮದ ಬೆದ್ರುಪಣೆ ಹರೀಶ ರುಕ್ಮಿಣಿ ದಂಪತಿ ಪುತ್ರಿ.

ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ‌್ಯಾಂಕ್ Read More »

ಬೈಕ್ ಅಪಘಾತದಲ್ಲಿ ಭುವನ್ ಗೌಡ ಸಾವು

ಬೈಕ್ ಅಪಘಾತದಲ್ಲಿ ಕುಂಬ್ರ ನಿವಾಸಿ ಭುವನ್ ಗೌಡ ( 34 ವ) ಸಾವಿಗೀಡಾದ ಘಟನೆ ಮಾ.3 ರಂದು ವರದಿಯಾಗಿದೆ.ತಿಂಗಳಾಡಿ ಸಮೀಪದ ತ್ಯಾಗರಾಜ ನಗರದಲ್ಲಿ ಈ ದುರ್ಘಟನೆ ನಡೆದಿದೆ.ಕುಂಬ್ರ ಶಾಲಾ ಬಳಿಯ ನಿವಾಸಿಯಾಗಿರುವ ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾಗಿರುವ ಭುವನ್ ಗೌಡ ರವರು ನಿಂತಿಕಲ್ಲುನಲ್ಲಿರುವ ಕುಬೇರ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದು ಮಾ.3 ರಂದು ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ತ್ಯಾಗರಾಜನಗರದಲ್ಲಿ ಮಜ್ಞಾರಡ್ಕಕ್ಕೆ ತಿರುಗುವ ಬಳಿ ಬೈಕ್ ಸ್ಕಿಡ್

ಬೈಕ್ ಅಪಘಾತದಲ್ಲಿ ಭುವನ್ ಗೌಡ ಸಾವು Read More »

ಹಿಂದು ಸಂಘಟನೆಯ ಮುಖಂಡನಿಗೆ ಚೂರಿ ಇರಿತ

ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕರ ತಂಡ ಚೂರಿಯಿಂದ ಇರಿದ ಘಟನೆ ಕಳೆದ ರಾತ್ರಿ ಮಲ್ಪೆಯಲ್ಲಿ ಸಂಭವಿಸಿದೆ.ಉಡುಪಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. .ಹಿಂದೂ ಯುವಸೇನೆಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜುಕೊಳ ಅವರು ಇಂದು ಬೀಚ್ ಬಳಿ ಜೋಡಿಯೊಂದರ ಪ್ರೇಮದ ವಿಚಾರವಾಗಿ ರಾಜಿಪಂಚಾಯಿತಿಗೆ ಕರೆದಿದ್ದರು. ಧನುಷ್ ಎಂಬ ಯುವಕನ ವಿಚಾರದಲ್ಲಿ ಈ ಜಗಳ ನಡೆದಿದೆ.ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಯುವಕ ಚೂರಿಯಿಂದ

ಹಿಂದು ಸಂಘಟನೆಯ ಮುಖಂಡನಿಗೆ ಚೂರಿ ಇರಿತ Read More »

ಏ.27ರಿಂದ ಬಳ್ಪ ಬುಡೆಂಗಿ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಬಳ್ಪ ಬುಡೆಂಗಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲವು ಏ.27ರ ಸೋಮವಾರ ಹಾಗೂ ಏ. 28ರ ಮಂಗಳವಾರದಂದು ನಡೆಯಲಿದೆ.ಕೊಳ್ಳಿ ಮುಹೂರ್ತವು ದಿನಾಂಕ 7-3-26 ಶನಿವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ. ಎಲ್ಲಾ ಭಕ್ತರೂ ಆಗಮಿಸಿ ಪ್ರಸಾದ ಸ್ವೀಕರಿಸಿ ದೈವದ ಕ್ರಪೆಗೆ ಪಾತ್ರರಾಗಬೇಕೆಂದುಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಏ.27ರಿಂದ ಬಳ್ಪ ಬುಡೆಂಗಿ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಮಹಿಳೆ ಸಾವು

ಸುಳ್ಯಪದವು : ಈಶ್ವರಮಂಗಲ ಕಾವು ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದಲ್ಲಿ ಸುಳ್ಯಪದವು ಮಹಾಲಕ್ಷ್ಮಿ ವನಿತಾ ಭಜನ ಮಂಡಳಿಯ ಸದಸ್ಯೆ ರತ್ನಾವತಿ ಬಾಳಪ್ಪ ಪೂಜಾರಿ ಕನ್ನಡ್ಕ (63 ವರ್ಷ ) ಅವರು ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ವರದಿಯಾಗಿದೆ.ಕುಸಿದು ಬಿದ್ದ ಕೂಡಲೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಯಿತು‌.ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಇವರ ಇಬ್ಬರು ಪುತ್ರರು ಹಾಗೂ ಮತ್ತು ಪತಿ

ಕುಣಿತ ಭಜನೆ ಮಾಡುತ್ತಾ ಕುಸಿದು ಬಿದ್ದು ಮಹಿಳೆ ಸಾವು Read More »

ಅಡ್ತಲೆ : ಕಾಡಾನೆಗಳಿಂದ ಕೃಷಿ ನಾಶ

ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮದ ಅಡ್ತಲೆಯ ನೆಕ್ಕರೆ ಎಂಬಲ್ಲಿ ಫೆ.2ರ ರಾತ್ರಿ ಕಾಡಾನೆಗಳು ದಾಳಿ ಮಾಡಿ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ‌.ಇಲ್ಲಿಯ ದಾಸಪ್ಪ ಎಂಬರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ,ತೆಂಗಿನ ಮರಗಳನ್ನು ನಾಶ ಪಡಿಸಿದೆ ಎಂದು ತಿಳಿದು ಬಂದಿದೆ.ಅಡ್ತಲೆ ಭಾಗದಲ್ಲಿ ಕಳೆದ ಅನೇಕ ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ಕ್ರಷಿ ನಾಶ ಮಾಡಿ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ.

ಅಡ್ತಲೆ : ಕಾಡಾನೆಗಳಿಂದ ಕೃಷಿ ನಾಶ Read More »

ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ, ಬಿಜೆಪಿಯ ಮುಖಂಡರಾದ ಸತೀಶ್ ಪ್ರಭು ಅವರ ಅಕಾಲಿಕ ನಿಧನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸತೀಶ್ ಪ್ರಭು ಅವರು ಆರೆಸ್ಸೆಸ್ಸ್ ಸ್ವಯಂಸೇವಕರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಸಂಘನಿಕೇತನದ ಕೇಶವ ಸಂವರ್ಧನ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಅವರು ನೀಡಿದ ಸೇವೆ ಅವಿಸ್ಮರಣೀಯ. ಕಾರ್ ಸ್ಟ್ರೀಟ್‌ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿಯೂ

ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ Read More »

error: Content is protected !!
Scroll to Top