ಬೈಕ್ ಅಪಘಾತದಲ್ಲಿ ಕುಂಬ್ರ ನಿವಾಸಿ ಭುವನ್ ಗೌಡ ( 34 ವ) ಸಾವಿಗೀಡಾದ ಘಟನೆ ಮಾ.3 ರಂದು ವರದಿಯಾಗಿದೆ.
ತಿಂಗಳಾಡಿ ಸಮೀಪದ ತ್ಯಾಗರಾಜ ನಗರದಲ್ಲಿ ಈ ದುರ್ಘಟನೆ ನಡೆದಿದೆ.
ಕುಂಬ್ರ ಶಾಲಾ ಬಳಿಯ ನಿವಾಸಿಯಾಗಿರುವ ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾಗಿರುವ ಭುವನ್ ಗೌಡ ರವರು ನಿಂತಿಕಲ್ಲುನಲ್ಲಿರುವ ಕುಬೇರ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದು ಮಾ.3 ರಂದು ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ತ್ಯಾಗರಾಜನಗರದಲ್ಲಿ ಮಜ್ಞಾರಡ್ಕಕ್ಕೆ ತಿರುಗುವ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಭುವನ್ ರವರು ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದರು. ತಕ್ಷಣವೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆತಂದರೂ ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಬೈಕ್ ಅಪಘಾತದಲ್ಲಿ ಭುವನ್ ಗೌಡ ಸಾವು





































































