April 2026

ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ 18 ಗ್ರಾಮಸ್ಥರಿಂದ ಬೃಹತ್ ಕರಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಏ.5ರಂದು ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಸಲುವಾಗಿ ಬ್ರಹತ್ ಕರಸೇವೆ ನಡೆಯಿತು.ಕರಸೇವೆಯಲ್ಲಿ ಸುಮಾರು 500ಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿದರು‌.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು, ಜಾತ್ರೋತ್ಸವ ಸಮಿತಿಯವರು ಜೀರ್ಣೊದ್ದಾರ ಸಮಿತಿಯವರು ಸೀಮೆಯ ಹೆಚ್ಚಿನ ಭಕ್ತಾಧಿಗಳು ಭಾಗವಹಿಸಿ ಕರಸೇವೆಯನ್ನು ಯಶಸ್ವಿಗೊಳಿಸಿದರು. ಕರಸೇವೆಯಲ್ಲಿ ಭಾಗವಹಿಸಿದವರಿಗೆ […]

ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ 18 ಗ್ರಾಮಸ್ಥರಿಂದ ಬೃಹತ್ ಕರಸೇವೆ Read More »

ಪುನ್ಚತ್ತಾರು : ಶ್ರದ್ಧಾ ಭಕ್ತಿಯಿಂದ ನಡೆದ ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ನಡೆದ ಶ್ರೀ ವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ ಎ. 3 ಮತ್ತು 4ರಂದು ನಡೆಯಿತು. ಏ.4ರಂದು ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು.ಬಳಿಕ ಪ್ರಸಾದ ವಿತರಣೆ ನಡೆಯಿತು.ನಂತರ ಗುಳಿಗ ದೈವದ ಕೋಲ ನಡೆಯಿತು.ಏ.2ರಂದು ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.ಎ.3ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಸಂಜೆ ವಿಷ್ಣುಪುರ ದೈವಸ್ಥಾನದಿಂದಭಂಡಾರ ತೆಗೆಯಲಾಯಿತು. ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ

ಪುನ್ಚತ್ತಾರು : ಶ್ರದ್ಧಾ ಭಕ್ತಿಯಿಂದ ನಡೆದ ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಗೂನಡ್ಕ : ಕಾಡಾನೆಗಳಿಂದ ಬೆಳೆ ನಾಶ

ಸಂಪಾಜೆ ಗ್ರಾಮದ ಬೈಲೆ ಪರಿಸರದಲ್ಲಿ ಸುತ್ತಾಡುತ್ತಿದ್ದ ಕಾಡಾನೆಗಳು ಏ.,4ರಂದು ಬೆಳಗಿನ ಜಾವ 5.40 ರ ಸುಮಾರಿಗೆ ದೀಪಕ್‌ ಬೈಲೆಯವರ ತೋಟಕ್ಕೆ ಹಾಗೂ ಮೋಹನ್ ಪೆಲ್ತಡ್ಕ ಅವರ ತೋಟಕ್ಕೆ ನುಗ್ಗಿ ಬಾಳೆಗಳನ್ನು ಪುಡಿ ಮಾಡಿದೆ , ಈ ಹಿಂದೆಯೂ ಇದೇ ಆನೆ ಬೈಲೆಯ ಇಬ್ಬರ ತೋಟಕ್ಕೆ ನುಗ್ಗಿ ಬಾಳೆ ಮಾತ್ರ ತಿಂದು ಹೋಗಿತ್ತು .

ಗೂನಡ್ಕ : ಕಾಡಾನೆಗಳಿಂದ ಬೆಳೆ ನಾಶ Read More »

ಅಜ್ಜಾವರ : ಶ್ರೀ ಮಹಿಷಮರ್ದಿನೀ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭ

ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಈದಿನ ಬೆಳಗ್ಗೆ 10.30 ಕ್ಕೆ ಉಗ್ರಾಣ ತುಂಬಿಸುವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.ಅಜ್ಜಾವರ ಶ್ರೀ ಮಹಿಷಮರ್ದಿನೀ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಎ ಶಿವರಾವ್ ಬಯಂಬು ಅವರು ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್ ಸದಸ್ಯರು, ಜೀರ್ಣೋದ್ದಾರ ಸಮಿತಿ, ಉತ್ಸವ ಸಮಿತಿ, ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಅಜ್ಜಾವರ : ಶ್ರೀ ಮಹಿಷಮರ್ದಿನೀ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭ Read More »

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಹಿನ್ನಲೆ ವಿವಿಧ ಸಮಿತಿಗಳ ತುರ್ತು ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ವೈಭವದಿಂದ ನಡೆಯಲಿದ್ದು ಏ.1ರಂದು ಜಾತ್ರೋತ್ಸವ ವಿವಿಧ ಸಮಿತಿಗಳ ತುರ್ತು ಸಭೆದೇವಳದ ಅಕ್ಷಯ ಮಂದಿರದಲ್ಲಿ ನಡೆಯಿತು‌.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆಯವರು ಈ ಸಂದರ್ಭದಲ್ಲಿ ಮಾತನಾಡಿ ಏ.5ರಂದು ದೇವಳದಲ್ಲಿ ಸುಳ್ಯ ಸೀಮೆಯ 18 ಗ್ರಾಮಗಳ ಭಕ್ತರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳು ಕರಸೇವೆಗೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ಊರಿನವರು ಹೆಚ್ಚಿನ‌ ಸಂಖ್ಯೆಯಲ್ಲಿ

