April 23, 2026

ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ

ಬೆಳ್ಳಾರೆ ಕೆ.ಪಿ.ಎಸ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಎದುರಿಸಿರುವ 148 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದಾರೆ.ವಿವಿಧ ಶ್ರೇಣಿಯ ವಿವರ :-4 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ.ವಿಶಿಷ್ಠ ಶ್ರೇಣಿಯಲ್ಲಿ 33 ಮಂದಿ,ಪ್ರಥಮ ದರ್ಜೆಯಲ್ಲಿ 98 ಮಂದಿ’ದ್ವೀತಿಯ ದರ್ಜೆಯಲ್ಲಿ 13 ಮಂದಿ ಉತ್ತೀರ್ಣರಾಗಿದ್ದಾರೆ.

ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ Read More »

ಸುಳ್ಯ ಗಾಂಧಿನಗರ ಕೆ. ಪಿ. ಎಸ್.ಗೆ ಶೇ 100 ಫಲಿತಾಂಶ

ಸುಳ್ಯ ಗಾಂಧಿನಗರ ಕೆ. ಪಿ. ಎಸ್. ಶೇ 100 ಫಲಿತಾಂಶ ವನ್ನು ದಾಖಲಿಸಿದೆ.ಪರೀಕ್ಷೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸುಳ್ಯ ಗಾಂಧಿನಗರ ಕೆ. ಪಿ. ಎಸ್.ಗೆ ಶೇ 100 ಫಲಿತಾಂಶ Read More »

ಅರಂತೋಡು : ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಎನ್.ಯಂ.ಪಿ‌.ಯು.ಸಿ ಗೆ ಶೇ.100 ಫಲಿತಾಂಶ

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಅರಂತೋಡು ಎನ್‌ಎಂಪಿಯು ಗೆ ಶೇ.100 ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಬರೆದ 86 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 18 ಮಂದಿ ಡಿಸ್ಟಿಂಕ್ಷನ್ ಹಾಗೂ 67 ಮಂದಿ ಪ್ರಥಮ ದರ್ಜೆಯಲ್ಲಿ, ಓರ್ವ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಅರಂತೋಡು : ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ಎನ್.ಯಂ.ಪಿ‌.ಯು.ಸಿ ಗೆ ಶೇ.100 ಫಲಿತಾಂಶ Read More »

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ಸ್ಥಾನ

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಅಶ್ವಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ ಪಡೆದು ರಾಜ್ಯದಲ್ಲಿ ಏಳನೇ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.ಅಶ್ವಿತಾ ಮಹಾಬಲಡ್ಕ ದಾಮೋದರ ಹಾಗೂ ಶೀಲಾವತಿ ದಂಪತಿ ಪುತ್ರಿ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ಅಶ್ವಿತಾಳಿಗೆ ರಾಜ್ಯದಲ್ಲಿ 7ನೇ ಸ್ಥಾನ Read More »

ಹಿಮಾದ್ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ‌ ವಿದ್ಯಾರ್ಥಿನಿ ಹಿಮಾದ್ರಿ ಸಿ.ಎಂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 602 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.ಹಿಮಾದ್ರಿ ಗಾಂಧಿನಗರ ಪ್ರೌಢಶಾಲೆಯ ಸಹಶಿಕ್ಷಕ ಮುಡೂರು ಪುತ್ತುಕುಂಜ ಚಿನ್ನಪ್ಪ ಗೌಡ ಅವರ ಪುತ್ರಿ.

ಹಿಮಾದ್ರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 602 ಅಂಕ Read More »

ಈ ವರ್ಷ ರಾಜ್ಯದಲ್ಲಿ ಎಸ್.ಎಲ್.ಸಿಯಲ್ಲಿ ದಾಖಲೆಯ ಫಲಿತಾಂಶ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬುಧವಾರ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟವಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದರು. ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಾಖಲೆಯ ಫಲಿತಾಂಶ ಬಂದಿದೆ ಎಂದು ಸಚಿವರು ತಿಳಿಸಿದರು.ಮೂವರು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ),

ಈ ವರ್ಷ ರಾಜ್ಯದಲ್ಲಿ ಎಸ್.ಎಲ್.ಸಿಯಲ್ಲಿ ದಾಖಲೆಯ ಫಲಿತಾಂಶ : ಶಿಕ್ಷಣ ಸಚಿವ ಮಧು ಬಂಗಾರಪ್ಪ Read More »

ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಸುಳ್ಯದ ಪೈಚಾರಿನಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ರಾವ್ ವಹಿಸಿದ್ದರು.ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಹಿರಿಯ ಸಹಕಾರಿ ಜಾಕೆ ಮಾಧವ ಗೌಡ, ಮಾದಿಗ ದಂಡೋರ ಅಖಿಲ ಭಾರತ ರಾಜ್ಯ ಸಂಸ್ಥಾಪಕಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾದಿಗ ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಇಂಜಿನಿಯರ್ ದೇವಿಪ್ರಸಾದ್‌ , ಪ್ರಧಾನ ಕಾರ್ಯದರ್ಶಿ ಯಶವಂತ್

ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ Read More »

ಚಿನ್ನದ ಬೆಲೆ ಇಳಿಕೆ ಇಂದಿನ ದರ ಎಷ್ಟಿದೆ?

ಕಳೆದ ಕೆಲವು ವಾರಗಳಿಂದ ರಾಕೆಟ್ ವೇಗದಲ್ಲಿ ಏರುತ್ತಿದ್ದ ಬಂಗಾರದ ಬೆಲೆಗೆ ಈಗ ಬ್ರೇಕ್ ಬಿದ್ದಿದೆ. ಇಂದು ಕೂಡ ಚಿನ್ನದ ದರ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಇದೊಂದು ಶುಭಸುದ್ದಿಯಾಗಿದೆ. ಇಂದು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 1,41,840 ರೂಪಾಯಿ ಆಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 1,54,740 ರೂಪಾಯಿ ಆದ್ರೆ, 1 ಕೆ.ಜಿ ಬೆಳ್ಳಿಯ ಬೆಲೆ 2,64,900 ರೂಪಾಯಿ ಇದೆ. ಚಿನ್ನದ ಬೆಲೆ ಮತ್ತೆ ಮೇಲಕ್ಕೇರುವ ಸಾಧ್ಯತೆಯೇ ಹೆಚ್ಚಿರುವುದರಿಂದ

ಚಿನ್ನದ ಬೆಲೆ ಇಳಿಕೆ ಇಂದಿನ ದರ ಎಷ್ಟಿದೆ? Read More »

error: Content is protected !!
Scroll to Top