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಹಿನ್ನಲೆ ವಿವಿಧ ಸಮಿತಿಗಳ ತುರ್ತು ಸಭೆ Read More »

ಗುತ್ತಿಗಾರು : ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

ಗುತ್ತಿಗಾರಿನ ಪೈಕ 12 ಒಕ್ಕಲಿಗೊಳಪಟ್ಟ ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಏ.02 ರಂದು ನಡೆಯಿತು. ಏಪ್ರಿಲ್ 8 ಮತ್ತು 9 ರಂದು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಗುತ್ತಿಗಾರು : ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ Read More »

ಸಂಪಾಜೆ : ಪಂಚಲಿಂಗೇಶ್ವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಅರಂತೋಡು, ಏ.3 : ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸಕ್ಕೆ ಗೊನೆ ಮೂಹೂರ್ತ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಬಿ.ಸದಾಶಿವ, ಅಧ್ಯಕ್ಷ ಜಯಕುಮಾರ್ ಚೆದ್ಮಾರ್, ಗೌರವಾಧ್ಯಕ್ಷ ರಾಜಾರಾಮ ಕೀಲಾರು, ಕಾರ್ಯದರ್ಶಿ ಕೇಶವ ಚೌಟಾಜೆ, ಅರ್ಚಕರಾದ ಶಂಕರ ಹೆಬ್ಬಾರ್, ಶಂಕರನಾರಾಯಣ ಭಟ್, ಪವಿತ್ರಪಾಣಿ ಕೆ.ಜಿ. ಗೋಪಾಲಕೃಷ್ಣ ಹಾಗೂ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಸಂಪಾಜೆ : ಪಂಚಲಿಂಗೇಶ್ವರ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಕಂಟೈನರ್ ಲಾರಿ ಮೂಲಕ ಅಕ್ರಮವಾಗಿ ಜಾನುವಾರು ಸಾಗಾಟ ಪತ್ತೆ!

ಕಂಟೈನರ್ ಲಾರಿ ಮೂಲಕ ಹಾಸನದಿಂದ ಕೇರಳಕ್ಕೆ ಹಿಂಸಾತ್ಮಕ ವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಕಡಬದ ಕನ್ಪಾರೆ ಎಂಬಲ್ಲಿ ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಸುಮಾರು 19 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿದ್ದ 19 ಜಾನುವಾರುಗಳು ಪತ್ತೆಯಾಗಿವೆ. ಪೊಲೀಸರು ಜಾನುವಾರುಗಳನ್ನು ರಕ್ಷಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಓಡಿ ತಪ್ಪಿಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಡಬ

ಕಂಟೈನರ್ ಲಾರಿ ಮೂಲಕ ಅಕ್ರಮವಾಗಿ ಜಾನುವಾರು ಸಾಗಾಟ ಪತ್ತೆ! Read More »

ಏ.5ಕ್ಕೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಬೃಹತ್ ಕರಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಮತ್ತು ಶುದ್ಧಿಕರಣದ ಸಲುವಾಗಿಏ.5ರಂದು ಬೃಹತ್ ಕರಸೇವೆ ನಡೆಯಲಿದೆ.ಈ ಕರಸೇವೆಯಲ್ಲಿ ಸೀಮೆಯ ಹೆಚ್ಚಿನ ಭಕ್ತಾಧಿಗಳು ಭಾಗವಹಿಸಿ ಕರಸೇವೆಯನ್ನು ಯಶಸ್ವಿಗೊಳಿಸಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.

ಏ.5ಕ್ಕೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಬೃಹತ್ ಕರಸೇವೆ Read More »

ಸುಳ್ಯ ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ರಾಕೇಶ್‌ .ಕೆ ಆಯ್ಕೆ

ಸುಳ್ಯ ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ರಾಕೇಶ್‌ ಕೆ. ಆಯ್ಕೆಗೊಂಡಿದ್ದಾರೆ.ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರು ನೇಮಕಗೊಳಿಸಿ ಆದೇಶ ಮಾಡಿದ್ದಾರೆ.ಜೆಡಿಎಸ್‌ ಜಿಲ್ಲಾಧ್ಯಕ್ಷರಾಗಿರುವ ಜಾಕೆ ಮಾಧವ ಗೌಡರು ರಾಕೇಶ್ ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸೂಚಿಸಿದ್ದರು.

ಸುಳ್ಯ ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ರಾಕೇಶ್‌ .ಕೆ ಆಯ್ಕೆ Read More »

error: Content is protected !!
Scroll to Top